ಉತ್ತಮ ದಾಂಪತ್ಯಕ್ಕೆ ಹೊಂದಾಣಿಕೆಯಾಗಬಲ್ಲ ರಾಶಿಚಕ್ರಗಳು

Posted By: Divya Pandit
Subscribe to Boldsky

ದಾಂಪತ್ಯ ಎನ್ನುವುದು ಮಧುರವಾದ ಬಂಧನ. ಈ ಬಂಧನವು ಜೀವನಪರ್ಯಂತ ಸುಖಕರವಾಗಿ ಹಾಗೂ ಸಂತೋಷಕರವಾಗಿ ಇರಬೇಕೆಂದರೆ ಪತಿ ಪತ್ನಿಯರ ನಡುವೆ ಸೂಕ್ತ ರೀತಿಯ ಹೊಂದಾಣಿಕೆ ಇರಬೇಕು. ಹಾಗೊಮ್ಮೆ ಹೊಂದಾಣಿಕೆ, ಸಹಕಾರ ಪ್ರೀತಿ, ವಾತ್ಸಲ್ಯದ ಕೊರತೆಯಿದೆ ಎಂದರೆ ಆ ಸಂಬಂಧ ಪರಿಪೂರ್ಣತೆ ಕಾಣಲು ಸಾಧ್ಯವಿಲ್ಲ. ಬದಲಿಗೆ ಜೀವನದ ಬಗ್ಗೆ ಬೇಸರ ಮತ್ತು ತಾತ್ಸಾರದ ಭಾವನೆ ಮೂಡುವುದು. ಈ ಸುಮಧುರವಾದ ಬಾಂಧವ್ಯ ನಮಗೆ ಸಂತೋಷವನ್ನು ನೀಡಬೇಕು ಎಂದರೆ ನಮ್ಮ ಕುಂಡಲಿಯ ಹೊಂದಾಣಿಕೆ ಹಾಗೂ ರಾಶಿ ಚಕ್ರದ ಬೆಸುಗೆ ಸಮಂಜಸವಾಗಿ ಇರಬೇಕು.

ಸಂಪ್ರದಾಯದ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಹಿಂದೂಗಳು ವಿವಾಹದ ವಿಚಾರದಲ್ಲಿ ಮೊದಲು ವಧು-ವರರ ಕುಂಡಲಿ ಹಾಗೂ ರಾಶಿಚಕ್ರದ ಹೊಂದಾಣಿಕೆಯಾಗುವುದೇ ಎಂದು ನೋಡುತ್ತಾರೆ. ಹಾಗೊಮ್ಮೆ ಪೂರಕವಾಗಿಲ್ಲ ಅಥವಾ ಹೊಂದಾಣಿಕೆಯ ಲಕ್ಷಣಗಳಿಲ್ಲ ಎಂದಾದರೆ ಆ ವಿವಾಹವನ್ನು ಮುಂದುವರಿಸುವುದಿಲ್ಲ. ಆದರೆ ಇತ್ತೀಚೆಗೆ ಆಧುನಿಕತೆಯ ಹಿನ್ನೆಲೆಯಲ್ಲಿ ಅನೇಕರು ಕುಂಡಲಿ, ರಾಶಿಚಕ್ರದ ಹೊಂದಾಣಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿಯೇ ವಿಚ್ಛೇದನಗಳ ಸಂಖ್ಯೆಯು ಹೆಚ್ಚುತ್ತಿದೆ.

ಯಾವ ವಧು-ವರರ ಕುಂಡಲಿ ಮತ್ತು ಜಾತಕ ಉತ್ತಮ ಗುಣಗಳೊಂದಿಗೆ ಹೊಂದಾಣಿಕೆ ಕಾಣುತ್ತವೆಯೋ ಅಂತಹವರು ಉತ್ತಮ ದಾಂಪತ್ಯ ನಡೆಸುತ್ತಾರೆ. ಜೊತೆಗೆ ಸಮಾಜದಲ್ಲಿ ಮಾದರಿ ಸಂಸಾರ ಆಗುವುದರಲ್ಲೂ ಯಾವುದೇ ಸಂದೇಹವಿಲ್ಲ ಎನ್ನಲಾಗುವುದು. ವಿವಾಹದ ಮುಂಚೆ ನೋಡಬೇಕಾದ ರಾಶಿಚಕ್ರದ ಹೊಂದಾಣಿಕೆಯಲ್ಲಿ ಯಾವೆಲ್ಲಾ ರಾಶಿಚಕ್ರವು ಉತ್ತಮ ಸಾಮರಸ್ಯವನ್ನು ಪಡೆದುಕೊಳ್ಳುತ್ತದೆ ಅಥವಾ ಹೊಂದಾಣಿಕೆಯಾಗುತ್ತದೆ ಎನ್ನುವುದನ್ನು ತಿಳಿಯಲು ಈ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಸಂತೋಷ ಕುಟುಂಬದ ರಹಸ್ಯ:

