For Quick Alerts
ALLOW NOTIFICATIONS  
For Daily Alerts

ಬೆನ್ನ ಮೇಲೆ 14 ಕೆಜಿ ಗಾತ್ರದ ಕ್ಯಾನ್ಸರ್ ಕಾರಕ ಗಡ್ಡೆ

|

ಕ್ಯಾನ್ಸರ್ ಶಬ್ದ ಕೇಳಿದರೆ ತುಂಬಾ ಭೀತಿ ಮೂಡಿಸುವಂತಹ ಪರಿಸ್ಥಿತಿಯು ಬಂದಿದೆ. ಯಾಕೆಂದರೆ ಇಂದಿನ ದಿನಗಳಲ್ಲಿ ಎಷ್ಟೇ ಆರೋಗ್ಯ ವಾಗಿದ್ದರೂ ಕೆಲವೊಂದು ಕ್ಯಾನ್ಸರ್ ಗಳು ದೇಹವನ್ನು ವಕ್ಕರಿಸಿಕೊಂಡು ಬಿಡುತ್ತದೆ. ಇದು ದೇಹದ ಒಳಗಡೆ ದೊಡ್ಡ ಗಡ್ಡೆಯಾಗಿ ಬೆಳೆದು ಅದು ಪ್ರಾಣಹಾನಿಗೂ ಕಾರಣವಾಗುವುದು. ಕ್ಯಾನ್ಸರ್ ಗೆ ಚಿಕಿತ್ಸೆ ಎನ್ನುವುದು ಸತ್ತು ಬದುಕುವುದಕ್ಕೆ ಸಮಾನ ಎಂದು ಅದರ ಚಿಕಿತ್ಸೆಗೆ ಒಳಗಾದವರು ಹೇಳುವರು.

ಇಲ್ಲೊಬ್ಬ ವ್ಯಕ್ತಿಯ ಬೆನ್ನ ಮೇಲೆ ದೊಡ್ಡ ಗಾತ್ರದ ಕ್ಯಾನ್ಸರ್ ಗಡ್ಡೆಯು ಕಾಣಿಸಿಕೊಂಡಿದೆ. ಈ ವ್ಯಕ್ತಿಯ ಬೆನ್ನ ಮೇಲೆ ಹಲವಾರು ವರ್ಷಗಳಿಂದ ಈ ಗಡ್ಡೆಯು ಇತ್ತು. ಆದರೆ ಇದು ಬೆಳೆದು ಬಳಿಕ ಕುತ್ತಿಗೆ ಮತ್ತು ಶ್ವಾಸಕೋಶಕ್ಕೂ ವ್ಯಾಪಿಸಿದೆ. ಕಳೆದ 30 ವರ್ಷಗಳಿಂದ ಟ್ಯಾಂಗ್ ಎನ್ನುವವರು 85x65 ಕ್ಯಾನ್ಸರ್ ಗಡ್ಡೆಯೊಂದಿಗೆ ಬದುಕುತ್ತಾ ಇದ್ದಾರೆ. 68ರ ಹರೆಯದ ಟ್ಯಾಂಗ್ ಅವರು ಈ ಗಡ್ಡೆಯೊಂದಿಗೆ ಕಳೆದ 30 ವರ್ಷಗಳಿಂದ ಬದುಕುತ್ತಿದ್ದಾರೆ.

30 ವರ್ಷಗಳಿಂದ ಅವರು ಇದರೊಂದಿಗೆ ಬದುಕುತ್ತಿದ್ದಾರೆ

30 ವರ್ಷಗಳಿಂದ ಅವರು ಇದರೊಂದಿಗೆ ಬದುಕುತ್ತಿದ್ದಾರೆ

68ರ ಹರೆಯದ ಟ್ಯಾಂಗ್ ಅವರು ಕಳೆದ 30 ವರ್ಷಗಳಿಂದ ಈ ಗಡ್ಡೆಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ಈ ಫೋಟೊಗಳು ಖಂಡಿತವಾಗಿಯೂ ನಿಮಗೆ ಆಘಾತ ನೀಡಬಹುದು

ಈ ಫೋಟೊಗಳು ಖಂಡಿತವಾಗಿಯೂ ನಿಮಗೆ ಆಘಾತ ನೀಡಬಹುದು

ಈ ಪರಿಸ್ಥಿತಿಯ ತುಂಬಾ ಆಘಾತ ನೀಡುವ ಫೋಟೊದಲ್ಲಿ 61ಎಲ್ ಬಿ(14.9 ಕೆಜಿ) ಕ್ಯಾನ್ಸರ್ ಕಾರಕ ಗಡ್ಡೆಯೊಂದಿಗೆ ಅವರು ಬದುಕುತ್ತಿದ್ದರು.

