For Quick Alerts
ALLOW NOTIFICATIONS  
For Daily Alerts

ಒಟ್ಟು 12 ರಾಶಿಗಳಲ್ಲಿ, ಈ 5 ರಾಶಿಯವರು ತುಂಬಾನೇ ಸ್ಪರ್ಧಾತ್ಮಕವಾದ ರಾಶಿಚಕ್ರಗಳು

|

ಹುಟ್ಟಿದ ಘಳಿಗೆ, ದಿನಾಂಕ, ಸ್ಥಳ ಹೀಗೆ ಎಲ್ಲವನ್ನು ನೋಡಿಕೊಂಡು ವ್ಯಕ್ತಿಯೊಬ್ಬನ ಜನ್ಮ ಕುಂಡಲಿ ರಚಿಸಲಾಗುವುದು. ಇದೇ ಜನ್ಮ ಕುಂಡಲಿ ನೋಡಿಕೊಂಡು ವ್ಯಕ್ತಿಯೊಬ್ಬನ ಭವಿಷ್ಯವನ್ನು ಜ್ಯೋತಿಷ್ಯದಲ್ಲಿ ಹೇಳಬಹುದಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯೊಬ್ಬನ ವ್ಯಕ್ತಿತ್ವದೊಂದಿಗೆ ಆತನ ಭವಿಷ್ಯವನ್ನು ಹೇಳಬಹುದು. ಇದರಿಂದಾಗಿ ಜ್ಯೋತಿಷ್ಯವನ್ನು ಹೆಚ್ಚಿನವರು ನಂಬಿಕೊಂಡಿರುವರು.

ಜ್ಯೋತಿಷ್ಯದಿಂದ ವ್ಯಕ್ತಿಯ ಶಿಕ್ಷಣ, ವೈವಾಹಿಕ ಜೀವನ, ವೃತ್ತಿ, ವ್ಯಾಪಾರ ಹೀಗೆ ಪ್ರತಿಯೊಂದನ್ನು ಹೇಳಬಹುದು. ಆತನ ರಾಶಿ ಚಕ್ರ ಹಾಗೂ ನಕ್ಷತ್ರದ ಮೇಲೆ ಪ್ರತಿಯೊಂದು ನಿರ್ಬರವಾಗಿರುವುದು. ರಾಶಿಚಕ್ರಗಳಲ್ಲಿ ಇರುವ ತುಂಬಾ ಸ್ಪರ್ಧಾತ್ಮಕವಾದ ರಾಶಿ ಚಕ್ರಗಳು ಯಾವುದು ಎಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ....

 ಮೇಷ

ಮೇಷ

ಮೇಷ ರಾಶಿಯವರು ಪ್ರತಿಯೊಂದು ವಿಚಾರದ ಬಗ್ಗೆ ತುಂಬಾ ಸ್ಪರ್ಧಾತ್ಮಕವಾಗಿರುವರು. ಇವರು ಹೋಗುವಂತಹ ಪ್ರತಿಯೊಂದು ಕಡೆಯಲ್ಲೂ ಇವರ ಸ್ಪರ್ಧಾತ್ಮಕತೆಗೆ ಹೆಚ್ಚಿನ ಬಲವು ಸಿಗುವುದು. ಇವರು ತಮ್ಮ ಗುರಿ ತಲುಪಲು ವಿಫಲರಾದರೆ ಮಾತ್ರ ಪ್ರೇರಣೆ ಕಳೆದುಕೊಳ್ಳುವರು. ಆದರೆ ಇದು ತುಂಬಾ ಅಪರೂಪ ವಾಗಿರುವುದು. ಸಂಪೂರ್ಣ ಶಕ್ತಿ ಮತ್ತು ತುಂಬಾ ಚುರುಕಾಗಿರುವಂತಹ ಮೇಷ ರಾಶಿಯವರು ಪ್ರತಿಯೊಂದು ವಿಚಾರದಲ್ಲೂ ತುಂಬಾ ಸ್ಪರ್ಧಾತ್ಮಕವಾಗಿರುವರು. ಇವರು ಕೆಲವೊಂದು ವಿಚಾರಗಳ ಬಗ್ಗೆ ಮಾತ್ರ ತುಂಬಾ ಗಂಭೀರವಾಗಿ ಇರುವರು.

