Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತನ್ನ ಮಾಲಿಕನಲ್ಲಿ ಕ್ಷಮೆ ಯಾಚಿಸುತ್ತಿರುವ ಮುದ್ದು ನಾಯಿ -ವಿಡಿಯೋ ನೋಡಲು ತಪ್ಪಿಸದಿರಿ
ನಾಯಿಯನ್ನು ಸಾಕುಪ್ರಾಣಿಯನ್ನಾಗಿ ಮನೆಯಲ್ಲಿರಿಸಿಕೊಳ್ಳುವುದು ಜೀವನದ ಉತ್ತಮ ನಿರ್ಧಾರಗಳ ಲ್ಲೊಂದಾಗಿದೆ, ವಿಶೇಷವಾಗಿ ಹೆಚ್ಚಿನ ಸಾಕುಪ್ರಾಣಿಪ್ರಿಯರು ನಾಯಿಯನ್ನೇ ಸಾಕುಪ್ರಾಣಿಯಾಗಿ ಆರಿಸಿಕೊಳ್ಳುತ್ತಾರೆ. ನಾಯಿಗಳ ಮುಗ್ಧತೆ, ನಿಯತ್ತು, ಮಾಲಿಕನ ಮಾತನ್ನು ಕೇಳುವ ಜಾಣ್ಮೆ, ಮನೆಗೆ ನೀಡುವ ರಕ್ಷಣೆ ಮೊದಲಾದವುಗಳ ಬಗ್ಗೆ ನೂರಾರು ಕಥೆಗಳಿವೆ.
ಅದರಲ್ಲೂ ಕೆಲವು ಜಾತಿಯ ನಾಯಿಗಳು ತುಂಬಾ ಮುದ್ದಾಗಿದ್ದು ಇವು ತನ್ನ ಮಾಲಿಕನಲ್ಲಿ ತನಗೆ ಬೇಕಾದುದನ್ನು ಬೇಡುವುದನ್ನು ನೋಡಿದಾಗ ಪ್ರೀತಿ ಉಕ್ಕದೇ ಇರಲಾರದು. ಇಂದು, ಬೋಲ್ಡ್ ಸ್ಕೈ ತಂಡ ಇಂತಹ ಒಂದು ಪ್ರೀತಿಯುಕ್ಕಿಸುವ ವೀಡೀಯೋವೊಂದನ್ನು ಪ್ರಸ್ತುತಪಡಿಸುತ್ತಿದ್ದು ತನ್ನ ಮಾಲಿಕನಲ್ಲಿ ಕ್ಷಮೆ ಯಾಚಿಸಿ ಮೆಚ್ಚಿಸಲು ಯತ್ನಿಸುತ್ತಿರುವ ಪರಿ ನಿಮಗೂ ಇಷ್ಟವಾಗಬಹುದು...

ಈ ನಾಯಿಯ ಹೆಸರು ಎಟ್ಟೋರೆ
ಈ ವೀಡಿಯೋ ವೀಕ್ಷಿಸಿದ ಬಳಿಕ ಒಂದು ವೇಳೆ ಆ ಮಾಲಿಕನ ಸ್ಥಾನದಲ್ಲಿ ನೀವಿದ್ದಿದ್ದರೆ ಇಲ್ಲ ಎಂಬ ಉತ್ತರ ನೀಡಲು ನಿಮಗೆ ಸಾಧ್ಯವೇ ಆಗದು ಎಂದು ಬೇಕಾದರೆ ನಾವು ಪಣ ತೊಡುತ್ತೇವೆ. ಲಾಬ್ರಡಾರ್ ತಳಿಯ ಈ ನಾಯಿಯ ಹೆಸರು ಎಟ್ಟೋರೆ. ಈ ನಾಯಿಯ ಮಾಲಿಕ ಆಂತೋನಿ ಫೆಡೆರೆಸಿಯಾ ಗ್ರಾನೈ ಎಂಬುವವರಾಗಿದ್ದು ಇವರ ಹೃದಯ ಗೆಲ್ಲಲು ಈ ನಾಯಿ ಯತ್ನಿಸುತ್ತಿದೆ. ಇದಕ್ಕಾಗಿ ಈ ನಾಯಿ ಬೇಡುತ್ತಿರುವ ಪರಿ ಯಾರ ಹೃದಯವನ್ನೇ ಕರಗಿಸುವಂತಹದ್ದಾಗಿದೆ.

