For Quick Alerts
ALLOW NOTIFICATIONS  
For Daily Alerts

ಬಾಲಕನ ಕಣ್ಣಿನಲ್ಲಿ ಸಿಲುಕಿದ ಪೆನ್ಸಿಲ್! ಅದೃಷ್ಟವಶಾತ್ ದೃಷ್ಟಿ ಕಳೆದುಕೊಳ್ಳದೇ ಪಾರಾದ

|

ಸಣ್ಣ ಮಕ್ಕಳನ್ನು ನೋಡಿಕೊಳ್ಳುವುದು ತುಂಬಾ ಕಠಿಣ ಕೆಲಸ. ಯಾಕೆಂದರೆ ಪ್ರತಿಯೊಂದು ಕ್ಷಣವೂ ಅವರ ಚಟುವಟಿಕೆ ಮೇಲೆ ನಿಗಾ ಇಡಬೇಕು. ಅವರನ್ನು ಏಕಾಂಗಿಯಾಗಿ ಬಿಟ್ಟರೆ ಆಗ ಏನಾದರೊಂದು ಎಡವಟ್ಟು ಮಾಡಿಕೊಳ್ಳುವರು. ಹೀಗಾಗಿ ಎಚ್ಚರಿಕೆ ಅತೀ ಅಗತ್ಯ. ಮಕ್ಕಳನ್ನು ಯಾವಾಗಲೂ ಚೂಪಾಗಿರುವಂತಹ ವಸ್ತುಗಳು, ಬೆಂಕಿ ಮತ್ತು ನೀರಿನಿಂದ ದೂರವಿಡಬೇಕು. ಈ ಘಟನೆಯಲ್ಲಿ ಮಗುವಿನ ಕೈಯಲ್ಲಿ ಇದ್ದ ಪೆನ್ಸಿಲ್ ಒಂದು ಮಗುವಿನ ಕಣ್ಣಿನ ಒಳಗಡೆ ಹೋಗಿ ಆತ ಅದೃಷ್ಟವಶಾತ್ ದೃಷ್ಟಿ ಕಳೆದುಕೊಳ್ಳದೆ ಇರುವಂತಹ ಘಟನೆಯು ನಡೆದಿದೆ. ಈ ಬಗ್ಗೆ ನೀವು ತುಂಬಾ ವಿವರವಾಗಿ ತಿಳಿಯಿರಿ.

ಚೀನಾದಲ್ಲಿ ಈ ಘಟನೆ ನಡೆದಿದೆ

ಚೀನಾದಲ್ಲಿ ಈ ಘಟನೆ ನಡೆದಿದೆ

ವರದಿಗಳ ಪ್ರಕಾರ ಈ ಘಟನೆಯು ದಕ್ಷಿಣ ಚೀನಾದದಲ್ಲಿ ನಡೆದಿರುವುದು. ಆರು ವರ್ಷದ ಬಾಲಕನ ಕಣ್ಣಿನಲ್ಲಿ ಪೆನ್ಸಿಲ್ ಸಿಲುಕಿಕೊಂಡ ಬಳಿಕ ಶಸ್ತ್ರಚಿಕಿತ್ಸೆ ಮಾಡಿ ಇದನ್ನು ತೆಗೆಯಬೇಕಾಯಿತು.

ಕೈಯಲ್ಲಿ ಪೆನ್ಸಿಲ್ ಹಿಡಿದುಕೊಂಡು ಓಡಾಡುತ್ತಿದ್ದ

ಕೈಯಲ್ಲಿ ಪೆನ್ಸಿಲ್ ಹಿಡಿದುಕೊಂಡು ಓಡಾಡುತ್ತಿದ್ದ

12 ಸೆ.ಮೀ. ಉದ್ದದ ಪೆನ್ಸಿಲ್ ನ್ನು ಹಿಡಿದುಕೊಂಡು ಬಾಲಕನು ಓಡಾಡುತ್ತಿದ್ದ ಎಂದು ವರದಿಗಳು ಹೇಳಿವೆ. ಈ ಘಟನೆಯು ಚೀನಾದ ಜಿಯಾಂಕ್ಸಿ ಪ್ರಾಂತ್ಯದ ಗಾಂಝೌನಲ್ಲಿ ನಡೆದಿರುವುದು.

