For Quick Alerts
ALLOW NOTIFICATIONS  
For Daily Alerts

ಸ್ನಾನ ಮಾಡಿದ ನೀರನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ ಹುಡುಗಿ!

|

ಜನರು ಕೆಲವೊಂದು ಸಲ ಹಣ ಸಂಪಾದನೆ ಮಾಡಬೇಕೆಂದು ಬಯಸಿದರೆ ಆಗ ಅವರು ತುಂಬಾ ಚಿತ್ರವಿಚಿತ್ರವಾದ ಆಲೋಚನೆಗಳನ್ನು ಮಾಡುವರು. ಅದರಲ್ಲೂ ಇಂದಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ವ್ಯಾಪಾರ ಮಾಡುವುದು ತುಂಬಾ ಸುಲಭ ಎನ್ನುವಂತಾಗಿದೆ. ಇಲ್ಲಿ ನಿಮ್ಮ ಒಳಉಡುಪಿನಿಂದ ಹಿಡಿದು ಪ್ರತಿಯೊಂದು ಸಿಗುವುದು. ಇದರಿಂದ ಹೆಚ್ಚಿನ ಜನರು ಇಂಟರ್ನೆಟ್ ನಲ್ಲಿ ಯಾವಾಗಲೂ ಶಾಪಿಂಗ್ ಮಾಡುವರು. ಇನ್ನು ಕೆಲವು ಮಂದಿ ತಮ್ಮ ಕ್ರಿಯಾತ್ಮಕತೆ ಬಳಸಿಕೊಂಡು ಅದರಿಂದ ಹಣ ಸಂಪಾದನೆ ಮಾಡುವುದು. ಇಲ್ಲಿ ಅದೇ ರೀತಿಯಾಗಿ ವಿಚಿತ್ರ ಆಲೋಚನೆ ಮೂಲಕ ಹಣ ಸಂಪಾದಿಸಿದ್ದಾರೆ. ಇದು ಹೇಗೆ ಎಂದು ನೀವು ತಿಳಿಯಿರಿ. ಈ ಕಥೆಯನ್ನು ನೀವು ಓದಿ

ಬೆಲ್ಲೆ ಡೆಲ್ಪಿನೆ ಎನ್ನುವ ಹುಡುಗಿಯು ತನ್ನನ್ನು ಗೇಮರ್ ಗರ್ಲ್ ಎಂದು ಕರೆದಿದ್ದಾಳೆ. ಯಾವುದೇ ಕಠಿಣ ಪರಿಶ್ರಮವಿಲ್ಲದೆ ಆಕೆ ಹಣ ಸಂಪಾದನೆ ಮಾಡುತ್ತಿರುವುದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ. ವರದಿಗಳು ಹೇಳುವ ಪ್ರಕಾರ ಬೆಲ್ಲೆ ಡೆಲ್ಪಿನೆ ಅಸಾಮಾನ್ಯ ಕಾರಣಕ್ಕಾಗಿ ತುಂಬಾ ವೈರಲ್ ಆಗಿದ್ದಾಳೆ.

Teen Sells Bathwater in online!

19ರ ಹರೆಯದ ಬ್ರಿಟಿಷ್ ಹುಡುಗಿ ಇತ್ತೀಚೆಗೆ ತನ್ನ 3.8 ಸಾವಿರ ಫಾಲೋವರ್ಸ್ ಗಳೊಂದಿಗೆ ಕುಚೇಷ್ಠೆ ಮಾಡಿದ್ದಾಳೆ. ಇದನ್ನು ಆಕೆ ಹೇಗೆ ಮಾಡಿದಳು ಎಂದು ನೀವು ತಿಳಿಯಿರಿ. ಇನ್ ಸ್ಟಾ ಗ್ರಾಮ್ ನಲ್ಲಿ ತನ್ನ ಫೋಟೊಗೆ ಒಂದು ಮಿಲಿಯನ್ ಲೈಕ್ ಗಳು ಬಂದರೆ ಆಗ ತಾನು ವಯಸ್ಕರ ಸೈಟ್ ಪೋರ್ನ್ ಹಬ್ ನಲ್ಲಿ ಒಂದು ಅಕೌಂಟ್ ಮಾಡುತ್ತೇನೆ ಎಂದು ಹೇಳಿದ್ದಾಳೆ.

