For Quick Alerts
ALLOW NOTIFICATIONS  
For Daily Alerts

ಫ್ರೈಡ್ ಚಿಕನ್ ತಿಂದ ಕಾರಣ ಈತನಿಗೆ ನಿಮಿರು ದೌರ್ಬಲ್ಯ ಕಾಡಿತ್ತಂತೆ!!

|

ನಾವೆಲ್ಲರೂ ಒಂದಲ್ಲಾ ಒಂದು ರೀತಿಯ ಆಹಾರವನ್ನು ತುಂಬಾಇಷ್ಟಪಟ್ಟು ಸೇವಿಸುತ್ತೇವೆ. ಇದು ನಮಗೆ ಬಾಲ್ಯದಿಂದಲೂ ತುಂಬಾ ಇಷ್ಟವಾಗಿರುವುದು ಅಥವಾ ಬೆಳೆಯುತ್ತಾ ಇರುವಂತೆ ಇಷ್ಟವಾಗುವುದು. ಇಂತಹ ಆಹಾರದಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನಾವು ಆಲೋಚನೆ ಮಾಡುವುದೇ ಇಲ್ಲ. ಅದರಲ್ಲೂ ಹೆಚ್ಚಾಗಿ ಫಾಸ್ಟ್ ಫುಡ್ ನ್ನು ಹೆಚ್ಚಿನವರು ಇಷ್ಟಪಡುವರು. ಇದರಿಂದಾಗಿ ಕೆಲವೊಂದು ಅಡ್ಡಪರಿಣಾಮಗಳು ಕೂಡ ಇದೆ. ಇದು ನಮಗೆ ಆರಂಭದಲ್ಲಿ ತಿಳಿದುಬರುವುದಿಲ್ಲ. ಆದರೆ ಸಮಯ ಕಳೆದಂತೆ ಈ ಅಡ್ಡಪರಿಣಾಮಗಳು ತಮ್ಮ ಕಬಂಧಬಾಹುಗಳನ್ನು ವಿಸ್ತರಿಸಲು ಆರಂಭಿಸುವುದು. ಇಂತಹ ಅಡ್ಡಪರಿಣಾಮಗಳು ಕೆಲವೊಂದು ಸಲ ಪ್ರಾಣಹಾನಿ ಉಂಟು ಮಾಡಬಹುದು.

ಇದಕ್ಕಾಗಿ ಎಚ್ಚರಿಕೆ ವಹಿಸಬೇಕು. ಆಹಾರವು ಆರೋಗ್ಯಕಾರಿಯಾಗಿದ್ದರೆ ಆಗ ಜೀವನ ಸುಗಮವಾಗಿರುವುದು. ಇಲ್ಲೊಬ್ಬ ಯುವಕನಿಗೆ ಕರಿದ ಕೋಳಿ ಎಂದರೆ ತುಂಬಾ ಇಷ್ಟ. ಆದರೆ ಅದು ಆತನಿಗೆ ನಿಮಿರು ದೌರ್ಬಲ್ಯವನ್ನು ಉಂಟು ಮಾಡಲಿದೆ ಎಂದು ಆತ ಕನಸಿನಲ್ಲಿಯೂ ಯೋಚಿಸಿರಲಿಕ್ಕಿಲ್ಲ. ಈ ಯುವಕನಿಗೆ ತನ್ನ ನೆಚ್ಚಿನ ಕರಿದ ಕೋಳಿಯು ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವುದು ಎಂದು ತಿಳಿದೇ ಇರಲಿಲ್ಲ. ಈ ಘಟನೆ ಬಗ್ಗೆ ನೀವು ಇನ್ನಷ್ಟು ಮಾಹಿತಿ ತಿಳಿದುಕೊಳ್ಳಿ ಮತ್ತು ಮುಂದೆ ಇಂತಹ ಆಹಾರಗಳ ಬಗ್ಗೆ ಎಚ್ಚರಿಕೆ ವಹಿಸಿ.

