For Quick Alerts
ALLOW NOTIFICATIONS  
For Daily Alerts

ಇವೆಲ್ಲಾ ಸಾಮಾನ್ಯ ಮೂಢನಂಬಿಕೆಗಳು-ಆದರೆ ಅದು ದಡ್ಡತನದ್ದು!

|

ಮೂಢ ನಂಬಿಕೆ ಎನ್ನುವುದು ಶತಮಾನಗಳ ಹಿಂದಿನಿಂದಲೂ ನಂಬಿಕೊಂಡು ಬಂದ ಒಂದು ಪದ್ಧತಿ. ಕೆಲವು ಮೂಢ ನಂಬಿಕೆಗಳು ಬಾಲಿಶ ನಿಸುವುದು, ಕೆಲವು ಕ್ರೂರತೆಯನ್ನು ಹೊಂದಿರುವುದು, ಇನ್ನೂ ಕೆಲವು ಆಚಾರಣೆಯ ಒಂದು ಪದ್ಧತಿ ಎನ್ನಬಹುದು. ಹೀಗೆ ನಮ್ಮ ಊಹೆಗೂ ನಿಲುಕದಂತಹ ಅನೇಕ ಮೂಢ ನಂಬಿಕೆಗಳ ಆಚರಣೆಯನ್ನು ನಾವು ನಮ್ಮ ಭಾರತ ದೇಶದಲ್ಲಿ ಕಾಣಬಹುದು. ಅಂತಹ ಮೂಢ ನಂಬಿಕೆಗಳಲ್ಲಿ ಕೆಲವು ನೈಜತೆಗೆ ಹತ್ತಿರವಾಗಿವೆ ಎನ್ನುವುದು ಇಂದಿಗೂ ಚರ್ಚಾಸ್ಪದವಾದ ಸಂಗತಿಯಾಗಿದೆ. ಮೂಢ ನಂಬಿಕೆಯ ಆಚರಣೆ ಧರ್ಮಗಳಿಗೆ ಸಂಬಂಧಿಸಿದಂತೆಯೂ ನಡೆಯುತ್ತದೆ ಎನ್ನಲಾಗುವುದು.

ದೈವ ಶಕ್ತಿ ಹಾಗೂ ದುಷ್ಟ ಶಕ್ತಿ ಎರಡರ ವಿಷಯದಲ್ಲೂ ಮೂಢನಂಬಿಕೆಯ ಆಚರಣೆಯನ್ನು ಕಾಣಬಹುದು. ಮೂಢ ನಂಬಿಕೆಯ ಆಚರಣೆ ಅವರವರ ಮನಸ್ಸಿಗೆ ಅಥವಾ ಪದ್ಧತಿಗೆ ಅನುಗುಣವಾಗಿ ಆಚರಣೆ ಮಾಡುತ್ತಾರೆ ಎಂದರೆ ಅಷ್ಟಾಗಿ ತಪ್ಪು ಎನಿಸದು. ಆದರೆ ಅದೇ ಮೂಢ ನಂಬಿಕೆಯ ಹೆಸರಿನಲ್ಲಿ ಒಂದು ಜೀವದ ಹತ್ಯೆ ನಡೆಯುತ್ತದೆ. ಇಲ್ಲವೇ ಯಾರದೂ ಜೀವನ ಹಾಳಾಗುವುದು, ಮಾನ ಹೋಗುವುದು ಎಂದಾದರೆ ಅಂತಹ ಮೂಢನಂಬಿಕೆಯ ಆಚರಣೆಯು ಅಕ್ಷಮ್ಯ ಅಪರಾಧ ಎನಿಸಿಕೊಳ್ಳುವುದು. ಅಂತಹ ಆಚರಣೆ ಮಾಡುವುದರ ಬದಲು ಸುಮ್ಮನಿರುವುದು ಒಳಿತು.

Common But Silly Superstitions

ನಮ್ಮ ಕಲ್ಪನೆ ಹಾಗೂ ಕಣ್ಣಿಗೂ ನಿಲುಕದ ಅದ್ಭುತ ಶಕ್ತಿ ದೈವಶಕ್ತಿ. ಅಂತೆಯೇ ದುಷ್ಟ ಶಕ್ತಿಯೂ ಇದೆ ಎಂದು ಹೇಳಲಾಗುವುದು. ಒಳ್ಳೆಯ ಸಂಗತಿ ಇದೆ ಎಂದಾದ ಮೇಲೆ ದುಷ್ಟ ಶಕ್ತಿಯು ಇದ್ದೇ ಇರುತ್ತದೆ ಎನ್ನುವ ನಂಬಿಕೆಯನ್ನು ಹೊಂದುವುದು ಸಹಜ ಸಂಗತಿ. ಆದರೆ ಅವುಗಳ ಹೆಸರಿನಲ್ಲಿ ಮಾನವೀಯತೆಯನ್ನು ಮೀರುವ ಕೃತ್ಯಗಳು ನಡೆಯಬಾರದು ಎನ್ನುವುದು ಬುದ್ಧಿಜೀವಿಗಳ ಅಭಿಪ್ರಾಯವಾಗಿರುತ್ತದೆ. ದೈವ ಶಕ್ತಿಯ ಮುಂದೆ ದುಷ್ಟ ಶಕ್ತಿಯ ಆಟ ಏನೂ ನಡೆಯದು ಎನ್ನುವ ನಂಬಿಕೆಯಲ್ಲಿ ನಾವಿದ್ದರೆ ಯಾವುದೇ ಅಹಿತಕರವಾದ ಸಂಗತಿ ನೆರವೇರದು.

