For Quick Alerts
ALLOW NOTIFICATIONS  
For Daily Alerts

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಚಕ್ರದವರು ಅತ್ಯಂತ ಸ್ವಾರ್ಥಿಗಳಾಗಿರುತ್ತಾರಂತೆ!

|

ನಾನು, ನನ್ನದು ಎನ್ನುವುದು ಸ್ವಾರ್ಥ ಗುಣವನ್ನು ಬಿಂಬಿಸುತ್ತದೆ. ಸ್ವಾರ್ಥ ಎನ್ನುವುದು ಪ್ರತಿಯೊಂದು ಜೀವಿಯಲ್ಲೂ ಸಾಮಾನ್ಯವಾದ ಒಂದು ಗುಣ. ಸ್ವಾರ್ಥ ಭಾವನೆ ಸ್ವಲ್ಪವೂ ಇಲ್ಲದೆ ಹೋದರೂ ಕಷ್ಟ. ಅದು ಮಿತಿ ಮೀರಿ ಇದ್ದರೂ ಕಷ್ಟ. ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ಇಂತಹ ಭಾವನೆಯು ಬಹುತೇಕ ಸಂದರ್ಭದಲ್ಲಿ ಇತರರಿಗೆ ತೊಂದರೆಯನ್ನು ಉಂಟುಮಾಡುವುದು. ಜೊತೆಗೆ ವ್ಯಕ್ತಿಯ ಅಂತರಾಳದ ಮನಸ್ಸಿನಲ್ಲೂ ಸ್ವಾರ್ಥ ಭಾವನೆ ಹೆಚ್ಚುತ್ತಾ ಹೋಗುವುದು. ಇದರಿಂದಾಗಿ ವ್ಯಕ್ತಿಯು ತನ್ನ ಆಸೆಯ ಪೂರೈಕೆಗಾಗಿ ಇತರರಿಗೆ ನೋವುಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಅಲ್ಲದೆ ನಿಧಾನವಾಗಿ ಅತಿಯಾದ ಹಠ ಹಾಗೂ ಕೋಪದ ಸಂವೇದನೆಯು ಹೆಚ್ಚುವುದು.

ಸ್ವಾರ್ಥ ಎನ್ನುವ ಭಾವನೆ ಅಥವಾ ಗುಣವು ವ್ಯಕ್ತಿಯಲ್ಲಿ ಇಲ್ಲದೆ ಹೋದರೂ ಅವರನ್ನು ನಂಬಿದ ವ್ಯಕ್ತಿಗಳಿಗೆ ಹಾಗೂ ಕುಟುಂದ ಸದಸ್ಯರಿಗೆ ಸಾಕಷ್ಟು ತೊಂದರೆಗಳು ಉಂಟಾಗುವುದು. ಸ್ವಾರ್ಥ ಭಾವನೆಯು ಇಲ್ಲದೆ ಇರುವಾಗ ಅವರು ನನ್ನದು, ನನ್ನವರು, ನನ್ನನ್ನು ನಂಬಿದವರು ಎನ್ನುವಂತಹ ಯಾವುದೇ ಬಾಂಧವ್ಯಗಳು ಇರುವುದಿಲ್ಲ. ಯಾರು ಏನಾದರೂ ಚಿಂತೆಯಿಲ್ಲ ಎನ್ನುವ ರೀತಿಯಲ್ಲಿ ಧೋರಣೆ ಹೊಂದಿದ್ದರೆ, ಅವರನ್ನು ನಂಬಿಕೊಂಡು ಇದ್ದವರಿಗೆ ಪ್ರತಿಯೊಂದು ವಿಚಾರ ಹಾಗೂ ಕೆಲಸ ಕಾರ್ಯಗಳಲ್ಲಿ ಅತಿಯಾಗಿ ನೋವುಂಟಾಗುವುದು. ಅಲ್ಲದೆ ಅವರ ಬಗ್ಗೆ ದ್ವೇಷ ಹಾಗೂ ಕೋಷ ಉಂಟಾಗುವುದು.