ಈ ಯುವಕ ತೈವಾನ್‌ನ ನಿವಾಸಿ

ಈ ಯುವಕ ತೈವಾನ್‌ನ ನಿವಾಸಿ

17ರ ಹರೆಯದ ಈ ಯುವಕ ತೈವಾನ್ ನ ಕಾವೊಹ್ಸುಂಗ್ ನಿವಾಸಿ. ಬೇರೆಲ್ಲಾ ಹದಿಹರೆಯದ ಯುವಕರಂತೆ ಈತನಿಗೂ ಕರಿದ ಕೋಳಿ(ಫ್ರೈಡ್ ಚಿಕನ್), ಹ್ಯಾಂಬರ್ಗ್ ಮತ್ತು ಫ್ರೆಂಚ್ ಫ್ರೈಗಳು ತುಂಬಾ ಇಷ್ಟವಾಗಿತ್ತು. ಇದನ್ನು ಆತ ದಿನವೂ ತಿನ್ನುತ್ತಲಿದ್ದ. ಆತನ ಉದ್ದ ಕೇವಲ 165 ಸೆ.ಮೀ ಮತ್ತು 80 ಕೆಜಿ ತೂಕವಿದ್ದ(ಇದೆಲ್ಲವೂ ಆತನ ಅನಾರೋಗ್ಯಕರ ಆಹಾರ ಶೈಲಿ ಪರಿಣಾಮ).

ಆತನಿಗೆ ತನ್ನ ಅತಿಯಾದ ತೂಕದ ಬಗ್ಗೆ ಯಾವತ್ತೂ ಚಿಂತೆಯಿರಲಿಲ್ಲ!

ಆತನಿಗೆ ತನ್ನ ಅತಿಯಾದ ತೂಕದ ಬಗ್ಗೆ ಯಾವತ್ತೂ ಚಿಂತೆಯಿರಲಿಲ್ಲ!

ವರದಿಗಳು ಹೇಳುವ ಪ್ರಕಾರ ಈತನ ಅತಿಯಾದ ತೂಕದಿಂದಾಗಿ ಜನನಾಂಗವು ತುಂಬಾ ಸಣ್ಣದಾಗಿ ಕಾಣಿಸುತ್ತಿದ್ದವು. ಆದರೆ ಆತನಿಗೆ ಇದರಿಂದ ಆತನಿಗೆ ಯಾವುದೇ ಚಿಂತೆಯಿರಲಿಲ್ಲ. ಇದು ಗೆಳತಿಯೊಬ್ಬಳನ್ನು ಪಡೆಯುವ ತನಕ ಮಾತ್ರ!

Most Read: ಸಂಗಾತಿಯ ವೀರ್ಯ ಸೇವಿಸಿದ ಮಹಿಳೆಗೆ ಅಲರ್ಜಿ ಉಂಟಾಯಿತು!

ಸೆಕ್ಸ್ ವೇಳೆ ಆತನ ಪರಿಸ್ಥಿತಿ ಅರ್ಥ ಮಾಡಿಕೊಂಡ

ಸೆಕ್ಸ್ ವೇಳೆ ಆತನ ಪರಿಸ್ಥಿತಿ ಅರ್ಥ ಮಾಡಿಕೊಂಡ

ತನ್ನ ಗೆಳತಿ ಮತ್ತು ತಾನು ರೋಮ್ಯಾಂಟಿಕ್ ಆಗಿ ಪರಸ್ಪರ ಮುದ್ದಾಡಿಕೊಂಡ ವೇಳೆ ಆತನಿಗೆ ತನಗೆ ನಿಮಿರುವಿಕೆ ಆಗುವುದಿಲ್ಲವೆಂದು ಅರ್ಥ ಆಯಿತು. ಆತ ತಕ್ಷಣವೇ ಹೋಗಿ ವೈದ್ಯರನ್ನು ಭೇಟಿಯಾದ ಮತ್ತು ನಿಮಿರು ದೌರ್ಬಲ್ಯಕ್ಕೆ ಕಾರಣವೇನೆಂದು ವೈದ್ಯರು ಪರೀಕ್ಷೆಗಳನ್ನು ಮಾಡಲು ಆರಂಭಿಸಿದರು.