ಮೂಢ ನಂಬಿಕೆಗಳ ಆಚರಣೆ

ಮೂಢ ನಂಬಿಕೆಗಳ ಆಚರಣೆ

ನಮ್ಮ ದೇಶ ವಿವಿಧ ಭಾಷೆ, ಧರ್ಮ, ಜನಾಂಗ ಹಾಗೂ ಜಾತಿಯನ್ನು ಹೊಂದಿರುವ ವೈವಿದ್ಯತೆಯನ್ನು ಹೊಂದಿರುವ ರಾಷ್ಟ್ರ. ಅಂತೆಯೇ ವಿವಿಧ ದೇವತೆಗಳ ಹಾಗೂ ಮೂಢ ನಂಬಿಕೆಗಳ ಆಚರಣೆಗಳನ್ನು ಸಹ ನಾವು ಇಲ್ಲಿ ನೋಡಬಹುದು. ಪುರಾತನ ಕಾಲದಿಂದ ನಡೆಸಿ ಕೊಂಡು ಬರುತ್ತಿರುವ ಕೆಲವು ಪದ್ಧತಿಗಳು ನಶಿಸಿರುವುದನ್ನು ಕಾಣಬಹುದು. ಅಂತೆಯೇ ವರ್ಷಗಳ ಇತಿಹಾಸವನ್ನು ಹೊಂದಿರುವ ಕೆಲವು ಮೂಢ ಆಚರಣೆಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿರುವುದನ್ನು ಸಹ ನೋಡಬಹುದು. ನಾವು ಎಷ್ಟೇ ನಂಬಿಕೆಯನ್ನು ಹೊಂದಿಲ್ಲ ಎಂದು ಹೇಳಿದರೂ ಕೆಲವು ಸಂಗತಿಗಳು ಇಂದಿಗೂ ಆಶ್ಚರ್ಯವನ್ನು ಮೂಡಿಸುತ್ತವೆ. ಕೆಲವು ಪ್ರಶ್ನೆಗಳನ್ನು ಮನಸ್ಸಿನಲ್ಲಿ ಮೂಡಿಸುತ್ತವೆ ಎಂದರೆ ಅದು ಸಹ ಅಚ್ಚರಿಯೇ.

ಮೂಢ ನಂಬಿಕೆಯ ವಿಷಯ

ಮೂಢ ನಂಬಿಕೆಯ ವಿಷಯ

ಮೂಢ ನಂಬಿಕೆಯ ವಿಷಯದಲ್ಲಿ ಯಾವುದೂ ಹೊರತಾಗಿಲ್ಲ. ಪರಿಸರದಲ್ಲಿ ಇರುವ ಎಲ್ಲಾ ಸಂಗತಿಗಳನ್ನು ಒಳಗೊಂಡಿದೆ. ಅವುಗಳನ್ನು ಪರಿಗಣಿಸಿದವರು ಯಾರು? ಅದರ ಅರ್ಥ ಹೀಗೆ ಎಂದು ಹೇಳಿದವರು ಯಾರು? ಎನ್ನುವುದಕ್ಕೆ ಯಾವುದೇ ಸಾಕ್ಷಿ ಪುರಾವೆಗಳಿಲ್ಲದೆ ಇರುವುದು ಒಂದು ಸೋಜಿಗ. ಮೂಢ ನಂಬಿಕೆಯಲ್ಲಿ ಬಣ್ಣ, ಪ್ರಾಣಿ, ಪಕ್ಷಿ, ಮನುಷ್ಯನ ನಡೆ ಮರ ಗಿಡಗಳು, ವಸ್ತುಗಳನ್ನು ಒಳಗೊಂಡಿರುತ್ತದೆ. ಹಾಗಾದರೆ ಆ ಮೂಢ ನಂಬಿಕೆಗಳು ಯಾವವು? ಅವುಗಳ ಆಚರಣೆಯಿಂದ ಯಾವ ಸಂಗತಿ ತಿಳಿದು ಬರುತ್ತವೆ? ಅಂತಹ ಒಂದು ಸಂಗತಿ ನಿಮ್ಮ ಅನುಭವಕ್ಕೆ ಬಂದಿದೆಯೇ? ಎನ್ನುವುದನ್ನು ತಿಳಿಯಬೇಕು ಎಂದಾದರೆ ಮೂಢನಂಬಿಕೆಯ ಬಗ್ಗೆ ಸಾಕಷ್ಟು ಸಂಗತಿ ನಮ್ಮ ಅರಿವಿನಲ್ಲಿ ಇರಬೇಕು. ಅಂತಹ ಮೂಢನಂಬಿಕೆಗಳ ಆಚರಣೆಯಲ್ಲಿ ಸಾಮಾನ್ಯವಾದ ಹಾಗೂ ಈಗಲೂ ಕೆಲವೆಡೆ ಅದನ್ನು ನಂಬುವಂತಹ ಮೂಢನಂಬಿಕೆಗಳ ಆಚರಣೆ ಹಾಗೂ ಅದರ ಸಂದೇಶದ ಬಗ್ಗೆ ಬೋಲ್ಡ್ ಸ್ಕೈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದೆ.

ಇಸ್ಪೀಟ್ ಮತ್ತು ಜೂಜಾಟ

ಇಸ್ಪೀಟ್ ಮತ್ತು ಜೂಜಾಟ

ಇಸ್ಪೀಟ್ ಮತ್ತು ಜೂಜಾಟ ಎನ್ನುವುದು ಸಾಮಾನ್ಯವಾಗಿ ನಗರ ಹಾಗೂ ಹಳ್ಳಿಯ ಜನರು ಆಡುವ ಆಟ. ಈ ಆಟದಲ್ಲಿ ಹಣವನ್ನು ಹಾಗೂ ತಮ್ಮ ಆಸ್ತಿಯನ್ನು ಒತ್ತೆ ಇಟ್ಟು ಸಹ ಆಡುತ್ತಾರೆ. ಇಂತಹ ಆಟವು ಕೆಲವರಿಗೆ ಚಟವಾಗಿ ತಿರುಗುವುದು. ದುಡಿದ ಹಣ ಹಾಗೂ ಮನೆಯ ಆಸ್ತಿಗಳನ್ನೆಲ್ಲಾ ಈ ಆಟದಲ್ಲಿ ಇಡುವುದು ಸೋತರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುವುದು. ಹಾಗಾಗಿಯೇ ಇಂತಹ ಆಟವನ್ನು ಇಂದು ಕಾನೂನಾತ್ಮಕ ರೀತಿಯಲ್ಲಿ ನಿಷೇಧ ಹೇರಲಾಗಿದೆ. ಈ ನಿಟ್ಟಿನಲ್ಲಿ ಈ ಆಟಗಳು ಇಂದು ಅಷ್ಟಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಆದರೂ ಮರೆಯಲ್ಲಿ ಆಡುವ ಜನರು ಸಾಕಷ್ಟು ಇದ್ದಾರೆ ಎಂದು ಹೇಳಬಹುದು. ಈ ಆಟ ಆಡುವುದು ಒಂದು ವಿಶೇಷವಾದ ಬುದ್ಧಿಯಿಂದ. ಕೆಲವೊಮ್ಮೆ ಪಡೆದ ಕಾರ್ಡ್‍ನ ಹಿಂದೆ ಸೋಲು ಗೆಲುವು ನಿರ್ಧರಿಸಲಾಗುವುದು.

