For Quick Alerts
ALLOW NOTIFICATIONS  
For Daily Alerts

ಈ ರೆಸ್ಟೋರೆಂಟ್‌ನಲ್ಲಿ ದೆವ್ವಗಳು ಗ್ರಾಹಕರಿಗೆ ಆಹಾರ ಸರಬರಾಜು ಮಾಡುತ್ತವೆಯಂತೆ!!

|

ಯಾವುದಾದರೂ ಹೊಸ ರೆಸ್ಟೋರೆಂಟ್ ತೆರೆದರೆ ಆಗ ಏನಾದರೂ ಹೊಸತನ ಪ್ರಯೋಗ ಮಾಡಬೇಕು. ಇಲ್ಲವೆಂದಾದಲ್ಲಿ ಜನರನ್ನು ಆಕರ್ಷಿಸಲು ತುಂಬಾ ಕಷ್ಟವಾಗುವುದು. ಆಹಾರದಲ್ಲಿ ಹೊಸತನ ಅಥವಾ ರೆಸ್ಟೋರೆಂಟ್ ಪರಿಕರಗಳಲ್ಲಿ ಹೊಸತನವಿರಬೇಕು. ಇಲ್ಲವಾದರೆ ಯಾವ ರೆಸ್ಟೋರೆಂಟ್ ನಲ್ಲೂ ಇಲ್ಲದೆ ಇರುವ ಹೊಸತನ ಪ್ರಯೋಗ ಮಾಡಿದರೆ ಆಗ ಖಂಡಿತವಾಗಿಯೂ ಹೆಚ್ಚು ಆಕರ್ಷಣೆಗೆ ಒಳಗಾಗುವುದು.ಇಲ್ಲವಾದಲ್ಲಿ ರೆಸ್ಟೋರೆಂಟ್ ವ್ಯಾಪಾರ ಮಾಡುವುದು ತುಂಬಾ ಕಷ್ಟಸಾಧ್ಯವಾಗುವುದು.

ಸ್ಪೇನ್ ನಲ್ಲಿರುವ ರೆಸ್ಟೋರೆಂಟ್ ನಲ್ಲಿ ತುಂಬಾ ವಿಭಿನ್ನವಾಗಿರುವ ವಿಧಾನವನ್ನು ಕಂಡುಹುಡುಕಲಾಗಿದೆ. ಅದೇನೆಂದರೆ ಇಲ್ಲಿ ದೆವ್ವಗಳು ಗ್ರಾಹಕರಿಗೆ ಆಹಾರ ಸರಬರಾಜು ಮಾಡುತ್ತವೆ. ಗ್ರಾಹಕರನ್ನು ದೆವ್ವಗಳು ತಮ್ಮ ಕೈಯಲ್ಲಿ ರಕ್ತದ ಕಲೆಯಿರುವಂತಹ ಚಾಕು ಹಿಡಿದುಕೊಂಡು ಸ್ವಾಗತ ಮಾಡುತ್ತವೆ. ಈ ವಿಭಿನ್ನ ರೆಸ್ಟೋರೆಂಟ್ ಬಗ್ಗೆ ಇಲ್ಲಿ ನಾವು ನಿಮಗೆ ತುಂಬಾ ವಿವರವಾಗಿ ಹೇಳಿದ್ದೇವೆ.

ರೆಸ್ಟೋರೆಂಟ್ ನ ಪರಿಕಲ್ಪನೆ

ರೆಸ್ಟೋರೆಂಟ್ ನ ಪರಿಕಲ್ಪನೆ

ರೆಸ್ಟೋರೆಂಟ್ ನ ಸಂಪೂರ್ಣ ಪರಿಕಲ್ಪನೆಯನ್ನು ಇತಿಹಾಸದಿಂದ ಪ್ರೇರಣೆ ಪಡೆದುಕೊಂಡು ತಯಾರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ರೆಸ್ಟೋರೆಂಟ್ ನಲ್ಲಿ ನಿಜವಾಗಿಯೂ ದೆವ್ವಗಳು ಇಲ್ಲದೆ ಇದ್ದರೂ ಗ್ರಾಹಕರಿಗೆ ಮಾತ್ರ ಈ ವಿಭಿನ್ನ ಪರಿಕಲ್ಪನೆಯಿಂದಾಗಿ ತುಂಬಾ ರೋಮಾಂಚನ ಸಿಗಲಿದೆ. ಇದು ತುಂಬಾ ಭೀತಿ ಮೂಡಿಸುವಂತಹ ವಾತಾವರಣ ನಿರ್ಮಾಣ ಮಾಡುತ್ತದೆ.

ದೆವ್ವ ಆಹಾರ ಸರಬರಾಜು ಮಾಡುವುದು!

ದೆವ್ವ ಆಹಾರ ಸರಬರಾಜು ಮಾಡುವುದು!

ಇಲ್ಲಿ ರೆಸ್ಟೋರೆಂಟ್ ಸಿಬ್ಬಂದಿ ದೆವ್ವದ ಹಾಗೆ ಬಟ್ಟೆ ಧರಿಸುವರು ಮತ್ತು ರೆಸ್ಟೋರೆಂಟ್ ಗೆ ಭೇಟಿ ನೀಡುವಂತಹ ಗ್ರಾಹಕರಿಗೆ ಇವರು ತುಂಬಾ ರುಚಿಕರವಾಗಿರುವಂತಹ ಆಹಾರ ಸರಬರಾಜು ಮಾಡುವರು. ಇಲ್ಲಿನ ಆಹಾರವು ತುಂಬಾ ರುಚಿಯಾಗಿರುವ ಕಾರಣದಿಂದಾಗಿ ಭಯ ಮೂಡಿಸುವಂತಹ ವಾತಾವರಣವು ಇನ್ನಷ್ಟು ಇಷ್ಟವಾಗಿದೆ ಎಂದು ಗ್ರಾಹಕರು ಹೇಳುತ್ತಾರೆ.

