For Quick Alerts
ALLOW NOTIFICATIONS  
For Daily Alerts

ಮೊಬೈಲ್‌ನ್ನು ಬ್ರೈಟ್‌ನೆಸ್‌ನಲ್ಲಿಟ್ಟು ನೋಡಿದರಿಂದ ಈಕೆಯ ಕಣ್ಣುಗಳಲ್ಲಿ 500 ರಂಧ್ರಗಳು ಪತ್ತೆಯಾಗಿವೆ!

|

ಪ್ರತಿಕ್ಷಣವೂ ಮೊಬೈಲ್ ಮೇಲೆ ಕಣ್ಣಾಡಿಸುತ್ತಲೇ ಇದ್ದರೆ ಅದರಿಂದ ಖಂಡಿತವಾಗಿಯೂ ಅಪಾಯ ತಪ್ಪಿದಲ್ಲ. ನಾವು ತಂತ್ರಜ್ಞಾನದಿಂದ ಪಡೆಯುತ್ತಿರುವ ಲಾಭದಂತೆ ಹಲವಾರು ರೀತಿಯ ಅಪಾಯಗಳನ್ನು ಕೂಡ ಎದುರಿಸಬೇಕಾಗುತ್ತದೆ. ಆಧುನಿಕ ಯುಗದಲ್ಲಿ ಮೊಬೈಲ್ ಇಲ್ಲದೆ ಬದುಕುವುದು ಕಷ್ಟವೆನ್ನುವಂತಾಗಿದೆ. ಯಾಕೆಂದರೆ ಪ್ರತಿಯೊಂದು ಕೂಡ ಮೊಬೈಲ್ ಮೂಲಕವೇ ಆಗಬೇಕಾಗಿದೆ. ಇಲ್ಲಿ ಮುಖ್ಯವಾಗಿ ಬ್ಯಾಂಕಿಂಗ್ ನಿಂದ ಹಿಡಿದು ಸರ್ಕಾರಿ ಸೇವೆಗಳು ಪ್ರತಿಯೊಂದು ಲಭ್ಯವಿಗುರುವುದು. ಹೀಗಾಗಿ ಮೊಬೈಲ್ ಎನ್ನುವುದು ಕೇವಲ ಸಂಭಾಷಣೆಗೆ ಮಾತ್ರವಲ್ಲದೆ, ಅದರಿಂದ ಇನ್ನಿತರ ಹಲವಾರು ಲಾಭಗಳು ಇವೆ. ಆದರೆ ಕೆಲವೊಂದು ಸಲ ಮೊಬೈಲ್ ನಿಂದಾಗಿ ಆಗಿರುವಂತಹ ಅನಾಹುತಗಳ ಬಗ್ಗೆ ಕೇಳಿದ್ದೇವೆ.

ಈ ಲೇಖನದಲ್ಲಿ ಕೂಡ ಇಂತಹ ಒಂದು ನೈಜ ಘಟನೆ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ ಮತ್ತು ಮೊಬೈಲ್ ಫೋನ್ ನ ಬ್ರೈಟ್ ನೆಸ್ ನ್ನು ಹೆಚ್ಚಿಸುವ ಮೊದಲು ಎರಡೆರಡು ಸಲ ಯೋಚಿಸಿಕೊಳ್ಳಿ. ಕಳೆದ ಎರಡು ವರ್ಷಗಳಿಂದ ಮಹಿಳೆಯೊಬ್ಬಳು ತನ್ನ ಮೊಬೈಲ್ ಫೋನ್ ನಲ್ಲಿ ಅತೀ ಹೆಚ್ಚಿನ ಬ್ರೈಟ್ ನೆಸ್ ಇಟ್ಟುಕೊಂಡು ನೋಡುತ್ತಿದ್ದು, ಇದರಿಂದ ಆಕೆ ತನ್ನ ಕಣ್ಣುಗಳ ದೃಷ್ಟಿ ಕಳೆದುಕೊಂಡಿದ್ದಾಳೆ. ಈ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಿ

ಆಕೆ ತನ್ನ ಮೊಬೈಲ್ ಫೋನ್ ನ್ನು ಅತ್ಯಧಿಕ ಬ್ರೈಟ್ ನೆಸ್ ನಲ್ಲಿ ನೋಡುತ್ತಿದ್ದಳು

ಆಕೆ ತನ್ನ ಮೊಬೈಲ್ ಫೋನ್ ನ್ನು ಅತ್ಯಧಿಕ ಬ್ರೈಟ್ ನೆಸ್ ನಲ್ಲಿ ನೋಡುತ್ತಿದ್ದಳು

ವೃತ್ತಿಯಲ್ಲಿ ಸೆಕ್ರೆಟರಿ ಆಗಿರುವಂತಹ ಚೆನ್ ಎಂಬಾಕೆ ತನ್ನ ಮೊಬೈಲ್ ಬಳಕೆ ಮಾಡಿಕೊಳ್ಳುವ ವೇಳೆ ಅದನ್ನು ಅತ್ಯಧಿಕ ಬ್ರೈಟ್ ನೆಸ್ ನಲ್ಲಿ ಇಟ್ಟುಕೊಳ್ಳುತ್ತಾ ಇದ್ದಳು. ಮನೆ ಅಥವಾ ಕಚೇರಿಯಿಂದ ಹೊರಗಡೆ ಮೊಬೈಲ್ ನೋಡುತ್ತಿರುವ ವೇಳೆ ಆಕೆ ಹೀಗೆ ಮಾಡುತ್ತಲಿದ್ದಳು ಮತ್ತು ಎರಡು ವರ್ಷಗಳ ಕಾಲ ಪ್ರತೀ ಸಲ ಮೊಬೈಲ್ ಬಳಕೆ ಮಾಡುವಾಗಲೂ ಆಕೆ ಅತ್ಯಧಿಕ ಬ್ರೈಟ್ ನೆಸ್ ನಲ್ಲೇ ಇದನ್ನು ನೋಡುತ್ತಳಿದ್ದಳು.