ಆಕೆ ಹೀಗೆ ಹೇಳುತ್ತಿದ್ದಂತೆ ಅವರ ಫೋಟೊಗೆ ಕಾಡ್ಗಿಚ್ಚಿನಂತೆ ಲೈಕ್ ಗಳು ಬಂದಿದೆ ಮತ್ತು ಆಕೆ ತನ್ನ ಮಾತಿಗೆ ತಪ್ಪದೆ ಒಂದು ಅಕೌಂಟ್ ಕೂಡ ತೆರೆದಿದ್ದಾಳೆ. ಇದರಲ್ಲಿ ಆಕೆ ತನ್ನ 11 ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದಾಳೆ. ಆಕೆ ಹಾಕಿರುವಂತಹ ವಿಡಿಯೋಗೆ ತುಂಬಾ ವಿಚಿತ್ರವಾಗಿರುವ ಮತ್ತು ಆಶ್ಲೀಲವಾದ ಶಿರೋನಾಮೆಗಳನ್ನು ನೀಡಿದ್ದಾಳೆ. ಇದನ್ನು ನೋಡಿ ಎಲ್ಲರು ವಿಡಿಯೋ ವೀಕ್ಷಣೆಗೆ ಹೋಗಿದ್ದಾರೆ. ಆದರೆ ಕ್ಲಿಕ್ ಮಾಡಿ ನೋಡಿದಾಗ ಅಲ್ಲಿ ಇದ್ದದ್ದೇ ಬೇರೆ. ಇತರ ಹತ್ತು ವಿಡಿಯೋಗಳು ಕೂಡ ಇದೇ ರೀತಿಯಾಗಿದ್ದವು. ಈ ಹುಚ್ಚುತನವನ್ನು ಬಳಸಿಕೊಂಡ ಆಕೆ ತುಂಬಾ ಅಸಾಮಾನ್ಯವಾದ ಮತ್ತೊಂದು ವಿಧಾನವನ್ನು ಕಂಡುಹಿಡಿದಿದ್ದಾಳೆ. ಇದರಲ್ಲಿ ಆಕೆ ಸ್ನಾನ ಮಾಡು ನೀರನ್ನು ಮಾರಿದ್ದಾಳೆ!

ಇನ್ ಸ್ಟಾ ಗ್ರಾಮ್ ನಲ್ಲಿ ಆಕೆ ಇದರ ಬಗ್ಗೆ ಹೊಸ ಪೋಸ್ಟ್ ಕೂಡ ಹಾಕಿದ್ದಾಳೆ. ಪೋರ್ನ್ ಹಬ್ ನ ಸ್ಟಂಟ್ ನ್ನು ಇನ್ನು ಉತ್ತುಂಗಕ್ಕೆ ಕೊಂಹೋಗಲು ನಾನು ಏನು ಮಾಡಬೇಕು? ನಾನು ಸ್ನಾನ ಮಾಡಿದ ನೀರನ್ನು ಮಾರುತ್ತಿದ್ದೇನೆ ಎಂದು ಭಾವಿಸಿದ್ದರೆ, ಅದು ಖಂಡಿತವಾಗಿಯೂ ನಿಜ.

ಆಕೆಯ ಪ್ರಕಾರ ಇದು ನಿಜವಾದ ಸ್ನಾನ ಮಾಡಿದ ನೀರು. ಆಕೆ ಬಾತ್ ಟಬ್ ನಲ್ಲಿ ಇದರೊಂದಿಗೆ ಆಟವಾಡಿದ ಬಳಿಕ ಇದನ್ನು ಬಾಟಲಿಗೆ ಹಾಕಿದ್ದಾಳೆ. ಇಲ್ಲಿ ಹಾಗೆ ಎಚ್ಚರಿಕೆ ನೀಡಿ ಬರೆದಿದ್ದಾಳೆ. ಈ ನೀರು ಕುಡಿಯಲು ಅಲ್ಲ ಮತ್ತು ಭಾವನಾತ್ಮಕ ಉದ್ದೇಶಕ್ಕೆ ಮಾತ್ರ ಬಳಸಬಹುದು.'' ಆಕೆ ತಾನು ಸ್ನಾನ ಮಾಡಿದ ನೀರನ್ನು ಒಂದು ಬಾಟಲಿಗೆ 30 ಅಮೆರಿಕನ್ ಡಾಲರ್ ನಂತೆ ಮಾರಾಟ ಮಾಡಿದ್ದಾಳೆ. ಕೇವಲ ಒಂದೇ ದಿನದಲ್ಲಿ ಇದು ಮಾರಾಟವಾಗಿ ಹೋಗಿದೆ ಎಂದು ವರದಿಗಳು ಹೇಳಿವೆ. ಈ ಸ್ನಾನ ಮಾಡಿದ ನೀರನ್ನು ಖರೀದಿಸಲು ಕೆಲವು ಎಷ್ಟು ಹುಚ್ಚರಾಗಿದ್ದರು ಎಂದರೆ ಟ್ವಿಟ್ಟರ್ ನಲ್ಲಿ ಇದು ಸಿಗದೆ ಇರುವ ಬಗ್ಗೆ ಕೆಲವು ಮಂದಿ ತುಂಬಾ ನಿರಾಶೆ ವ್ಯಕ್ತಪಡಿಸಿದ್ದಾರೆ. ಇದಕ್ಕಿಂತ ದೊಡ್ಡ ಹುಚ್ಚುತನ ಇದೆಯಾ?ಅ

English summary

Teen Sells Bathwater in online!

Belle Delphine had a seemingly ridiculous idea to make a lot of money. She decided to sell her used bathwater to thirsty boys online and in no time, the water was sold as men bought it instantly after it went online. She even added a disclaimer: "This water is not for drinking and should only be used for sentimental purposes."
X
Desktop Bottom Promotion