ಸಂತೋಷ ಕುಟುಂಬದ ರಹಸ್ಯ:

ಒಂದು ಕುಟುಂಬದ ಸದಸ್ಯರು ಪರಸ್ಪರ ಸಂತೋಷ, ಸಹಕಾರ ಮತ್ತು ಪ್ರೀತಿ ಸ್ನೇಹದಿಂದ ಇರುತ್ತಾರೆ ಎಂದರೆ ಅವರ ರಾಶಿಚಕ್ರದ ಹೊಂದಾಣಿಕೆ ಸೂಕ್ತರೀತಿಯಲ್ಲಿದೆ ಎನ್ನುವುದನ್ನು ನಾವು ಅರಿಯಬಹುದು. ಕುಟುಂಬದವರ ರಾಶಿಚಕ್ರದ ಹೊಂದಾಣಿಕೆ ದುರ್ಬಲವಾಗಿದೆ ಎಂದರೆ ಅವರಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಿರುತ್ತದೆ. ಜೊತೆಗೆ ಸದಸ್ಯರ ನಡುವೆ ಪ್ರೀತಿ ವಿಶ್ವಾಸ ಇರದು.

ಕುಟುಂಬದ ಘರ್ಷಣೆಗೆ ಕಾರಣ:

ಕುಟುಂಬದ ಘರ್ಷಣೆಗೆ ಕಾರಣ:

ಸಂಗಾತಿಯ ನಡುವೆ ಪ್ರತಿಯೊಂದು ವಿಚಾರಕ್ಕೂ ಘರ್ಷಣೆಗಳು ನಡೆಯುತ್ತದೆ. ಪರಸ್ಪರ ಪ್ರೀತಿಯಿಲ್ಲ. ಯಾವ ವಿಚಾರದಲ್ಲೂ ಹೊಂದಾಣಿಕೆಯಿಲ್ಲ ಎಂದಾದರೆ ರಾಶಿ ಚಕ್ರದ ಹೊಂದಾಣಿಕೆಯಿಲ್ಲ ಎಂದು ತಿಳಿಯಬಹುದು. ಸಂಬಂಧದ ಮಧುರತೆಯನ್ನು ಅನುಭವಿಸುವಲ್ಲಿ ವಂಚಿತರಾಗುತ್ತಾರೆ ಎನ್ನಬಹುದು.

ಉತ್ತಮ ರಾಶಿಚ್ರಗಳ ಹೊಂದಾಣಿಕೆ:

ಉತ್ತಮ ರಾಶಿಚ್ರಗಳ ಹೊಂದಾಣಿಕೆ:

ಪ್ರತಿಯೊಂದ ರಾಶಿಚಕ್ರವು ಒಂದೊಂದು ಪ್ರಮುಖ ಚಿಹ್ನೆಗಳನ್ನು ಒಳಗೊಂಡಿರುತ್ತದೆ. ಅವುಗಳನ್ನು ಪ್ರಮುಖವಾಗಿ ಅಗ್ನಿ, ಭೂಮಿ, ಗಾಳಿ ಮತ್ತು ನೀರು ಎಂದು ವಿಂಗಡಿಸಲಾಗಿದೆ. ಈ ಚಿಹ್ನೆಗೆ ಅನುಗುಣವಾಗಿಯೂ ವಿವಾಹದ ರಾಶಿಚಕ್ರದ ಹೊಂದಾಣಿಕೆಯನ್ನು ನೋಡಬೇಕು. ಇಲ್ಲವಾದರೆ ಉತ್ತಮ ಹೊಂದಾಣಿಕೆ ಇರದು.