Most Read: 2019ರಲ್ಲಿ ಗುರು ಗ್ರಹದ ಪ್ರಯಾಣ-ರಾಶಿಚಕ್ರದ ಮೇಲೆ ಹೇಗೆ ಪ್ರಭಾವ ಬೀರಲಿದೆ? ಇಲ್ಲಿದೆ ಡಿಟೇಲ್ಸ್

ಸಿಂಹ

ಸಿಂಹ

ಮುಂದಿನ ಸರದಿ ಸಿಂಹ ರಾಶಿಯವರದ್ದು. ಗೆಲ್ಲಬೇಕೆಂಬ ಸಾಮರ್ಥ್ಯ ಪ್ರದರ್ಶಿಸುವುದು ನಿಮ್ಮನ್ನು ಸ್ಪರ್ಧಾತ್ಮಕವಾಗಿರಲು ಪ್ರೇರೇಪಿಸುವುದು. ಗುರಿಯಿಂದ ದೂರವಿರುವುದು ನಿಮ್ಮ ಪ್ರೇರಣೆ ಕುಂದಿಸಲಿದೆ ಮತ್ತು ನಿಮ್ಮ ಅಹಂಗೆ ಅದರಿಂದ ಆಹಾರ ಸಿಗದೆ ಇರಬಹುದು. ಸಿಂಹ ಶತ್ರುವನ್ನು ಕೊಂದ ಬಳಿಕ ತೃಪ್ತಿ ಹೊಂದು ವಂತೆ ನೀವು ಕೂಡ ಹಾಗೆ ಮಾಡುವಿರಿ. ಯಾವುದು ಕೂಡ ನಿಮ್ಮನ್ನು ನಿಯಂತ್ರಿಸಲು ಅಥವಾ ಅಧಿಕಾರ ಸಾಧೀಸಲು ಆಗಲ್ಲ. ನಿಮ್ಮ ಮನಸ್ಸಿಗೆ ನೀವೇ ಅಧಿಪತಿ. ನೀವು ತುಂಬಾ ಶಾಂತ ಮತ್ತು ಸಂಯೋಜಿತ ಮನಸ್ಸಿನಿಂದ ಕೆಲಸ ಮಾಡುವಿರಿ. ಇದರಿಂದಾಗಿ ನೀವು ಯಾವಾಗಲೂ ಉನ್ನತ ಸ್ಥಾನದಲ್ಲಿರುವಿರಿ.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ತುಂಬಾ ಸಂಕೀರ್ಣವಾಗಿರುವರು. ಇವರು ಅದ್ಭುತ ಶಕ್ತಿ, ಗಂಭೀರ ಮತ್ತು ಸಾಧಿಸಿ ತೋರಿಸುವವರು. ಇವರು ತಮ್ಮ ಜೀವನವನ್ನು ಸಂಪೂರ್ಣವಾಗಿ ಬದುಕಲು ಬಯಸುವರು. ಇದರಿಂದಾಗಿ ಇವರು ಸ್ಪರ್ಧಿಸಲು ತುಂಬಾ ಪ್ರೇರಣೆ ಪಡೆಯುವರು. ಅದಾಗ್ಯೂ, ಇವರು ತಮ್ಮ ಪ್ರೀತಿಪಾತ್ರರ ಜತೆಗೆ ಸ್ಪರ್ಧೆ ಮಾಡುವಾಗ ಎಲ್ಲವನ್ನು ತುಂಬಾ ಲಘುವಾಗಿ ಪರಿಗಣಿಸುವರು. ಈ ವೇಳೆ ಅವರು ಸ್ಪರ್ಧೆ ಮಾಡಿ, ಸಂತೋಷ ಪಡಲು ಬಯಸುವರು. ಆದರೆ ತಮ್ಮ ಪ್ರೀತಿಪಾತ್ರರು ಇಲ್ಲದೆ ಇರುವಾಗ ಇವರು ಬೇರೆಯವರಿಗೆ ತಮ್ಮ ವಿರುದ್ಧ ಗೆಲ್ಲಲು ಬಿಡುವುದಿಲ್ಲ.

