Just In
- 6 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 8 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
- 10 hrs ago
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- 12 hrs ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
Don't Miss
- News
ಆಟಿಕೆ ಬಂದೂಕು ತೋರಿಸಿ ಮುಖ್ಯಮಂತ್ರಿ ಅಣ್ಣನನ್ನೇ ಅಪಹರಿಸಿದ ಐನಾತಿಗಳು
- Finance
ಫಾಸ್ಟ್ಟ್ಯಾಗ್ ಡೆಡ್ಲೈನ್ಗೆ ಸ್ವಲ್ಪ ವಿನಾಯಿತಿ
- Sports
ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ
- Technology
ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Movies
ಜಯಲಲಿತಾ ಸಿನಿಮಾ ಬಳಿಕ ಮತ್ತೊಬ್ಬ ಸಿಎಂ ಬಯೋಪಿಕ್ ಸಾಧ್ಯತೆ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಇಸ್ಟಾಗ್ರಾಮ್‌ನಲ್ಲಿ ಹುಡುಗಿ ವೇಷದಲ್ಲಿ ಪೋಸ್ ನೀಡಿ, ಫೇಮಸ್ ಆದ ಹುಡುಗನ ಕಥೆ ಇದು!
ಇಂದಿನ ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಧಿಕ ಲೈಕ್ ಹಾಗೂ ಕಮೆಂಟ್ ಪಡೆಯಲು ಯಾವ ಮಟ್ಟಕ್ಕೂ ಇಳಿಯಬಲ್ಲರು ಮತ್ತು ಏನು ಬೇಕಿದ್ದರೂ ಸರ್ಕಸ್ ಮಾಡಬಲ್ಲರು ಎಂದು ಹಲವಾರು ಘಟನೆಗಳಿಂದ ಸಾಬೀತು ಆಗಿದೆ. ಸಾಮಾಜಿಕ ಜಾಲತಾಣ ಎನ್ನುವುದನ್ನು ಯಾವ ರೀತಿಯ ಒಳ್ಳೆಯದಕ್ಕೆ ಬಳಸಿಕೊಳ್ಳಬಹುದು ಮತ್ತು ಇದರಿಂದ ಹೇಗೆ ಸಂಪಾದನೆ ಮಾಡಿಕೊಳ್ಳಬಹುದು ಎಂದು ತಿಳಿದಿರಬೇಕು. ಇಲ್ಲೊಬ್ಬ ಹುಡುಗ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡು ಈಗ ಕೋಟಿಗಳಲ್ಲಿ ಸಂಪಾದನೆ ಮಾಡುತ್ತಿದ್ದಾನೆ.
ಈ ಹುಡುಗ ಇಸ್ಟಾಗ್ರಾಮ್ ನಲ್ಲಿ ಹುಡುಗಿಯ ವೇಷ ಹಾಕಿಕೊಂಡು ಪೋಸ್ ನೀಡಿದ್ದಾನೆ ಮತ್ತು ಈಗ ಆತ ಎಷ್ಟರ ಮಟ್ಟಿಗೆ ಇಲ್ಲಿ ಜನಪ್ರಿಯನಾಗಿ ಯಶಸ್ಸು ಪಡೆದಿದ್ದಾನೆ ಎಂದರೆ ತನ್ನದೇ ಆಗಿರುವ ಮನೆ ಕೂಡ ಖರೀದಿ ಮಾಡಿದ್ದಾನೆ.
ಇದರ ಬಗ್ಗೆ ನೀವು ಇನ್ನಷ್ಟು ಓದಿಕೊಳ್ಳಿ.
ಥಾಯ್ಲೆಂಡ್ ನ ನೆಸ್ ಎಂಬ 12ರ ಹರೆಯದ ಬಾಲಕ ನೆಸ್ ಬಾಲಕ ತನ್ನ ಕಿರಿ ವಯಸ್ಸಿನಲ್ಲೇ ಸೆಲೆಬ್ರಿಟಿಯಾಗಿದ್ದಾನೆ ಮತ್ತು ಒಳ್ಳೆಯ ಹಣ ಸಂಪಾದನೆ ಕೂಡ ಮಾಡುತ್ತಿದ್ದಾನೆ. ತಾನು ಈ ರೀತಿಯಾಗಿ ವೇಷ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯನಾಗಿರುವ ಕಾರಣದಿಂದಾಗಿ ತನ್ನ ಕುಟುಂಬಕ್ಕೆ ಒಂದು ಮನೆ ಖರೀದಿ ಮಾಡಲು ಸಾಧ್ಯವಾಗಿದೆ. ಇನ್ ಸ್ಟಾಗ್ರಾಮ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಆತ ನಿಯಮಿತವಾಗಿ ಮೇಕಪ್ ಮಾಡಿಕೊಂಡು ಪೋಸ್ ನೀಡುತ್ತಿದ್ದ ಮತ್ತು ಬಟ್ಟೆ ಆಯ್ಕೆಯಲ್ಲೂ ಆತ ತುಂಬಾ ಜಾಣನಾಗಿದ್ದ.