ಬೆಂಕಿಯ ಚಿಹ್ನೆ:

ಬೆಂಕಿಯ ಚಿಹ್ನೆ:

ಮೇಷ, ಸಿಂಹ ಮತ್ತು ಧನುರಾಶಿಯು ಬೆಂಕಿಯ ಚಿಹ್ನೆಯನ್ನು ಹೊಂದಿರುತ್ತಾರೆ. ಈ ಚಿಹ್ನೆಯು ಉತ್ತಮ ಉಷ್ಣತೆ ಮತ್ತು ಬೆಳಕಿನ ಸಂಕೇತವಾಗಿರುತ್ತವೆ. ಈ ರಾಶಿಯವರು ಭಾವನಾತ್ಮಕರು, ಆತ್ಮವಿಶ್ವಾಸಿಗಳು, ಕ್ರಿಯಾತ್ಮಕ ವ್ಯಕ್ತಿತ್ವದವರು ಆಗಿರುತ್ತಾರೆ. ಧೈರ್ಯವನ್ನು ಉತ್ತೇಜಿಸುವವರು ಹಾಗೂ ಉತ್ತಮ ಕೆಲಸ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಕುಟುಂಬದ ಪ್ರಮುಖ ನಿರ್ಧಾರವನ್ನು ಕೈಗೊಳ್ಳುವಂತಹ ಬುದ್ಧಿವಂತಿಕೆ ಇವರಿಗೆ ನೈಸರ್ಗಿಕವಾಗಿಯೇ ಬಂದಿರುತ್ತದೆ.

ಇವರ ಉತ್ಯಾಹವು ಪ್ರಜ್ಞಾಪೂರ್ವಕವಾಗಿ ಹಾಗೂ ಉತ್ಸಾಹ ಭರಿತವಾಗಿಯೇ ಇರುತ್ತದೆ. ಭಾವೋದ್ರಿಕ್ತರಾಗಬಲ್ಲ ಇವರು ಸ್ವಲ್ಪ ಮಟ್ಟದ ನಾಟಕವನ್ನು ಮಾಡುತ್ತಾರೆ ಎನ್ನಬಹುದು. ಕೆಲವು ವಿಚಾರದಲ್ಲಿ ಉತ್ತಮ ಉತ್ಸಾಹ ಭರಿತರಾಗಿರುತ್ತಾರೆ.

ಭೂಮಿ ಚಿಹ್ನೆ :

ಭೂಮಿ ಚಿಹ್ನೆ :

ವೃಷಭ, ಕನ್ಯಾ ಮತ್ತು ಮಕರ ರಾಶಿಯವರ ಚಿಹ್ನೆ ಭೂಮಿಯಾಗಿರುತ್ತದೆ. ಇವರು ಬೆಂಕಿ ಮತ್ತು ಗಾಳಿಯ ಚಿಹ್ನೆಗಿಂತ ವಿಭಿಹ್ನವಾಗಿರುತ್ತಾರೆ. ಸದಾ ಬದಲಾವಣೆಯನ್ನು ಇವರು ಇಷ್ಟಪಡುತ್ತಾರೆ. ಇವರು ಬಹಳ ಸಂಘಟಿತ ವ್ಯಕ್ತಿಗಳೂ ಆಗಿರುತ್ತಾರೆ. ಭೌತಿಕವಾಗಿ ಭೂಮಿಯ ಗುಣವನ್ನು ಇವರು ಹೊಂದಿರುತ್ತಾರೆ ಎಂದು ಸಹ ಹೇಳಲಾಗುತ್ತದೆ. ಭಾವನಾತ್ಮಕ ಸ್ಥಿರತೆಯನ್ನು ಹೊಂದಿರುತ್ತಾರೆ. ಇವರು ಹಣದ ಬಗ್ಗೆ ಚಿಂತೆ ಅಥವಾ ನಾಟಕ ಮಾಡುವುದರಿಂದ ಮುಕ್ತರಾಗಿರುತ್ತಾರೆ.

ಗಾಳಿ ಚಿಹ್ನೆ:

ಗಾಳಿ ಚಿಹ್ನೆ:

ಮಿಥುನ, ತುಲಾ ಮತ್ತು ಕುಂಬ ರಾಶಿಯವರ ಚಿಹ್ನೆ ಗಾಳಿ. ಇವರು ಸ್ವತಂತ್ರರಾಗಿರುವುದು ಮತ್ತು ಸ್ವಾಭಾವಿಕವಾಗಿ ಮುಕ್ತ ಮನಸ್ಸಿನವರಾಗಿರುತ್ತಾರೆ. ಇವರಿಗೆ ನಿರ್ಬಂಧ ಹೇರುವುದು ಇಷ್ಟ ಇರುವುದಿಲ್ಲ. ವಿಶಾಲವಾದ ಚಿಂತನೆಯನ್ನು ಹೊಂದುವುದು ಇವರಿಗೆ ಇಷ್ಟವಾಗುತ್ತದೆ. ಸ್ವಾಭಾವಿಕವಾಗಿ ನಿಷ್ಪಕ್ಷಪಾತರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಕುಟುಂಬದ ಮಧ್ಯವರ್ತಿ ವ್ಯಕ್ತಿಗಳಾಗಿರುತ್ತಾರೆ.

