For Quick Alerts
ALLOW NOTIFICATIONS  
For Daily Alerts

ನಕ್ಷತ್ರಗಳ ಶಕ್ತಿ ನಿಮ್ಮ ಮೇಲೆ ಏನು ಪ್ರಭಾವ ಬೀರುವುದು ನೋಡಿ...

|

ನಕ್ಷತ್ರ ಎನ್ನುವುದು ಖಗೋಳ ಶಾಸ್ತ್ರದಲ್ಲಿ ಕೇವಲ ಒಂದು ಕಾಯ ಎಂದು ಪರಿಗಣಿಸಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ವೇದಗಳಲ್ಲಿ ನಕ್ಷತ್ರಗಳನ್ನು ವಿಶೇಷ ಶಕ್ತಿಯನ್ನು ಹೊಂದಿರುವ ದೇವತೆಗಳು ಎಂದು ಪರಿಗಣಿಸಲಾಗುವುದು. ಮನುಷ್ಯನ ಹುಟ್ಟು ಹಾಗೂ ನಕ್ಷತ್ರಗಳ ಪ್ರಭಾವ ಜೀವನದ ಆರಂಭ ಹಾಗೂ ಅಂತ್ಯದ ವರೆಗಿನ ಭವಿಷ್ಯವನ್ನು ತೆರೆದಿಡುವುದು. ವ್ಯಕ್ತಿಯ ಕುಂಡಲಿ ಹಾಗೂ ರಾಶಿಗಳ ನಿರ್ಧಾರವು ಆಯಾ ನಕ್ಷತ್ರಗಳಿಗೆ ಅನುಗುಣವಾಗಿ ವಿಂಗಡಿಸಲಾಗುತ್ತದೆ.

ಉತ್ತಮ ನಕ್ಷತ್ರ ಹಾಗೂ ಕುಂಡಲಿಯನ್ನು ಹೊಂದುವುದರ ಮೂಲಕ ವ್ಯಕ್ತಿ ಜೀವನದಲ್ಲಿ ಹೆಚ್ಚಿನ ಸಂತೋಷ ಹಾಗೂ ಸಮೃದ್ಧಿಯನ್ನು ಪಡೆದುಕೊಳ್ಳುವನು. ಅದೇ ವ್ಯಕ್ತಿ ಹುಟ್ಟಿದ ಸಮಯ ಹಾಗೂ ನಕ್ಷತ್ರದ ಪ್ರಭಾವ ನೀಚಸ್ಥಿತಿಯಲ್ಲಿದ್ದರೆ ವ್ಯಕ್ತಿಯ ಜೀವನ ಸಾಕಷ್ಟು ಕಷ್ಟ ನೋವುಗಳಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. ಪ್ರತಿಯೊಂದು ನಕ್ಷತ್ರಗಳಿಗೂ ವಿಶೇಷವಾದ ಚಿಹ್ನೆ, ಗಣಗಳು, ದೈವ ಶಕ್ತಿಗಳಿರುತ್ತವೆ. ವ್ಯಕ್ತಿಯ ಕರ್ಮ ಫಲಗಳಿಗೆ ಅನುಗುಣವಾಗಿ ಅವನ ಜನ್ಮ ನಿರ್ಧಾರವಾಗುವುದು ಎಂದು ಸಹ ಹೇಳಲಾಗುವುದು.

ವ್ಯಕ್ತಿಯ ಜೀವನದಲ್ಲಿ

ವ್ಯಕ್ತಿಯ ಜೀವನದಲ್ಲಿ

ವ್ಯಕ್ತಿಯ ಜೀವನದಲ್ಲಿ ನಡೆಯುವ ಮದುವೆ, ವೃತ್ತಿ, ಜೀವನ, ಸಂಗಾತಿ, ಶಿಕ್ಷಣ, ಮರಣ ಎಲ್ಲವೂ ನಕ್ಷತ್ರಗಳ ಪ್ರಭಾವದಿಂದ ಕಲ್ಪಿತವಾಗುತ್ತದೆ. ಇವುಗಳು ಸತ್ಯಸಂಗತಿ ಎನ್ನುವುದಕ್ಕೆ ವೈದಿಕ ಪಠ್ಯದಲ್ಲಿ ಇರುವ ತೈತ್ತೀರಿಯಾ ಬ್ರಹ್ಮಣ ಮತ್ತು ಮಧ್ಯಯುಗದ ವ್ಯಾಖ್ಯಾನವಾದ ಭಟ್ಟಭಾಸ್ಕರ ಮಿಶ್ರದಿಂದ ಬಂದ ಬೋಧನೆಯಾಗಿದೆ. ನಕ್ಷತ್ರಗಳು ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುತ್ತವೆ. ಇವುಗಳ ಪ್ರಭಾವ ಹಾಗೂ ಶಕ್ತಿಯು ಅತ್ಯಂತ ಮಹತ್ತರವಾದದ್ದು. ಈ ಕುರಿತು ಸಾಕಷ್ಟು ಜನರು ಸೂಕ್ತ ಮಾಹಿತಿ ಹೊಂದಿರದೆ ಇರಬಹುದು. ಆದರೆ ಅದರ ಶಕ್ತಿ ಅಗಾಧವಾದದ್ದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಲೇಖನದ ಮುಂದಿನ ಭಾಗದಲ್ಲಿ ವಿವರಿಸಲಾಗಿದೆ.

ಅಶ್ವಿನಿ ನಕ್ಷತ್ರ-ಮೇಷ ರಾಶಿ

ಅಶ್ವಿನಿ ನಕ್ಷತ್ರ-ಮೇಷ ರಾಶಿ

ಅಶ್ವಿನಿ ನಕ್ಷತ್ರವನ್ನು ಅವಳಿ ಕುದುರೆಳು(ಅಶ್ವಿನಿ ದೇವತೆಗಳು) ಆಳುತ್ತಾರೆ. ಈ ನಕ್ಷತ್ರವು ಶೀಘ್ರವಾಗಿ ತಲುಪುವ ಶಕ್ತಿಯನ್ನು ಹೊಂದಿದೆ. ಅದಕ್ಕೆ ಶೀಧ್ರಾ ವೈಪಣಿ ಶಕ್ತಿ ಎಂದು ಕರೆಯಲಾಗುವುದು. ಇದು ಚಿಕಿತ್ಸಕಾ ಗುಣವನ್ನು ಹೊಂದಿದೆ. ಇದರಿಂದ ಇಡೀ ಪ್ರಪಂಚವೇ ರೋಗದಿಂದ ಮುಕ್ತವಾಗಿರುತ್ತದೆ ಎಂದು ಹೇಳಲಾಗುವುದು. ಅಶ್ವಿನಿ ನಕ್ಷತ್ರವು ತ್ವರಿತ ನೆರವು ಮತ್ತು ಶಕ್ತಿಯನ್ನು ಪಡೆಯುತ್ತಾರೆ. ಅಶ್ವಿನಿ ನಕ್ಷತ್ರದವರು ಉತ್ತಮ ಶ್ರವಣ, ಕಲಿಕೆ, ಗಮನ, ಉತ್ತಮ ಶಕ್ತಿಯನ್ನು ನೀಡುತ್ತದೆ. ಇದರಿಂದ ವ್ಯಕ್ತಿ ವೈದ್ಯಕೀಯ, ಮನೋವಿಜ್ಞಾನ, ನಾಯಕರಾಗಿ ಉತ್ತಮ ಒಳನೋಟ ಮತ್ತು ನವೀನ ನಾಯಕರುಗಳಾಗಿ ವಿಚಾರಗಳನ್ನು ಹೊಂದಲು ಸಹಾಯ ಮಾಡುವುದು ಎಂದು ಹೇಳಲಾಗುವುದು.

