For Quick Alerts
ALLOW NOTIFICATIONS  
For Daily Alerts

ಈಕೆಗೆ ಅತಿಯಾದ ಟ್ಯಾನಿಂಗ್‌ನಿಂದ ಚರ್ಮ ಕ್ಯಾನ್ಸರ್ ಬಂತು!

|

ದೇಹದಲ್ಲಿ ಚರ್ಮವು ಅತೀ ದೊಡ್ಡ ಭಾಗವಾಗಿದ್ದು, ಇದರ ಕಾಳಜಿ ಆರೈಕೆ ಮಾಡುವುದು ಅತೀ ಅಗತ್ಯವಾಗಿದೆ. ಇದು ನಮ್ಮ ದೇಹಕ್ಕೆ ಇರುವಂತಹ ಸಂಪೂರ್ಣ ರಕ್ಷಾ ಕವಚ. ಹೀಗಾಗಿ ಚರ್ಮದ ಆರೈಕೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಒಂದು ವೇಳೆ ಚರ್ಮವನ್ನು ಕಡೆಗಣಿಸಿದರೆ ಆಗ ಹಲವಾರು ರೋಗಗಳು ಹಾಗೂ ಕಾಯಿಲೆಗಳು ಕಾಡುವುದು. ಸೂರ್ಯನ ಬಿಸಿಲು ಹಾಗೂ ಕೆಲವೊಂದು ಸಲ ಚರ್ಮವನ್ನು ಟ್ಯಾನಿಂಗ್(ಚರ್ಮ ಸಂಸ್ಕರಣ) ಮಾಡುವ ಮೂಲಕವಾಗಿ ಹಲವಾರು ಸಮಸ್ಯೆಗಳು ಕಾಡುವುದು. ಇಲ್ಲೊಬ್ಬಳು ಮಹಿಳೆಯು ಅತಿಯಾಗಿ ಟ್ಯಾನಿಂಗ್ ಮಾಡಿದ ಪರಿಣಾಮವಾಗಿ ಆಕೆಗೆ ಚರ್ಮದ ಕ್ಯಾನ್ಸರ್ ಕಾಣಿಸಿಕೊಂಡಿದೆ. ಕ್ಯಾನ್ಸರ್ ಎಂದರೆ ಅದನ್ನು ಕೇಳಿ ಕುಗ್ಗಿ ಹೋಗುವವರೇ ಹೆಚ್ಚು.

ಹೀಗಿರುವಾಗ ಅದರ ಯಾತನಮಯ ಚಿಕಿತ್ಸೆಯನ್ನು ಪಡೆದುಕೊಂಡು ಅಂತಿಮವಾಗಿ ಅದರಿಂದ ಮುಕ್ತಿ ಪಡೆದರೆ ಅದು ಪುನರ್ಜನ್ಮ ಪಡೆದಂತೆ. ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳು ಇವೆ. ಅದರಲ್ಲಿ ಚರ್ಮದ ಕ್ಯಾನ್ಸರ್ ಕೂಡ ಒಂದು ಚರ್ಮದ ಕ್ಯಾನ್ಸರ್ ಸಾಮಾನ್ಯವಾಗಿ ವಿಕಿರಣಕ್ಕೆ ಮೈಯೊಡ್ಡುವ ಪರಿಣಾಮ ಬರುವುದು. ಬಿಸಿಲಿನಲ್ಲಿ ಇರುವಂತಹ ವಿಕಿರಣಕ್ಕೆ ಅತಿಯಾಗಿ ಮೈಯೊಡ್ಡಿದರೂ ಅದರಿಂದ ಸಮಸ್ಯೆ ಕಾಣಿಸುವುದು. ಹೀಗಾಗಿ ಅಗತ್ಯವಿದ್ದರೆ ಮಾತ್ರ ಬಿಸಿಲಿಗೆ ಹೋಗಬೇಕು, ಹೊರಗಡೆ ಹೋಗುವಾಗ ಸಂಪೂರ್ಣವಾಗಿ ದೇಹವನ್ನು ಮುಚ್ಚಿಕೊಳ್ಳುವ ಬಟ್ಟೆ ಧರಿಸಬೇಕು, ಮತ್ತು ಸನ್ ಸ್ಕ್ರೀನ್ ಕೂಡ ಬಳಸಿಕೊಂಡರೆ ಅದರಿಂದ ಮುಂದೆ ಬರಬಹುದಾದ ಅಪಾಯವನ್ನು ತಪ್ಪಿಸಬಹುದು. ಈ ಲೇಖನದಲ್ಲಿ ನೀವು ಚರ್ಮದ ಕ್ಯಾನ್ಸರ್ ಗೆ ತುತ್ತಾದ ಮಹಿಳೆಯ ಫೋಟೊ ಮತ್ತು ಆಕೆ ಅದರಿಂದ ಚೇತರಿಸಿಕೊಂಡ ಬಗ್ಗೆ ತಿಳಿಯಿರಿ.