ನೀರಿನ ಚಿಹ್ನೆ:

ನೀರಿನ ಚಿಹ್ನೆ:

ವೃಶ್ಚಿಕ, ಕರ್ಕ ಮತ್ತು ಮೀನ ರಾಶಿಯವರು ನೀರಿನ ಚಿಹ್ನೆಯನ್ನು ಹೊಂದಿರುತ್ತಾರೆ. ಇವರು ಭಾವನಾತ್ಮಕವಾಗಿ, ಅರ್ಥಗರ್ಭಿತವಾಗಿ ಮತ್ತು ಆಲೋಚನಾ ಶೀಲರಾಗಿರುತ್ತಾರೆ. ಅತ್ಯಂತ ಸಹನಾಶೀಲರಾಗಿರುತ್ತಾರೆ. ತಮ್ಮ ಅವಶ್ಯಕತೆಗಳನ್ನು ತಮ್ಮದೇ ಆದ ರೀತಿಯಲ್ಲಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಗಮನಾರ್ಹವಾದ ವ್ಯಕ್ತಿತ್ವದವರು. ಇವರು ಶಾಂತಿ ಮತ್ತು ಪ್ರೀತಿಯಿಂದ ವರ್ತಿಸುತ್ತಾರೆ.

 ವಿವಾಹಕ್ಕೆ ಹೊಂದಿಕೆಯಾಗುವ ರಾಶಿಚಕ್ರಗಳು:

ವಿವಾಹಕ್ಕೆ ಹೊಂದಿಕೆಯಾಗುವ ರಾಶಿಚಕ್ರಗಳು:

ಈ ನಾಲ್ಕು ಚಿಹ್ನೆಗಳನ್ನು ಒಳಗೊಂಡಿರುವ ರಾಶಿಚಕ್ರದವರು ಉತ್ತಮ ಹೊಂದಾಣಿಕೆಯನ್ನು ಹೊಂದಿರುತ್ತಾರೆ. ಯಾವ ರಾಶಿಚಕ್ರದವರು ಉತ್ತಮ ಹೊಂದಾಣಿಕೆ ಹೊಂದಿರುತ್ತಾರೆ ಎನ್ನುವುದನ್ನು ತಿಳಿಯೋಣ ಬನ್ನಿ.

ಗಾಳಿ ಮತ್ತು ಬೆಂಕಿ:

ಗಾಳಿ ಮತ್ತು ಬೆಂಕಿ:

ಈ ಚಿಹ್ನೆಯನ್ನು ಹೊಂದಿರುವ ರಾಶಿಚಕ್ರದವರು ಉತ್ತಮ ಹೊಂದಾಣಿಕೆಯನ್ನು ಸೂಚಿಸುತ್ತದೆ. ಈ ಚಿಹ್ನೆಯವರು ವಿವಾಹವಾದರೆ ಉತ್ಸಾಹ ಭರಿತ, ವಿನೋದ, ಪ್ರೀತಿ, ಸಂಯೋಜನೆ ಮತ್ತು ಉತ್ಸಾಹ ಭರಿತರಾಗಿ ಇರುತ್ತಾರೆ. ಇವರು ಪರಸ್ಪರ ನಿರ್ಣಯ ಮತ್ತು ವಿಶ್ವಾಸವನ್ನು ಹೊಂದಿರುತ್ತಾರೆ. ಇಬ್ಬರಲ್ಲೂ ನಂಬಿಕೆ ಪ್ರೋತ್ಸಾಹದ ಗುಣವಿರುತ್ತದೆ.