ಭರಣಿ ನಕ್ಷತ್ರ- ಮೇಷ ರಾಶಿ

ಭರಣಿ ನಕ್ಷತ್ರ- ಮೇಷ ರಾಶಿ

ಭರಣಿ ಯಮಾ ದೇವರ ಆಳ್ವಿಕೆಯನ್ನು ಒಳಗೊಂಡಿರುತ್ತದೆ. ಅನಗತ್ಯವಾದದ್ದನ್ನು ತೆಗೆದುಹಾಕುವ ಶಕ್ತಿಯನ್ನು ಒಳಗೊಂಡಿರುತ್ತದೆ. ದೇಹದಿಂದ ಜೀವ ತೆಗೆಯುವುದು, ಪೂರ್ವಜರ ಲೋಕಕ್ಕೆ ಆತ್ಮವನ್ನು ಕೊಂಡೊಯ್ಯುವುದು ಸೇರಿದಂತೆ ಈ ಮೂರು ಅಂಶಗಳ ಸಂಯೋಜನೆಯು ಜೀವಿಯನ್ನು ಮುಂದಿನ ಜಗತ್ತಿಗೆ ಕೊಂಡೊಯ್ಯುವಂತೆ ಮಾಡುತ್ತದೆ. ಯಮನು ಶಿಸ್ತು ಮತ್ತು ತ್ಯಾಗದ ವ್ಯಕ್ತಿ. ಅವನ ಪ್ರಭಾವದಿಂದ ವ್ಯಕ್ತಿಯು ಯೋಗಾಭ್ಯಾಸ, ಋಣಾತ್ಮಕ ಶಕ್ತಿಗಳನ್ನು ತೆಗೆದುಹಾಕುವುದು, ಅನುಚಿತ ಸಂಗತಿಗಳಿಂದ ದೂರವಾಗುವುದರ ಮೂಲಕ ಬದಲಾವಣೆಯನ್ನು ತಂದುಕೊಳ್ಳುವ ಶಕ್ತಿಯನ್ನು ವ್ಯಕ್ತಿ ಪಡೆದುಕೊಳ್ಳುವನು.

Most Read: ಈ 5 ರಾಶಿಚಕ್ರದವರು ವಿದ್ಯಾಭ್ಯಾಸದಲ್ಲಿ ಅತ್ಯಂತ ಬುದ್ಧಿವಂತರಾಗಿರುತ್ತಾರಂತೆ!

ಕೃತಿಕಾ ನಕ್ಷತ್ರ-ಪಾದಗಳ ಅನುಸಾರ ಮೇಷ ಅಥವಾ ವೃಷಭ ರಾಶಿ

ಕೃತಿಕಾ ನಕ್ಷತ್ರ-ಪಾದಗಳ ಅನುಸಾರ ಮೇಷ ಅಥವಾ ವೃಷಭ ರಾಶಿ

ಈ ನಕ್ಷತ್ರವು ಅಗ್ನಿ ದೇವರಿಂದ ಆಳಲ್ಪಡುತ್ತದೆ. ಇದು ದಹನ ಮಾಡುವ ಮತ್ತು ಶುದ್ಧೀಕರಿಸುವ ಶಕ್ತಿಯನ್ನು ಪ್ರತಿಬಿಂಬಿಸುವುದು. ಕೃತಿಕ ನಕ್ಷತ್ರವು ನಕಾರಾತ್ಮಕ ವಿಷಯವನ್ನು ದಹಿಸುವಂತೆ ಮಾಡುತ್ತದೆ. ಈ ನಕ್ಷತ್ರದ ವ್ಯಕ್ತಿಯಲ್ಲಿ ಶುದ್ಧೀಕರಿಸುವ ಗುಣ, ಅನುಚಿತ ಸಂಗತಿಗಳನ್ನು ತೊಡೆದುಹಾಕುವುದು ಹಾಗೂ ಹೊಸ ಪರಿವರ್ತನೆಯನ್ನು ಕಂಡುಕೊಳ್ಳುವ ವಿಷಯದಲ್ಲಿ ಸ್ಪಷ್ಟೀಕರಣ ನೀಡುವುದು. ಇವರು ತಮ್ಮಲ್ಲಿರುವ ಹಾಗೂ ತಮ್ಮ ಸುತ್ತಲಲ್ಲಿ ಇರುವ ನಕಾರಾತ್ಮಕ ಶಕ್ತಿಗಳು ಅಥವಾ ಸಂಗತಿಗಳ ವಿರುದ್ಧ ಹೋರಾಡುತ್ತಾರೆ.

ರೋಹಿಣಿ ನಕ್ಷತ್ರ- ವೃಷಭ ರಾಶಿ

ರೋಹಿಣಿ ನಕ್ಷತ್ರ- ವೃಷಭ ರಾಶಿ

ಈ ನಕ್ಷತ್ರವನ್ನು ಪ್ರಜಾಪತಿಯ ಆಳ್ವಿಕೆಗೆ ಒಳಗಾಗುತ್ತದೆ. ಸೃಷ್ಟಿಯ ಶಕ್ತಿ ಬೆಳವಣಿಗೆಗೆ ಪ್ರಚೋದನೆ ನೀಡುವ ಲಕ್ಷಣವನ್ನು ಪ್ರತಿಬಿಂಬಿಸುವುದು. ಈ ನಕ್ಷತ್ರಕ್ಕೆ ಅನುಗುಣವಾಗಿ ವ್ಯಕ್ತಿಯು ಎಲ್ಲಾ ಹಂತಗಳಲ್ಲಿ ಬೆಳವಣಿಗೆ ಮತ್ತು ಸೃಜನ ಶೀಲತೆಯ ಕಲಿಕೆಯನ್ನು ಪಡೆದುಕೊಳ್ಳುವನು. ಜೊತೆಗೆ ಫಲವತ್ತತೆಯನ್ನು ಅನುಭವಿಸುವನು. ವ್ಯಕ್ತಿಯ ಸಮೃದ್ಧಿಯು ಕೆಲವರಲ್ಲಿ ಅಸಮಧಾನವನ್ನು ಉಂಟುಮಾಡುವುದು. ಇವರ ಜೀವನದಲ್ಲಿ ಎಲ್ಲಾ ವಿಷಯಗಳು ಹಾಗೂ ಜೀವನದ ಸಂಗತಿಗಳಲ್ಲಿ ಏಳು ಬೀಳುಗಳನ್ನು ಅನುಭವಿಸುತ್ತಾರೆ. ಅಧಿಕ ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಜೊತೆಗೂಡುವ ಸಾಮಥ್ರ್ಯವನ್ನು ಒಳಗೊಂಡಿರುತ್ತಾರೆ ಎಂದು ಹೇಳಬಹುದು.

