For Quick Alerts
ALLOW NOTIFICATIONS  
For Daily Alerts

ಶಿಕ್ಷಕರ ದಿನಾಚರಣೆ 2019: ಹೋಮ್ ವರ್ಕ್ ಮಾಡದ ಆ ಬಾಲ್ಯದ ದಿನಗಳನ್ನು ನಮಗೆ ನೆನಪಿಸುವ ಶಾಲೆಯ ದಿನಗಳು

|

ನಮ್ಮ ಜೀವನ ಉತ್ತಮವಾಗಿ ರೂಪುಗೊಳ್ಳಲು ಶಿಕ್ಷಕರ ಪಾತ್ರ ಅತ್ಯಂತ ಹಿರಿದಾದುದು. ಪ್ರಾಥಮಿಕದಿಂದ ಹಿಡಿದು ನಮ್ಮ ಉನ್ನತ ಪದವಿಯವರೆಗೆ ಶಿಕ್ಷಕರು ನಮಗೆ ಮಾರ್ಗದರ್ಶಿಗಳಾಗುತ್ತಾರೆ. ನಾವು ಚಿಕ್ಕಮಕ್ಕಳಿರುವಾಗ ತಾಯಿ ಹೇಗೆ ನಮ್ಮ ಮೊದಲ ಗುರುವಾಗಿರುತ್ತಾರೋ ಹಾಗೆಯೇ ಬುದ್ಧಿ ಬಂದು ನಮ್ಮನ್ನು ಶಾಲೆಗೆ ಹಾಕಿದ ನಂತರದಿಂದ ಅಲ್ಲಿರುವ ಗುರುಗಳೇ ನಮ್ಮ ಭವಿಷ್ಯವನ್ನು ರೂಪಿಸುವ ಪ್ರಮುಖ ಹರಿಕಾರರಾಗಿರುತ್ತಾರೆ. ದಂಡಂ ದಶಗುಣಂ ಎಂಬ ಮಂತ್ರವನ್ನು ನಮ್ಮ ಮೇಲೆ ಪ್ರಯೋಗಿಸಿ ಕಲ್ಲಾಗಿದ್ದ ನಮ್ಮನ್ನು ಶಿಲೆಯಾಗಿ ರೂಪಿಸುತ್ತಾರೆ. ಪೆಟ್ಟು ತಿಂದಾಗ ಹೇಗೆ ಒಂದು ಕಲ್ಲು ಸುಂದರ ಶಿಲೆಯಾಗಿ ರೂಪುಗೊಳ್ಳುತ್ತದೆಯೋ ಅಂತೆಯೇ ನಮ್ಮ ಜೀವನವನ್ನು ಶಿಕ್ಷಕರು ಜ್ಞಾನವೆಂಬ ಪೆಟ್ಟು ಕೊಟ್ಟು ಸುಂದರ ಶಿಲೆಯಾಗಿ ರೂಪುಗೊಳಿಸುತ್ತಾರೆ.

Teachers day

ನಮ್ಮ ಶಿಕ್ಷಣದ ದಿನಗಳಲ್ಲಿ ಅಂದರೆ ಶಾಲೆಯ ದಿನಗಳಲ್ಲಿ ನಾವು ಆಡಿದ ತುಂಟಾಟ ಶಿಕ್ಷಕರಿಗೆ ಮಾಡುತ್ತಿದ್ದ ಕೀಟಲೆಗಳು, ಸಹಪಾಠಿಗಳೊಂದಿಗೆ ಆಡುತ್ತಿದ್ದ ಆಟ ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮ್ಮ ಬಾಲ್ಯದ ದಿನಗಳಲ್ಲಿ ಶಾಲಾ ದಿನವೂ ಸುಂದರ ಸ್ಮರಣೆಯಾಗಿ ನಿಂತಿದೆ ಎಂದೆನ್ನಬಹುದು. ಶಾಲೆಗೆ ತಡವಾಗಿ ಹೋಗಿ ಬೇರೆ ಬೇರೆ ಕಾರಣಗಳನ್ನು ನೀಡುತ್ತಿದ್ದುದು, ಶಾಲಾ ಕಾರ್ಯಗಳನ್ನು ಸರಿಯಾಗಿ ಮಾಡದೆಯೇ ಶಿಕ್ಷಕರಿಗೆ ಹೇಳುತ್ತಿದ್ದ ಬೇರೆ ಬೇರೆ ಕಾರಣಗಳು, ತರಗತಿಯಿಂದ ಹೊರಗೆ ಹಾಕಿಸಿಕೊಂಡಿದ್ದು, ಬಿಸಿಲಿನಲ್ಲಿ ಓಡುವ ಶಿಕ್ಷೆ, ಹೀಗೆ ಆ ದಿನಗಳಲ್ಲಿ ನಾನಾ ಬಗೆಯ ಶಿಕ್ಷೆಗಳು ಇರುತ್ತಿದ್ದರೂ ಅದು ನಮ್ಮ ಜೀವನಕ್ಕೆ ಶಿಸ್ತನ್ನು ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಒಂದು ರೀತಿಯಲ್ಲಿ ನಾವಿಂದು ಈ ನೆಲೆಯಲ್ಲಿದ್ದೇವೆ ಎಂಬುದಕ್ಕೆ ಸಾಕ್ಷಿಯಾಗಿ ಆ ದಿನಗಳು ನಮಗೆ ಇಂದಿಗೂ ಸಿಹಿನೆನಪನ್ನು ಉಣಿಸುತ್ತಿದೆ.