ಗಾಳಿ ಮತ್ತು ಬೆಂಕಿ: ಭಾಗ -೨

ಗಾಳಿ ಮತ್ತು ಬೆಂಕಿ: ಭಾಗ -೨

ಗಾಳಿ ಮತ್ತು ಬೆಂಕಿ ವಿರುದ್ಧವಾದ ದಾರಿಯ ಚಿಹ್ನೆ ಎನಿಸಬಹುದು. ಆದರೆ ಬೆಂಕಿ ಮತ್ತು ಗಾಳಿ ಭಾವೋದ್ರಿಕ್ತ ಮನೋಧರ್ಮವನ್ನು ಅಗಾಧವಾಗಿ ಇರುವುದನ್ನು ಕಾಣಬಹುದು. ಇವರ ನಡುವೆ ಸುಲಭವಾದ ಹೊಂದಾಣಿಕೆಯನ್ನು ಕಾಣಬಹುದು.

ಬೆಂಕಿ ಮತ್ತು ನೀರು:

ಬೆಂಕಿ ಮತ್ತು ನೀರು:

ಬೆಂಕಿ ಮತ್ತು ನೀರಿನ ಚಿಹ್ನೆ ಹೊಂದಿರುವ ವ್ಯಕ್ತಿಗಳು ಭಾವೋದ್ರಿಕ್ತ ಮತ್ತು ಭಾಷ್ಪಶೀಲ, ಅನಿಯಮಿತ ನಡವಳಿಕೆಗೆ ಒಳಗಾಗುತ್ತಾರೆ. ನಿಗೂಢವಾದ ಪ್ರಕೃತಿಯಿಂದ ಬೆಂಕಿಯ ಚಿಹ್ನೆಯನ್ನು ಗೊಂದಲಕ್ಕೆ ಎಡೆಮಾಡುವುದು. ಇವರು ಜೀವನದಲ್ಲಿ ಉತ್ತಮ ಹೊಂದಾಣಿಕೆ ಸಾಮಾನ್ಯವಾಗಿರುತ್ತದೆ.

ಬೆಂಕಿ ಮತ್ತು ನೀರು ಭಾಗ-೨:

ಬೆಂಕಿ ಮತ್ತು ನೀರು ಭಾಗ-೨:

ಮೇಷರಾಶಿಯವರು ಮತ್ತು ಕರ್ಕರಾಶಿಯವರ ನಡುವೆ ಉತ್ತಮ ಹೊಂದಾಣಿಕೆ ಉಂಟಾಗುವುದು ಕಷ್ಟವೆಂದು ಹೇಳಬಹುದು. ಬೆಂಕಿಯ ಚಿಹ್ನೆಯವರು ತಮಾಷೆ ಹಾಗೂ ಪೋಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರು ನೀರಿನ ಚಿಹ್ನೆಯವರೊಂದಿಗೆ ಆತ್ಮ ವಿಶ್ವಾಸದಿಂದ ವರ್ತಿಸುತ್ತಾರೆ. ಇವರು ಪರಸ್ಪರ ಪ್ರೀತಿ ವಿಶ್ವಾಸವನ್ನು ತೋರಿಸಿಕೊಳ್ಳುತ್ತಾರೆ.

ಗಾಳಿ ಮತ್ತು ಭೂಮಿ:

ಗಾಳಿ ಮತ್ತು ಭೂಮಿ:

ಈ ಚಿಹ್ನೆಯವರಿಬ್ಬರೂ ಹಾಸ್ಯ ಮತ್ತು ಸೂಕ್ಷ್ಮ ಸಂವೇದನೆಯನ್ನು ವ್ಯಕ್ತಪಡಿಸುತ್ತಾರೆ. ಆದಾಗ್ಯೂ ಪ್ರಾಯೋಗಿಕವಾಗಿ ಉನ್ಮಾದದ ಶಕ್ತಿಯನ್ನು ಹೊಂದಿರುತ್ತಾರೆ. ಇವರ ನಡುವೆ ಉತ್ತಮ ಸಾಮರಸ್ಯ ಇರುವುದು.

ಗಾಳಿ ಮತ್ತು ಭೂಮಿ: ಭಾಗ-೨

ಗಾಳಿ ಮತ್ತು ಭೂಮಿ: ಭಾಗ-೨

ಗಾಳಿ ಚಿಹ್ನೆಯವರು ಉತ್ತಮ ವಿಚಾರಗಳನ್ನು ಒಳಗೊಂಡಿರುತ್ತದೆ. ಭೂಮಿಯು ಸ್ಪಷ್ಟವಾದ ರೀತಿಯಲ್ಲಿ ವರ್ತಿಸುತ್ತಾರೆ. ಸೃಜನಾತ್ಮಕ ರೀತಿಯಲ್ಲಿ ಇವರು ಜೀವಿಸುತ್ತಾರೆ. ಧನಾತ್ಮಕ ರೀತಿಯಲ್ಲಿ ಭೂಮಿ ಗಾಳಿಯ ಬದ್ಧತೆಯನ್ನು ಕಲಿಸುವುದು. ಇವರು ಸ್ವಾಭಾವಿಕವಾಗಿ ಪರಸ್ಪರ ಪ್ರೋತ್ಸಾಹವನ್ನು ನೀಡುತ್ತಾರೆ.