ಮೃಗಶಿರ ನಕ್ಷತ್ರ- ಪಾದಗಳಿಗೆ ಅನುಗುಣವಾಗಿ ವೃಷಭ ಅಥವಾ ಮಿಥುನ ರಾಶಿ

ಮೃಗಶಿರ ನಕ್ಷತ್ರ- ಪಾದಗಳಿಗೆ ಅನುಗುಣವಾಗಿ ವೃಷಭ ಅಥವಾ ಮಿಥುನ ರಾಶಿ

ಈ ನಕ್ಷತ್ರವನ್ನು ಸೋಮ ಅಥವಾ ಚಂದ್ರ ದೇವರು ಆಳುತ್ತಾನೆ. ಈ ನಕ್ಷತ್ರವು ಅಧಿಕಾರವನ್ನು ನೆರವೇರಿಸುವ ಶಕ್ತಿಯನ್ನು ನೀಡುವುದು. ಈ ನಕ್ಷತ್ರದವರ ಜೀವನವು ಹೆಚ್ಚು ಆಕರ್ಷಕವಾಗಿರುತ್ತದೆ. ಈ ನಕ್ಷತ್ರದ ಜನರಿಗೆ ಜೀವನವು ಸಂತೋಷ ಹಾಗೂ ಆನಂದದಿಂದ ಕೂಡಿರುತ್ತದೆ. ಜೀವನವನ್ನು ಸುಂದರವಾಗಿಸಿಕೊಳ್ಳಲು ನಕ್ಷತ್ರದ ಪ್ರೇರಣೆ ಹಾಗೂ ಸಹಕಾರ ದೊರೆಯುವುದು. ಆನಂದ ಜೀವನ ಹಾಗೂ ಪುನರುಜ್ಜೀವನಗೊಳಿಸಿಕೊಳ್ಳುವಿಕೆಯಿಂದ ಹೊಸ ರೂಪಾಂತರವನ್ನು ಪಡೆದುಕೊಳ್ಳುವರು.

Most Read: ಈ ಮಹಿಳೆ ದೇಹವನ್ನು ವೈದ್ಯರು 27 ಸಾವಿರ ತುಂಡುಗಳನ್ನಾಗಿ ಮಾಡಿದರು! ಯಾಕೆ ಗೊತ್ತೇ?

ಆದ್ರ್ರ ನಕ್ಷತ್ರ- ಮಿಥುನ ರಾಶಿ

ಆದ್ರ್ರ ನಕ್ಷತ್ರ- ಮಿಥುನ ರಾಶಿ

ಆದ್ರ್ರ ನಕ್ಷತ್ರವನ್ನು ರುದ್ರನು ಆಳುತ್ತಾನೆ. ಇದು ಶಿವನ ಉಗ್ರರೂಪ ಎಂದು ಹೇಳಲಾಗುವುದು. ಇವರ ಶಕ್ತಿಯಲ್ಲಿ ವಿನಿಯೋಗಿಸುವ ಶ್ರಮವು ಜೀವನದಲ್ಲಿ ಲಾಭವನ್ನು ತಂದುಕೊಡುವುದು. ಇವುಗಳ ಆಧಾರದ ಮೇಲೆಯೇ ವ್ಯಕ್ತಿ ತನ್ನ ಜೀವನಕ್ಕೊಂದು ಗುರಿ ಹಾಗೂ ಯಶಸ್ನನ್ನು ಕಂಡುಕೊಳ್ಳುವನು. ಈ ನಕ್ಷತ್ರದವರ ಜೀವನದಲ್ಲಿ ಹೆಚ್ಚಿನ ಶ್ರಮದಾಯಕ ಪ್ರಯತ್ನಗಳನ್ನು ಕಾಣಬಹುದು. ಈ ನಕ್ಷತ್ರದವರು ತಮ್ಮ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದುವುದರ ಮೂಲಕ ಅದಕ್ಕಾಗಿ ಸಾಕಷ್ಟು ಶ್ರಮವನ್ನು ವಿನಿಯೋಗಿಸುವರು. ಅದಕ್ಕೆ ಅನುಗುಣವಾಗಿ ಯಶಸ್ಸನ್ನು ಪಡೆದುಕೊಳ್ಳುವರು. ಈ ನಕ್ಷತ್ರವು ಪ್ರಾಣಿಗಳ ಮೇಲಿನ ಆಡಳಿತವನ್ನು ಸೂಚಿಸುತ್ತದೆ. ಅದು ವ್ಯಕ್ತಿಯ ಸ್ವಭಾವದಲ್ಲೂ ಬೇಟೆಗಾರನ ಗುಣವನ್ನು ಸೂಚಿಸುವುದು ಎನ್ನಲಾಗುತ್ತದೆ.

ಪುನರ್ವಸು ನಕ್ಷತ್ರ- ಪಾದಗಳ ಅನುಸಾರ ಮಿಥುನ ಅಥವಾ ಕರ್ಕ ರಾಶಿ

ಪುನರ್ವಸು ನಕ್ಷತ್ರ- ಪಾದಗಳ ಅನುಸಾರ ಮಿಥುನ ಅಥವಾ ಕರ್ಕ ರಾಶಿ

ಪುನರ್ವಸು ನಕ್ಷತ್ರವು ಅದಿತಿ ದೇವತೆಗಳಿಂದ ಆಳಲ್ಪಡುತ್ತದೆ. ದೇವತೆಗಳ ತಾಯಿ ಅದಿತಿ. ಈ ನಕ್ಷತ್ರದ ಪ್ರಭಾವ ವ್ಯಕ್ತಿಯು ಸಂಪತ್ತು ಮತ್ತು ಜ್ಞಾನವನ್ನು ಪಡೆದುಕೊಳ್ಳುವ ಶಕ್ತಿಯನ್ನು ಕರುಣಿಸುವುದು. ಗಾಳಿ ಮತ್ತು ಮಳೆಯನ್ನು ಸೂಚಿಸುವ ಈ ನಕ್ಷತ್ರ ಸಸ್ಯಗಳ ಪುನರುಜ್ಜೀವನವನ್ನು ತರುವುದು. ಶುಷ್ಕ ಋತುವಿನ ನಂತರ ಮಾನ್ಸೂನ್ ಮಳೆಯು ಪುನರ್ವಸು ನಕ್ಷತ್ರದ ಶಕ್ತಿಯಿಂದಲೇ ಆರಂಭವಾಗುತ್ತದೆ ಎಂದು ಹೇಳಲಾಗುವುದು. ಅದಿತಿ ಎನ್ನುವ ಭೂಮಿ ದೇವತೆಯು ವ್ಯಕ್ತಿಯ ಮೇಲೆ ಸೃಜನ ಶೀಲ ಬೆಳವಣಿಗೆ ಹಾಗೂ ಸ್ಫೂರ್ತಿಯನ್ನು ಕರುಣಿಸುತ್ತದೆ. ಈ ನಕ್ಷತ್ರದವರ ಮೇಲೆ ನಕ್ಷತ್ರದ ಪ್ರಭಾವದಿಂದ ಅದೇರೀತಿಯ ಸ್ವಭಾವ ಹಾಗೂ ಗುಣವನ್ನು ಹೊಂದಿರುತ್ತಾರೆ. ಇವರಲ್ಲಿ ಪೋಷಣೆಯ ಶಕ್ತಿಯು ಹೆಚ್ಚಾಗಿರುತ್ತದೆ ಎಂದು ಹೇಳಲಾಗುವುದು.