Most Read: ಈತ ನಾಯಿ ಮಾತ್ರೆ ತಿಂದು ಕ್ಯಾನ್ಸರ್ ರೋಗವನ್ನೇ ಓಡಿಸಿದ!!

ಆದರೆ ಬಾಲಕ ತುಂಬಾ ಅದೃಷ್ಟವಂತ

ಆದರೆ ಬಾಲಕ ತುಂಬಾ ಅದೃಷ್ಟವಂತ

ಎಡಕಣ್ಣಿನ ಬುಡದಲ್ಲಿ ಈ ಪೆನ್ಸಿಲ್ ಸಿಲುಕಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಬಾಲಕನ ದೃಷ್ಟಿಗೆ ಯಾವುದೇ ಹಾನಿ ಆಗದೆ ಇರುವುದು ದೊಡ್ಡ ಅದೃಷ್ಟ ಎಂದು ಅವರು ತಿಳಿಸಿದ್ದಾರೆ. ಕೇವಲ ಒಂದು ಮಿ.ಮೀ.ನಿಂದ ಕಣ್ಣಿನ ಗುಡ್ಡೆಯಿಂದ ಈ ಪೆನ್ಸಿಲ್ ಕೆಳಗೆ ಇತ್ತು.

Most Read: ತಾಯಿಯ ಗರ್ಭದೊಳಗೆ ಮಿದುಳು ಮತ್ತು ಹೃದಯವಿಲ್ಲದಿದ್ದರೂ ಬೆಳವಣಿಗೆ ಹೊಂದುತ್ತಿರುವ ಮಗು

ಪೆನ್ಸಿಲ್ ನ್ನು ಸರ್ಜನ್ ಗಳು ಹೊರತೆಗೆದರು

ಪೆನ್ಸಿಲ್ ನ್ನು ಸರ್ಜನ್ ಗಳು ಹೊರತೆಗೆದರು

ಬಾಲಕನ ಕಣ್ಣಿನ ಗುಡ್ಡೆಗೆ ಹಾನಿಯಾಗುತ್ತಲಿದ್ದರೆ ಆಗ ಇದು ಎಂಡೋಫಾಥಾಮಿಟಿಸ್ ಗೆ ಕಾರಣವಾಗುತ್ತಲಿತ್ತು. ಇದು ಒಂದು ರೀತಿಯ ಬ್ಯಾಕ್ಟೀರಿಯಾ ಸೋಂಕು ಆಗಿದೆ. ಇದರ ಪರಿಣಾಮವಾಗಿ ಕಣ್ಣಿನ ದೃಷ್ಟಿ ಕಳೆದುಕೊಳ್ಳಬಹುದು ಮತ್ತು ಸಂಪೂರ್ಣ ಕಣ್ಣಿಗೆ ಹಾನಿಯಾಗಬಹುದು. ಆದರೆ ಬಾಲಕ ಅದೃಷ್ಟವಂತ ಮತ್ತು ಕಣ್ಣಿನ ದೃಷ್ಟಿ ಕಳೆದುಕೊಳ್ಳಲಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಮಗೆ ಇದರ ಬಗ್ಗೆ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಲು ಮರೆಯಬೇಡಿ.

English summary

A Pencil Got Stuck In A Boy’s Eye Socket!

A 6-year-old boy had been running around with the 12 cm-pencil in his hand at school. Unfortunately, the boy fell on it and the pencil got stuck in his eye socket. Doctors revealed that the boy was really lucky as the pencil had missed his eyeball by 1mm.Managing a child can be quite a task as you need to be watchful about their activities all the time.
X
Desktop Bottom Promotion