ಈ ದಿನವನ್ನು ಎಂದೆಂದಿಗೂ ಸ್ಮರಣೀಯವಾಗಿ ಇರಿಸಬೇಕು ಎಂಬ ಕಾರಣಕ್ಕಾಗಿ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತದೆ. ಈ ದಿನದ ನಮ್ಮ ಬಾಲ್ಯದ ನೆನೆಪು ಎಂದೆಂದಿಗೂ ಸ್ಮರಣೀಯಾಗಿರುವಂತಹದ್ದು ಮತ್ತು ಅದನ್ನು ಎಂದಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ. 2019ನೇ ಸಾಲಿನ ಈ ಇಂದಿನ ವಿಶೇಷ ದಿನದಲ್ಲಿ ನಾವು ಸಾಮಾನ್ಯವಾಗಿ ಶಾಲಾ ಕೆಲಸಗಳನ್ನು ಮಾಡದೇ ಇದ್ದ ಸಂದರ್ಭದಲ್ಲಿ ನೀಡುತ್ತಿದ್ದ ವಿನಾಯಿತಿಗಳೇನು ಎಂಬುದನ್ನು ನೋಡೋಣ ನಕ್ಕು ನಲಿಯೋಣ...

ಬಾಲ್ಯದ ನೆನಪುಗಳು ಅಜರಾಮರ

ಬಾಲ್ಯದ ನೆನಪುಗಳು ಅಜರಾಮರ

ನೀವು ದೇಶದ ಇನ್ನತ ಐಟಿ ಸಂಸ್ಥೆಯ ಭಾಗವಾಗಿದ್ದೀರಿ ಇಲ್ಲವೇ ಎಮ್‌ಎನ್‌ಸಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೀರಿ ಚೆನ್ನಾಗಿ ಸಂಪಾದನೆ ಕೂಡ ನೀವು ಮಾಡುತ್ತಿದ್ದೀರಿ. ಜೀವನ ಉತ್ತಮವಾಗಿ ನಡೆಯುತ್ತಿದೆ ಮತ್ತು ಪ್ರತೀ ದಿನ ನಾವು ಏನನ್ನಾದರೂ ಹೊಸತನ್ನು ಕಲಿಯುತ್ತಿದ್ದೇವೆ. ಅದಾಗ್ಯೂ ನಮ್ಮ ಜೀವನದ ಯಾವುದೇ ಒಂದು ಭಾಗದಲ್ಲಿ ನಾವು ಬಾಲ್ಯದ ದಿನಗಳನ್ನು ಸ್ಮರಸಿಕೊಳ್ಳುತ್ತೇವೆ. ಹೋಮ್‌ವರ್ಕ್ ಎನ್ನುವುದು ನಮ್ಮ ಜೀವನದ ಒಂದು ಮುಖ್ಯಭಾಗವಾಗಿರುತ್ತದೆ ಇಲ್ಲದಿದ್ದರೆ ಗುರುಗಳಿಂದ ಶಿಕ್ಷೆ ಖಂಡಿತ ಎಂಬುದು ನಮಗೆ ತಿಳಿದಿರುತ್ತದೆ.ಶಿಕ್ಷೆಯನ್ನು ಪಡೆದುಕೊಳ್ಳಲೇ ಇರಲು ನಾವು ಕಣ್ಣೀರು ಸುರಿಸಿದ್ದೂ ಇದೆ ಅಂತೆಯೇ ಮುಖವನ್ನು ಬಡವಾಗಿಸಿಕೊಂಡು ಶಿಕ್ಷಕರ ಮುಂದೆ ನಿಂತಿದ್ದೂ ಇದೆ. ಅದನ್ನೆಲ್ಲಾ ಈಗ ನೆನೆಯುವಾಗ ಕಿರುನಗೆ ಮುಖದಲ್ಲಿ ಮೂಡುತ್ತದೆ. ಹಾಗಿದ್ದರೆ ಆ ಹಾಸ್ಯಮಯವಾಗಿರುವ ಕ್ಷಣಗಳನ್ನು ಇಂದಿಲ್ಲಿ ಪುನಃ ಸ್ಮರಿಸಿಕೊಳ್ಳೋಣ.