ಪುಷ್ಯ ನಕ್ಷತ್ರ-ಕರ್ಕ ರಾಶಿ

ಪುಷ್ಯ ನಕ್ಷತ್ರ-ಕರ್ಕ ರಾಶಿ

ಪುಷ್ಯ ನಕ್ಷತ್ರವು ಬೃಹಸ್ಪತಿ ದೇವರಿಂದ ಆಳಲ್ಪಡುತ್ತದೆ. ಇದು ಆಧ್ಯಾತ್ಮಿಕ ಶಕ್ತಿಯನ್ನು ರಚಿಸುವ ಸಾಮಥ್ರ್ಯವನ್ನು ಕರುಣಿಸುವುದು. ಹಾಗಾಗಿಯೇ ಈ ನಕ್ಷತ್ರದ ವ್ಯಕ್ತಿಯಲ್ಲೂ ಆಧ್ಯಾತ್ಮಿಕ ವಿಷಯದಲ್ಲಿ ಒಲವು ಹಾಗೂ ತ್ಯಾಗದ ಮನೋಭಾವವನ್ನು ಅಧಿಕವಾಗಿ ಹೊಂದಿರುತ್ತಾರೆ. ಪುಷ್ಯ ನಕ್ಷತ್ರವು ನಮ್ಮ ಒಳ್ಳೆಯ ಕರ್ಮವನ್ನು ಮತ್ತು ಸಾಧನಾ ಯೂಗ ಪದ್ಧತಿಯನ್ನು ಒಳಗೊಂಡಂತೆ ಉತ್ತಮ ಪ್ರಯತ್ನಗಳನ್ನು ಹೆಚ್ಚಿಸುತ್ತದೆ. ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಿಂತನೆಗಳಲ್ಲಿ ಜ್ಞಾನ ಹಾಗೂ ಬೋಧನಾ ಸಾಮಥ್ರ್ಯವನ್ನು ಹೆಚ್ಚಿಸುವುದು.

ಆಶ್ಲೇಷ ನಕ್ಷತ್ರ- ಕರ್ಕ ರಾಶಿ

ಆಶ್ಲೇಷ ನಕ್ಷತ್ರ- ಕರ್ಕ ರಾಶಿ

ಆಶ್ಲೇಷ ನಕ್ಷತ್ರವು ಸರ್ಪ ದೇವರಿಂದ ಆಳಲ್ಪಡುತ್ತದೆ. ಆಶ್ಲೇಷನು ಶತ್ರುಗಳನ್ನು ಪಾಶ್ರ್ವವಾಯುವಿಗೆ ತಿರುಗುವಂತೆ ಮಾಡುತ್ತಾನೆ. ಸರ್ಪ ದೇವರು ಬುದ್ಧಿವಂತಿಕೆಯನ್ನು ನೀಡುತ್ತದೆ. ಪ್ರಾಯೋಗಿಕ ಬುದ್ಧಿವಂತಿಕೆಯು ಈ ನಕ್ಷತ್ರದ ವ್ಯಕ್ತಿಗಳಲ್ಲಿ ಅಧಿಕವಾಗಿರುತ್ತದೆ. ತಮ್ಮಲ್ಲಿರುವ ಪ್ರಾಯೋಗಿಕ ಬುದ್ಧಿವಂತಿಕೆಯನ್ನು ಉಪಯೋಗಿಸುವುದರ ಮೂಲಕ ಜೀವನದಲ್ಲಿ ಸಾಕಷ್ಟು ಯಶಸ್ಸು ಹಾಗೂ ಜಯವನ್ನು ಪಡೆದುಕೊಳ್ಳುತ್ತಾನೆ. ಎದುರಾಳಿಗಳು, ಶತ್ರುಗಳು, ವಿರೋಧಿಗಳಿಂದ ಉಂಟಾಗುವ ಅಡೆತಡೆಗಳನ್ನು ಬಹಳ ಸುಲಭವಾಗಿ ನಿವಾರಿಸುವ ಶಕ್ತಿಯನ್ನು ಹೊಂದಿರುತ್ತಾರೆ.

ಮಘಾ ನಕ್ಷತ್ರ- ಸಿಂಹ ರಾಶಿ

ಮಘಾ ನಕ್ಷತ್ರ- ಸಿಂಹ ರಾಶಿ

ಮಘಾ ನಕ್ಷತ್ರವನ್ನು ಪೂರ್ವಜರು ಆಳುತ್ತಾರೆ. ಮಘಾ ನಕ್ಷತ್ರವು ರಾಜ್ಯದ ಸ್ಥಿತಿಯನ್ನು ಬದಲಾವಣೆ ಮಾಡುವುದರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸಾಮಾನ್ಯವಾಗಿ ನಾವು ಒಂದು ಚಕ್ರದ ಅಂತ್ಯಕ್ಕೆ ಬರುತ್ತೇವೆ ಎನ್ನುವುದನ್ನು ತೋರುತ್ತದೆ. ದೇಹದಿಂದ ದೂರದಲ್ಲಿರುವ ಆತ್ಮದ ಚಲನೆಯನ್ನು ಸೂಚಿಸುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಈ ನಕ್ಷತ್ರದ ಹೆಚ್ಚಿನ ಅರ್ಥಗಳು ಪೂರ್ವಿಕರ ಹೆಮ್ಮೆ ಮತ್ತು ಶಕ್ತಿಯನ್ನು ಒಳಗೊಂಡಿದೆ.

ಪೂರ್ವ ಫಾಲ್ಗುಣಿ ನಕ್ಷತ್ರ- ಸಿಂಹ ರಾಶಿ

ಪೂರ್ವ ಫಾಲ್ಗುಣಿ ನಕ್ಷತ್ರ- ಸಿಂಹ ರಾಶಿ

ಪೂರ್ವ ಫಾಲ್ಗುಣಿ ನಕ್ಷತ್ರ ಆರ್ಯಮನ್ ಆಳ್ವಿಕೆಯನ್ನು ಒಳಗೊಂಡಿರುತ್ತದೆ. ಸೌರ ದೇವತೆಯ ಭಾಗವನ್ನು ಹಾಗೂ ಶಕ್ತಿಯನ್ನು ಹೊಂದಿರುವ ನಕ್ಷತ್ರ ಎಂದು ಹೇಳಲಾಗುವುದು. ಇದು ಸಂತಾನೋತ್ಪತ್ತಿಯ ಶಕ್ತಿಯನ್ನು ನೀಡುತ್ತದೆ. ಪೂರ್ವ ಫಾಲ್ಗುಣಿ ನಕ್ಷತ್ರವು ಎಲ್ಲಾ ಹತಂದಲ್ಲೂ ಉತ್ತಮ ಒಕ್ಕೂಟ ಮತ್ತು ಸಂತಾನೋತ್ಪತ್ತಿಯನ್ನು ತರುತ್ತದೆ. ಅಧಿಕೃತ ಒಪ್ಪಂದ ಮತ್ತು ಮದುವೆಯನ್ನು ಅನುಸರಿಸುತ್ತದೆ. ಯಶಸಿಗಾಗಿ ಮೈತ್ರಿಯನ್ನು ಸೂಚಿಸುತ್ತದೆ. ವ್ಯಕ್ತಿಯು ನಕ್ಷತ್ರದ ಪ್ರಭಾವದಿಂದ ಸಾಕಷ್ಟು ಯಶಸ್ಸನ್ನು ಪಡೆದುಕೊಳ್ಳುವುದು.

ಉತ್ತರ ಫಾಲ್ಗುಣಿ ನಕ್ಷತ್ರ -ಕನ್ಯಾ ರಾಶಿ

ಉತ್ತರ ಫಾಲ್ಗುಣಿ ನಕ್ಷತ್ರ -ಕನ್ಯಾ ರಾಶಿ

ಉತ್ತರ ಫಾಲ್ಗುಣಿ ನಕ್ಷತ್ರವನ್ನು ಭಾಗ ದೇವತೆಯು ಆಳುತ್ತದೆ. ಒಕ್ಕೂಟ ದೇವತೆಯಾದ ಭಾಗ ದೇವರು ಸಮೃದ್ಧಿಯ ಶಕ್ತಿಯನ್ನು ನೀಡುತ್ತದೆ. ಈ ನಕ್ಷತ್ರದ ವ್ಯಕ್ತಿಗಳು ಜೀವನದಲ್ಲಿ ಸಂಪತ್ತನ್ನು ಸಂಗ್ರಹಿಸಿಕೊಳ್ಳುವ ಶಕ್ತಿಯನ್ನು ಪಡೆದುಕೊಮಡಿರುತ್ತಾರೆ ಎಂದು ಹೇಳಲಾಗುವುದು. ಈ ನಕ್ಷತ್ರವು ಸಂಘಟನೆಯ ಮೂಲಕ ಸಮೃದ್ಧಿಯನ್ನು ತಂದುಕೊಡುವುದು. ನವ ಜೋಡಿಗಳಿಗೆ ಮನೆಯನ್ನು ಕಟ್ಟುವ ಯೋಗವನ್ನು ಕರುಣಿಸುವುದು. ಸರಿಯಾದ ಸಂಪನ್ಮೂಲವನ್ನು ಸೃಷ್ಟಿಸುವುದರ ಮೂಲಕ ಜೀವನದಲ್ಲಿ ಆಸ್ತಿ ಮತ್ತು ಸಮೃದ್ಧಿಯನ್ನು ತಂದುಕೊಡುವುದು.

