For Quick Alerts
ALLOW NOTIFICATIONS  
For Daily Alerts

ಈ ಮಹಿಳೆಯ ಬಾಲ್ಯವನ್ನೇ ನುಂಗಿದ ಜನ್ಮ ಗುರುತು!

|

ಕೆಲವರಲ್ಲಿ ಜನಿಸುವಾಗಲೇ ಕೆಲವೊಂದು ಅನುವಂಶೀಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಇಂತಹ ಕೆಲವು ಆರೋಗ್ಯ ಸಮಸ್ಯೆಗಳ ಬಗ್ಗೆ ಹಲವಾರು ಬಾರಿ ನಾವು ಕೇಳಿದ್ದೇವೆ. ಈ ಲೇಖನದಲ್ಲಿ ಯುವತಿ ಕಿಯಾನ ಸ್ಮಿತ್ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

Her Huge Birthmark On Her Face Ruined Her Childhood!

ಜನಿಸುವಾಗಲೇ ಆಕೆಯ ಮುಖದ ಮೇಲೆ ಇದ್ದ ಗುರುತಿನಿಂದಾಗಿ ಬಾಲ್ಯದಲ್ಲಿ ಆಕೆ ತುಂಬಾ ನೋವನ್ನು ಅನುಭವಿಸಬೇಕಾಗಿ ಬಂತು. ಸ್ಮಿತ್ ಪರಿಸ್ಥಿತಿಯನ್ನು ಪೋರ್ಟ್ ವೈನ್ ಸ್ಟೈನ್ ಎಂದು ಕರೆಯಲಾಗುತ್ತದೆ ಮತ್ತು ಇದು ಅನುವಂಶೀಯವಾಗಿ ಬರುವುದು. ತುಂಬಾ ಅಪರೂಪವಾಗಿರುವ ತನ್ನ ಸಮಸ್ಯೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಬಗೆಹರಿಸಲು ಆಕೆ ಏನು ಮಾಡಿದಳು ಎಂದು ತಿಳಿಯಿರಿ.

ಆಕೆಯನ್ನು 'ಪರ್ಪಲ್ ಪೀಪಲ್ ಈಟರ್' ಎಂದು ಕರೆಯಲಾಗುತ್ತಿತ್ತು

ಆಕೆಯನ್ನು 'ಪರ್ಪಲ್ ಪೀಪಲ್ ಈಟರ್' ಎಂದು ಕರೆಯಲಾಗುತ್ತಿತ್ತು

ಕಿಯಾನ ಸ್ಮಿತ್ ಗೆ ಹುಟ್ಟುವಾಗಲೇ ಕಾಣಿಸಿಕೊಂಡ ಗುರುತು ಆಕೆಯ ಸಂಪೂರ್ಣ ಬಾಲ್ಯವನ್ನು ಬಲಿಪಡೆಯಿತು. ಈ ಗುರುತನ್ನು ಪೋರ್ಟ್ ವೈನ್ ಸ್ಟೈನ್ ಎಂದು ಕರೆಯಲಾಗುತ್ತದೆ. ಈ ಗುರುತಿನಿಂದ ಪ್ರೌಢವಾಸ್ಥೆ ತಲುಪಿದಾಗ ಈ ಗುರುತು ಊದಿಕೊಂಡಿತು ಮತ್ತು ಇದು ದೊಡ್ಡದಾಗುತ್ತಾ ಹೋಯಿತು. ಇದರ ಪರಿಣಾಮವಾಗಿ ಆಕೆಯನ್ನು `ಪರ್ಪಲ್ ಪೀಪಲ್ ಈಟರ್' ಎಂದು ಕರೆಯಲು ಆರಂಭಿಸಿದರು.

Most Read: ಅಪರೂಪದ ಕಾಯಿಲೆ: ಈ ಬಾಲಕನಿಗೆ 6 ವರ್ಷ ಆದರೆ ಮುದುಕನಂತೆ ಕಾಣುತ್ತಾನೆ!

ಪೋರ್ಟ್ ವೈನ್ ಸ್ಟೈನ್ ಬಗ್ಗೆ…

ಪೋರ್ಟ್ ವೈನ್ ಸ್ಟೈನ್ ಬಗ್ಗೆ…

ಸಂಶೋಧನೆಗಳ ಪ್ರಕಾರ ಪೋರ್ಟ್ ವೈನ್ ಸ್ಟೈನ್ ಎನ್ನುವುದು ಜಿನ್ ಗಳಿಂದ ಬರುವುದು ಮತ್ತು ಇದು ಚರ್ಮದಲ್ಲಿ ನೇರಳೆ ಅಥವಾ ಕೆಂಪು ಬಣ್ಣದ ಗುರುತನ್ನು ಉಂಟು ಮಾಡುವುದು. ಇದು ಸಮಯ ಕಳೆದಂತೆ ತುಂಬಾ ಎದ್ದುಕಾಣುವುದು, ಗಾಢವಾಗುವುದು ಮತ್ತು ಬೆಳೆಯುವುದು. ಚರ್ಮದ ಕೆಳಗಡೆ ರಕ್ತನಾಳಗಳು ಅತಿಯಾಗಿ ಬೆಳವಣಿಗೆ ಹೊಂದಿರುವುದೇ ಇದಕ್ಕೆ ಕಾರಣವಾಗಿದೆ. ದೇಹದ ಯಾವುದೇ ಭಾಗದಲ್ಲಿ ಇಂತಹ ಪರಿಸ್ಥಿತಿಯು ಮೂಡಬಹುದು. ಆದರೆ ಶೇ.65ರಷ್ಟು ಜನರಲ್ಲಿ ಇದು ತಲೆ ಅಥವಾ ಕುತ್ತಿಗೆ ಭಾಗದಲ್ಲಿ ಕಾಣಿಸುವುದು.

