Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 11 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಪ್ರಿಯತಮೆ ಜತೆಗೆ ಚಾಟಿಂಗ್ ಮಾಡಲು ಚಾಟ್‌ಬೊಟ್ ರಚಿಸಿದ ಟೆಕ್ಕಿ!
ಯಾವಾಗಲೂ ನೀವು ಕೆಲಸವನ್ನು ಪ್ರೀತಿಸಿದರೆ ಆಗ ಅದು ಕೆಲಸವಾಗಿರದೆ ಆಟದಂತಿರುವುದು. ಇಲ್ಲೊಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಕೂಡ ಅದೇ ರೀತಿಯಲ್ಲಿ ತನ್ನ ಪ್ರಿಯತಮೆ ಜತೆಗೆ ಮಾತನಾಡಲು ಸಮಯವಿಲ್ಲವೆನ್ನುವ ಕಾರಣಕ್ಕಾಗಿ ಅದಕ್ಕಾಗಿ ಒಂದು ಸಾಫ್ಟ್ ವೇರ್ ರಚಿಸಿಕೊಂಡಿದ್ದಾರೆ. ಇದರ ಬಗ್ಗೆ ನೀವು ಇನ್ನೂ ವಿವರವಾಗಿ ತಿಳಿಯಿರಿ.
ಚೀನಾದ ದೊಡ್ಡ ಸಾಫ್ಟ್ ವೇರ್ ಕಂಪೆನಿಯಲ್ಲಿ ಇಂಜಿನಿಯರ್ ಆಗಿರುವ ಲೀ ಕಿಕ್ಸಿಯಾಂಗ್ ಎಂಬ ಟೆಕ್ಕಿಯೇ ಈ ಸಾಫ್ಟ್ ವೇರ್ ನ್ನು ರಚಿಸಿರುವವರು. ತನ್ನ ಪ್ರಿಯತಮೆಯ ದೈನಂದಿನ ಸಂದೇಶಗಳಿಗೆ ಉತ್ತರಿಸಲು ಲೀ ಬಳಿ ಸಮಯವಿರಲಿಲ್ಲ. ಆದರೆ ಆಕೆಯನ್ನು ಕಡೆಗಣಿಸಿ, ಭಾವನೆಗಳಿಗೆ ಧಕ್ಕೆ ಉಂಟು ಮಾಡಲು ಆಕೆ ಬಯಸಲಿಲ್ಲ. ಈ ಕಾರಣದಿಂದಾಗಿ ಆಕೆ ಒಂದು ಉಪಾಯ ಕಂಡುಕೊಂಡು ತನ್ನ ಸ್ನೇಹಿತೆಯ ಸಂದೇಶಗಳಿಗೆ ಉತ್ತರಿಸಲು ಚಾಟ್ ಬೊಟ್ ನ್ನು ನಿರ್ಮಾಣ ಮಾಡಿದರು.
ಟೆಕ್ಕಿಯ ಗರ್ಲ್ ಫ್ರೆಂಡ್ ಏನೇ ಪ್ರಶ್ನೆ ಅಥವಾ ಸಂದೇಶ ಕಳುಹಿಸಿದರೆ ಅದಕ್ಕೆ ನಿಖರವಾಗಿ ಉತ್ತರ ನೀಡುತ್ತಲಿತ್ತು. ಇದನ್ನು ನೋಡಿ ಜನರಿಗೆ ನಂಬಲು ಸಾಧ್ಯವಾಗುತ್ತಿರಲಿಲ್ಲ. ಲೀ ಈ ಚಾಟ್ ಬೊಟ್ ನ ಕೆಲವೊಂದು ಸ್ಕ್ರೀನ್ ಶಾಟ್ ಗಳನ್ನು ವೀ ಚಾಟ್ ಆ್ಯಪ್ ನಲ್ಲಿ ಹಾಕಿದ್ದಾರೆ.
ಇದನ್ನು ತಯಾರಿಸುವ ವೇಳೆ ಈ ಚಾಟ್ ಬೊಟ್ ಸುಮಾರು 300 ಸಲ ಆತನ ಗೆಳತಿಗೆ ಪ್ರತಿಕ್ರಿಯಿಸಿದೆ. ಮೊದಲ ದಿನವೇ ಇದು ತುಂಬಾ ಉತ್ತಮವಾಗಿ ಕೆಲಸ ಮಾಡಿದೆ. ತನ್ನ ಗೆಳತಿ ಜತೆಗೆ ಅದು 300 ಸಂದೇಶಗಳನ್ನು ಹಂಚಿಕೊಂಡಿದೆ. ಇದರ ಬಗ್ಗೆ ಜನರು ಅಚ್ಚರಿಕೊಂಡಿದ್ದಾರೆ ಮತ್ತು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆತನ ಗೆಳತಿಯು ಆತನನ್ನು ಬಿಟ್ಟು ಸಾಫ್ಟ್ ವೇರ್ ನ್ನು ಪ್ರೀತಿಸಲು ಆರಂಭಿಸಬಹುದು ಎಂದು ಕೆಲವರು ಎಚ್ಚರಿಕೆ ನೀಡಿರುವರು. ಕೆಲವು ಮಂದಿ ಲೀ ಯನ್ನು ಜೀನಿಯಸ್ ಎಂದು ಕರೆದಿದ್ದಾರೆ ಮತ್ತು ಇದನ್ನು ಹೇಗೆ ತಯಾರಿಸಿರುವುದು ಎಂದು ತಮಗೂ ಹೇಳಿಕೊಡುವಂತೆ ಕೇಳಿಕೊಂಡಿದ್ದಾರೆ.
ಸಾಫ್ಟ್ ವೇರ್ ಬಳಸಿಕೊಂಡು ತನ್ನ ಗೆಳತಿಗೆ ವಂಚನೆ ಮಾಡುತ್ತಿರುವ ಬಗ್ಗೆ ಕೆಲವು ಮಂದಿ ಆಕ್ರೋಶ ವ್ಯಕ್ತಪಡಿಸಿರುವರು.
ಸಾಮಾಜಿಕ ಜಾಲತಾಣದಲ್ಲಿ ಇದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಲೀ ಇನ್ನು ತನ್ನ ಗೆಳತಿಗೆ ಇದು ತಿಳಿಯುವುದು ಬೇಡ ಎಂದು ತನ್ನ ಖಾತೆಯನ್ನೇ ತೆಗೆದುಹಾಕಿರುವರು. ಲೀ ಹಂಚಿಕೊಂಡಿರುವಂತಹ ಕೆಲವು ಸ್ಕ್ರೀನ್ ಶಾಟ್ ಗಳು ಮಾತ್ರ ಈಗ ಇಂಟರ್ನೆಟ್ ನಲ್ಲಿ ಲಭ್ಯವಾಗಿದೆ.