ಮಾಲಿಕರಗೂ ಈ ನಾಯಿ ಅಂದರೆ ಅಚ್ಚುಮೆಚ್ಚು
ಈ ನಾಯಿಯ ಮಾಲಿಕರೂ ಈ ನಾಯಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದು ಈ ನಾಯಿ ಬೇಡುತ್ತಿರುವ ಕ್ಷಮೆ ಹೃದಯದಾಳದಿಂದ ಬಂದಂತೆಯೇ ಅನ್ನಿಸುತ್ತದೆ. ಇಟಲಿಯಿಂದ ಈ ವೀಡಿಯೋವನ್ನು ಅಂತರ್ಜಾಲ ತಾಣಕ್ಕೆ ಸೇರಿಸಲಾಗಿದೆ. ನಿಮಗೆ ಈಗಾಗಲೇ ಗೊತ್ತಿರುವಂತೆ ಇಟಾಲಿಯನ್ನರು ವಿನೋದಪ್ರಿಯರು ಹಾಗೂ ಕೆಲವೊಮ್ಮೆ ನಾಟಕೀಯವಾಗಿಯೂ ವರ್ತಿಸುತ್ತಾರೆ. ಈ ನಾಯಿಯ ವರ್ತನೆಯನ್ನು ಗಮನಿಸಿದರೆ ಇದು ಸಹಾ ತನ್ನ ಮಾಲಿಕನನ್ನು ಅನುಸರಿಸುತ್ತಾ ಇಟಾಲಿಯನ್ನರ ಸಂಸ್ಕೃತಿಯನ್ನೇ ಮೈಗೂಡಿಸಿಕೊಂಡಿದೆ ಎಂದು ಅನ್ನಿಸುತ್ತದೆ.

ಮಾಲಿಕರಗೂ ಈ ನಾಯಿ ಅಂದರೆ ಅಚ್ಚುಮೆಚ್ಚು
ಈ ಚಿತ್ರದಲ್ಲಿ ಕಾಣುವ ಆಂತೋನಿ ತನ್ನ ಸಾಕುನಾಯಿಯನ್ನು ಯಾವುದೋ ತಪ್ಪಿಗೆ ಬೈಯುವುದು ಮೊದಲು ಕಾಣಬರುತ್ತದೆ. ಈ ಬೈಗುಳದಿಂದ ಅಪಾರವಾಗಿ ನಾಚಿಕೊಂಡ ನಾಯಿ ತನ್ನ ಎದೆಯಲ್ಲಿ ತಲೆಯನ್ನು ಹುದುಗಿಸಿ ಮಾಲಿಕನನ್ನು ನೇರವಾಗಿ ನೋಡದೇ ಇರುವ ಪ್ರಯತ್ನ ಮಾಡುತ್ತದೆ. ಬಳಿಕ ಕ್ಷಮೆ ಕೇಳುವಂತೆ ಮಾಲಿಕನ ತೊಡೆ ಏರಿದಾಗ "ಇದಕ್ಕಾಗಿ ನೀನು ನನ್ನಲ್ಲಿ ಕ್ಷಮೆ ಕೇಳುತ್ತಿದ್ದೇಯಾ? ನನಗೇನೂ ಅರ್ಥವಾಗುತ್ತಿಲ್ಲ" ಎಂದು ಆತ ಗದರಿಸುತ್ತಾನೆ. ಅಗ ತನ್ನ ಮಾಲಿಕನ ಕಣ್ಣಿನಲ್ಲಿ ಕಣ್ಣಿಟ್ಟು ನೋಡುತ್ತಾ ತನ್ನನ್ನು ಕ್ಷಮಿಸು ಎನ್ನುವಂತೆ ದೀನದೃಷ್ಟಿ ಬೀರುತ್ತದೆ.