ಸ್ವಾರ್ಥ ಭಾವನೆ ಹೊಂದಿರುವ ವ್ಯಕ್ತಿಗಳಲ್ಲಿ

ಸ್ವಾರ್ಥ ಭಾವನೆ ಹೊಂದಿರುವ ವ್ಯಕ್ತಿಗಳಲ್ಲಿ

ಎಲ್ಲವನ್ನೂ ತಿಳಿದ ಆ ಭಗವಂತ ಅದಕ್ಕಾಗಿಯೇ ಜೀವ ಸಂಕುಲದಲ್ಲಿ ಸ್ವಾರ್ಥ ಭಾವನೆ ಇರುವಂತೆ ಮಾಡಿದ್ದಾನೆ ಎಂದು ಹೇಳಬಹುದು. ಸ್ವಾರ್ಥ ಭಾವನೆ ಹೊಂದಿದ್ದರೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ತನ್ನ ಮನೆ, ತನ್ನ ತಂದೆ ತಾಯಿ, ಮಕ್ಕಳು, ಸ್ನೇಹಿತರು ಹಾಗೂ ಬಂಧುಗಳು ಎನ್ನುವ ಭಾವನೆ ಇರುತ್ತದೆ. ಅದೇ ಯಾರಲ್ಲಿ ಅತಿಯಾದ ಸ್ವಾರ್ಥ ಭಾವನೆ ಇರುತ್ತದೆಯೋ ಅಂತಹವರಲ್ಲಿ ನನ್ನವರೆಲ್ಲಾ ನನಗಾಗಿಯೇ ಬದುಕಬೇಕು, ನನ್ನ ಕೆಲಸವನ್ನೇ ಮೊದಲು ಮಾಡಬೇಕು, ನನ್ನ ಸಂತೋಷ ಪಡಿಸುವುದರಲ್ಲಿ ಹೆಚ್ಚಿನ ಮಹತ್ವ ನೀಡಬೇಕು ಹೀಗೆ ಪ್ರತಿಯೊಂದು ಸಂಗತಿಯಲ್ಲೂ ಅತಿಯಾದ ಸ್ವಾರ್ಥ ಭಾವನೆಯನ್ನು ತೋರುತ್ತಾರೆ. ತಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ ಇತರರ ನೆಮ್ಮದಿಯನ್ನು ಹಾಳು ಮಾಡುತ್ತಾರೆ ಎನ್ನಬಹುದು.

ಸ್ವಾರ್ಥ ಭಾವನೆ ಹೊಂದಿರುವ ವ್ಯಕ್ತಿಗಳಲ್ಲಿ

ಸ್ವಾರ್ಥ ಭಾವನೆ ಹೊಂದಿರುವ ವ್ಯಕ್ತಿಗಳಲ್ಲಿ

ಹಾಗಾಗಿ ನಾವು ನಮ್ಮ ಭಾವನೆಯನ್ನು ಹಾಗೂ ವರ್ತನೆಯನ್ನು ಮೊದಲು ಅರಿಯಬೇಕು. ನನ್ನಿಂದ ಇತರರಿಗೆ ನೋವುಂಟಾಗುತ್ತಿದೆಯೇ? ನನ್ನಿಂದ ಇತರರ ಸಂತೋಷ ಹಾಳಾಗುವುದೇ? ನನ್ನಿಂದ ಇತರರ ಜೀವನ ಹಾಳಾಗುತ್ತಿದೆಯೇ? ಎನ್ನುವಂತಹ ಪ್ರಶ್ನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಂತರ ನಮ್ಮ ವ್ಯಕ್ತಿತ್ವ ವಿಕಸನ ಹಾಗೂ ಉತ್ತಮ ಭಾವನೆಗಳನ್ನು ಹೊಂದಲು ಪ್ರಯತ್ನಿಸಬೇಕು. ವ್ಯಕ್ತಿಯಲ್ಲಿ ಬೆಳೆಯುವ ಭಾವನೆ ಅಥವಾ ಗುಣಗಳು ಅವನು ಹುಟ್ಟು-ಬೆಳೆದ ಪರಿಸರದಿಂದ ಪ್ರಭಾವಿತವಾಗಿರುತ್ತದೆ. ಅಂತೆಯೇ ವ್ಯಕ್ತಿಯು ಹುಟ್ಟಿದ ಸಮಯ, ನಕ್ಷತ್ರ, ಗ್ರಹಗಳ ಪ್ರಭಾವ ಹಾಗೂ ರಾಶಿಗಳ ಪರಿಣಾಮವೂ ಪರಿಣಾಮಕಾರಿ ಆಗಿರುತ್ತದೆ.