ಮಕರ

ಮಕರ

ಹಠವಾದಿಯಾಗಿರುವಂತಹ ಮಕರ ರಾಶಿಯವರು ಗೆಲುವನ್ನು ಪ್ರೀತಿಸುವರು ಮತ್ತು ಇವರು ತಮ್ಮನ್ನು ರಾಜನೆಂದು ಭಾವಿಸಿರುವರು. ಬೇರೆಯವರು ಇದನ್ನು ತಿಳಿಯಬೇಕೆಂದು ಅವರು ಬಯಸುವರು. ಸಂಕ್ಷಿಪ್ತವಾಗಿ ಹೇಳಬೇಕಂದರೆ ಇವರ ಜೀವನವು ಪ್ರತಿಯೊಂದು ಪ್ರಮುಖ ವಿಚಾರಕ್ಕೂ ಸ್ಪರ್ಧೆ ಮತ್ತು ಗೆಲುವಿಗಾಗಿ ಮಾಡಲ್ಪಟ್ಟಿದೆ. ಇವರಿಗೆ ಸಂಬಂಧಪಡದೆ ಇರುವ ವಿಚಾರದ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ. ಬೇರೆಯವರ ಸಲಹೆಯಿಂದ ಪರಿಣಾಮವಾಗದ ಇವರು ಯಾವಾಗಲೂ ಗೆಲುವಿಗಾಗಿ ಆಡುವರು.

Most Read:ಮನೆಯಲ್ಲಿ ಎಷ್ಟು ದೇವರ ವಿಗ್ರಹ ಇಟ್ಟರೆ ಮಂಗಳಕರ ಎನ್ನುವುದು ನಿಮಗೆ ಗೊತ್ತಾ?

 ಕುಂಭ

ಕುಂಭ

ಕುಂಭ ರಾಶಿಯವರು ನಿಮ್ಮೊಂದಿಗೆ ಯಾವಾಗ ಸ್ಪರ್ಧಿಸುತ್ತಿದ್ದಾರೆ ಎಂದು ಊಹಿಸುವುದು ತುಂಬಾ ಕಠಿಣ. ಕೆಲವೊಂದು ಸಂದರ್ಭದಲ್ಲಿ ಖುದ್ದು ಕುಂಭ ರಾಶಿಯವರಿಗೆ ಕೂಡ ತಾವು ಸ್ಪರ್ಧೆಯಲ್ಲಿ ಯಾವಾಗ ಭಾಗಿಯಾದೆವು ಎಂದು ತಿಳಿದಿರಲ್ಲ ಮತ್ತು ತಮ್ಮನ್ನು ಸ್ಪರ್ಧೆಯು ಹಿಂದಕ್ಕೆ ಕೊಂಡೊಯ್ಯುವುದನ್ನು ಕಡೆಗಣಿಸುವಾಗ ಮಾತ್ರ ಅವರಿಗೆ ಇದು ಮನವರಿಕೆಯಾಗುವುದು. ಇವರು ಉತ್ತಮ ಮತ್ತು ಪರಿಪೂರ್ಣರಾಗುವ ಆಕಾಂಕ್ಷೆಯನ್ನು ಗುಪ್ತವಾಗಿ ಇಟ್ಟುಕೊಂಡಿರುವರು. ಈ ಆಕಾಂಕ್ಷೆಯಿಂದಾಗಿ ಸ್ಪರ್ಧೆಗೆ ಬೀಳುವರು. ಆದರೆ ಗೆಲುವಿನ ಉದ್ದೇಶ ತಮ್ಮಲ್ಲಿರುವಂತಹ ಪ್ರತಿಭೆಯನ್ನು ತೋರಿಸುವಂತಹ ಆಕಾಂಕ್ಷೆಯಾಗಿರುವುದಿಲ್ಲ. ಗೆಲುವು ಅವರಿಗೆ ತೃಪ್ತಿ ಉಂಟು ಮಾಡುವುದು.

English summary

These 5 are the Most Competitive Zodiac Signs

Astrology is the science of predictions based on the planetary positions during and after the birth of an individual. From the minutest to the biggest things and secrets, astrology can be used to know a lot about a person. Thus, astrology can truly provide an insight into the personality of a person, for the one who believes in it. Apart from the predictions of love life, health, wealth and career.
X
Desktop Bottom Promotion