ಗ್ರಾಹಕರನ್ನು ಚಾಕು ಹಿಡಿದು ಸ್ವಾಗತಿಸಲಾಗುತ್ತದೆ

ಗ್ರಾಹಕರನ್ನು ಚಾಕು ಹಿಡಿದು ಸ್ವಾಗತಿಸಲಾಗುತ್ತದೆ

ರೆಸ್ಟೋರೆಂಟ್ ನ ಪ್ರವೇಶ ದ್ವಾರದಿಂದ ಹಿಡಿದು ಹೊರಬರುವ ತನಕ ಪ್ರತಿಯೊಂದು ಕೂಡ ದೆವ್ವಗಳ ಲೋಕದಂತಿದೆ. ಇಲ್ಲಿಗೆ ದುರ್ಬಲ ಹೃದಯದವರು ಭೇಟಿ ನೀಡಬಾರದು. ಗ್ರಾಹಕರನ್ನು ರಕ್ತಮಯವಾಗಿರುವಂತಹ ಚಾಕುವಿನೊಂದಿಗೆ ಸ್ವಾಗತ ನೀಡಲಾಗುತ್ತದೆ ಮತ್ತು ಟೇಬಲ್ ಗೆ ಕೂಡ ಇದೇ ರೀತಿಯಲ್ಲಿ ಕರೆದುಕೊಂಡು ಹೋಗಲಾಗುತ್ತದೆ.

ದಿನದಲ್ಲಿ ಮೂರು ಗಂಟೆಗಳ ಕಾಲ ಮಾತ್ರ ರೆಸ್ಟೋರೆಂಟ್ ಕಾರ್ಯನಿರ್ವಹಿಸುವುದು

ದಿನದಲ್ಲಿ ಮೂರು ಗಂಟೆಗಳ ಕಾಲ ಮಾತ್ರ ರೆಸ್ಟೋರೆಂಟ್ ಕಾರ್ಯನಿರ್ವಹಿಸುವುದು

ವರದಿಗಳು ಹೇಳುವ ಪ್ರಕಾರ ಈ ರೆಸ್ಟೋರೆಂಟ್ ದಿನದಲ್ಲಿ ಮೂರು ಗಂಟೆಗಳ ಕಾಲ ಮಾತ್ರ ಕಾರ್ಯನಿರ್ವಹಿಸುತ್ತದೆ. ಇಲ್ಲಿ 60 ಆಸನ ವ್ಯವಸ್ಥೆಯಿದೆ ಮತ್ತು ಇದು ತುಂಬಾ ಜನಪ್ರಿಯವಾಗಿರುವ ಕಾರಣದಿಂದಾಗಿ ಮೊದಲೇ ತಮ್ಮ ಟೇಬಲ್ ಅನ್ನು ಕಾಯ್ದಿರಿಸಬೇಕಾಗುತ್ತದೆ.

ರೆಸ್ಟೋರೆಂಟ್ ನ ಒಳಗಡೆ

ರೆಸ್ಟೋರೆಂಟ್ ನ ಒಳಗಡೆ

ರೆಸ್ಟೋರೆಂಟ್ ಗೆ ಪ್ರವೇಶ ಮಾಡಿದ ಬಳಿಕ ಗ್ರಾಹಕರಿಗೆ ತುಂಬಾ ಭೀತಿಯ ವಾತಾವರಣ ನಿರ್ಮಾಣ ಮಾಡುವ ಸಲುವಾಗಿ ಅಲ್ಲಿ ಹೆದರುವ ವಾತಾವರಣವಿದೆ. ಇಲ್ಲಿ ನೇತಾಡುವಂತಹ ಅಸ್ಥಿಪಂಜರಗಳನ್ನು ಇಡಲಾಗಿದೆ ಮತ್ತು ವೈಟರ್ ಗಳ ಬಟ್ಟೆಯು ದೆವ್ವದಂತೆ ಇದೆ. ಗ್ರಾಹಕರ ಸುತ್ತಲು ಕೆಲವೊಂದು ಭಯಭೀತ ವಾತಾವರಣ ನಿರ್ಮಾಣ ಮಾಡಲಾಗುತ್ತದೆ. ಈ ರೆಸ್ಟೋರೆಂಟ್ ತುಂಬಾ ಭೀತಿಯನ್ನು ಸೃಷ್ಟಿಸುತ್ತದೆ. ಇಲ್ಲಿಗೆ ದುರ್ಬಲ ಹೃದಯದವರು ಮತ್ತು ಅಸ್ತಮಾ ರೋಗಿಗಳಿಗೆ ಪ್ರವೇಶವಿಲ್ಲ. ಗರ್ಭಿಣಿ ಮಹಿಳೆಯರು ಮತ್ತು ವಿಕಲಾಂಗರಿಗೂ ಪ್ರವೇಶವಿಲ್ಲ. 14ರ ಕೆಳಹರೆಯದ ಮಕ್ಕಳಿಗೂ ಇಲ್ಲಿ ಪ್ರವೇಶ ನಿಷೇಧಿಸಲಾಗಿದೆ.

English summary

Ghosts Serve Food In This Restaurant

A restaurant in Spain has got a unique name la Masia Encantada. In this restaurant, the customers are welcomed by ghosts who hold bloodied knives and the speciality of this restaurant is that they ensure that you get a spooky feel throughout your meal as ghosts even serve you food!Ghosts Serve Food In This Restaurant
X