For Quick Alerts
ALLOW NOTIFICATIONS  
For Daily Alerts

ಬಾಲಕೋಟ್ ಸರ್ಜಿಕಲ್ ಏರ್​ ಸ್ಟ್ರೈಕ್-ಸೀರೆಗಳಲ್ಲಿ ದೇಶಪ್ರೇಮದ ಕಿಚ್ಚು

|

ಭೂಮಿ ಮೇಲಿರುವ ಪ್ರತಿಯೊಬ್ಬನಿಗೂ ತನ್ನ ದೇಶದ ಬಗ್ಗೆ ಪ್ರೀತಿ ಇದ್ದೇ ಇರುತ್ತದೆ. ಅದರಲ್ಲೂ ಎರಡು ರಾಷ್ಟ್ರಗಳ ಮಧ್ಯೆ ಯುದ್ಧಭೀತಿ ಸೃಷ್ಟಿಯಾದಾಗ ದೇಶಪ್ರೇಮವೆನ್ನುವುದು ಉಕ್ಕಿ ಹರಿಯುವುದು. ಅದರಲ್ಲೂ ಇತ್ತೀಚೆಗೆ ಪಾಕಿಸ್ತಾನದ ನೆಲದ ಮೇಲೆ ಭಾರತದ ವಾಯುಪಡೆಯು ನಡೆಸಿರುವಂತಹ ದಾಳಿಯಲ್ಲಿ ನೂರಾರು ಮಂದಿ ಉಗ್ರರು ಸಾವನ್ನಪ್ಪಿದರು. ಈ ವೇಳೆ ಸಂಪೂರ್ಣ ಭಾರತವೇ ಸಂಭ್ರಮಪಟ್ಟಿತು. ಯಾಕೆಂದರೆ ಇದಕ್ಕೆ 12 ದಿನಕ್ಕೆ ಮೊದಲು ಪುಲ್ವಾಮಾದಲ್ಲಿ ಉಗ್ರರು ಭಾರತದ ಸೇನಾಪಡೆಯ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ 40ಕ್ಕೂ ಹೆಚ್ಚು ಮಂದಿ ಯೋಧರು ಹುತಾತ್ಮರಾಗಿದ್ದರು. ಇದರ ಬಳಿಕ ಭಾರತೀಯರು ಹಲವಾರು ವಿಧದಲ್ಲಿ ತಮ್ಮ ದೇಶಪ್ರೇಮ ಪ್ರಕಟಿಸುತ್ತಿದ್ದಾರೆ.

ಅದರಲ್ಲೂ ಸೀರೆಯ ಉತ್ಪನ್ನದಲ್ಲಿ ಅತೀ ದೊಡ್ಡ ನಗರವಾಗಿರುವಂತಹ ಸೂರತ್ ನಲ್ಲಿ ಸೀರೆಯ ಮೇಲೆ ಬಾಲಕೋಟ್ ದಾಳಿಯ ಚಿತ್ರಗಳನ್ನು ಬಿಡಿಸಿದ್ದಾರೆ. ಇಂದಿನ ದಿನಗಳಲ್ಲಿ ಡಿಸೈನರ್ ಸಾರಿಗಳು ದೇಶದಲ್ಲಿ ನಡೆಯುತ್ತಿರುವ ಆಗುಹೋಗುಗಳ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದೆ. ಇದರಿಂದ ಪುಲ್ವಾಮಾ ದಾಳಿ ಬಗ್ಗೆ ಜನರ ಆಕ್ರೋಶ, ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ಹೆಜ್ಜೆ, ಈ ಸಂದರ್ಭಗಳಲ್ಲಿ ರಾಜಕೀಯದಲ್ಲಾದ ಬೆಳವಣಿಗೆ, ಇವೆಲ್ಲಾವನ್ನೂ ಸೀರೆಗಳಲ್ಲಿ ಚಿತ್ರಗಳನ್ನು ಬಿಡಿಸಲಾಗಿದೆ. ಈಗ ಸೀರೆ ಉದ್ಯಮದಲ್ಲಿ ಹೆಚ್ಚಿನ ಸ್ಪರ್ಧೆಯು ಏರ್ಪಟ್ಟಿರುವ ಕಾರಣದಿಂದಾಗಿ ಸೀರೆ ತಯಾರಕರು ತಮ್ಮ ಕ್ರಿಯಾತ್ಮಕತೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಮತ್ತು ಇದರಿಂದಾಗಿಯೇ ಅವರ ಸೀರೆಗಳು ಕೂಡ ಜನಪ್ರಿಯವಾಗುತ್ತಿದೆ. ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತದ ವಾಯುಸೇನೆಯು ನಡೆಸಿರುವಂತಹ ದಾಳಿ ಬಗ್ಗೆ ಸೀರೆಯಲ್ಲಿ ಚಿತ್ರ ಬಿಡಿಸಲು ಇಲ್ಲೊಬ್ಬರು ಕೇವಲ ನಾಲ್ಕು ಗಂಟೆ ಮಾತ್ರ ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ನೀವು ಲೇಖನ ಓದುತ್ತಾ ಸಾಗಿದಂತೆ ಮಾಹಿತಿ ಪಡೆಯಿರಿ...