ಆಕೆಯ ಹಣೆಯಲ್ಲಿ ಕಪ್ಪು ಚುಕ್ಕೆ ಕಂಡುಬಂತು

ಆಕೆಯ ಹಣೆಯಲ್ಲಿ ಕಪ್ಪು ಚುಕ್ಕೆ ಕಂಡುಬಂತು

ಟೆಕ್ಸಾಸ್ ನ ಬೆಥನಿ ಎನ್ನುವ ಹೆಸರಿನ ಮಹಿಳೆಯು 2015ರಲ್ಲಿ ತುಂಬಾ ಕಠಿಣ ಸಮಯ ಕಳೆದಿದ್ದಾಳೆ. ಆಕೆ ಗರ್ಭಿಣಿಯಾಗಿದ್ದ ಸಮಯದಲ್ಲಿ ಹಣೆಯ ಮೇಲೆ ಕಪ್ಪು ಚುಕ್ಕೆಯೊಂದು ಕಂಡುಬಂದಿದೆ.

Most Read: ನಮ್ಮ ಆತ್ಮವು ಮಾನವನ ದೇಹಕ್ಕೆ ಪ್ರವೇಶ ಪಡೆಯಲು 8.4 ಮಿಲಿಯನ್ ಜಾತಿಗಳನ್ನು ದಾಟಿಬರಬೇಕಂತೆ!

ಇದು ಹಾರ್ಮೋನು ಬದಲಾವಣೆಯಿಂದ ಎಂದಾಕೆ ಭಾವಿಸಿದಳು

ಇದು ಹಾರ್ಮೋನು ಬದಲಾವಣೆಯಿಂದ ಎಂದಾಕೆ ಭಾವಿಸಿದಳು

ಗರ್ಭಧಾರಣೆ ವೇಳೆ ಹಾರ್ಮೋನು ಬದಲಾವಣೆ ಆಗುವುದು ಸಾಮಾನ್ಯ ಎಂದು ಆಕೆ ಭಾವಿಸಿದ್ದಳು. ಈ ಕಾರಣದಿಂದಾಗಿ ತನ್ನ ಹಣೆಯ ಮೇಲೆ ಕಪ್ಪು ಚುಕ್ಕೆ ಮೂಡಿರಬಹುದು ಎಂದು ಭಾವಿಸಿದಳು. ಆದರೆ ಇದು ಚರ್ಮದ ಕ್ಯಾನ್ಸರ್ ನಿಂದಾಗಿ ಬಂದಿದೆ ಎಂದು ತಿಳಿದಾಗ ಆಕೆಗೆ ಧರೆಯೇ ಕುಸಿದಂತಹ ಭಾವನೆಯಾಯಿತು.