ಹಸ್ತಾ ನಕ್ಷತ್ರ - ಕನ್ಯಾ ರಾಶಿ

ಹಸ್ತಾ ನಕ್ಷತ್ರ - ಕನ್ಯಾ ರಾಶಿ

ಹಸ್ತಾ ನಕ್ಷತ್ರವು ಸವಿತಾರ್ ದೇವತೆಯ ಆಳ್ವಿಕೆಗೆ ಒಳಪಡುತ್ತದೆ. ಹಸ್ತ ನಕ್ಷತ್ರದ ಪ್ರಭಾವವು ವ್ಯಕ್ತಿಯ ಮೇಲೆ ಸ್ಫೂರ್ತಿದಾಯಕ ರೂಪಾಂತರ ಹಾಗೂ ಲಾಭವನ್ನು ಪಡೆದುಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾನೆ. ತಮ್ಮ ಗುರಿಯನ್ನು ಸಂಪೂರ್ಣವಾಗಿ ಸಾಧಿಸುವ ಸಾಮಥ್ರ್ಯವನ್ನು ಹಸ್ತ ನಕ್ಷತ್ರವು ನೀಡುತ್ತದೆ. ಈ ನಕ್ಷತ್ರದ ಪ್ರಭಾವದಿಂದ ವ್ಯಕ್ತಿಯು ಸೃಜನಶೀಲತೆಯ ಇಚ್ಛೆಯನ್ನು ಹೊಂದಿರುತ್ತಾನೆ. ಅಲ್ಲದೆ ವ್ಯಕ್ತಿಯು ಅತ್ಯುತ್ತಮವಾದ ಯಶಸ್ಸನ್ನು ಪಡೆದು ಕೊಳ್ಳುವನು ಎನ್ನುವುದನ್ನು ಸೂಚಿಸುತ್ತದೆ. ಯೋಗ ಅಭ್ಯಾಸ ಹಾಗೂ ಜ್ಞಾನೋದಯದ ಮಾರ್ಗವನ್ನು ಸ್ವತಃ ಕಂಡುಕೊಳ್ಳುವರು.

Most Read: ಮೊಬೈಲ್‌ನ್ನು ಬ್ರೈಟ್‌ನೆಸ್‌ನಲ್ಲಿಟ್ಟು ಮೊಬೈಲ್‌‌ ನೋಡಿದರಿಂದ ಈಕೆಯ ಕಣ್ಣುಗಳಲ್ಲಿ 500 ರಂಧ್ರಗಳು ಪತ್ತೆಯಾಗಿವೆ!

ಚಿತ್ರಾ ನಕ್ಷತ್ರ- ಪಾದಗಳ ಅನುಸಾರ ಕನ್ಯಾ ಅಥವಾ ತುಲಾ ರಾಶಿ

ಚಿತ್ರಾ ನಕ್ಷತ್ರ- ಪಾದಗಳ ಅನುಸಾರ ಕನ್ಯಾ ಅಥವಾ ತುಲಾ ರಾಶಿ

ಚಿತ್ರಾ ನಕ್ಷತ್ರವು ತ್ವಸ್ತಾರ್ ದೇವತೆಯ ಆಳ್ವಿಕೆಗೆ ಒಳಗಾಗುತ್ತಾನೆ. ಈ ನಕ್ಷತ್ರದ ಪ್ರಭಾವವು ಕುಶಲಕರ್ಮಿಗಳ ಪ್ರಭಾವದಂತೆ ಗೌರವ ಹಾಗೂ ಸ್ಥಾನಮಾನವನ್ನು ತಂದುಕೊಡುವುದು. ಈ ದೇವತೆಯ ಪ್ರಭಾವವು ಒಳ್ಳೆಯ ಕರ್ಮ ಹಾಗೂ ಉತ್ತಮ ನಡೆಯಲ್ಲಿ ಸಾಗುವಂತೆ ಪ್ರಚೋದನೆ ನೀಡುವುದು. ಆಧ್ಯಾತ್ಮಿಕ ಶಕ್ತಿಯಿಂದ ಉತ್ತಮ ಪರಿಣಾಮವನ್ನು ಪಡೆದುಕೊಳ್ಳುವನು. ಅಧಿಕ ಸಮೃದ್ಧಿಯನ್ನು ಪಡೆದುಕೊಳ್ಳುವುದರ ಮೂಲಕ ಸಂಪತ್ತನ್ನು ಗಳಿಸುವರು. ಬಹು ಭಾಷಾ ಚತುರರು ಹಾಗೂ ಮಹಾನ್ ಸೃಜನ ಶೀಲರು ಆಗಿರುತ್ತಾರೆ.

ಸ್ವಾತಿ ನಕ್ಷತ್ರ- ತುಲಾ ರಾಶಿ

ಸ್ವಾತಿ ನಕ್ಷತ್ರ- ತುಲಾ ರಾಶಿ

ಸ್ವಾತಿ ನಕ್ಷತ್ರವನ್ನು ವಾಯು ದೇವರು ಆಳುತ್ತಾನೆ. ಈ ನಕ್ಷತ್ರವು ಗಾಳಿಯಂತೆ ಚದುರುವಿಕೆಯ ಶಕ್ತಿಯನ್ನು ಒಳಗೊಂಡಿರುತ್ತದೆ. ಗಾಳಿಯು ಚದುರುವಿಕೆಯ ಶಕ್ತಿಯನ್ನು ಹೊಂದಿರುತ್ತದೆ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವುದು. ವಿನಾಶಕಾರಿ ಶಕ್ತಿಯನ್ನು ದೂರಮಾಡುವುದು. ಧನಾತ್ಮಕ ಶಕ್ತಿಯ ಪ್ರೇರಣೆಯು ಅಧಿಕವಾಗಿರುತ್ತದೆ. ಈ ನಕ್ಷತ್ರದ ವ್ಯಕ್ತಿಗಳು ಜೀವನದಲ್ಲಿ ಸಾಕಷ್ಟು ವೇಗದ ಚಲನೆಯನ್ನು ಪಡೆದುಕೊಳ್ಳುವರು. ಅಲ್ಲದೆ ಅವರ ಪ್ರವೃತ್ತಿಯಲ್ಲಿ ವೇಗದ ಗುಣವನ್ನು ಹೊಂದಿರುತ್ತಾರೆ.