Most Read: ರಾಶಿಚಕ್ರದ ಅನುಸಾರ ಈ ಕೆಲಸಗಳನ್ನು ಮಾಡಲು, ನೀವು ಯಾವತ್ತೂ ಮುಂದಾಗುವುದಿಲ್ಲವಂತೆ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜೀವನ, ಸಂಬಂಧ, ಉದ್ಯೋಗ, ಆರ್ಥಿಕ ಸ್ಥಿತಿ ಸೇರಿದಂತೆ ವ್ಯಕ್ತಿಯ ಭಾವನೆಗಳು ಹಾಗೂ ಗುಣಗಳೆಲ್ಲವೂ ಅವರವರ ರಾಶಿ ಮತ್ತು ನಕ್ಷತ್ರಗಳಿಂದ ಪ್ರಭಾವಿತವಾಗಿರುತ್ತವೆ ಎಂದು ಹೇಳಲಾಗುವುದು. ಹಾಗಾಗಿಯೇ ಕೆಲವು ನಕ್ಷತ್ರ ಹಾಗೂ ರಾಶಿಯ ವ್ಯಕ್ತಿಗಳಲ್ಲಿ ಅತಿಯಾದ ಸ್ವಾರ್ಥ ಭಾವನೆಗಳು ಇರುತ್ತವೆ ಎಂದು ಹೇಳಲಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ಭಾವನೆಗಳು ಹೇಗಿರುತ್ತವೆ? ಅವರ ಸ್ವಾರ್ಥಗುಣದಿಂದ ಹೇಗೆ ವರ್ತಿಸುತ್ತಾರೆ? ಸ್ವಾರ್ಥ ಗುಣದ ರಾಶಿಚಕ್ರದವರ ಸಾಲಿನಲ್ಲಿ ನಿಮ್ಮ ರಾಶಿಚಕ್ರ ಇದೆಯೇ? ಎನ್ನುವಂತಹ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ಮುಂದಿರುವ ಲೇಖದ ವಿವರಣೆಯನ್ನು ಪರಿಶೀಲಿಸಿ.