ಅವರು ಇದರಿಂದ ಮುಕ್ತಿ ಪಡೆಯಲು ಬಯಸಿದ್ದರು

ಅವರು ಇದರಿಂದ ಮುಕ್ತಿ ಪಡೆಯಲು ಬಯಸಿದ್ದರು

ಈ ವ್ಯಕ್ತಿಯು ತುಂಬಾ ಬಡವರಾಗಿದ್ದು, ಹಲವಾರು ಆಸ್ಪತ್ರೆಗೆ ಅಳೆದಾಡಿದ್ದಾರೆ ಮತ್ತು ಇದನ್ನು ತೆಗೆಯಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಇದರಲ್ಲಿ ಇರುವಂತಹ ತೊಡಕುಗಳಿಂದಾಗಿ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿವೆ. ಈ ಗಡ್ಡೆಯು ಆ ವ್ಯಕ್ತಿಯ ಶ್ವಾಸಕೋಶ, ಬೆನ್ನುಹುರಿ ಮತ್ತು ಕೆಲವೊಂದು ಮಹತ್ವದ ರಕ್ತನಾಳಗಳಿಗೆ ಹಬ್ಬಿರುವ ಕಾರಣದಿಂದಾಗಿ ಅದರ ಅಪಾಯವು ಹೆಚ್ಚಾಗಿದೆ ಎಂದು ವರದಿಗಳು ಹೇಳಿವೆ.

ಅಂತಿಮವಾಗಿ ಅವರಿಗೆ ಇದರಿಂದ ಪರಿಹಾರ ಸಿಕ್ಕಿದೆ

ಅಂತಿಮವಾಗಿ ಅವರಿಗೆ ಇದರಿಂದ ಪರಿಹಾರ ಸಿಕ್ಕಿದೆ

ಆ ವ್ಯಕ್ತಿಯು ತುಂಬಾ ರಕ್ತಸ್ರಾವದಿಂದ ಬಳಲಿದರೂ ಈ ಶಸ್ತ್ರಚಿಕಿತ್ಸೆ ಮಾತ್ರ ಯಶಸ್ವಿಯಾಗಿದೆ. ಅನುವಂಶಿಯವಾಗಿ ಬರುವಂತಹ ನ್ಯೂರೋಫಿಬ್ರೊಮಾಟೋಸಿಸ್ ನಿಂದಾಗಿ ಈ ಪರಿಸ್ಥಿತಿಯುಬಂದಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಶಸ್ತ್ರಚಿಕಿತ್ಸೆಗೆ ಸುಮಾರು 33 ಗಂಟೆಗಳು ಬೇಕಾದವು ಮತ್ತು ಇದರಲ್ಲಿ ನೂರಕ್ಕೂ ಅಧಿಕ ಸರ್ಜನ್ ಗಳು ಭಾಗವಹಿಸಿದ್ದರು. ಈ ವ್ಯಕ್ತಿಯು ಸಾಮಾನ್ಯ ಜೀವನ ನಡೆಸುವಂತಾಗಲಿ ಎಂದು ನಾವೆಲ್ಲರೂ ಹಾರೈಸುವ. ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಟೈಪ್ ಮಾಡಿಬಿಡಿ.

English summary

A Cancerous Tumour Engulfed His Back

A man named 'Mr Tang' had been living with the 85x65 cm tumour mass for more than 30 years. It is reported that numerous hospitals have been refusing to operate him as the procedure was too risky. The man finally got relief recently when doctors finally agreed to help him and he went under the knife.
X
Desktop Bottom Promotion