ಸೀರೆ ತಯಾರಿ ಮಾಡಲು ಕೇವಲ ನಾಲ್ಕು ಗಂಟೆ ಬೇಕಾಯಿತು!

ಸೀರೆ ತಯಾರಿ ಮಾಡಲು ಕೇವಲ ನಾಲ್ಕು ಗಂಟೆ ಬೇಕಾಯಿತು!

ವಾಯುಪಡೆಯ ದಾಳಿಯ ಚಿತ್ರಗಳನ್ನು ಹೊಂದಿರುವ ಆರು ಮೀಟರ್ ಉದ್ದದ ಸೀರೆಯನ್ನು ತಯಾರಿಸಲು ಕೇವಲ ನಾಲ್ಕು ಗಂಟೆ ಬೇಕಾಯಿತು. ಈ ಪ್ರಿಂಟೆಡ್ ಸೀರೆಯಲ್ಲಿ ವಾಯುಪಡೆಯ ಯೋಧರು ಮತ್ತು ವಾಯುದಾಳಿಗೆ ಬಳಸ ಲಾಗಿರುವಂತಹ ಮಿರಾಜ್ ಸಹಿತ ಯುದ್ಧ ವಿಮಾನಗಳನ್ನು ತೋರಿಸಲಾಗಿದೆ.

ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವೂ ಈ ಸೀರೆಯಲ್ಲಿದೆ.

ಡಿಸೈನರ್ ಬಗ್ಗೆ…

ಡಿಸೈನರ್ ಬಗ್ಗೆ…

ಈ ವಿಭಿನ್ನ ಸೀರೆಯನ್ನು ವಿನ್ಯಾಸ ಮಾಡಿದವರು ಡಿಸೈನರ್ ಮನಿಷ್ ಅಗರ್ವಾಲ್. ಅವರು ತನ್ನ ಪಂಡೆಸರಾ ಜಿಐಡಿಸಿಯಲ್ಲಿರುವ ಫ್ಯಾಕ್ಟರಿಯಲ್ಲಿ ಈ ಡಿಸೈನರ್ ಸೀರೆಗಳನ್ನು ತಯಾರಿ ಮಾಡುವರು. ಸೇನೆಯ ಥೀಮ್ ನ್ನು ಒಳಗೊಂಡಿರು ವಂತಹ ಐದು ಸೀರೆಗಳನ್ನು ಅವರು ವಿನ್ಯಾಸ ಮಾಡಿದ್ದಾರೆ ಮತ್ತು ಇದರಲ್ಲಿ ವಿಶೇಷವಾಗಿ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೂಡ ಸೀರೆಯನ್ನು ವಿನ್ಯಾಸ ಮಾಡಲಾಗಿದೆ ಎಂದು ವರದಿಗಳು ಹೇಳಿವೆ.

 ಸೇನೆಯ ಚಿತ್ರಗಳಿರುವ ಸೀರೆಗಳಿಗೆ ಭಾರೀ ಬೇಡಿಕೆ

ಸೇನೆಯ ಚಿತ್ರಗಳಿರುವ ಸೀರೆಗಳಿಗೆ ಭಾರೀ ಬೇಡಿಕೆ

ಮನಿಷ್ ಅಗರ್ವಾಲ್ ಅವರು ಹೇಳುವ ಪ್ರಕಾರ ಸೇನೆಯ ಚಿತ್ರಗಳು ಇರುವಂತಹ ಸುಮಾರು 10 ಸಾವಿರ ಸೀರೆಗಳನ್ನು ಈಗಾಗಲೇ ದೇಶದ ವಿವಿಧ ಭಾಗಗಳಿಗೆ ಕಳುಹಿಸಿಕೊಡಲಾಗಿದೆ. ದೆಹಲಿ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಇದು ಹೆಚ್ಚು ಬೇಡಿಕೆ ಪಡೆದಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ಈ ವಿನ್ಯಾಸದ ಹಿಂದಿರುವ ಸಂಪೂರ್ಣ ಆಲೋಚನೆ

ಈ ವಿನ್ಯಾಸದ ಹಿಂದಿರುವ ಸಂಪೂರ್ಣ ಆಲೋಚನೆ

ಜನರ ಭಾವನೆಗಳನ್ನು ಸೀರೆಗಳಲ್ಲಿ ವ್ಯಕ್ತಪಡಿಸುವುದು ತುಂಬಾ ವಿಭಿನ್ನ ಪ್ರಯೋಗವಾಗಿದೆ ಮತ್ತು ಇದನ್ನು ಖರೀದಿಸುವವರು ತುಂಬಾ ಶ್ಲಾಘಿಸಿದ್ದಾರೆ ಎಂದು ವಿನ್ಯಾಸಗಾರರು ತಿಳಿಸಿದ್ದಾರೆ. ಈ ವಿನ್ಯಾಸದಿಂದಾಗಿ ನಮಗೆ ಇನ್ನೂ ಹೆಚ್ಚಿನ ಸೀರೆಗಳಿಗೆ ಬೇಡಿಕೆ ಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

English summary

A Saree That Depicts Balakot Air Strike

India-Pakistan friction has been happening for decades now and the latest Surgical Air Strike that India did in response to the Pulwama terrorist attack in Jammu and Kashmir has been the talk of the world. Now a saree designer from Surat has created a unique saree which depicts the Balakot Air Strike.
X
Desktop Bottom Promotion