ಮೇಷ ರಾಶಿ

ಮೇಷ ರಾಶಿ

ಈ ರಾಶಿಯ ವ್ಯಕ್ತಿಗಳು ತಾವು ಹೇಗೆ ಜೀವಿಸಬೇಕು? ನಮಗೆ ಯಾವ ಸಂಗತಿಗಳು ಇಷ್ಟವಾಗುತ್ತವೆ? ಅವುಗಳನ್ನು ಪಡೆದುಕೊಳ್ಳುವುದು ಹೇಗೆ? ಎನ್ನುವುದನ್ನು ಅತ್ಯಂತ ಸುಂದರವಾಗಿ ತಿಳಿದಿರುತ್ತಾರೆ. ಅಲ್ಲದೆ ಯಾವ ಸಂಗತಿಗಳ ಬಗ್ಗೆ ಹೇಗೆ ವ್ಯವಹರಿಸಬೇಕು? ಹೇಗೆ ನಮ್ಮ ವರ್ತನೆಯನ್ನು ತೋರಬೇಕು ಎನ್ನುವುದರ ಬಗ್ಗೆ ಸಾಕಷ್ಟು ಜ್ಞಾನ ಹಾಗೂ ಬುದ್ಧಿಯನ್ನು ಹೊಂದಿರುತ್ತಾರೆ. ಹಾಗೆಯೇ ಇವರಲ್ಲಿ ಅತಿಯಾದ ಸ್ವಾರ್ಥ ಭಾವನೆಗಳು ಇರುತ್ತವೆ ಎಂದು ಹೇಳಲಾಗುವುದು. ಸ್ವಾರ್ಥ ಗುಣವನ್ನು ಹೊಂದಿರುವ ರಾಶಿಚಕ್ರಗಳಲ್ಲಿ ಮೇಷ ರಾಶಿಯೂ ಒಂದು. ಇವರು ತಾವು ಬಯಸಿದ್ದನ್ನು ಪಡೆದುಕೊಳ್ಳಲು ಸಾಯುವ ತನಕ ಬೇಕಾದರೂ ಹೋರಾಡುತ್ತಾರೆ ಎನ್ನಲಾಗುವುದು. ನಿಮ್ಮ ರಾಶಿಯೂ ಮೇಷ ರಾಶಿಯಾಗಿದ್ದರೆ ನೀವು ಮೊದಲು ತ್ಯಾಗ ಮಾಡುವುದು ಹೇಗೆ? ವಿಷಯವನ್ನು ಹೇಗೆ ಸ್ವೀಕರಿಸಬೇಕು ಎನ್ನುವುದರ ಕುರಿತು ಹೆಚ್ಚಿನ ಆಸಕ್ತಿ ಹಾಗೂ ಬುದ್ಧಿಯನ್ನು ತೋರಬೇಕು. ಅಹಿತಕರವಾದ ವರ್ತನೆಯನ್ನು ತೋರುವುದರಿಂದ ಇತರರಿಗೆ ಯಾವ ಬಗೆಯಲ್ಲಿ ನೋವು ಉಂಟಾಗುವುದು ಎನ್ನುವುದರ ಬಗ್ಗೆ ನೀವು ತಿಳಿದಿರುತ್ತೀರಿ. ಅಂತಹ ತಪ್ಪುಗಳು ನಿಮ್ಮಿಂದ ಆಗ ಬಾರದು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ಇತರರಿಗೂ ಅಗತ್ಯವಾಗಿರುವ ವಸ್ತುವನ್ನು ನಾವು ದುರಾಸೆಯಿಂದ ಪಡೆದುಕೊಳ್ಳಬಾರದು ಎನ್ನುವುದನ್ನು ನೆನಪಿಡಿ.

Most Read: ಸಿಟ್ಟು ಗೊಂಡಾಗ ಈ ರಾಶಿಯವರನ್ನು ಕಂಟ್ರೋಲ್ ಮಾಡುವುದೇ ಕಷ್ಟ!

