For Quick Alerts
ALLOW NOTIFICATIONS  
For Daily Alerts

ಕುತ್ತಿಗೆ ತಿರುಗಿಸಿ ಪಾರ್ಶ್ವವಾಯುವಿಗೆ ಒಳಗಾದ ಮಹಿಳೆ!

|

ನಮ್ಮ ದೇಹದಲ್ಲಿ ಯಾವ್ಯಾವ ಅಂಗಗಳು, ನರಗಳು, ರಕ್ತನಾಳಗಳು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದಿರುವುದಿಲ್ಲ. ಯಾವ ನರಗಳು ಹೇಗೆ ವರ್ತಿಸುತ್ತದೆ ಎಂದು ಹೇಳಲು ಸಾಧ್ಯವಾಗದು. ಕೆಲವೊಂದು ಸಲ ನಾವು ತುಂಬಾ ಆಯಾಸವೆನಿಸಿದಾಗ ಕುತ್ತಿಗೆಯನ್ನು ತಿರುಗಿಸುತ್ತೇವೆ ಮತ್ತು ಇದು ಸ್ವಲ್ಪ ಆರಾಮ ಕೂಡ ನೀಡುವುದು.

ಆದರೆ ಇಂತಹ ಅಭ್ಯಾಸವು ಮಹಿಳೆಯೊಬ್ಬಳಿಗೆ ಪಾರ್ಶ್ವವಾಯು ಉಂಟು ಮಾಡಿದೆ. ಇದನ್ನು ಕೇಳಿ ನಿಮಗೆ ಆಘಾತವಾಗಿರಬಹುದು. ಆದರೆ ಇದು ನಿಜ. ಇಂಗ್ಲೆಂಡಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳಿಗೆ ಈ ರೀತಿ ಆಗಿದೆ. ಇದರ ಬಗ್ಗೆ ನೀವು ಮುಂದಕ್ಕೆ ಓದುತ್ತಾ ತಿಳಿಯಿರಿ...

ಇಂಗ್ಲೆಂಡಿನ ಮಹಿಳೆ ಈಕೆ

ಇಂಗ್ಲೆಂಡಿನ ಮಹಿಳೆ ಈಕೆ

ನಟಾಲಿ ಕುನಿಕಿಕಿ ಎಂಬ 23 ಹರೆಯದ ವೈದ್ಯಕೀಯ ವಿದ್ಯಾರ್ಥಿನಿಯು ಇಂಗ್ಲೆಂಡಿನ ಲಂಡನ್ ನಲ್ಲಿ ವಾಸವಾಗಿದ್ದಾಳೆ. ತನ್ನ ಕುತ್ತಿಗೆ ತಿರುಗಿಸುವ ವೇಳೆ ಆಕೆ ಪಾರ್ಶ್ವವಾಯುವಿಗೆ ಸಿಲುಕಿರುವಳು. ಆಕೆಯ ನರಗಳಿಗೆ ಕುತ್ತಿಗೆ ತಿರುಗಿಸುವ ವೇಳೆ ಹಾನಿಯಾಗಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಮೆದುಳಿಗೆ ಆಘಾತವಾಗಿದೆ.

ಸಿನಿಮಾ ವೀಕ್ಷಿಸುವ ವೇಳೆ ಆಕೆ ಕುತ್ತಿಗೆ ತಿರುಗಿಸಿದಳು

ಸಿನಿಮಾ ವೀಕ್ಷಿಸುವ ವೇಳೆ ಆಕೆ ಕುತ್ತಿಗೆ ತಿರುಗಿಸಿದಳು

ತನ್ನ ಮನೆಯಲ್ಲಿ ಕುಳಿತುಕೊಂಡು ಸಿನಿಮಾ ವೀಕ್ಷಿಸುವ ವೇಳೆ ಆಕೆ ತುಂಬಾ ಬಳಲಿದ ಬಳಿಕ ಕುತ್ತಿಗೆ ಎಳೆದುಕೊಂಡಿದ್ದಾಳೆ. ಇದರಿಂದ ಅಲ್ಲಿ ನರಗಳಿಗೆ ಹಾನಿಯಾಗಿದೆ.