ಈ ಜನ್ಮಗುರುತು ದೊಡ್ಡದಾಗಿರುವುದು

ಈ ಜನ್ಮಗುರುತು ದೊಡ್ಡದಾಗಿರುವುದು

ಈ ಜನ್ಮ ಗುರುತು ನಿಜವಾಗಿಯೂ ದೊಡ್ಡದಾಗಿರುವುದು ಮತ್ತು ಇದು ಆಕೆಯ ಅರ್ಧ ಮುಖವನ್ನು ಆವರಿಸಿಕೊಂಡಿತ್ತು. ಇದರಲ್ಲಿ ಆಕೆಯ ಕೆಳಭಾಗದ ತುಟಿ ಮತ್ತು ಕುತ್ತಿಗೆಗೆ ಕೂಡ ಇದು ವ್ಯಾಪಿಸಿತ್ತು. ಇದರಿಂದಾಗಿ ಆಕೆಗೆ ಏನಾದರೂ ತಿನ್ನಲು ಮತ್ತು ಸರಿಯಾಗಿ ನೋಡಲು ಆಗುತ್ತಿರಲಿಲ್ಲ. ಸಮಯ ಕಳೆದಂತೆ ಆಕೆಯ ಎಡದ ಕಣ್ಣಿನ ದೃಷ್ಟಿಯಲ್ಲಿಯೂ ಸಮಸ್ಯೆ ಕಾಣಿಸಲು ಆರಂಭಿಸಿತು.

ಆಕೆ ಲೇಸರ್ ಚಿಕಿತ್ಸೆಗೆ ಒಳಗಾದಳು

ಆಕೆ ಲೇಸರ್ ಚಿಕಿತ್ಸೆಗೆ ಒಳಗಾದಳು

ಕಿಯಾನ ಸ್ಮಿತ್ ಈಗ ಲೇಸರ್ ಚಿಕಿತ್ಸೆಗೆ ಒಳಗಾದರೂ ಆಕೆ ಹಲವಾರು ರೀತಿಯ ಶಸ್ತ್ರಚಿಕಿತ್ಸೆ ಕೂಡ ಮಾಡಿಕೊಳ್ಳಬೇಕಾಗಿ ಬಂತು. ಯಾಕೆಂದರೆ ಆಕೆಯ ಅನುವಂಶೀಯ ಗುರುತು ಮತ್ತೆ ಬೆಳೆಯಲು ಆರಂಭಿಸಿತ್ತು.

Most Read: ಮೀನು ಫ್ರೆಶ್ ಆಗಿದೆ ಎಂದು ತೋರಿಸಲು, ಮೀನಿಗೆ ಕೃತಕ ಕಣ್ಣು ಅಂಟಿಸಿ ಮೋಸ ಮಾಡಿದ ವ್ಯಾಪಾರಿ!

ಆಕೆ ವಸ್ಕ್ಯುಲರ್ ಬರ್ತ್ ಮಾರ್ಕ್ ಫೌಂಡೇಶನ್ ಗೆ ರಾಯಭಾರಿ

ಆಕೆ ವಸ್ಕ್ಯುಲರ್ ಬರ್ತ್ ಮಾರ್ಕ್ ಫೌಂಡೇಶನ್ ಗೆ ರಾಯಭಾರಿ

ಆಕೆ ಲೇಸರ್ ಚಿಕಿತ್ಸೆಗೆ ಒಳಗಾದ ಬಳಿಕ ಸಾರ್ವಜನಿಕವಾಗಿ ತುಂಬಾ ಆತ್ಮವಿಶ್ವಾಸದಿಂದ ಮಾತನಾಡುವಳು. ಈಗ ಆಕೆ ವಸ್ಕ್ಯುಲರ್ ಬರ್ತ್ ಮಾರ್ಕ ಫೌಂಡೇಶನ್ ನ ಅಂಬಾಸಿಡರ್ ಆಗಿರುವಳು.

ಆಕೆಯು ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಲಿದೆ ಎಂದು ಬೋಲ್ಡ್ ಸ್ಕೈ ಹಾರೈಸುತ್ತದೆ. ಇಂತಹ ಇನ್ನಷ್ಟು ಕುತೂಹಲಕಾರಿ ಸುದ್ದಿಗಳನ್ನು ಓದಲು ಇದೇ ವಿಭಾಗದಲ್ಲಿ ನೀವು ಯಾವಾಗಲೂ ಕ್ಲಿಕ್ ಮಾಡಿಕೊಳ್ಳಿ.

English summary

Her Huge Birthmark On Her Face Ruined Her Childhood!

There are so many health conditions that we are not aware of, and a few genetic problems are quite shocking. Here, we are sharing the story of a young woman named Kiana Smith whose childhood was ruined due to a birthmark that was right on her face. Kiana Smith's condition is called a port wine stain and is caused by a genetic problem. Check out the story of how she underwent surgeries to get rid of the rare genetic problem.
X
Desktop Bottom Promotion