Most Read: ಮೂಢನಂಬಿಕೆಯ ಸುಳಿಯಲ್ಲಿ ನಲುಗುತ್ತಿದೆ ನಮ್ಮ ಭಾರತ..!

ಇಸ್ಪೀಟ್ ಮತ್ತು ಜೂಜಾಟ

ಇಸ್ಪೀಟ್ ಮತ್ತು ಜೂಜಾಟ

ಆದರೆ ಕೆಲವರು ಹೇಳುವ ಪ್ರಕಾರ ಈ ಆಟಗಳನ್ನು ಆಡುವ ಮೊದಲು ನಮಗೆ ಸಿಗುವ ಕೆಲವು ಸೂಚನೆಯು ನಮ್ಮ ಗೆಲುವು ಹಾಗೂ ಸೋಲನ್ನು ತಿಳಿಸುತ್ತದೆ. ಕನಸಿನಲ್ಲಿ ಹಾವು, ಮನೆ, ಹಣ ಗಳಂತಹ ಅದೃಷ್ಟದ ಸಂಕೇತದ ಕನಸನ್ನು ಕಂಡರೆ ನಾವು ಆಟದಲ್ಲಿ ಒಳ್ಳೆಯ ಕಾರ್ಡ್‍ಗಳನ್ನು ಪಡೆದುಕೊಂಡು ಜಯಶಾಲಿಗಳಾಗುತ್ತೇವೆ. ಅದೇ ಕೆಲವು ದುರಾದೃಷ್ಟದ ಸಂಕೇತಗಳಾದ, ಕಾಲಿ ಬಿಂದಿಗೆ, ಪೊರಕೆ ಹಲ್ಲಿಯ ಕೂಗು ಸೇರಿದಂತೆ ಇನ್ನಿತರ ಅಹಿತಕರವಾದ ಸಂಗತಿಯೂ ನಮ್ಮ ದುರಾದೃಷ್ಟವನ್ನು ಹಾಗೂ ಸೂಲನ್ನು ಸೂಚಿಸುತ್ತದೆ ಎನ್ನುತ್ತಾರೆ. ಇಂತಹ ಶುಭ ಶಕುನದ ಬೆನ್ನಲ್ಲಿ ಆಟ ಆಡಲು ಮುಂದಾಗುವರು. ಅಂತೆಯೇ ಜಯಶೀಲರೂ ಆಗುತ್ತಾರೆ ಎನ್ನುವ ನಂಬಿಕೆಯನ್ನು ಇಂದಿಗೂ ಜನರು ನಂಬುತ್ತಾರೆ.

ಹೆಡ್ ಮತ್ತು ಟೇಲ್

ಹೆಡ್ ಮತ್ತು ಟೇಲ್

ನಾಣ್ಯದಲ್ಲಿ ಇರುವ ಎರಡು ಮುಖವನ್ನು ಹೆಡ್ ಮತ್ತು ಟೇಲ್ ಎನ್ನುವ ಎರಡು ರೂಪದಲ್ಲಿ ವಿಷಯವನ್ನು ವಿಂಗಡಿಸಲಾಗಿದೆ. ಹೆಡ್ ಎನ್ನುವುದು ಶ್ರೇಷ್ಠ ಹಾಗೂ ಟೇಲ್ ಎನ್ನುವುದು ಎರಡನೇ ಹಂತದಲ್ಲಿ ಶ್ರೇಷ್ಠ ಎಂದು ಪರಿಗಣಿಸುತ್ತೇವೆ. ನಾವು ಏನನ್ನಾದರೂ ಮನಸ್ಸಿನಲ್ಲಿ ಇಟ್ಟುಕೊಂಡು ಅದರ ಫಲಿತಾಂಶ ಉತ್ತಮವಾಗಿದೆಯೇ ಇಲ್ಲವೇ? ಎನ್ನುವುದನ್ನು ತಿಳಿಯಲು ಮಸ್ಸಿನಲ್ಲಿ ಹೆಡ್ ಅಥವಾ ಟೇಲ್ ಎನ್ನುವುದರ ಆಯ್ಕೆ ಮಾಡಿಕೊಂಡು ಹಾರಿಸುತ್ತೇವೆ. ನಾವು ಅಂದುಕೊಂಡಿರುವುದು ಬಿದ್ದಿದೆ ಎಂದಾದರೆ ಆ ಕೆಲಸವು ಆಗುವುದು ಎನ್ನುವ ನಂಬಿಕೆಯನ್ನು ಹೊಂದಿರುತ್ತೇವೆ. ಅಲ್ಲದೆ ಕೆಲವು ಆಟಗಳ ಆರಂಭವನ್ನು ಇಂದಿಗೂ ಹೆಡ್ ಮತ್ತು ಟೇಲ್ ಆಯ್ಕೆಯ ರೀತಿಯಲ್ಲಿ ಆರಂಭವಾಗುವುದು ವಿಶೇಷ. ಹಿಂದಿನ ಕಾಲದಲ್ಲೂ ಹಳೆಯ ನಾಣ್ಯಗಳ ಅನುಸಾರವಾಗಿ ಅದೃಷ್ಟ ಹಾಗೂ ದುರಾದೃಷ್ಟದ ಆಯ್ಕೆಯನ್ನು ಮಾಡುತ್ತಿದ್ದರು ಎಂದು ಹೇಳಲಾಗುವುದು.