ವಿಶಾಖ ನಕ್ಷತ್ರ- ವೃಶ್ಚಿಕ ರಾಶಿ

ವಿಶಾಖ ನಕ್ಷತ್ರ- ವೃಶ್ಚಿಕ ರಾಶಿ

ವಿಶಾಖ ನಕ್ಷತ್ರವನ್ನು ಇಂದ್ರ ಮತ್ತು ಅಗ್ನಿ ದೇವರು ಆಳುತ್ತಾರೆ. ಇಂದ್ರ ಮತ್ತು ಅಗ್ನಿ ದೇವರು ವಾತಾವರಣದಲ್ಲಿ ಶಾಖ ಮತ್ತು ಮಿಂಚಿನ ಶಕ್ತಿಯನ್ನು ಪ್ರತಿನಿಧಿಸುತ್ತಾರೆ. ಈ ನಕ್ಷತ್ರದ ಪ್ರಭಾವದಿಂದ ವ್ಯಕ್ತಿಯು ವಿವಿಧ ಹಂತದಲ್ಲಿ ಹಾಗೂ ಜೀವನದ ಪಥದಲ್ಲಿ ವ್ಯಾಪನಾ ಶಕ್ತಿಯನ್ನು ಪಡೆದುಕೊಳ್ಳುವರು. ಇವರು ಕೃಷಿ, ಕೊಯ್ಲು ಹಾಗೂ ಉಳುಮೆಯನ್ನು ಅನುಸರಿಸುತ್ತಾರೆ. ಇದರ ಫಲಿತಾಂಶವನ್ನು ಸುಗ್ಗಿಯ ರೀತಿಯಲ್ಲಿ ಅನುಭವಿಸುವರು. ಈ ನಕ್ಷತ್ರದ ವ್ಯಕ್ತಿಗಳು ದೀರ್ಘ ಸಮಯದ ಶ್ರಮವನ್ನು ವಿನಿಯೋಗಿಸುವುದರ ಮೂಲಕ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವರು.

ಅನುರಾಧ ನಕ್ಷತ್ರ- ವೃಶ್ಚಿಕ ರಾಶಿ

ಅನುರಾಧ ನಕ್ಷತ್ರ- ವೃಶ್ಚಿಕ ರಾಶಿ

ಅನುರಾಧ ನಕ್ಷತ್ರವನ್ನು ದೇವರಾಜನ ಮಿತ್ರನು ಆಳುತ್ತಾನೆ. ಇದು ಪೂಜಾ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಅನುರಾಧ ನಕ್ಷತ್ರವು ಸಂಬಂಧದಲ್ಲಿ ಸಮತೋಲನವನ್ನು ತೋರುವುದು. ಇತರರು ಇವರನ್ನು ಗೌರವಿಸುವಂತೆ ಮಾಡುವುದು. ಈ ನಕ್ಷತ್ರದ ಪ್ರಭಾವದಿಂದ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಗೌರವದಿಂದ ಬಾಳುತ್ತಾನೆ. ಸುತ್ತಲಿನ ಜನರು ಸಹ ಉತ್ತಮ ಸತ್ಕಾರ ಹಾಗೂ ಗೌರವ ನೀಡುವುದರ ಮೂಲಕ ಗೌರವಿಸುತ್ತಾರೆ. ವಿಶೇಷ ವ್ಯಕ್ತಿಗಳ ಸಹಕಾರ ಸ್ನೇಹ ಹಾಗೂ ಗೌರವದಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸುವರು. ಸ್ವಂತ ಪ್ರಯತ್ನವನ್ನೂ ಸಾಕಷ್ಟು ಪ್ರಮಾಣದಲ್ಲಿ ವಿನಿಯೋಗಿಸುವುದರಿಂದ ಬಹುಬೇಗ ಯಶಸ್ಸು ಅಥವಾ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವರು.

ಜೇಷ್ಠ ನಕ್ಷತ್ರ- ವೃಶ್ಚಿಕ ರಾಶಿ

ಜೇಷ್ಠ ನಕ್ಷತ್ರ- ವೃಶ್ಚಿಕ ರಾಶಿ

ಜೇಷ್ಠ ನಕ್ಷತ್ರವನ್ನು ಇಂದ್ರ ದೇವ ಆಳುತ್ತಾನೆ. ಈ ನಕ್ಷತ್ರವು ವ್ಯಕ್ತಿಗೆ ಸಾಕಷ್ಟು ಧೈರ್ಯ ನೀಡುವುದರ ಮೂಲಕ ಎಲ್ಲ ಕೆಲಸ ಕಾರ್ಯಗಳಲ್ಲಿ ಮುಂದೆ ಸಾಗಲು ಪ್ರೇರಣೆ ನೀಡುವುದು. ರಕ್ಷಣಾತ್ಮಕ ಮನೋಭಾವ ನೀಡುವುದರ ಮೂಲಕ ಒಬ್ಬ ನಾಯಕನ ಶಕ್ತಿಯನ್ನು ನೀಡುವುದು. ಜೀವನದಲ್ಲಿ ಇವರು ಧೈರ್ಯ ಮತ್ತು ಪ್ರಯತ್ನಗಳ ಮೂಲಕ ಉತ್ತಮ ಪಯಣವನ್ನು ಅನುಭವಿಸುವರು. ಕೆಲವೊಮ್ಮೆ ಹತಾಶೆಗೆ ಒಳಗಾಗುತ್ತಾರೆ ಆದರೂ ಇತರರ ಕುತಂತ್ರವನ್ನು ಬೇಧಿಸಿ ಗೆಲ್ಲುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಈ ನಕ್ಷತ್ರದವರು ಜೀವನದಲ್ಲಿ ಆದ್ಯತೆ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದರ ಮೂಲಕ ಜಯವನ್ನು ಸಾಧಿಸುವರು.

Most Read:ನಿಮಗೆ ಮಹಿಳೆಯರ ದೇಹದ ಬಗ್ಗೆ ತಿಳಿಯದೇ ಇರುವ ಕೆಲವೊಂದು ಸಂಗತಿಗಳು

ಮೂಲಾ ನಕ್ಷತ್ರ- ಧನು ರಾಶಿ

ಮೂಲಾ ನಕ್ಷತ್ರ- ಧನು ರಾಶಿ

ಮೂಲಾ ನಕ್ಷತ್ರವನ್ನು ನಿರಿತಿ ದೇವತೆಯು ಆಳುತ್ತದೆ. ಈ ದೇವತೆಯು ಅನುಚಿತ ಸಂಗತಿಯನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿದೆ. ವಿನಾಶ ಮಾಡುವ ಶಕ್ತಿಯ ಪ್ರಭಾವವು ವ್ಯಕ್ತಿಯ ಮೇಲೂ ಪ್ರಭಾವ ಬೀರುವುದು. ಹಿಂಸೆ ನೀಡುವವರನ್ನು ನಾಶ ಮಾಡುವ ಮಾನಸಿಕ ಗುಣವನ್ನು ಮೂಲಾ ನಕ್ಷತ್ರದವರು ಪಡೆದುಕೊಳ್ಳುತ್ತಾರೆ. ನಿರಿತಿ ಎನ್ನುವುದು ಕಾಳಿ ದೇವತೆಯ ಅವತಾರ. ಸಕಾರಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಎಂತಹ ಹೋರಾಟ ಮಾಡಲು ಸಹ ಈ ವ್ಯಕ್ತಿಗಳು ಸಿದ್ಧರಾಗಿರುತ್ತಾರೆ ಎನ್ನಲಾಗುವುದು. ಹೊಸ ಸೃಷ್ಟಿಗೆ ಕಾರಣವಾಗುವುದು ಎಂದು ಸಹ ಹೇಳುತ್ತಾರೆ.