ತರಗತಿಯಲ್ಲಿ ಲ್ಯಾಪ್‌ಟಾಪ್ ಚಾರ್ಜರ್ ಮರೆತಿದ್ದು

ತರಗತಿಯಲ್ಲಿ ಲ್ಯಾಪ್‌ಟಾಪ್ ಚಾರ್ಜರ್ ಮರೆತಿದ್ದು

ನಿನ್ನೆ ದಿನ ತರಗತಿಯಲ್ಲೇ ಲ್ಯಾಪ್‌ಟಾಪ್ ಚಾರ್ಜರ್ ಅನ್ನು ನಾನು ಮರೆತಿದ್ದೆ ಮತ್ತು ಲ್ಯಾಪ್‌ಟಾಪ್‌ನಲ್ಲಿ ಬ್ಯಾಟರಿ ಖಾಲಿಯಾಗಿತ್ತು. ನಾನು ಕೆಲಸ ಮಾಡುತ್ತಿದ್ದಾಗಲೇ ಬ್ಯಾಟರಿ ಅರ್ಧದಲ್ಲಿ ಖಾಲಿಯಾಯಿತು. ನನ್ನ ಸಹಪಾಠಿಯ ಬಳಿ ಲ್ಯಾಪ್‌ಟಾಪ್ ಇತ್ತು ಆದರೆ ಆತ ರಜಾದಲ್ಲಿ ಇದ್ದ ಕಾರಣ ನನಗೆ ಲ್ಯಾಪ್‌ಟಾಪ್ ತೆಗೆದುಕೊಳ್ಳಲು ಆಗಲಿಲ್ಲ.

ಪುಸ್ತಕ ಒದ್ದೆಯಾಯಿತು!

ಪುಸ್ತಕ ಒದ್ದೆಯಾಯಿತು!

ಶಾಲೆಗೆ ಬರುತ್ತಿದ್ದ ಸಂದರ್ಭದಲ್ಲಿ ಮಳೆಗೆ ಸಿಕ್ಕಿಹಾಕಿಕೊಂಡೆ. ಸಿಕ್ಕಾಪಟ್ಟೆ ಮಳೆಯಾದ ಕಾರಣ ಸೈಕಲ್ ಅನ್ನು ಜೋರಾಗಿಯೇ ಮೆಟ್ಟುತ್ತಿದೆ ನನ್ನ ಬೆನ್ನ ಮೇಲಿದ್ದ ಬ್ಯಾಗ್ ಒದ್ದೆಯಾಯಿತು ಮತ್ತು ಜೊತೆಗೆ ನೋಟ್‌ಬುಕ್ ಕೂಡ ಒದ್ದೆಯಾಯಿತು. ಹೀಗೆ ಬೇರೆ ಬೇರೆ ಉತ್ತರಗಳನ್ನು ನಾವು ಕೊಡುತ್ತೇವೆ.

ನನ್ನ ಸ್ನೇಹಿತ ನನ್ನ ಪುಸ್ತಕ ತೆಗೆದುಕೊಂಡು ಹೋಗಿದ್ದ

ನನ್ನ ಸ್ನೇಹಿತ ನನ್ನ ಪುಸ್ತಕ ತೆಗೆದುಕೊಂಡು ಹೋಗಿದ್ದ

ನನ್ನ ನೆರೆಹೊರೆಯಲ್ಲಿರುವಾತ ನನ್ನ ಸ್ನೇಹಿತನಾಗಿದ್ದು ಅವನು ಅನಾರೋಗ್ಯದಿಂದ ಬಳಲುತ್ತಿದ್ದ. ಶಾಲೆಗೆ ಬರಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ. ಹೀಗೆ ಆ ದಿನಗಳ ಹೋಮ್ ವರ್ಕ್ ಮಾಡಲು ನನ್ನ ಪುಸ್ತಕವನ್ನು ತೆಗೆದುಕೊಂಡಿದ್ದ. ಇದರಿಂದ ನಾನು ನನ್ನ ಪುಸ್ತಕವನ್ನು ಆತನಿಗೆ ನೀಡಿ ಅವನ ಹೋಮ್ ವರ್ಕ್ ಮುಗಿಸಲು ಸಹಾಯ ಮಾಡಿದೆ.