ಏಣಿಯ ಅಡಿಯಲ್ಲಿ ನಡೆಯಬಾರದು

ಏಣಿಯ ಅಡಿಯಲ್ಲಿ ನಡೆಯಬಾರದು

ಏಣಿಯ ಅಡಿಯಲ್ಲಿ ನಡೆಯ ಬಾರದು ಎನ್ನುವುದು ಬಹಳ ಪುರಾತನವಾದ ನಂಬಿಕೆ. ಅದು ಇಂದಿಗೂ ಚಾಲ್ತಿಯಲ್ಲಿದೆ. ಏಣಿಯನ್ನು ಬೇರೆಯವರು ಹತ್ತಿರುವಾಗ ಅಥವಾ ಅದನ್ನು ಒಂದೆಡೆ ಇಟ್ಟಿರುವಾಗ ಅದರ ಅಡಿಯಲ್ಲಿ ನಡೆಯುವುದರಿಂದ ಅಚಾನಕ್ ಅವಗಢಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಒಂದು ಉದ್ದೇಶಕ್ಕೂ ಹೇಳಲಾಗುವುದು. ಅಂತೇಯೇ ಇದೊಂದು ಮೂಢ ನಂಬಿಕೆಯ ಪರಿಯೂ ಹೌದು. ಹೋಲಿ ಟ್ರಿನಿಟಿಯ ಕ್ರಿಶ್ಚಿಯನ್‍ನ್ ನಂಬಿಕೆಯಿಂದ ಈ ಮೂಢ ನಂಬಿಕೆ ಬಂದಿದೆ ಎಂದು ಸಿದ್ಧಾಂತಗಳು ಹೇಳುತ್ತವೆ. ಗೋಡೆಯ ವಿರುದ್ಧ ದಿಕ್ಕಿನಲ್ಲಿ ಏಣಿಯು ಒತ್ತುತ್ತದೆ ಆದ್ದರಿಂದ ಅಲ್ಲೊಂದು ತ್ರಿಕೋನ ಸೃಷ್ಟಿಯಾಗುವುದು. ಅದು ಧರ್ಮದ ಸಂಕೇತ. ಅದರನ್ನು ಮೀರಿ ಒಳಗೆ ನಡೆಯುವುದು ಧರ್ಮವನ್ನು ವಿರೋಧಿಸಿದಂತೆ ಎನ್ನುವ ನಂಬಿಕೆಯನ್ನು ಮೂಡಿಸುತ್ತದೆ ಎಂದು ಹೇಳಲಾಗುವುದು. ಮಧ್ಯ ಕಾಲಿನ ಯುಗದಲ್ಲಿ ಈ ಆಚರಣೆಯು ಅತ್ಯಂತ ಕಟ್ಟು ನಿಟ್ಟನ್ನು ಒಳಗೊಂಡಿತ್ತು ಎಂದು ಹೇಳಲಾಗುವುದು.

Most Read: ಸಾಕಪ್ಪ-ಸಾಕು! ಇಂತಹ ಮೂಢನಂಬಿಕೆಗಳಿಂದ ಹೊರ ಬನ್ನಿ....

ಕಪ್ಪು ಬೆಕ್ಕು ನಮ್ಮ ಮಾರ್ಗದಲ್ಲಿ ಅಡ್ಡ ಬರಬಾರದು

ಕಪ್ಪು ಬೆಕ್ಕು ನಮ್ಮ ಮಾರ್ಗದಲ್ಲಿ ಅಡ್ಡ ಬರಬಾರದು

ಕಪ್ಪು ಬಣ್ಣವನ್ನು ಸಾಮಾನ್ಯವಾಗಿ ಅಪಶಕುನ ಹಾಗೂ ಕಷ್ಟ ಎನ್ನುವ ಸಂಕೇತವನ್ನು ನೀಡುತ್ತದೆ. ಸಾವಿರಾರು ವರ್ಷಗಳಿಂದ ಮಾನವನ ಜೊತೆಗೆ ಪ್ರಾಣಿಗಳ ಒಡನಾಟವೂ ಇರುವುದು ಒಂದು ವಿಶೇಷ. ಅದರಲ್ಲಿ ಕೆಲವು ಪ್ರಾಣಿ ಪಕ್ಷಿಗಳನ್ನು ಅದೃಷ್ಟ ಎಂದು ಗುರುತಿಸಿದರೆ ಇನ್ನೂ ಕೆಲವು ಪ್ರಾಣಿ ಪಕ್ಷಿಗಳನ್ನು ಅಪಶಕುನ ಎಂದು ಪರಿಗಣಿಸಲಾಗುವುದು. ಅದರಲ್ಲಿ ಕಪ್ಪು ಬಣ್ಣದ ಬೆಕ್ಕು ಅತ್ಯಂತ ಅಪಶಕುನದ ಸಂಕೇತ ಎಂದು ಹೇಳಲಾಗುವುದು. ಪೌರಾಣಿಕ ಕಥೆಗಳಲ್ಲಿ ಆಚರಣೆಗಳಲ್ಲಿ ಬೆಕ್ಕನ್ನು ಪರಿಗಣಿಸಿರುವುದನ್ನು ನಾವು ಕಾಣಬಹುದು. ಪ್ರಾಚೀನ ಈಜಿಪ್ತನಲ್ಲಿ ಬೆಕ್ಕನ್ನು ಪೂಜಿಸಲಾಗುತ್ತಿತ್ತು. ಅಂತೆಯೇ ಅಮೆರಿಕನ್ನರು 81 ಮಿಲಿಯನ್ ಬೆಕ್ಕನ್ನು ಸಾಕುವ ಪದ್ಧತಿಯನ್ನು ಹೊಂದಿದ್ದರು ಎನ್ನಲಾಗುವುದು.