ವೃಷಭ ರಾಶಿ

ವೃಷಭ ರಾಶಿ

ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ವೃಷಭ ರಾಶಿಯ ವ್ಯಕ್ತಿಗಳು ಸಹ ಒಬ್ಬರು. ಸ್ಥಿರ ಮನಸ್ಸಿನ ಇವರು ತಮ್ಮವರಿಗಾಗಿಯೇ ಸದಾ ಇರುತ್ತಾರೆ. ಇತರರಿಗೆ ತೋರುವ ಭದ್ರತೆಯ ಭಾವನೆಗಳು ಕೆಲವೊಮ್ಮೆ ವಸ್ತುನಿಷ್ಟವಾಗಿ ಇರುವುದಿಲ್ಲ ಎಂದು ಹೇಳಲಾಗುವುದು. ಇವರು ವಿಪರೀತವಾದ ಸೂಕ್ಷ್ಮತೆ, ಭಾವನಾ ಜೀವಿಗಳು ಹಾಗೂ ಸೌಮ್ಯ ಭಾವನೆಯನ್ನು ಹೊಂದಿರುತ್ತಾರೆ. ಅಂತೆಯೇ ಇವರಲ್ಲಿ ಸ್ವಾರ್ಥದ ಗುಣವೂ ಸಹ ಅತಿಯಾಗಿಯೇ ಇರುತ್ತದೆ ಎಂದು ಹೇಳಲಾಗುವುದು. ಕೆಲವೊಮ್ಮೆ ಇವರಲ್ಲಿ ಇರುವ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಚಾರಗಳೇ ಹೆಚ್ಚು ಸ್ವಾರ್ಥ ಭಾವನೆಯನ್ನು ಕೆರಳುವಂತೆ ಮಾಡುವುದು ಎಂದು ಹೇಳಲಾಗುವುದು. ಇವರು ಸಾಮಾನ್ಯವಾಗಿ ಎಲ್ಲಾ ವಿಷಯದಲ್ಲೂ ಬಹುಬೇಗ ತೃಪ್ತಿಯ ಭಾವನೆ ಹೊಂದುವುದಿಲ್ಲ ಎಂದು ಹೇಳಲಾಗುತ್ತದೆ. ನೀವು ವೃಷಭ ರಾಶಿಯ ವ್ಯಕ್ತಿಗಳಾಗಿದ್ದರೆ ಆದಷ್ಟು ದುರಾಸೆಯ ಬುದ್ಧಿ ಅಥವಾ ಭಾವನೆಗಳಿಂದ ದೂರವಿರಿ. ಸದಾ ನಿಮ್ಮ ಮತ್ತು ನಿಮ್ಮ ಏಳಿಗೆಯ ಸಂಗತಿಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ. ಆಕ್ರಮಣ ಕಾರಿ ಪ್ರವೃತ್ತಿಯನ್ನು ತೋರುವ ಬದಲು ಆದಷ್ಟು ಶಾಂತ ಚಿತ್ತದಿಂದ ಮೃದುವಾದ ವರ್ತನೆಯನ್ನು ತೋರಿ. ಇದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಉತ್ತಮವಾಗುವುದರ ಜೊತೆಗೆ. ಇತರರ ಮುಂದೆ ನಿಮ್ಮ ಗೌರವವೂ ಹೆಚ್ಚುವುದು.

ಮಿಥುನ ರಾಶಿ

ಮಿಥುನ ರಾಶಿ

ಮಿಥುನ ರಾಶಿಯ ವ್ಯಕ್ತಿಗಳು ಬಹುಮುಖ ವ್ಯಕ್ತಿಗಳಾಗಿರುತ್ತಾರೆ. ಆದರೆ ಪರಿಪೂರ್ಣ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುವುದು. ಬುದ್ಧಿವಂತರು ಹಾಗೂ ಸ್ನೇಹ ಜೀವಿಗಳು ಹೌದು. ಆದರೆ ಇವರಲ್ಲಿ ಇರುವ ಸ್ವಾರ್ಥ ಗುಣದ ಕಾರಣದಿಂದ ಕೆಲವೊಮ್ಮೆ ಹೆಚ್ಚು ಪ್ರಚಾರ ಅಥವಾ ಅವಹೇಳನಕ್ಕೆ ಒಳಗಾಗಬಹುದು. ಇವರಲ್ಲಿ ಇರುವ ಸ್ವಾರ್ಥ ಗುಣದಿಂದಲೇ ಇವರು ಪರಿಸರದೊಂದಿಗೆ ಹೊಂದಿಕೊಳ್ಳುವಂತೆ ಮಾಡುವುದು ಎಂದು ಸಹ ಹೇಳಲಾಗುವದು. ಇವರಲ್ಲಿ ಇರುವ ಈ ಭಾವನೆಗಳಿಂದಲೇ ತಮ್ಮಲ್ಲಿ ಬದಲಾವಣೆಯ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಅದು ಕೆಲವೊಮ್ಮೆ ವ್ಯರ್ಥವಾಗಿಯೂ ಕಾಣಬಹುದು. ನೀವು ಮಿಥುನ ರಾಶಿಯವರಾಗಿದ್ದರೆ ಇತರರಿಗೆ ತೋರುವ ನಿಜವಾದ ಕಾಳಜಿಯ ಬಗ್ಗೆ ತಿಳಿದುಕೊಳ್ಳಿ. ನಿಮ್ಮ ವರ್ತನೆ ಹಾಗೂ ಆಸೆಯ ಕಾರಣಗಳಿಂದ ಇತರರಿಗೆ ನೋವುಂಟಾಗದಂತೆ ನೋಡಿಕೊಳ್ಳಿ. ನಿಮ್ಮ ಮಿತಿಯ ಒಳಗೆ ಆರಾಮದಾಯಕ ಅನುಭವ ಹೊಂದಲು ಪ್ರಯತ್ನಿಸಿ.