ಪೂರ್ವಾಷಾಢ ನಕ್ಷತ್ರ -ಧನು ರಾಶಿ

ಪೂರ್ವಾಷಾಢ ನಕ್ಷತ್ರ -ಧನು ರಾಶಿ

ಪೂರ್ವಾಷಾಢ ನಕ್ಷತ್ರವನ್ನು ಜಲದೇವತೆ ಆಳುವುದು. ಇದರ ಶಕ್ತಿಯು ಉತ್ತೇಜಕದಿಂದ ಕೂಡಿರುತ್ತದೆ. ಇದು ಲಾಭದ ಹೊಳಪನ್ನು ನೀಡುವುದು. ಪೂರ್ವಾಷಾಢ ನಕ್ಷತ್ರವು ಶುದ್ಧೀಕರಣ ಹಾಗೂ ಪುನರುತ್ಪಾದನೆಯನ್ನು ತೋರುತ್ತದೆ. ಸ್ನಾನದ ನಂತರ ಪಡೆಯುವ ಶುದ್ಧ ಶಕ್ತಿಯಂತೆ ವ್ಯಕ್ತಿಯು ತನ್ನ ಪ್ರಯತ್ನದಲ್ಲಿ ಹೆಚ್ಚುವರಿ ಶಕ್ತಿಯನ್ನು ಕಂಡುಕೊಳ್ಳುವನು. ಪೂರ್ವಾಷಾಢದ ವ್ಯಕ್ತಿಗಳಲ್ಲಿ ಸಮುದ್ರವನ್ನು ದಾಟುವಂತಹ ಶಕ್ತಿಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ಅಂದರೆ ಅವರು ಜೀವನದಲ್ಲಿ ಎಂತಹ ಸಾಧನೆಯನ್ನು ಸಾಧಿಸಬಹುದಾದಂತಹ ಸಾಮಥ್ರ್ಯವನ್ನು ಹೊಂದಿರುತ್ತಾರೆ ಎನ್ನಲಾಗುವುದು.

ಉತ್ತರಾಷಾಢ ನಕ್ಷತ್ರ- ಧನು ರಾಶಿ

ಉತ್ತರಾಷಾಢ ನಕ್ಷತ್ರ- ಧನು ರಾಶಿ

ಉತ್ತರಾಷಾಢ ನಕ್ಷತ್ರವನ್ನು ವಿಶ್ವದೇವನು ಆಳುವನು. ಈ ನಕ್ಷತ್ರವು ಅಸಾಧ್ಯವಾದ ವಿಜಯವನ್ನು ಹೊಂದಿರುತ್ತದೆ. ಇದರ ಆಧಾರದ ಮೇಲೆ ಗೆಲ್ಲುವ ಸಾಮಥ್ರ್ಯವನ್ನು ಹೊಂದಿರುತ್ತಾರೆ. ಈ ನಕ್ಷತ್ರದ ವ್ಯಕ್ತಿಗಳು ಸಾಮಾನ್ಯವಾಗಿ ಜೀವನದಲ್ಲಿ ಗೆಲ್ಲುವ ಗುರಿಯನ್ನು ಹೊಂದಿರುತ್ತಾರೆ. ಜೊತೆಗೆ ಗೆಲುವಿನ ವಿಜೇತರಾಗುತ್ತಾರೆ. ಉತ್ತರಾಷಾಢ ಶಕ್ತಿಯು ಬೆಂಬಲವನ್ನು ಪಡೆದುಕೊಳ್ಳುವುದು ಹಾಗೂ ಗುರುತಿಸಿಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿರುತ್ತಾರೆ. ವಿಜಯಕ್ಕಾಗಿ ಸಾಕಷ್ಟು ಪ್ರಯತ್ನವನ್ನು ನಡೆಸುವರು. ದೀರ್ಘಾವಧಿಯ ಪ್ರಯತ್ನಗಳಿಂದ ಅತ್ಯುತ್ತಮ ಸಾಧನೆಯನ್ನು ಗೈಯುವರು.

ಶ್ರವಣ ನಕ್ರತ್ರ-ಮಕರ ರಾಶಿ

ಶ್ರವಣ ನಕ್ರತ್ರ-ಮಕರ ರಾಶಿ

ಶ್ರವಣ ನಕ್ಷತ್ರವನ್ನು ವಿಷ್ಣುವಿನ ಆಳ್ವಿಕೆಯನ್ನು ಒಳಗೊಂಡಿದೆ. ಹಿಂದೂ ದೇವತೆಗಳ ಶ್ರೇಷ್ಠತೆ ಎಂದು ಪರಿಗಣಿಸಲಾಗುತ್ತದೆ. ಶ್ರವಣ ನಕ್ಷತ್ರದ ಜನರು ತಮ್ಮ ಜೀವನದ ಸರಿಯಾದ ಮಾರ್ಗದಲ್ಲಿ ಸಾಗಲು ಅನುವು ಮಾಡಿಕೊಡುತ್ತದೆ. ವಿಷ್ಣು ತನ್ನ ಮೂರು ಹೆಜಕ್ಜೆಯಿಂದ ಭೂಮಿ, ವಾಯುಮಂಡಲ ಹಾಗೂ ಸ್ವರ್ಗದ ಲೋಕಕ್ಕೆ ಸಂಪರ್ಕವನ್ನು ಪಡೆದುಕೊಂಡನು. ಹಾಗೆಯೇ ಈ ನಕ್ಷತ್ರದ ಜನರು ಜ್ಞಾನ, ಬೋಧನೆ ಮತ್ತು ಸಂವಹನಗಳ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ತಮ್ಮ ಪ್ರಯತ್ನಗಳ ಮೂಲಕ ಯಶಸ್ಸನ್ನು ಕಂಡುಕೊಳ್ಳುವರು.

ಧನಿಷ್ಠ ನಕ್ಷತ್ರ- ಪಾದಗಳ ಅನುಸಾರ ಮಕರ ಅಥವಾ ಕುಂಭ ರಾಶಿ

ಧನಿಷ್ಠ ನಕ್ಷತ್ರ- ಪಾದಗಳ ಅನುಸಾರ ಮಕರ ಅಥವಾ ಕುಂಭ ರಾಶಿ

ಧನಿಷ್ಠ ನಕ್ಷತ್ರವನ್ನು ವಾಸು ದೇವರು ಆಳುತ್ತಾರೆ ಎಂದು ಹೇಳಲಾಗುವುದು. ಇದು ಭೂ ಲೋಕವನ್ನು ಆಳುವ ಸಮೃದ್ಧವಾದ ದೇವತೆಯನ್ನು ಹೊಂದಿದೆ. ಈ ನಕ್ಷತ್ರವು ಸಮೃದ್ಧತೆ ಹಾಗೂ ಖ್ಯಾತಿಯನ್ನು ತಂದುಕೊಡುವುದು. ಅಲ್ಲದೆ ಉತ್ತಮ ಶಕ್ತಿಯನ್ನು ಒಟ್ಟುಗೂಡಿಸುವ ಶಕ್ತಿಯನ್ನು ನೀಡುವುದು. ಈ ನಕ್ಷತ್ರದ ಜನರಿಗೆ ಯಶಸ್ಸು ಉಡುಗೊರೆಯ ರೂಪದಲ್ಲಿ ದೊರೆಯುವುದು.