ಮಾಟಗಾತಿಯರು ಹಾಗೂ ದುಷ್ಟ ಶಕ್ತಿಗಳು

ಮಾಟಗಾತಿಯರು ಹಾಗೂ ದುಷ್ಟ ಶಕ್ತಿಗಳು

ಮೂಢನಂಬಿಕೆಯ ಪ್ರಕಾರ ಮಾಟಗಾತಿಯರು ಹಾಗೂ ದುಷ್ಟ ಶಕ್ತಿಗಳು ಪ್ರಾಣಿಗಳ ರೂಪವನ್ನು ತಾಳಿ ಬರುತ್ತಾರೆ. ಇಲ್ಲವೇ ಕೆಲವು ಪ್ರಾಣಿಗಳ ದೇಹ ಪ್ರವೇಶ ಪಡೆದು ಸಾಗುತ್ತಾರೆ ಎನ್ನಲಾಗುವುದು. ಅದರಲ್ಲಿ ಕಪ್ಪು ಬೆಕ್ಕಿನ ಆಯ್ಕೆಯೇ ಹೆಚ್ಚಾಗಿರುತ್ತದೆ. ಹಾಗಾಗಾಗಿ ನಾವು ದೂರದ ಪ್ರಯಾಣ, ಶುಭಕಾರ್ಯಕ್ಕೆ ಹೋಗುವಾಗ ಅಥವಾ ಹೊಸ ಕೆಲಸಗಳಿಗೆ ಹೋಗುವಾಗ ಕಪ್ಪು ಬೆಕ್ಕು ನಮ್ಮ ದಾರಿಗೆ ಅಡ್ಡಲಾಗಿ ಪ್ರವೇಶ ಪಡೆದರೆ ಅದು ಅಪಶಕುನ. ಆ ಕೆಲಸವು ಸುಸೂತ್ರವಾಗಿ ನಡೆಯದು ಅಥವಾ ಅಲ್ಲಿ ಏನಾದರೂ ತೊಂದರೆ ಉಂಟಾಗುವುದು ಎನ್ನುವ ನಂಬಿಕೆಯನ್ನು ಹೊಂದಿರುತ್ತಾರೆ.

ಮೊಲದ ಹಜ್ಜೆ ಮತ್ತು ಪಾದ ಅದೃಷ್ಟವನ್ನು ನೀಡುವುದು

ಮೊಲದ ಹಜ್ಜೆ ಮತ್ತು ಪಾದ ಅದೃಷ್ಟವನ್ನು ನೀಡುವುದು

ಮೊಲವು ಮುಗ್ಧ ಹಾಗೂ ಸಂತೋಷವನ್ನು ನೀಡುವ ಪ್ರಾಣಿ. ಈ ಪ್ರಾಣಿ ಯಾರಿಗೂ ಅಹಿತವನ್ನುಂಟುಮಾಡದು. ಕೆಲವೊಮ್ಮೆ ರಕ್ತಪಿಶಾಚಿಗಳು ಈ ಪ್ರಾಣಿಯನ್ನು ಹಿಂಸಿಸುತ್ತಾರೆ ಎಂದು ಸಹ ಹೇಳಲಾಗುವುದು. ಬ್ರಿಟನ್ನಿನ ಬುಡಕಟ್ಟು ಜನರು, ಅಮೆರಿಕನ್ನರು, ಯುರೋಪಿಯನ್ನರು ಹಾಗೂ ಆಫ್ರಿಕನ್ ಜನರು ಕೆಲವು ಜಾನಪದ ಮೂಢನಂಬಿಕೆ ಪ್ರಕಾರ ಮೊಲದ ಹೆಜ್ಜೆಯನ್ನು ಅದೃಷ್ಟದ ಸಂಕೇತ ಎಂದು ಪರಿಗಣಿಸುವರು. ಮೊಲದ ಹೆಜ್ಜೆಯು ಧನಾತ್ಮಕ ಶಕ್ತಿ ಹಾಗೂ ಅದೃಷ್ಟದ ಸಂಕೇತ. ಈ ಮೊಲದ ಹೆಜ್ಜೆಯನ್ನು ನೋಡಿ ವ್ಯಕ್ತಿ ಶುಭ ಕೆಲಸಕ್ಕೆ ಹೋದರೆ ಕೆಲಸವು ಶೇ.100ರಷ್ಟು ನೆರವೇರುವುದು. ಉತ್ತಮ ಫಲದಿಂದ ಮನಸ್ಸು ಸಂತಸಗೊಳ್ಳುವುದು ಎಂದು ಹೇಳಲಾಗುವುದು. ಈ ನಿಟ್ಟಿನಲ್ಲಿಯೇ ಅನೇಕರು ಮೊಲವನ್ನು ಮನೆಯಲ್ಲಿ ಸಾಕಲು ಬಯಸುತ್ತಾರೆ ಎಂದು ಸಹ ಹೇಳಲಾಗುವುದು. ಅಂತೆಯೇ ಮೃತ ಮೊಲದ ಪಾದವನ್ನು ಸಂಗ್ರಹಿಸಿ ಅದನ್ನು ಆಭರಣಗಳಲ್ಲಿ ಇಟ್ಟಿಕೊಳ್ಳುವುದು, ಕೀ ಬಂಚ್‍ಗಳಲ್ಲಿ ಬಳಸುವುದು, ಹೀಗೆ ವಿವಿಧ ರೂಪದಲ್ಲಿಯೂ ಇಟ್ಟುಕೊಳ್ಳುತ್ತಿದ್ದರು ಎಂದು ಹೇಳಲಾಗುವುದು. ಇದು ವ್ಯಕ್ತಿಗೆ ಅದೃಷ್ಡವನ್ನು ತಂದುಕೊಡುವುದು ಎಂದು ಹೇಳಲಾಗುವುದು.

Most Read: ನಂಬುತ್ತೀರೋ ಬಿಡುತ್ತೀರೋ 'ಮೆಹೆಂದಿಯ' ಹಿಂದೆಯೂ ಕಟ್ಟುಕಥೆ ಇದೆ!