ಆಕೆಯ ಕಣ್ಣಿನಲ್ಲಿ ಸುಮಾರು 500 ರಂಧ್ರಗಳು ಪತ್ತೆಯಾದವು!

ಆಕೆಯ ಕಣ್ಣಿನಲ್ಲಿ ಸುಮಾರು 500 ರಂಧ್ರಗಳು ಪತ್ತೆಯಾದವು!

ತೈವಾನ್ ನ 25ರ ಹರೆಯದ ಚೆನ್ ಎಂಬ ಮಹಿಳೆಯೇ ತನ್ನ ಮೊಬೈಲ್ ನ್ನು ಅತ್ಯಧಿಕ ಬ್ರೈಟ್ ನೆಸ್ ನಲ್ಲಿ ಇಟ್ಟುಕೊಂಡು ವೀಕ್ಷಿಸುತ್ತಿದ್ದರು. ಎರಡು ವರ್ಷಗಳ ಕಾಲ ನಿರಂತರಾಗಿ ಅತ್ಯಧಿಕ ಬ್ರೈಟ್ ನೆಸ್ ನಿಂದ ಮೊಬೈಲ್ ನ್ನು ನೋಡುತ್ತಿದ್ದ ಆಕೆಯ ಕಣ್ಣುಗಳಲ್ಲಿ ಸುಮಾರು 500 ರಂಧ್ರಗಳು ಪತ್ತೆಯಾಗಿವೆ.

ಆಕೆಗೆ ಕಣ್ಣಿನಲ್ಲಿ ಅತ್ಯಧಿಕ ನೋವು ಬರುತ್ತಿತ್ತು

ಆಕೆಗೆ ಕಣ್ಣಿನಲ್ಲಿ ಅತ್ಯಧಿಕ ನೋವು ಬರುತ್ತಿತ್ತು

ತನ್ನ ಎರಡು ಕಣ್ಣುಗಳಲ್ಲಿ ಅತ್ಯಧಿಕ ನೋವು ಕಂಡುಬಂದ ಕಾರಣ ಆಕೆ ವೈದ್ಯರಲ್ಲಿಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಂಡರು. ಪರೀಕ್ಷೆ ಮಾಡಿದ ವೇಳೆ ಆಕೆಯ ಎಡದ ಕಾರ್ನಿಯಾವು ರಕ್ತದಿಂದ ತುಂಬಿ ಹೋಗಿತ್ತು ಮತ್ತು ಆಕೆಯ ದೃಷ್ಟಿಗೆ ಶಾಶ್ವತವಾಗಿ ಹಾನಿಯಾಗಿತ್ತು.

ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ

ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ

ಆಕೆಯ ಕಣ್ಣುಗಳಿಗೆ ಶಾಶ್ವತವಾಗಿ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಸಮಸ್ಯೆಯನ್ನು ಸರಿಪಡಿಸಲು ಮತ್ತು ನಿವಾರಣೆ ಮಾಡಲು ಚೆನ್ ಗೆ ಸ್ಟಿರಾಯ್ಡ್ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ದಿನಗಳ ಬಳಿಕ ಆಕೆಯ ಕಣ್ಣುಗಳಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ಹೇಳಿದ್ದಾರೆ.

ಮೊಬೈಲ್ ಬಳಕೆ ವೇಳೆ ಎಚ್ಚರಿಕೆ ವಹಿಸಿ

ಮೊಬೈಲ್ ಬಳಕೆ ವೇಳೆ ಎಚ್ಚರಿಕೆ ವಹಿಸಿ

ಮೊಬೈಲ್ ಬಳಕೆ ಎನ್ನುವುದು ಸಾಮಾನ್ಯವಾಗಿದೆ. ಆದರೆ ಇದನ್ನು ಅತಿಯಾಗಿ ಬಳಕೆ ಮಾಡಬಾರದು ಮತ್ತು ಮೊಬೈಲ್ ನ ಬೆಳಕು ನೇರವಾಗಿ ಕಣ್ಣುಗಳಿಗೆ ಹಾನಿಯುಂಟು ಮಾಡುವ ಕಾರಣದಿಂದಾಗಿ ಬ್ರೈಟ್ ನೆಸ್ ನ್ನು ಸರಿಯಾದ ಕ್ರಮದಲ್ಲಿ ಇಟ್ಟುಕೊಳ್ಳಬೇಕು ಮತ್ತು ದಿನದ ಹೆಚ್ಚಿನ ಅವಧಿಗೆ ಮೊಬೈಲ್ ಬಳಕೆ ಮಾಡುವುದನ್ನು ಕಡೆಗಣಿಸಿದರೆ ತುಂಬಾ ಒಳ್ಳೆಯದು.

English summary

Excess Light Burned 500 Holes In Her Eye

A woman claimed that her mobile phone left her with 500 holes in her eyes after she used it on maximum brightness for two years. The woman, who was known only by her surname Chen, claimed that her mobile baked her eyes like a microwave. Doctors revealed that the woman has lost her sight permanently!
X
Desktop Bottom Promotion