ನಮ್ಮ ಮನೆಯ ಸಾಕು ಪ್ರಾಣಿ ಪುಸ್ತಕ ತಿಂದಿತು

ನಮ್ಮ ಮನೆಯ ಸಾಕು ಪ್ರಾಣಿ ಪುಸ್ತಕ ತಿಂದಿತು

ನನ್ನ ಹೋಮ್‌ ವರ್ಕ್ ಮುಗಿಸಿದ ನಂತರ ನನ್ನ ಸ್ನೇಹಿತನೊಂದಿಗೆ ನಾನು ಮಾತನಾಡುತ್ತಿದ್ದೆ. ಅವನು ಯಾವುದೇ ಸಮಸ್ಯೆಯಲ್ಲಿದ್ದ ಮತ್ತು ಅವರ ಸಮಸ್ಯೆಯನ್ನು ಪರಿಹರಿಸುವ ಸ್ಥಿತಿಯಲ್ಲಿ ನಾನಿದ್ದೆ. ಅವನ ಮಾತಿಗೆ ನಾನು ಗಮನ ಹರಿಸಿದ್ದೆ, ಈ ಸಂದರ್ಭದಲ್ಲಿ ನಮ್ಮ ಮನೆಯ ಸಾಕುಪ್ರಾಣಿ ನನ್ನ ಪುಸ್ತಕವನ್ನು ಆಹಾರ ಎಂದು ತಿಂದುಬಿಟ್ಟಿದೆ. ನಾನು ಅದಕ್ಕೆ ಆಹಾರ ನೀಡಲು ತಡಮಾಡಿದೆ ಇದರಿಂದ ನನ್ನ ಪುಸ್ತಕ ಅದಕ್ಕೆ ಬಲಿಯಾಯಿತು.

ನನ್ನ ಪುಸ್ತಕ ನನ್ನ ಸಹೋದರ ಸಹೋದರಿಯ ಕಾಪಿಯೊಂದಿಗೆ ಬದಲಾಗಿದೆ

ನನ್ನ ಪುಸ್ತಕ ನನ್ನ ಸಹೋದರ ಸಹೋದರಿಯ ಕಾಪಿಯೊಂದಿಗೆ ಬದಲಾಗಿದೆ

ನಾನು ಮತ್ತು ನನ್ನ ಸಹೋದರಿ ಜೊತೆಯಾಗಿ ಕುಳಿತು ಹೋಮ್ ವರ್ಕ್ ಮಾಡುತ್ತೇವೆ. ನಾವಿಬ್ಬರೂ ಟ್ವಿನ್ಸ್ ಆಗಿದ್ದು ಬೇರೆ ಬೇರೆ ಶಾಲೆಯಲ್ಲಿ ಓದುತ್ತಿದ್ದೇವೆ. ನಮ್ಮ ಕಾಪಿ ಕವರ್ ಒಂದೇ ಆಗಿದ್ದು, ನಾನು ಆಕೆಯ ಪುಸ್ತಕವನ್ನು ನನ್ನ ಬ್ಯಾಗ್‌ನಲ್ಲೂ ಆಕೆ ನನ್ನ ಪುಸ್ತಕವನ್ನು ಆಕೆಯ ಬ್ಯಾಗ್‌ನಲ್ಲಿ ಹಾಕಿಕೊಂಡು ಶಾಲೆಗೆ ಹೋಗಿದ್ದಾಳೆ.

English summary

Teachers’ day: funny excuses for not completing homework

You might be a part of country’s top IT firm or MNC or a grade A officer in some department, earning well. Life might have evolved a lot, with you undergoing various transformations and learning something new each day. But when it comes to the roots of our learning, we always rewind to those golden days of our childhood. Homework was an inseparable part of our school life which won us either accolades or punishments. From making numerous funny excuses to puppy faces in order to not getting punished, we moved ahead in life and miss that phase now.On this teacher’s day, we bring before you six common funny excuses, which we as students used to present before our teachers for not completing our homework.
X
Desktop Bottom Promotion