ಮೂರರ ಸಂಖ್ಯೆಯಲ್ಲಿ ದುರಾದೃಷ್ಟ

ಮೂರರ ಸಂಖ್ಯೆಯಲ್ಲಿ ದುರಾದೃಷ್ಟ

ಮೂರು ಎನ್ನುವುದು ಸಂಖ್ಯೆಯಲ್ಲಿ ಬೆಸ ಸಂಖ್ಯೆಯನ್ನು ತೋರುವುದು. ದುರಾದೃಷ್ಟ ಹಾಗೂ ಋಣಾತ್ಮಕ ಶಕ್ತಿ ಎನ್ನುವುದು ಸಂಖ್ಯೆ ಮೂರರಲ್ಲಿ ಅತಿಯಾಗಿ ಬರುವುದು ಎನ್ನುವ ನಂಬಿಕೆಯಿದೆ. ಮೂರರ ಸಂಖ್ಯೆಯು ಸಾಮಾನ್ಯವಾಗಿ ಮನಸ್ಸಿಗೆ ಒಂದುಬಗೆಯ ಗೊಂದಲ ಹಾಗೂ ಅಪೂರ್ಣತೆಯನ್ನು ಸೃಷ್ಟಿಸುವುದು. ಮೂರರ ಸಮಖ್ಯೆಯ ಅಡಿಯಲ್ಲಿ ಯಾವುದೇ ಕೆಲಸ ಅಥವಾ ಶುಭ ಕೆಲಸವನ್ನು ಮಾಡಲು ಮುಂದಾದರೆ ಅಷ್ಟು ಸುಲಭವಾಗಿ ನೆರವೇರದು. ಸಾಕಷ್ಟು ಸಮಸ್ಯೆ ಹಾಗೂ ಕಷ್ಟಗಳ ಬಳಿಕ ನೆರವೇರುವುದು ಎಂದು ಹೇಳಲಾಗುವುದು.

ಕನ್ನಡಿಯನ್ನು ಮುರಿಯಬಾರದು

ಕನ್ನಡಿಯನ್ನು ಮುರಿಯಬಾರದು

ನಮ್ಮ ಪ್ರತಿಬಿಂಬವನ್ನು ಅಥವಾ ಚಿತ್ರಣವನ್ನು ನಮಗೆ ತೋರಿಸಿಕೊಡುವ ಸಾಧನ ಕನ್ನಡಿ. ಇದನ್ನು ಪ್ರಮುಖವಾದ ಹಾಗೂ ಪವಿತ್ರ ವಸ್ತುಗಳಲ್ಲಿ ಒಂದು ಎನ್ನುವ ರೀತಿಯಲ್ಲಿ ಪರಿಗಣಿಸಲಾಗುವುದು. ಈ ಹಿನ್ನೆಲೆಯಲ್ಲಿಯೇ ಬಾಗಿನ ಕೊಡುವಾಗ ಚಿಕ್ಕ ಕನ್ನಡಿ ಯನ್ನಾದರೂ ಇಟ್ಟಿರುತ್ತಾರೆ. ಜನಪದ ಕಥೆಯ ಪ್ರಕಾರ ಕನ್ನಡಿಯನ್ನು ಮುರಿಯುವುದು ಏಳುವರ್ಷಗಳ ಕೆಟ್ಟ ಅದೃಷ್ಟವನ್ನು ನಾವೇ ಕರೆದುಕೊಂಡಂತೆ ಎಂದು ಹೇಳಲಾಗುವುದು. ಇನ್ನೊಂದು ಮೂಢ ನಂಬಿಕೆಯ ಪ್ರಕಾರ ಆತ್ಮಗಳನ್ನು ಹಾಗೂ ದುಷ್ಟ ಶಕ್ತಿಗಳನ್ನು ಕನ್ನಡಿಯಲ್ಲಿ ಬಂಧಿಸಲಾಗುವುದು. ಅದನ್ನು ಒಡೆಯುವುದರಿಂದ ಅದರಲ್ಲಿರುವ ದುಷ್ಟ ಶಕ್ತಿಗಳು ಹೊರಬಂದು ನಮ್ಮ ಅದೃಷ್ಟವನ್ನು ಹಾಳು ಮಾಡುತ್ತವೆ. ಜೊತೆಗೆ ದುಷ್ಟ ಶಕ್ತಿ ಅಥವಾ ಆತ್ಮಗಳ ಪ್ರಭಾವ ನಮ್ಮ ಮೇಲೆ ಪ್ರಭಾವ ಬೀರುವುದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ.

666- ಸೈತಾನನ ಗುರುತು

666- ಸೈತಾನನ ಗುರುತು

666 ಎನ್ನುವುದು ದುರಾದೃಷ್ಟ ಹಾಗೂ ಸೈತಾನನ ಗುರುತು ಎಂದು ಪರಿಗಣಿಸಲಾಗುವುದು. ಇದು ಬೈಬಲ್‍ನಿಂದ ಬಂದ ಮೂಢನಂಬಿಕೆ ಎಂದು ಪರಿಗಣಿಸಲಾಗುವುದು. ರಿವೆಲೆಶನ್ ಪುಸ್ತಕದಲ್ಲಿ 666ರ ಸಂಖ್ಯೆಯನ್ನು ನರಪಶು ಅಥವಾ ಅನಾಗರಿಕ ಎನ್ನುವ ಸಂಕೇತವನ್ನು ನೀಡುವುದು. ನ್ಯೂಯಾರ್ಕ್ ಸ್ಟೇಟ್ ವಿರ್ಶವವಿದ್ಯಾಲಯದ ಬಫಲೋ ಮಾನವಶಾಸ್ತ್ರಜ್ಞರ ಪ್ರಕಾರ ರಿವೆಲೆಶನ್ ಬರಹಗಾರ ಕೋಡ್ ಕಿರುಕುಳಕ್ಕೆ ಕೆಲವು ಸಂಕೇತವನ್ನು ಬಳಸುವುದರ ಮೂಲಕ ಈ ಸಂಖ್ಯೆಯನ್ನು ನೀಡಿದ್ದ ಎಂದು ಹೇಳಲಾಗುವುದು. ಈ ಸಂಖ್ಯೆಯನ್ನು ಅಪಶಕುನ ಹಾಗೂ ದುರಾದೃಷ್ಟ ಎನ್ನುವ ರೀತಿಯಲ್ಲಿ ಇಂದಿಗೂ ಪರಿಗಣಿಸಲಾಗುತ್ತಿದೆ.

