For Quick Alerts
ALLOW NOTIFICATIONS  
For Daily Alerts

ಮಗುವಿನ ಬಾಯಿಯಲ್ಲಿ ಕಂಡುಬಂದ ಕಪ್ಪು ಮಚ್ಚೆ ರಹಸ್ಯ

|

ನೀವು ಮಗುವಿನೊಂದಿಗೆ ಹೊರಗಡೆ ಹೋಗುತ್ತಲಿರುವಾಗ ಏನಾದರೂ ವಿಚಿತ್ರವಾಗಿರುವುದು ನಡೆದರೆ ಆಗ ತುಂಬಾ ಗಲಿಬಿಲಿಗೊಳ್ಳುತ್ತೀರಿ. ಅದೇ ರೀತಿಯಾಗಿ ಇಲ್ಲೊಬ್ಬರು ಮಹಿಳೆಯ ಮಗುವಿನ ಬಾಯಿಯಲ್ಲಿ ಹಠಾತ್ ಆಗಿ ಕಪ್ಪು ಮಚ್ಚೆಯು ಕಾಣಿಸಿಕೊಂಡಿದೆ. ಇದರಿಂದ ಆಕೆ ಅಚ್ಚರಿಗೀಡಾಗಿದ್ದಾರೆ. ಡರಿಯಾನ ಡೆಪ್ರೆಟಾ ಎಂಬ ಮಹಿಳೆಯ ಮಗುವಿನ ಬಾಯಿಯ ಮೇಲ್ಭಾಗದಲ್ಲಿ ಹಠಾತ್ ಆಗಿ ಕಪ್ಪು ಮಚ್ಚೆಯೊಂದು ಕಾಣಿಸಿಕೊಂಡಿದೆ. ಇದನ್ನು ಕಂಡು ಆಕೆ ತುಂಬಾ ಗಾಬರಿಗೊಂಡಿದ್ದಾರೆ. ಬೆಲ್ಲಾ ಎಂಬ ತನ್ನ ಹೆಣ್ಣು ಮಗುವಿನೊಂದಿಗೆ ಆಡುತ್ತಿರುವ ವೇಳೆ ಆಕೆಗೆ ಈ ಮಚ್ಚೆಯು ಕಾಣಿಸಿದೆ.

 Mum Shocked After Seeing Child’s Mouth!

ಇದು ತುಂಬಾ ಭೀತಿಯನ್ನು ಮೂಡಿಸಿದೆ ಮತ್ತು ಇದು ಹೀಗೆ ಮೊದಲು ಇರಲಿಲ್ಲ. ಮಗುವಿನ ಬಾಯಿಯ ಮೇಲ್ಭಾಗದಲ್ಲಿದ್ದ ಮಚ್ಚೆಯನ್ನು ಡರಿಯಾನ ಒರೆಸಲು ಪ್ರಯತ್ನ ಮಾಡಿದರು. ಆದರೆ ಇದು ಹಾಗೆ ಇತ್ತು ಮತ್ತು ಇದನ್ನು ತೆಗೆಯುವುದು ಸಾಧ್ಯವಿಲ್ಲ ಎಂದು ಅವರು ಮನಗಂಡರು. ತಕ್ಷಣವೇ ಆಕೆ ವೈದ್ಯರ ಬಳಿಗೆ ತೆರಳಿ ಮಗುವಿನ ಬಾಯಿಯಲ್ಲಿ ಮೂಡಿರುವಂತಹ ಮಚ್ಚೆ ಬಗ್ಗೆ ತಿಳಿಸಿದರು. ಆಸ್ಪತ್ರೆಗೆ ತೆರಳಿದ ವೇಳೆ ಅಲ್ಲಿನ ನರ್ಸ್ ಕೂಡ ಇದನ್ನು ಒರೆಸಲು ಪ್ರಯತ್ನಿಸಿದರು. ಆದರೆ ಇದು ಸಾಧ್ಯವಾಗಲಿಲ್ಲ. ಇಂತಹ ಮಚ್ಚೆಯನ್ನು ಇದುವರೆಗೆ ನೋಡಿಲ್ಲವೆಂದು ನರ್ಸ್ ಕೂಡ ಆಕೆಗೆ ತಿಳಿಸಿದರು. ಈ ಅಸಾಮಾನ್ಯ ಮಚ್ಚೆಯು ಹುಟ್ಟುವಾಗ ಕಂಡುಬರುವಂತಹ ಮಚ್ಚೆಯಾಗಿರಬಹುದು ಎಂದು ವೈದ್ಯರು ತಿಳಿಸಿದರು.

ಆದರೆ ಡರಿಯಾನ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದರು ಮತ್ತು ತಾನು ಮಗುವಿನ ಬಾಯಿಯನ್ನು ನಿಯಮಿತವಾಗಿ ನೋಡುತ್ತಿದ್ದೆ ಮತ್ತು ಇಂತಹ ಯಾವುದೇ ಮಚ್ಚೆಗಳು ಇರಲಿಲ್ಲ ಎಂದು ಅವರು ಹೇಳಿದರು. ವೈದ್ಯರ ಮಾತಿನಿಂದ ಸಂತೃಪ್ತರಾಗದ ಕಾರಣದಿಂದಾಗಿ ಆಕೆ ಮಗುವನ್ನು ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಲು ಪ್ರಯತ್ನಿಸಿದರು. ಈ ವೇಳೆ ವೈದ್ಯರು ತುಂಬಾ ದೀರ್ಘವಾಗಿ ಪರೀಕ್ಷೆ ನಡೆಸಿದರು ಮತ್ತು ಈ ಮಚ್ಚೆಯ ರಹಸ್ಯವು ಬಗೆಹರಿಯಿತು.

ಈ ಕಪ್ಪು ಮಚ್ಚೆಯು ಬೇರೆ ಏನೂ ಆಗಿರದೆ ಮಗುವು ಕಚ್ಚಿ ತಿಂದಿದ್ದ ಕಾರ್ಡ್ ಬೋರ್ಡ್ ನ ಒಂದು ತುಂಡು ಆಗಿತ್ತು. ಕಾರ್ಡ್ ಬೋರ್ಡ್ ನ ತುಂಡು ಮಗುವಿನ ಬಾಯಿಯ ಮೇಲ್ಭಾಗದಲ್ಲಿ ಸಿಲುಕಿಕೊಂಡಿತ್ತು ಮತ್ತು ಇದು ತುಂಬಾ ವಿಲಕ್ಷಣವಾಗಿ ಕಾಣುತ್ತಲಿತ್ತು. ಈ ಘಟನೆಯಿಂದಾಗಿ ಆ ಮಹಿಳೆಗೆ ತುಂಬಾ ಮುಜುಗರವಾಗಿದೆ ಮತ್ತು ಇಷ್ಟು ದೊಡ್ಡ ಕಾರ್ಡ್ ಬೋರ್ಡ್ ನ ತುಂಡು ಮಗುವಿನ ಬಾಯಿಯೊಳಗೆ ಹೇಗೆ ಹೋಯಿತು ಎನ್ನುವ ಬಗ್ಗೆ ಆಕೆಗೆ ತುಂಬಾ ಅಚ್ಚರಿ ಉಂಟಾಯಿತು.

English summary

Mum Shocked After Seeing Child’s Mouth!

A concerned mother rushed to doctor with her child and claimed that the child had developed a black spot on the palate of her mouth. The doctors tried to tell her that the huge mark on the child's mouth was nothing but a birthmark, but on closerexamination, it was discovered that it was a cardboard piece that was stuck inside the child's mouth!
X
Desktop Bottom Promotion