ಆಕೆಗೆ ಜೋರಾಗಿ ಶಬ್ದ ಕೇಳಿಬಂದಿದೆ

ಆಕೆಗೆ ಜೋರಾಗಿ ಶಬ್ದ ಕೇಳಿಬಂದಿದೆ

ಇದನ್ನು ಆಕೆ ಯಾವಾಗಲೂ ಮಾಡುತ್ತಿರುವಳು. ಇದು ಅವಳಿಗೆ ಹೊಸತೇನು ಆಗಿರಲಿಲ್ಲ. ಆದರೆ ಈ ಸಲ ಅವಳಿಗೆ ಜೋರಾಗಿ ಶಬ್ದ ಕೇಳಿಬಂದಿದೆ ಮತ್ತು ಆಕೆಗೆ ಯಾವುದೇ ನೋವು ಕಾಣಿಸದೆ ಇದ್ದ ಕಾರಣದಿಂದಾಗಿ ಇದನ್ನು ಕಡೆಗಣಿಸಿದಳು ಮತ್ತು ನೇರವಾಗಿ ಮಲಗಲು ಹೋದಳು. ಮುಂದಿನ 15 ನಿಮಿಷದಲ್ಲಿ ಆಕೆಗೆ ತನ್ನ ಎಡದ ಕಾಲನ್ನು ಅಲುಗಾಡಿಸಲು ಆಗಿಲ್ಲ. ಅಂತಿಮವಾಗಿ ಆಕೆ ಆಸ್ಪತ್ರೆಗೆ ಕರೆ ಮಾಡಿ ಆ್ಯಂಬುಲೆನ್ಸ್ ನಲ್ಲಿ ಹೋಗಿ ಆಸ್ಪತ್ರೆಗೆ ದಾಖಲಾದಳು.

ಆಕೆಯ ಪರಿಸ್ಥಿತಿ ಬಗ್ಗೆ ವೈದ್ಯರು ಹೇಳುವ ಪ್ರಕಾರ

ಆಕೆಯ ಪರಿಸ್ಥಿತಿ ಬಗ್ಗೆ ವೈದ್ಯರು ಹೇಳುವ ಪ್ರಕಾರ

ಆಕೆ ತನ್ನ ಕುತ್ತಿಗೆ ಎಳೆದುಕೊಂಡ ಕಾರಣದಿಂದಾಗಿ ಕುತ್ತಿಗೆಯಲ್ಲಿ ಇರುವಂತಹ ಕೆಲವೊಂದು ನರಗಳಿಗೆ ಹಾನಿಯಾಗಿದೆ. ಇದರ ಪರಿಣಾಮವಾಗಿ ರಕ್ತ ಹೆಪ್ಪು ಗಟ್ಟಿದೆ ಮತ್ತು ಪಾರ್ಶ್ವವಾಯು ಉಂಟಾಗಿದೆ ಎಂದು ಆಕೆಯನ್ನು ಪರೀಕ್ಷೆ ಮಾಡಿರುವ ವೈದ್ಯರು ತಿಳಿಸಿರುವರು.

ಆಕೆಯ ಪರಿಸ್ಥಿತಿ ಬಗ್ಗೆ ವೈದ್ಯರು ಹೇಳುವ ಪ್ರಕಾರ

ಆಕೆಯ ಪರಿಸ್ಥಿತಿ ಬಗ್ಗೆ ವೈದ್ಯರು ಹೇಳುವ ಪ್ರಕಾರ

ಮಹಿಳೆಯ ಎಡದ ಭಾಗವು ಸಂಪೂರ್ಣವಾಗಿ ಪಾರ್ಶ್ವವಾಯುಗೆ ತುತ್ತಾಗಿದೆ. ಒಂದು ತಿಂಗಳ ಕಾಲ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾಳೆ ಮತ್ತು ಇದರಿಂದ ಚೇತರಿಕೆ ಪಡೆಯಲು ಆಕೆಗೆ ತುಂಬಾ ಸಮಯ ಬೇಕಾಗಬಹುದು ಎಂದು ವೈದ್ಯರು ತಿಳಿಸಿರುವರು.ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.

English summary

She Was Involuntary Neck Cracking

A woman named Natalie Kuniciki is a 23-year-old paramedic from London, UK. She was left partially paralysed when she involuntarily cracked her neck and it lead to a vertebral artery burst which caused a blood clot to trigger a stroke in her brain.
X
Desktop Bottom Promotion