ಸಿಂಹ ರಾಶಿ

ಸಿಂಹ ರಾಶಿ

ಸಿಂಹ ಆಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಹೆಚ್ಚು ಆಕರ್ಷಿತ ವ್ಯಕ್ತಿಗಳಾಗಿ ಬಿಂಬಿಸಲು ಪ್ರಯತ್ನಿಸುತ್ತಾರೆ. ಇವರ ಕೆಲವು ಭಾವನಾತ್ಮಕ ಆಸೆಗಳು ಹೆಚ್ಚು ಸ್ವಾರ್ಥದ ಗುಣವನ್ನು ಕೆರಳಿಸುವುದು. ಇವರು ಸದಾ ಗೆಲ್ಲುವ ಯೋಜನೆ ಹಾಗೂ ಯಶಸ್ಸನ್ನು ಪಡೆದುಕೊಳ್ಳುವುದರಲ್ಲಿಯೇ ಇರುತ್ತಾರೆ. ಇವರ ಜೀವನದ ಪ್ರಮುಖ ಉದ್ದೇಶವೇ ಅದಾಗಿರುತ್ತದೆ ಎಂದು ಹೇಳಲಾಗುವುದು. ಅವರು ಏನು ನೋಡುತ್ತಾರೆ ಅಥವಾ ಯಾವುದನ್ನು ಬಯಸುತ್ತಾರೆ ಅದನ್ನು ಪಡೆದುಕೊಳ್ಳುವುದರಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಉತ್ಸುಕತೆಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ನೀವು ಸಿಂಹ ರಾಶಿಯ ವ್ಯಕ್ತಿಗಳಾಗಿದ್ದರೆ ನಿಮ್ಮನ್ನು ನಂಬಿದ ವ್ಯಕ್ತಿಗಳೊಂದಿಗೆ ಅಥವಾ ನಿಮ್ಮವರಿಗಾಗಿ ಸ್ವಲ್ಪ ತ್ಯಾಗ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಇತರರ ಖುಷಿಗಾಗಿ ನೀವು ಮಾಡುವ ಕೆಲಸ ಕಾರ್ಯಗಳು ಹೆಚ್ಚಿನ ಸಂತೋಷವನ್ನು ತಂದುಕೊಡುವುದು. ಜೊತೆಗೆ ನಿಮ್ಮ ಶ್ರೇಷ್ಠತೆಯನ್ನು ಹೆಚ್ಚಿಸುವುದು ಎನ್ನುವುದನ್ನು ನೆನಪಿನಲ್ಲಿ ಇಡಬೇಕು. ಆಗಲೇ ನಿಮಗೆ ಹೆಚ್ಚು ಸಂತೋಷ ಹಾಗೂ ಸಮಾಧಾನ ದೊರೆಯುವುದು. ಜೊತೆಗೆ ನಿಮ್ಮ ಬಗ್ಗೆ ಎಲ್ಲರೂ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾರೆ. ಸದಾ ನಿಮ್ಮೊಂದಿಗೆ ನಿಲ್ಲಲು ಸಿದ್ಧರಾಗಿರುತ್ತಾರೆ.