ಆತನ ಕೊಲೆಸ್ಟ್ರಾಲ್ ಮಟ್ಟವು ಅತ್ಯಧಿಕವಾಗಿತ್ತು!

ಆತನ ಕೊಲೆಸ್ಟ್ರಾಲ್ ಮಟ್ಟವು ಅತ್ಯಧಿಕವಾಗಿತ್ತು!

ತನ್ನ ನೆಚ್ಚಿನ ಫ್ರೈಡ್ ಚಿಕನ್ ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುವುದು ಎಂದು ಆ ಯುವಕ ಕನಸುಮನಸಿನಲ್ಲೂ ಆಲೋಚನೆ ಮಾಡಿರಲಿಕ್ಕಿಲ್ಲ. ವೈದ್ಯರು ಪರೀಕ್ಷೆ ಮಾಡಿದ ವೇಳೆ ಆತನ ಕೊಲೆಸ್ಟ್ರಾಲ್ ಮಟ್ಟವು 300ಎಂಜಿ/ಡಿಎಲ್ ಇತ್ತು. ಸರಾಸರಿಯಗಿ ಇದು 200ಎಂಜಿ/ಡಿಎಲ್ ಇರಬೇಕು.

Most Read: ಕುಡಿದ ಮತ್ತಿನಲ್ಲಿ ತನ್ನ ಕಣ್ಣಗುಡ್ಡೆಗಳನ್ನು ಕಳೆದುಕೊಂಡರೂ, ಆತನಿಗೆ ಗೊತ್ತೇ ಆಗಿಲ್ಲವಂತೆ!!

ಆತನಿಗೆ ತೂಕ ಕಳೆದುಕೊಳ್ಳಲು ಸೂಚಿಸಲಾಯಿತು!

ಆತನಿಗೆ ತೂಕ ಕಳೆದುಕೊಳ್ಳಲು ಸೂಚಿಸಲಾಯಿತು!

ತೂಕ ಇಳಿಸಿಕೊಳ್ಳುವುದು ಎಷ್ಟು ಅಗತ್ಯವೆಂದು ವೈದ್ಯರು ಆತನಿಗೆ ಮನವರಿಕೆ ಮಾಡಿಕೊಟ್ಟರು. ಯಾಕೆಂದರೆ ಇದು ಕೇವಲ ಸೆಕ್ಸ್ ಜೀವನಕ್ಕೆ ಮಾತ್ರವಲ್ಲದೆ, ಆರೋಗ್ಯಕಾರಿ ಜೀವನಶೈಲಿಗೂ ಅಗತ್ಯವಾಗಿತ್ತು. ಆತನ ತೂಕ ಇಳಿಸಲು ಅವರು ಒಂದು ಆಹಾರ ಕ್ರಮವನ್ನು ಆತನಿಗೆ ಸೂಚಿಸಿದರು. ಆತ ಈಗ ಈ ಅನಾರೋಗ್ಯಕರ ಪರಿಸ್ಥಿತಿಯಿಂದ ಚೇತರಿಸಿಕೊಳ್ಳುತ್ತಿದ್ದಾನೆ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರತಿನಿತ್ಯವೂ ವ್ಯಾಯಾಮ ಮಾಡಿಕೊಳ್ಳುತ್ತಿದ್ದಾರೆ. ಕರಿದ ಕೋಳಿ ಸೇವನೆ ಸಂಪೂರ್ಣವಾಗಿ ನಿಲ್ಲಿಸಿದ್ದಾನೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯ ಬರೆದುಬಿಡಿ.

English summary

His Love For Fried Chicken Cost Him His Erection

A 17-year-old boy from Taiwan loved relishing his favourite foods which were fried chicken, hamburgers, and french fries. He would eat these foods daily in almost every meal! As a result, the boy lost his erection, and he is currently recovering from this condition.Have you ever thought that eating your favourite food can have side effects
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X