ಗಾಳಿ ಮತ್ತು ಭೂಮಿ:

ಗಾಳಿ ಮತ್ತು ಭೂಮಿ:

ಇವರು ಪರಸ್ಪರ ಸಾಹಸಮಯ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಧನು ರಾಶಿಯವರು ಮಗುವಿನ ಗುಣ ಹಾಗೂ ಕನ್ಯಾರಾಶಿಯವರು ಪೋಷಣೆಯ ಗುಣ ಹೊಂದಿರುವುದರಿಂದ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ.

ಗಾಳಿ ಮತ್ತು ಭೂಮಿ: ಭಾಗ -೨

ಗಾಳಿ ಮತ್ತು ಭೂಮಿ: ಭಾಗ -೨

ಇವರು ಉತ್ತಮ ಸಂಕೇತವನ್ನು ಒಳಗೊಂಡಿವೆ. ಭೂಮಿಯ ಚಿಹ್ನೆಯು ಸ್ಥಿರವಾದ ಪರಿಸರವನ್ನು ಒದಗಿಸುತ್ತದೆ. ಸ್ಥಿರತೆ, ತಾಳ್ಮೆ ಮತ್ತು ಗಮನವನ್ನು ಬೋಧಿಸುವುದರ ಮೂಲಕ ಪರಸ್ಪರ ಸಾಮರ್ಥ್ಯವನ್ನು ಪೂರೈಸುವ ಗುಣವನ್ನು ಹೊಂದಿರುತ್ತಾರೆ.

ಗಾಳಿ ಮತ್ತು ನೀರು:

ಗಾಳಿ ಮತ್ತು ನೀರು:

ಗಾಳಿ ಮತ್ತು ನೀರು ಪರಸ್ಪರ ವಿರುದ್ಧ ಅಂಶವಾಗಿದೆ. ವಾಯು ಚಿಹ್ನೆಯು ತಾರ್ಕಿಕ ಮತ್ತು ಮೌಖಿಕವಾಗಿರುತ್ತವೆ. ನೀರಿನ ಚಿಹ್ನೆಯವರು ಅಂತರ್ಬೋಧನೆಯ ಮತ್ತು ಭಾವನಾತ್ಮಕ ಗುಣವನ್ನು ಹೊಂದಿರುತ್ತಾರೆ. ವೃಶ್ಚಿಕ ರಾಶಿಯವರು ಪೋಷಕ ಗುಣವನ್ನು ಒಳಗೊಂಡಿರುತ್ತಾರೆ. ಇವರು ಪರಸ್ಪರ ಹೊಂದಾಣಿಕೆ ಮತ್ತು ಉತ್ತಮ ಗುಣವನ್ನು ಹೊಂದಿರುತ್ತಾರೆ.

ಗಾಳಿ ಮತ್ತು ನೀರು: ಭಾಗ-೨

ಗಾಳಿ ಮತ್ತು ನೀರು: ಭಾಗ-೨

ಈ ಚಿಹ್ನೆಯವರು ಪರಸ್ಪರ ಪ್ರಯೋಜನಕಾರಿ ಮತ್ತು ಸಮತೋಲನದ ಪ್ರಭಾವ ಬೀರುವರು. ಗಾಳಿ ಚಿಹ್ನೆಯವರು ತಮ್ಮ ಭಾವನೆಯಲ್ಲಿ ವಸ್ತು ನಿಷ್ಠತೆಯನ್ನು ಹೊಂದಿರುತ್ತಾರೆ. ಈ ಚಿಹ್ನೆಯವರು ಎಲ್ಲಾ ಬಗೆಯ ಭಾವನೆಯನ್ನು ಪರಸ್ಪರ ಪ್ರೋತ್ಸಾಹ ಮತ್ತು ಹೊಂದಾಣಿಕೆಯನ್ನು ತೋರಿಸಿಕೊಳ್ಳುತ್ತಾರೆ.

English summary

Zodiac Signs That Make The Best Families |

Zodiac Signs That Make The Best Families
Story first published: Thursday, January 11, 2018, 15:00 [IST]