ಕಟ್ಟಿಗೆಯ ಮೇಲೆ ಬಡಿಯಬಾರದು

ಕಟ್ಟಿಗೆಯ ಮೇಲೆ ಬಡಿಯಬಾರದು

ಮರದ ತುಂಡು ಅಥವಾ ಕಟ್ಟಿಗೆಯ ಮೇಲೆ ಜೋರಾಗಿ ಕುಟ್ಟಬಾರದು ಎನ್ನುವ ನಂಬಿಕೆಯನ್ನು ವಿದೇಶದಲ್ಲಿ ಸಾಕಷ್ಟು ನಂಬಿಕೆ ಹಾಗೂ ಮೂಢನಂಬಿಕೆಯನ್ನು ಪಡೆದುಕೊಂಡಿದೆ. ಕನ್ನಡಿಯಂತೆ ಇದು ಸಹ ದುರಾದೃಷ್ಟವನ್ನು ತಂದುಕೊಡುವುದು. ಕ್ರಿಶ್ಚಿಯನ್ ಹಾಗೂ ಪಾಶ್ಚಾತ್ಯ ಕೆಲವು ನಂಬಿಕೆಗಳ ಪ್ರಕಾರ ದುಷ್ಟ ಶಕ್ತಿಗಳು ಹಾಗೂ ಆತ್ಮಗಳು ಮರದ ತುಂಡು ಮತ್ತು ಕನ್ನಡಿಯ ಒಳಗೆ ಅಡಗಿರುತ್ತವೆ. ಕೆಲವೊಮ್ಮೆ ಬಂಧಿಸಲಾಗಿರುತ್ತದೆ. ಮರದ ತುಂಡುಗಳನ್ನು ಕುಟ್ಟುವುದು ಅಥವಾ ಬೆರಳುಗಳಿಂದ ಬಡಿಯುವುದು ಮಾಡಿದರೆ ಅದರೊಳಗೆ ಬಂಧನದಲ್ಲಿರುವ ಆತ್ಮ ಅಥವಾ ದುಷ್ಟ ಶಕ್ತಿಯನ್ನು ಎಚ್ಚೆತ್ತುಕೊಳ್ಳುತ್ತವೆ. ಜೊತೆಗೆ ಅದು ನಿಮ್ಮನ್ನು ಸುತ್ತಿಕೊಳ್ಳುವುದು ಎನ್ನುವ ನಂಬಿಕೆಯನ್ನು ಹೊಂದಿದ್ದಾರೆ. ಅದು ನಿಮ್ಮ ದುರಾದೃಷ್ಟಕ್ಕೆ ಕಾರಣವಾಗುವುದು ಎಂದು ಹೇಳುತ್ತಾರೆ.

ವಿಶ್ ಬೋನ್/ಒಂದು ಬಗೆಯ ಮೂಳೆಯ ತುಂಡು

ವಿಶ್ ಬೋನ್/ಒಂದು ಬಗೆಯ ಮೂಳೆಯ ತುಂಡು

ಟರ್ಕಿ ಜನರ ಕೆಲವು ಸಂಪ್ರದಾಯ ಹಾಗೂ ನಂಬಿಕೆಯ ಪ್ರಕಾರ ವಿಶ್‍ಬೋನ್ ಮೂಢನಂಬಿಕೆಯನ್ನು ನಂಬುತ್ತಾರೆ ಇದು ಯುದ್ಧ ಸಂಪ್ರದಾಯದಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಒಂದು ಇತಿಹಾಸದ ವಿಷಯದ ಪ್ರಕಾರ ರೋಮನ್ನರು ಮೊದಲ ಶತಮಾನದ ವೇಳೆಯಲ್ಲಿ ಯುದ್ಧ ಮಾಡುವ ಸಂದರ್ಭದಲ್ಲಿ ಒಣಗಿದ ಕವಲುಗಳನ್ನು ಹೊಂದಿರುವ ಮೂಳೆಯನ್ನು ಯುದ್ಧದ ಸಂದರ್ಭದಲ್ಲಿ ಬಳಸಿಕೊಳ್ಳುತ್ತಿದ್ದರು. ಅದು ಅವರಿಗೆ ಅದೃಷ್ಟದ ಸಂಕೇತವಾಗಿತ್ತು. ಯುದ್ಧದ ಸಂದರ್ಭದಲ್ಲಿ ಆ ಮೂಳೆಯು ಮುರಿದರೆ ಅದು ಅವರಿಗೆ ಅಪಶಕುನ ಹಾಗೂ ದುರಾದೃಷ್ಟವು ಮುಂದೆ ಸಂಭವಿಸಲಿದೆ ಎನ್ನುವ ಸಂದೇಶವನ್ನು ನೀಡುತ್ತಿತ್ತು. ಅವರು ಇತಿಹಾಸಗಳುದ್ದಕ್ಕೂ ಪಕ್ಷಿಗಳ ಮೂಳೆಯನ್ನು ಭವಿಷ್ಯವಾಣಿಗಳು ಹಾಗೂ ಭವಿಷ್ಯ ಜ್ಞಾನಗಳ ಉದ್ದೇಶಕ್ಕೆ ಬಳಸುತ್ತಿದ್ದರು ಎಂದು ಹೇಳಲಾಗುವುದು.

