Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕುಡಿದ ಮತ್ತಿನಲ್ಲಿ ತನ್ನ ಕಣ್ಣಗುಡ್ಡೆಗಳನ್ನು ಕಳೆದುಕೊಂಡರೂ, ಆತನಿಗೆ ಗೊತ್ತೇ ಆಗಿಲ್ಲವಂತೆ!!
ಮದ್ಯಪಾನದಿಂದಾಗಿ ಆರೋಗ್ಯ ಕೆಡುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಕೆಲವರು ವಿಪರೀತವಾಗಿ ಕುಡಿದು ಮೈಮೇಲೆ ಪರಿಜ್ಞಾನವೇ ಇರುವುದಿಲ್ಲ. ತಮ್ಮ ದೇಹ ಅಥವಾ ಸುತ್ತಮುತ್ತಲು ಏನಾಗುತ್ತಿದೆ ಎನ್ನುವುದೇ ತಿಳಿದಿರುವುದಿಲ್ಲ. ಕುಡಿಯುವುದರಿಂದ ಆಗುವಂತಹ ಅನಾಹುತಗಳ ಬಗ್ಗೆ ಆಗಾಗ ಸುದ್ದಿಯಾಗುತ್ತಿದ್ದರೂ ಕುಡಿಯುದನ್ನು ಮಾತ್ರ ಜನರು ಕಡಿಮೆ ಮಾಡುವುದಿಲ್ಲ. ಅದರಲ್ಲೂ ಕೆಲವರು ಮಿತಿಮೀರಿ ಕುಡಿಯುತ್ತಾರೆ. ಇದು ದೇಹಕ್ಕೆ ಮಾತ್ರವಲ್ಲದೆ, ಸುತ್ತಲಿನವರಿಗೂ ತುಂಬಾ ಅಪಾಯಕಾರಿ.
ಕುಡಿತದಲ್ಲಿ ಮತ್ತಿನಲ್ಲಿ ತಮಗೆ ಏನಾಗುತ್ತಿದೆ ಎನ್ನುವುದೇ ಕೆಲವು ಜನರಿಗೆ ತಿಳಿದಿರುವುದಿಲ್ಲ. ಅಂತಹ ಒಂದು ಘಟನೆ ಬಗ್ಗೆ ಈ ಲೇಖನದಲ್ಲಿ ಹೇಳಲು ಹೊರಟಿರುವುದು. ಇಲ್ಲೊಬ್ಬ ವ್ಯಕ್ತಿ ವಿಪರೀತವಾಗಿ ಕುಡಿದು ಮಾಡಿಕೊಂಡಿರುವ ಅವಾಂತರವು ಇದಕ್ಕೆ ಸಾಕ್ಷಿಯಾಗಿದೆ. ವಿಪರೀತವಾಗಿ ಕುಡಿದಿದ್ದ ವ್ಯಕ್ತಿಯು ಅಪಘಾತಕ್ಕೆ ಸಿಲುಕಿ ಆತನ ಕಣ್ಣಗುಡ್ಡೆಗಳು ಹೊರಗೆ ಬಂದು ಗಂಟೆಗಳ ಕಾಲ ನೆಲದ ಮೇಲೆ ಬಿದ್ದಿದ್ದರೂ ಕುಡಿದ ಮತ್ತಿನಲ್ಲಿದ್ದ ಆತನಿಗೆ ಏನೂ ತಿಳಿದಿರಲಿಲ್ಲ. ಈ ವಿಚಿತ್ರ ಘಟನೆ ಬಗ್ಗೆ ನೀವು ಮುಂದಕ್ಕೆ ಓದಿಕೊಂಡು ಹೋಗಿ...

ಈ ಘಟನೆ ನಡೆದಿರುವು ಚೀನಾದಲ್ಲಿ
26ರ ಹರೆಯದ ವ್ಯಕ್ತಿ(ಹೆಸರನ್ನು ಬಹಿರಂಗಪಡಿಸಲಾಗಿಲ್ಲ) ವಿಪರೀತವಾಗಿ ಕುಡಿದ ಮತ್ತಿನಲ್ಲಿ ಇದ್ದಾಗ ಆತ ಅಪಘಾತಕ್ಕೆ ಸಿಲುಕಿದ. ಚಿನಾದ ಶಾನ್ ಡಾಂಗ್ ಪ್ರಾಂತ್ಯದ ಜಿನಾಣ್ ನ ಲಿಕ್ಸಿಯಾ ಜಿಲ್ಲೆಯಲ್ಲಿ ವಾಸವಿದ್ದ ಈ ವ್ಯಕ್ತಿ ವಿಪರೀತ ಕುಡಿದ ಮತ್ತಿನಲ್ಲಿ ಜಾರಿ ಬಿದ್ದಿದ್ದ.