ಸಣ್ಣ ಬಾಲಕನಾಗಿದ್ದ ವೇಳೆ ಆತ ತನ್ನ ತಾಯಿಯ ಮೇಕಪ್ ನೊಂದಿಗೆ ಆಟವಾಡುತ್ತಿದ್ದ. ಆತನ ಆಸಕ್ತಿಗೆ ಪೋಷಕರು ಬೆಂಬಲ ನೀಡಿದರು ಮತ್ತು ಇದೇ ವೇಳೆ ಆತನ ಹವ್ಯಾಸಕ್ಕೆ ಕೆಲವೊಂದು ಸಲಹೆಗಳನ್ನು ಕೂಡ ನೀಡಿದರು.
Most Read: ಬಿಯರ್‌ನಿಂದಾಗಿ ಸಂಧಿವಾತ ತಂದುಕೊಂಡ ಯುವಕ
ಕೇವಲ ಇನ್ ಸ್ಟಾಗ್ರಾಮ್ ನಲ್ಲಿ ಮಾತ್ರ ಈ ಬಾಲಕನಿಗೆ 28000 ಅಭಿಮಾನಿಗಳು ಇದ್ದಾರೆ. ಆತ ಸಾಮಾಜಿಕ ಜಾಲತಾಣಗಳಲ್ಲಿ ಮೇಕಪ್ ನ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡುತ್ತಾನೆ ಮತ್ತು ಹುಡುಗಿಯಾಗಿ ಕೆಲವೊಂದು ಬಟ್ಟೆಗಳನ್ನು ಧರಿಸಿ ಫೋಟೊಗಳನ್ನು ಕೂಡ ಪೋಸ್ಟ್ ಮಾಡುತ್ತಾನೆ. ತನ್ನ ಕುಟುಂಬಕ್ಕಾಗಿ ಮನೆ ನಿರ್ಮಾಣ ಮಾಡಲು ಸಾಧ್ಯವಾದ ಬಗ್ಗೆ ಆತ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡ ಬಳಿಕ ಈಗ ಬಾಲಕ ಏಶ್ಯಾದಲ್ಲೇ ದೊಡ್ಡ ಮಟ್ಟದಲ್ಲಿ ಸ್ಟಾರ್ ಆಗಿದ್ದಾನೆ.
ನೆಸ್ ಮೇಕಪ್ ಮಾಡಿಕೊಳ್ಳುತ್ತಾನೆ. ಆತ ಹುಡುಗಿಯಂತೆ ಬಟ್ಟೆ ಧರಿಸಿಕೊಳ್ಳುವ ಸಾಮರ್ಥ್ಯ, ಆಕರ್ಷಣೀಯ ವಿಂಗ್ಸ್, ನಕಲಿ ಕಣ್ಣಿನ ರೆಪ್ಪೆಗಳು ಜನರನ್ನು ತುಂಬಾ ಆಕರ್ಷಿಸುತ್ತದೆ. ಆತನ ಮೇಕಪ್ ಮತ್ತು ಬಟ್ಟೆಯು ಎಷ್ಟು ಆಕರ್ಷಣೀಯವಾಗಿದೆ ಎಂದರೆ ವೃತ್ತಿಪರ ಮೇಕಪ್ ಮಾಡುವವರು ಕೂಡ ಇದನ್ನು ನೋಡಿ ಒಂದು ಕ್ಷಣ ದಂಗಾಗಬಹುದು. ಸಹಪಾಠಿಗಳು ತನ್ನ ಈ ಹವ್ಯಾಸವನ್ನು ನೋಡಿ ಹೀಯಾಳಿಸಿದರೆ ನಾನು ಇದರ ಬಗ್ಗೆ ಚಿಂತೆ ಮಾಡುತ್ತಿಲ್ಲ ಮತ್ತು ತನಗೆ ಖುಷಿ ನೀಡುವುದನ್ನು ಮಾಡಲು ಇಷ್ಟಪಡುತ್ತೇನೆ ಎನ್ನುತ್ತಾರೆ.
ನೆಸ್ ಈಗ ಹಲವಾರು ವಾಣಿಜ್ಯ ಜಾಹೀರಾತು ಒಪ್ಪಂದಗಳನ್ನು ಪಡೆದುಕೊಂಡಿದ್ದಾನೆ ಮತ್ತು ವಿವಿಧ ರೀತಿಯ ಕಾರ್ಯಕ್ರಮಗಳಿಗೆ ಆತನನ್ನು ಕರೆಯಲಾಗುತ್ತಿದೆ. ಥಾಯ್ಲೆಂಡಿನಲ್ಲಿ ಮಾತ್ರವಲ್ಲದೆ ಆತ ಚೀನಾ ಮತ್ತು ಇತರ ಕೆಲವೊಂದು ದೇಶಗಳಲ್ಲೂ ದೊಡ್ಡ ಮಟ್ಟದ ಸ್ಟಾರ್ ಆಗಿರುವನು.