ಶತಾಭಿಷ ನಕ್ಷತ್ರ- ಕುಂಭ ರಾಶಿ

ಶತಾಭಿಷ ನಕ್ಷತ್ರ- ಕುಂಭ ರಾಶಿ

ಶತಾಭಿಷ ನಕ್ಷತ್ರವನ್ನು ವರುಣ ದೇವನು ಆಳುತ್ತಾನೆ. ಈ ನಕ್ಷತ್ರಕ್ಕೆ ನೂರು ಔಷಧಗಳ ಶಕ್ತಿ ಇದೆ ಎಂದು ಹೇಳಲಾಗುವುದು. ದೈವಿಕ ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ. ದೈವಿಕ ಅನುಗ್ರಹವನ್ನು ಪಡೆದುಕೊಳ್ಳುವ ವ್ಯಕ್ತಿಗಳಾಗಿರುತ್ತಾರೆ. ಈ ನಕ್ಷತ್ರದ ಜನರು ಹೆಚ್ಚು ಪ್ರಾಮಾಣಿಕತೆಯಿಂದ ಇರುವಂತೆ ಮಾಡುವುದು. ಉತ್ತಮ ಮನಃಸ್ಥಿತಿಯನ್ನು ಹೊಂದಿರುವ ಇವರು ಉತ್ತಮ ದೃಷ್ಟಿಕೋನವನ್ನು ಹೊಂದಿರುತ್ತಾರೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಪ್ರಬುದ್ಧತೆ ಹಾಗೂ ಆರೋಗ್ಯವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ.

ಪೂರ್ವಾಭದ್ರ ನಕ್ಷತ್ರ- ಪಾದಗಳಿಗೆ ಅನುಗುಣವಾಗಿ ಕುಂಭ ಅಥವಾ ಮೀನ ರಾಶಿ

ಪೂರ್ವಾಭದ್ರ ನಕ್ಷತ್ರ- ಪಾದಗಳಿಗೆ ಅನುಗುಣವಾಗಿ ಕುಂಭ ಅಥವಾ ಮೀನ ರಾಶಿ

ಪೂರ್ವಾಭದ್ರ ನಕ್ಷತ್ರವನ್ನು ಅಜಾ ಏಕಪಾದ ಆಳುತ್ತದೆ. ಈ ನಕ್ಷತ್ರವು ಆಧ್ಯಾತ್ಮಿಕತೆಯನ್ನು ಹೆಚ್ಚಿಸುವ ಶಕ್ತಿಯನ್ನು ನೀಡುವುದು. ಈ ನಕ್ಷತ್ರವು ವ್ಯಕ್ತಿಗೆ ಆಂತರಿಕ ಶುದ್ಧೀಕರಣದ ಮೂಲಕ ಸಾರ್ವತ್ರಿಕ ದೃಷ್ಟಿಕೋನವನ್ನು ನೀಡುತ್ತದೆ. ಇದು ಜೀವನದಲ್ಲಿ ಆಧ್ಯಾತ್ಮಿಕ ಆಕಾಂಕ್ಷೆಗಳನ್ನು ಹುಟ್ಟುಹಾಕುತ್ತದೆ. ಆದ್ಯಾತ್ಮಿಕ ಪ್ರಯತ್ನ, ಶಿಸ್ತು ಮತ್ತು ತಪಸ್ಸುಗಳ ಮೂಲಕ ಜೀವನದ ಅಗತ್ಯತೆಗಳನ್ನು ಹಾಗೂ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವರು. ಈ ನಕ್ಷತ್ರದ ಪ್ರಭಾವದಿಂದ ವ್ಯಕ್ತಿ ಸೃಜನಶೀಲತೆ ಹಾಗೂ ಆಧ್ಯಾತ್ಮಿಕ ಹೊಳಪನ್ನು ಪಡೆದುಕೊಳ್ಳುವನು.

ಉತ್ತರಾಭದ್ರ ನಕ್ಷತ್ರ- ಮೀನ ರಾಶಿ

ಉತ್ತರಾಭದ್ರ ನಕ್ಷತ್ರ- ಮೀನ ರಾಶಿ

ಉತ್ತರಾಭದ್ರ ನಕ್ಷತ್ರವನ್ನು ಅಹಿರ್ ಬುಧ್ಯಾ ದೇವತೆ ಆಳುವುದು. ಈ ನಕ್ಷತ್ರದ ಶಕ್ತಿಯು ಅತ್ಯುತ್ತಮ ಮಳೆಯನ್ನು ತರುವುದು. ಉತ್ತಮ ಮಳೆಯಿಂದ ಪ್ರಕೃತಿಯಲ್ಲಿ ಹಸಿರನ್ನು ಸೃಷ್ಟಿಸುವುದು ಹಾಗೂ ಆಹ್ಲಾದವನ್ನು ಕಲ್ಪಿಸುವುದಾಗಿದೆ. ಮೂರು ಲೋಕದಲ್ಲೂ ಸಂತೋಷ ಹಾಗೂ ಸಮೃದ್ಧಿಯನ್ನು ಕಲ್ಪಿಸುವುದಾಗಿದೆ. ಪೂರ್ವಾಭದ್ರ ನಕ್ಷತ್ರವು ವಿಸ್ತರಣೆ ಹಾಗೂ ಸಮೃದ್ಧಿಯನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ವ್ಯಕ್ತಿಯ ಜೀವನದಲ್ಲೂ ಸಾಕಷ್ಟು ವಿಷ್ತರಣೆ ಹಾಗೂ ಸಮೃದ್ಧಿಯನ್ನು ಪಡೆದುಕೊಳ್ಳುವನು. ಆಧ್ಯಾತ್ಮಿಕವಾಗಿಯೂ ಹೆಚ್ಚು ಪ್ರಭಾವಿತರಾಗುವರು ಎಂದು ಹೇಳಲಾಗುವುದು.

ರೇವತಿ ನಕ್ಷತ್ರ - ಮೀನ ರಾಶಿ

ರೇವತಿ ನಕ್ಷತ್ರ - ಮೀನ ರಾಶಿ

ರೇವತಿ ನಕ್ಷತ್ರವನ್ನು ಸೂರ್ಯ ದೇವ ಆಳ್ವಿಕೆ ನಡೆಸುತ್ತಾನೆ. ಎಲ್ಲೆಡೆ ಬೆಳಕು ಹಾಗೂ ಪೋಷಣೆಯನ್ನು ನೀಡುವ ಶಕ್ತಿಯನ್ನು ಈ ನಕ್ಷತ್ರ ಪಡೆದುಕೊಂಡಿರುತ್ತದೆ. ಸೂಕ್ತ ಪೋಷಣೆಯ ಮೂಲಕ ಸಮೃದ್ಧಿಯನ್ನು ತರುವುದು ರೇವತಿ ನಕ್ಷತ್ರದ ಲಕ್ಷಣವಾಗಿರುತ್ತದೆ. ಅಂತೆಯೇ ಈ ನಕ್ಷತ್ರದ ವ್ಯಕ್ತಿಗಳು ತಮಗೆ ಹಾಗೂ ತಮ್ಮವರಿಗೆ ಸೂಕ್ತ ಪೋಷಣೆ ಹಾಗೂ ಕಾಳಜಿಯನ್ನು ನೀಡುವುದರ ಮೂಲಕ ತಮ್ಮ ಜೀವನದಲ್ಲಿ ಸಂತೋಷವನ್ನು ಪಡೆದುಕೊಳ್ಳುವರು. ಈ ನಕ್ಷತ್ರದವರು ಫಲವತ್ತತೆ ಹಾಗೂ ಬೆಳವಣಿಗೆಯನ್ನು ಕಂಡುಕೊಳ್ಳುವರು.

English summary

shaktis of the nakshatras

Each Nakshatra has its particular power or Shakti. These are also the powers of the Devatas or the deities that rule them. Each of these shaktis has various effects described metaphorically as “above” and “below” and a final effect. The symbols used are those of common factors such as plants, healing, worship, marriage and death. This is a teaching that derives from an ancient Vedic text called Taittiriya Brahmana I.5.1 and from the medieval commentary of Bhattabhaskara Mishra.
X