ಆತನ ಕುಟುಂಬವು ಆಸ್ಪತ್ರೆಗೆ ದಾಖಲಿಸಿತು
ವ್ಯಕ್ತಿಯು ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾಗ ಆತನ ಕುಟುಂಬ ಸದಸ್ಯರು ಇದನ್ನೆಉ ನೋಡಿ ಆಸ್ಪತ್ರೆಗೆ ದಾಖಲು ಮಾಡಿದರು. ಅಪಘಾತವಾದ ಆರು ಗಂಟೆಗಳ ಬಳಿಕ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ವ್ಯಕ್ತಿಯ ಕಣ್ಣಗುಡ್ಡೆಯೇ ಇಲ್ಲವೆಂದು ವೈದ್ಯರು ತಿಳಿಸಿದರು!
ವೈದ್ಯರು ಆ ವ್ಯಕ್ತಿಯನ್ನು ಪರೀಕ್ಷೆ ಮಾಡಿದಾಗ ಅವರಿಗೆ ಅಚ್ಚರಿ ಕಾದಿತ್ತು. ಅದೇನೆಂದರೆ ಆತನ ಕಣ್ಣ ಗುಡ್ಡೆಗಳೇ ಮಾಯವಾಗಿದ್ದವು. ಕೆಲವೇ ಸಮಯದ ಬಳಿಕ ವೈದ್ಯರಿಗೆ ಫೋನ್ ಕರೆಯೊಂದು ಬಂದಿದ್ದು, ಮನೆಯಲ್ಲಿ ಕಣ್ಣಗುಡ್ಡೆಯು ಪತ್ತೆಯಾಗಿದೆ ಎಂದು ಕುಟುಂಬದವರು ತಿಳಿಸಿದರು.

ದೀರ್ಘಕಾಲ ತನಕ ಕಣ್ಣಗುಡ್ಡೆಯು ಬಿದ್ದುಕೊಂಡಿತ್ತು!
ಕಣ್ಣಗುಡ್ಡೆಯು ದೀರ್ಘಕಾಲದ ತನಕ ನೆಲದ ಮೇಲೆ ಬಿದ್ದುಕೊಂಡಿದ್ದ ಕಾರಣದಿಂದಾಗಿ ಇದನ್ನು ಸರಿಪಡಿಸಲು ಸಾಧ್ಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕೆಲವು ಗಂಟೆಗಳ ಕಾಲ ಕಣ್ಣಗುಡ್ಡೆಯು ನೆಲದ ಮೇಲಿದ್ದ ಕಾರಣದಿಂದಾಗಿ ಅದು ಕಲುಷಿತವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಆ ವ್ಯಕ್ತಿ ಕಣ್ಣು ಕಳಕೊಂಡ
ಆ ವ್ಯಕ್ತಿಯ ಸೂಕ್ಷ್ಮ ಸ್ನಾಯುಗಳು ಮತ್ತು ಆಪ್ಟಿಕ್ ನರಗಳು ಹೊರಗೆ ಬಂದಿದ್ದ ಕಾರಣದಿಂದಾಗಿ ಏನೂ ಮಾಡುವಂತೆ ಇರಲಿಲ್ಲ ಮತ್ತು ಇದರಿಂದ ಸೋಂಕು ಬರುವುದನ್ನು ತಪ್ಪಿಸಲು ಕೂಡ ಸಾಧ್ಯ ವಾಗಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಇದರಿಂದಾಗಿ ಗಾಯಕ್ಕೆ ಹೊಲಿಗೆ ಹಾಕಲಾಗಿದೆ. ಆಘಾತದಿಂದ ಆ ವ್ಯಕ್ತಿಯು ಈಗ ಚೇತರಿಸಿಕೊಳ್ಳುತ್ತಿದ್ದಾನೆ. ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.



Click it and Unblock the Notifications