ಈ ನಾಯಿಯ ಕ್ಷಮೆ ಕೇಳುವ ಪರಿ-ಎಲ್ಲರ ಹೃದಯಗೆಲ್ಲುತ್ತದೆ
"ನಿನ್ನಿಂತ ತಪ್ಪಾಗಿದೆ ಎಟ್ಟೋರೆ, ನಿನ್ನಿಂದಲೇ ತಪ್ಪಾಗಿದೆ. ಎಲ್ಲಿ ತಪ್ಪು ಮಾಡಿದ್ದೀ ಎಂದು ಗೊತ್ತಾಗುತ್ತಿಲ್ಲವೇ?" ಎಂದೆಲ್ಲಾ ಅಂತೋನಿ ಗದರಿಸುತ್ತಾ ಮುಂದುವರೆಯುತ್ತಾರೆ. ಈ ಗದರುವಿಕೆಯನ್ನು ನೋಡಿದರೆ ಹೆಚ್ಚಿನವರು ಇವರೊಬ್ಬ ಕಠಿಣ ಹೃದಯಿ ಮಾಲಿಕರಿರಬಹುದು ಎಂದು ಅಂದುಕೊಳ್ಳಬಹುದು. ನಾಯಿಯ ತಪ್ಪನ್ನು ಕ್ಷಮಿಸದ ಹಾಗೂ ತನ್ನ ನಾಯಿ ಮುಂದೆ ಇಂತಹ ತಪ್ಪನ್ನು ಮಾಡದೇ ಇರಲು ಕಠಿಣ ತರಬೇತಿ ನೀಡುವ ವ್ಯಕ್ತಿಯಾಗಿ ತೋರಬಹುದು. ಆದರೆ ಈ ನಾಯಿಯ ಕ್ಷಮೆ ಕೇಳುವ ಪರಿ ನಿಮ್ಮ ಹೃದಯವನ್ನಂತೂ ಕಲಕಿಯೇ ಇರುತ್ತದೆ. ವಿಶೇಷವಾಗಿ ಕ್ಷಮೆ ಕೇಳಿ ತನ್ನ ಮಾಲಿಕನ ಪ್ರೀತಿ ಪಡೆಯುವ ಪ್ರಯತ್ನ ನಡೆಸಿದಾಗ, ಈ ನಾಯಿಯನ್ನು ಅಪ್ಪಿಕೊಳ್ಳಲು ಮನಸ್ಸಾಗುತ್ತದೆ.

ಈ ನಾಯಿಯ ಕ್ಷಮೆ ಕೇಳುವ ಪರಿ-ಎಲ್ಲರ ಹೃದಯಗೆಲ್ಲುತ್ತದೆ
ಈ ವೀಡಿಯೋ ನಿಮಗೂ ಇಷ್ಟವಾಯಿತೇ? ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ. ಅಲ್ಲದೇ ಇಂತಹ ಅಚ್ಚರಿಯ ಇನ್ನೂ ಹಲವಾರು ವೀಡಿಯೋಗಳನ್ನು ವೀಕ್ಷಿಸಲು ನಮ್ಮ ತಾಣದ ಇನ್ನೊಂದು ವಿಭಾಗವಾದ 'ಪಲ್ಸ್' ಪುಟವನ್ನು ತಪ್ಪದೇ ನೋಡುತ್ತಿರಿ, ನಾವು ಸಾಧ್ಯವಾದಷ್ಟು ಕುತೂಹಲಕರವಾದ ಇತ್ತೀ಼ಚಿನ ವಿದ್ಯಮಾನಗಳನ್ನು ಪ್ರಕಟಿಸುತ್ತಿರುತ್ತೇವೆ.



Click it and Unblock the Notifications