ಬೆರಳುಗಳನ್ನು ಒಂದರ ಮೇಲೆ ಒಂದು ಅಡ್ಡಲಾಗಿ ಹಿಡಿಯುವುದು

ಬೆರಳುಗಳನ್ನು ಒಂದರ ಮೇಲೆ ಒಂದು ಅಡ್ಡಲಾಗಿ ಹಿಡಿಯುವುದು

ಕೆಲವು ಧಾರ್ಮಿಕ ನಂಬಿಕೆಯ ಪ್ರಕಾರ ಎರಡು ಬೆರಳನ್ನು ಅಡ್ಡಲಾಗಿ ಹಿಡಿದು ತೋರುವುದು ವಿಶೇಷ ಸಂಗತಿಯ ಸೂಚ್ಯಾಂಕ ಎಂದು ಪರಿಗಣಿಸಲಾಗುತ್ತಿತ್ತು. ವಿಶೇಷವಾಗಿ ಪ್ರೈಸ್ತ ಧರ್ಮದಲ್ಲಿ ಈ ಬಗೆಯ ಪದ್ಧತಿಯು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಈ ಬಗೆಯಲ್ಲಿ ಬೆರಳನ್ನು ಹಿಡಿದು ತೋರುವುದು ಸ್ನೇಹಿತನಿಗೆ ಬೆಂಬಲ ನೀಡುವ ಸಂಕೇತ ಎಂದು ಹೇಳಲಾಗುವುದು. ಕ್ರಿಶ್ಚಿಯನ್ ಶಿಲುಬೆಗೆ ಸಂಬಂಧಿಸಿದಂತೆ ಯಾವುದೋ ಅದೃಷ್ಟವನ್ನು ಸೂಚಿಸುತ್ತದೆ ಎಂದು ಹೇಳಲಾಗುವುದು. ನಂತರದ ದಿನದಲ್ಲಿ ಜನರು ತಮ್ಮದೇ ಆದ ವಿಷಯಗಳ ರೂಪದಲ್ಲಿ ಬದಲಾವಣೆಯನ್ನು ತಂದುಕೊಂಡರು ಎಂದು ಸಹ ಹೇಳಲಾಗುವುದು.

ಮನೆಯ ಒಳಗೆ ಛತ್ರಿಯನ್ನು ತರಬಾರದು

ಮನೆಯ ಒಳಗೆ ಛತ್ರಿಯನ್ನು ತರಬಾರದು

ಛತ್ರಿಯನ್ನು ಮನೆಯ ಒಳಗೆ ತಂದು ಇಡುವುದು, ಒಬ್ಬ ವ್ಯಕ್ತಿಯ ಕಣ್ಣನ್ನು ಕಿತ್ತಂತಹ ಕೆಟ್ಟ ಕೆಸದ ಸಂಕೇತ ಎಂದು ಪರಿಗಣಿಸಲಾಗುವುದು. ಪುರಾತನ ಹಿನ್ನೆಲೆಯೊಂದರ ಪ್ರಕಾರ, ಪುರಾತನ ರೋಮನ್ ಮಹಿಳೆ ಮನೆಯೊಳಗೆ ಛತ್ರಿಯನ್ನು ತೆಗೆದುಕೊಂಡು ಒಳಗೆ ಹೋಗಿದ್ದಳು. ಅದಾದ ನಂತರ ಅವಳ ಮನೆಯೇ ಕುಸಿದು ಬಿದ್ದಿತು ಎಂದು ಹೇಳಲಾಗುವುದು. ಅಂತೆಯೇ ಬ್ರಿಟಿಷ್ ರಾಣಿಯೊಬ್ಬಳು ರಾಜನನ್ನು ಭೇಟಿಯಾಗಲು ಹೋಗುವಾಗ ಎರಡು ಛತ್ರಿಯನ್ನು ಮನೆಯೊಳಗೆ ಕೊಂಡೊಯ್ದಿದ್ದಳು. ಅದಾದ ನಂತರ ತಿಂಗಳ ಒಳಗೆ ಆ ರಾಜನು ಮರಣ ಹೊಂದಿದನು ಎನ್ನುವ ಕಥೆಯನ್ನು ಹೇಳುತ್ತದೆ. ಇಂತಹ ಅಪಾಯಕಾರಿ ಸಂಗತಿಗಳು ಅಂಭವಿಸುತ್ತವೆ. ಹಾಗಾಗಿ ಛತ್ರಿಯನ್ನು ಮನೆಯ ಒಳಗೆ ತೆಗೆದುಕೊಂಡು ಹೋಗಬಾರದು ಎನ್ನುವ ಮೂಢನಂಬಿಕೆಯನ್ನು ಇಂದಿಗೂ ಕೆಲವೆಡೆ ಆಚರಣೆಯಲ್ಲಿರುವುದನ್ನು ನೋಡಬಹುದು.

ಶುಕ್ರವಾರದಂದು ಬರುವ 13ನೇ ತಾರೀಖು

ಶುಕ್ರವಾರದಂದು ಬರುವ 13ನೇ ತಾರೀಖು

13ನೇ ತಾರೀಖು ಶುಕ್ರವಾರದಂದು ಬರಬಾದರು. ಬಂದರೆ ಅದು ಅತ್ಯಂತ ದರರಾದೃಷ್ಟದ ಸಂಗತಿ ಎನ್ನುವ ಮೂಢನಂಬಿಕೆಯನ್ನು ಹೊಂದಲಾಗಿದೆ. 1800ರ ದಶಕದಲ್ಲಿ ಅತ್ಯಂತ ದುರಾದೃಷ್ಟದ ಸಂಗತಿಗಳು ನಡೆದಿದ್ದವು ಎನ್ನುವ ನಂಬಿಕೆ ಇದೆ. ಕ್ರಿಶ್ಚಿಯನ್ ನಂಬಿಕೆಯ ಪ್ರಕಾರ ಜೀಸಸ್ ಶುಕ್ರವಾರದಂದು ಮರಣ ಹೊಂದಿದ್ದನು. ಕಾರ್ನೆಲ್ ವಿಶ್ವವಿದ್ಯಾನಿಲಯದ ಮನಃಶಾಸ್ತ್ರಜ್ಞ ಥಾಮಸ್ ಗಿಲೊವಿಚ್ ಹೇಳುವ ಪ್ರಕಾರ 13ನೇ ದಿನಾಂಕ ಶುಕ್ರವಾರ ಬಂದರೆ ಅದು ಸಾಕಷ್ಟು ಕೆಟ್ಟ ಸಂಗತಿಗಳು ಸಂಭವಿಸುತ್ತದೆ ಎಂದು ಹೇಳಲಾಗುವುದು. ಹಾಗಾಗಿ ಅನೇಕರು ಈ ಸಂಗತಿಯ ಬಗ್ಗೆ ಸಾಕಷ್ಟು ನಂಬಿಕೆಯನ್ನು ಹೊಂದಿದ್ದಾರೆ ಎಂದು ಹೇಳಲಾಗುವುದು.

English summary

These are Common But Silly Superstitions

Many superstitions stem from the same human trait that causes us to believe in monsters and ghosts: When our brains can't explain something, we make stuff up. In fact, a 2010 study found that superstitions can sometimes work, because believing in something can improve performance on a task.Here, then, are of the most common superstitions.
X
Desktop Bottom Promotion