ವೈದ್ಯರು ಆಕೆಯ ಪರಿಸ್ಥಿತಿಯನ್ನು ಹೀಗೆ ವಿವರಿಸಿದರು

ವೈದ್ಯರು ಆಕೆಯ ಪರಿಸ್ಥಿತಿಯನ್ನು ಹೀಗೆ ವಿವರಿಸಿದರು

ಬೆಥನಿ ಹಣೆಯಲ್ಲಿದ್ದ ಕಪ್ಪು ಕಲೆಯನ್ನು ಚರ್ಮ ವೈದ್ಯರು ಪರಿಶೀಲಿಸಿದರು ಮತ್ತು ಕೆಲವೊಂದು ಪರೀಕ್ಷೆ ಮಾಡಿಸಿ, ಅದರ ವರದಿ ನೋಡಿದರು. ಬೆಥನಿ ದೇಹದಲ್ಲಿ ಅತಿಯಾದ ಮೆಲನೊಮಾ ಪತ್ತೆಯಾಗಿತ್ತು ಮತ್ತು ಇದಕ್ಕೆ ತಕ್ಷಣ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಈ ಸ್ಥಿತಿ ಹೇಗೆ ಬಂತು

ಈ ಸ್ಥಿತಿ ಹೇಗೆ ಬಂತು

ಟ್ಯಾನಿಂಗ್ ಬೆಡ್ ಅಥವಾ ಸೂರ್ಯನ ಬಿಸಿಲಿನಲ್ಲಿರುವ ವಿಕಿರಣಕ್ಕೆ ದೇಹವು ಅತಿಯಾಗಿ ಒಗ್ಗಿಕೊಂಡಾಗ ಚರ್ಮದ ಅಂಗಾಂಶಗಳು ಅಸಾಮಾನ್ಯವಾಗುವುದು ಮತ್ತು ಅನಿಯಂತ್ರಿತವಾಗಿ ಬೆಳೆಯಲು ಆರಂಭವಾಗುತ್ತದೆ. ಸಂಶೋಧನೆಗಳ ಪ್ರಕಾರ ಇದರಿಂದಾಗಿ ಚರ್ಮದ ಕ್ಯಾನ್ಸರ್ ಬರುವುದು.

Most Read: ದೇಹದ ಈ ಅಂಗದ ಮೇಲೆ ಮಚ್ಚೆ ಇದ್ದರೆ, ಲೈಂಗಿಕತೆಯ ವಿಷಯದಲ್ಲಿ ಅಂದುಕೊಂಡಿರುವುದಕ್ಕಿಂತಲೂ ಹೆಚ್ಚಿನ ಅದೃಷ್ಟವಂತರು ಎಂದರ್ಥ

ಆಕೆ ಈಗ ಕ್ಯಾನ್ಸರ್ ನಿಂತ ಮುಕ್ತಳಾಗಿರುವಳು

ಆಕೆ ಈಗ ಕ್ಯಾನ್ಸರ್ ನಿಂತ ಮುಕ್ತಳಾಗಿರುವಳು

ಅತಿಯಾಗಿ ಟ್ಯಾನಿಂಗ್ ಬೆಡ್ ನ್ನು ಬಳಸಿದ ಕಾರಣದಿಂದಾಗಿ ಈ ಪರಿಸ್ಥಿತಿ ಬಂದಿದೆ ಎಂದು ಬೆಥನಿ ಅವರು ತಿಳಿಸಿರುವರು. ಇಮ್ಯೂನೋ ಥೆರಪಿ ಬಗ್ಗೆ ಆಕೆ ಫೋಟೊ ಹಂಚಿಕೊಂಡು ವಿವರ ನೀಡಿದ್ದಾರೆ. ಈ ಚಿಕಿತ್ಸೆಯಿಂದಾಗಿ ಆಕೆ ಕ್ಯಾನ್ಸರ್ ನಿಂದ ಮುಕ್ತಿ ಪಡೆದಿದ್ದಾರೆ. ಇದರಿಂದ ಜನರು ಟ್ಯಾನಿಂಗ್ ಚಟಕ್ಕೆ ಬೀಳದಂತೆ ಆಕೆ ಮನವಿ ಮಾಡಿದ್ದಾರೆ.

English summary

She Got Skin Cancer Due To Excessive Tanning!

A woman named Bethany, who hails from Texas, went through an awful experience back in 2015, when she noticed that she had a dark spot that had shown up on her skin while she was pregnant. Doctors diagnosed it to be skin cancer due to the excessive tanning treatment that she used to undergo.Her Tanning Addiction Gave Her Cancer
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more