ಕನ್ಯಾ ರಾಶಿ

ಕನ್ಯಾ ರಾಶಿ

ಕನ್ಯಾ ರಾಶಿಯ ವ್ಯಕ್ತಿಗಳು ಬಹಳಷ್ಟು ಎಚ್ಚರಿಕೆಯಿಂದ ಇರುತ್ತಾರೆ. ಅವರು ಎಲ್ಲಾ ನ್ಯೂನತೆ ಹಾಗೂ ತಪ್ಪುಗಳ ಬಗ್ಗೆ ಹೆಚ್ಚು ತೀಕ್ಷ್ಣತೆಯನ್ನು ಹೊಂದಿರುತ್ತಾರೆ. ಇದರಿಂದ ತಮಗೆ ತಾವೇ ಶ್ರೇಷ್ಠರು ಎನ್ನುವ ಭಾವನೆಯನ್ನು ಹೊಂದಿರುತ್ತಾರೆ. ಇವರ ಈ ವರ್ತನೆಯಿಂದ ಇತರರಿಗೆ ಕೊಂಚ ಅಸಹನೀಯತೆ ಉಂಟಾಗಬಹುದು. ಜೊತೆಗೆ ಇವರ ಈ ವರ್ತನೆಯೇ ಇತರರನ್ನು ಟೀಕಿಸುವಂತೆ ಮಾಡುವುದು. ಅದು ಇವರ ಸ್ವಾರ್ಥ ಗುಣವನ್ನು ಬಿಂಬಿಸುವುದು. ಜೊತೆಗೆ ಇತರರ ಮುಂದೆ ತಾವೇ ಶ್ರೇಷ್ಠರು ಎನ್ನುವ ರೀತಿಯಲ್ಲಿ ವರ್ತಿಸುವರು. ನೀವು ಕನ್ಯಾ ರಾಶಿಯ ವ್ಯಕ್ತಿಗಳಾಗಿದ್ದರೆ ನಿಮ್ಮ ಶ್ರಮವು ನಿಮಗೆ ಶ್ರೇಷ್ಠತೆಯನ್ನು ತಂದುಕೊಡುವುದೇ ಹೊರತು ಇತರರಿಗೆ ಅಲ್ಲ ಎನ್ನುವುದನ್ನು ನೆನಪಿನಲ್ಲಿ ಇಡಿ. ನಿಮ್ಮಿಂದ ಆಗದಿರುವಂತಹ ಕೆಲಸವನ್ನು ಅಥವಾ ಸಾಧಿಸಲಾಗದ ಯಶಸ್ಸನ್ನು ಇತರರು ಪಡೆಯಬಹುದು ಎನ್ನುವುದನ್ನು ನೆನಪಿನಲ್ಲಿ ಇಡಿ. ಪ್ರತಿಯೊಬ್ಬರೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಎಲ್ಲರೂ ವಿಭಿನ್ನವಾದ ಹಾಗೂ ವಿಶೇಷವಾದ ಗುಣವನ್ನು ಹೊಂದಿರುತ್ತಾರೆ. ಅವುಗಳನ್ನು ವಿಮರ್ಷಿಸುವುದು ಉಚಿತವಲ್ಲ ಎನ್ನುವುದನ್ನು ತಿಳಿಯಬೇಕು. ನಿಮ್ಮ ಸ್ವಾರ್ಥ ಭಾವನೆಯನ್ನು ತ್ಯಾಗ ಮಾಡಿ ಎಂದು ಸಲಹೆ ನೀಡಲಾಗುವುದು. ಇತರರ ಬಗ್ಗೆ ಅತಿಯಾಗಿ ಯೋಚಿಸುವ ಬದಲು ನಿಮ್ಮ ನ್ಯೂನತೆ ಹಾಗೂ ತ್ಯಾಗದ ಬಗ್ಗೆ ಹೆಚ್ಚು ಗಮನ ನೀಡಿ.

Read more about: zodiac signs astrology
English summary

As per the Astrology these are the selfish zodiac signs!

Accept it or not, we all have selfish tendencies and that’s completely fine. But maybe that’s not your fault and your zodiac sign is be to blamed. If you are someone who has been hearing how selfish you are but couldn’t understand why this article may help you a bit.Though all of us are selfish but some of us use this characteristic more frequently than others do. Most selfish people think it’s not their problem and they are not doing anything wrong. For them, it’s ‘never’ their issue.
X
Desktop Bottom Promotion