ರಾಶಿ ಭವಿಷ್ಯ: ನಿಮ್ಮ ವ್ಯಕ್ತಿತ್ವವನ್ನು ಬಿಚ್ಚಿಡುವ 'ಸಂಖ್ಯೆಗಳು'

By: manu
Subscribe to Boldsky

ನಿಮ್ಮ ಜಾತಕ ಫಲವು ವ್ಯಕ್ತಿತ್ವವನ್ನು ಹೇಳುತ್ತದೆ. ಅದೇ ರೀತಿಯ ರಾಶಿ ಸಂಖ್ಯೆ ಕೂಡ ವ್ಯಕ್ತಿತ್ವವನ್ನು ಹೇಳಬಲ್ಲದು ಎಂದು ನಿಮಗೆ ತಿಳಿದಿದೆಯಾ? ಬೋಲ್ಡ್ ಸ್ಕೈ ರಾಶಿ ಸಂಖ್ಯೆಯನ್ನು ನಿಮಗೆ ಹೇಳಲಿದೆ. ಇದರಿಂದ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂದು ತಿಳಿಯಬಹುದಾಗಿದೆ. ರಾಶಿ ಸಂಖ್ಯೆಯನ್ನು ತಿಳಿಯಲು ನೀವು ಒಂದು ವಿಧಾನವನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಇದರ ಮೂಲಕ ನೀವು ರಾಶಿ ಸಂಖ್ಯೆ ತಿಳಿಯಬಹುದು. ಅದು ಹೇಗೆಂದು ಮುಂದಕ್ಕೆ ಓದುತ್ತಾ ತಿಳಿಯಿರಿ.  

ಇದನ್ನೂ ಓದಿ - ಸಂಖ್ಯಾಶಾಸ್ತ್ರ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಲಕ್ಕಿ ಸಂಖ್ಯೆಗಳು'

ಉದಾಹರಣೆಗೆ: ನೀವು ಜನವರಿಯಲ್ಲಿ ಹುಟ್ಟಿದ್ದರೆ ನಿಮ್ಮ ಜನ್ಮ ದಿನಾಂಕವು 9 ಆಗಿದ್ದರೆ ಆಗ ತಿಂಗಳು ಮತ್ತು ಹುಟ್ಟಿದ ದಿನಾಂಕ ಎರಡೂ ಸಂಖ್ಯೆಯನ್ನು ಕೂಡಿಸಿ. ಆಗ 1+9=10 ಆಗುತ್ತದೆ. ಈಗ ಇದನ್ನು ಒಂದಂಕಿಗೆ ಇಳಿಸಿ. 1+0=1. ಈಗ ನಿಮ್ಮ ರಾಶಿ ಸಂಖ್ಯೆಯು 1 ಆಗಿದೆ. ನಿಮ್ಮ ಹುಟ್ಟಿದ ದಿನಾಂಕ ಮತ್ತು ತಿಂಗಳಿಗೆ ಅನುಗುಣವಾಗಿ ಸಂಖ್ಯೆಯನ್ನು ಕೂಡಿಸಿಕೊಂಡು ಅದನ್ನು ಒಂದಂಕಿಗೆ ಇಳಿಸಿ. ಒಂದು ಸಲ ನಿಮ್ಮ ರಾಶಿ ಸಂಖ್ಯೆಯು ತಿಳಿದ ಬಳಿಕ ಅದರ ಮಹತ್ವವೇನು ಎಂದು ತಿಳಿಯಿರಿ... 

ರಾಶಿ ಸಂಖ್ಯೆ 1

ರಾಶಿ ಸಂಖ್ಯೆ 1

ತತ್ವಗಳಿಂದಾಗಿ ಮೊಂಡುತನದವರು. ಇದರಿಂದಾಗಿ ಅವರಿಗೆ ಬೇಕಾದಂತೆ ಜೀವನ ಸಾಗಿಸಲು ಅವರಿಗೆ ಕಷ್ಟ. ಹಿಂದಿನ ಯೋಜನೆ, ವೃತ್ತಿ ಮತ್ತು ಸಂಬಂಧವು ಸರಿಯಾದ ಆಯ್ಕೆಯಲ್ಲ ಎಂದು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಅವರು ವೈಫಲ್ಯ ಅಥವಾ ಗೌರವ ಕಳೆದುಕೊಳ್ಳುವುದನ್ನು ಕಡೆಗಣಿಸುತ್ತಾರೆ. ಅವರು ಇದನ್ನು ಅನುಭವವೆಂದು ಭಾವಿಸುತ್ತಾರೆ ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಬೇಡಿಕೆಗಳನ್ನು ನಿರ್ಧರಿಸುತ್ತಾರೆ.

ರಾಶಿ ಸಂಖ್ಯೆ 2

ರಾಶಿ ಸಂಖ್ಯೆ 2

ಈ ಸಂಖ್ಯೆಯ ವ್ಯಕ್ತಿಗಳು ಜೀವನದ ಆಯ್ಕೆ ಬಗ್ಗೆ ತುಂಬಾ ಕ್ರಮಬದ್ಧ ಹಾಗೂ ಎಚ್ಚರಿಕೆ ವಹಿಸುತ್ತಾರೆ. ಆದರೆ ಬದಲಾವಣೆಗಳು ಅವರಿಗೆ ತುಂಬಾ ಕಷ್ಟ ಹಾಗೂ ಭೀತಿಯನ್ನು ಉಂಟುಮಾಡುತ್ತದೆ. ತುಂಬಾ ಕಠಿಣವಾಗಿರುವಂತಹ ಅವರ ಕಲ್ಪನೆಗಳನ್ನು ದೂರ ಮಾಡುವ ಬದಲು ಅವರು ಪ್ರಯೋಗ ಮಾಡಲು ಹಿಂಜರಿಕೆ ಮಾಡುವುದಿಲ್ಲ. ಭೀತಿಯನ್ನು ಹಿಂದಿಕ್ಕಿ ಹೊಸ ಪ್ರಯೋಗಗಳಿಗೆ ಇಳಿಯುವುದರಿಂದ ಅವರ ಉತ್ಪಾದನಾ ಬೆಳವಣಿಗೆಯು ಹೆಚ್ಚುತ್ತದೆ.

ರಾಶಿ ಭವಿಷ್ಯ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಭವಿಷ್ಯವಾಣಿ'

ರಾಶಿ ಸಂಖ್ಯೆ 3

ರಾಶಿ ಸಂಖ್ಯೆ 3

ಈ ವ್ಯಕ್ತಿಗಳು ತುಂಬಾ ಕ್ರಿಯಾತ್ಮಕವಾಗಿರುತ್ತಾರೆ ಮತ್ತು ಜೀವನದ ಬಗ್ಗೆ ಮಗುವಿನಂತಹ ಭಾವನೆ ಹೊಂದಿರುತ್ತಾರೆ. ಅವರು ಕಲ್ಪನಾತ್ಮಕತೆಗಿಂತ ಹೆಚ್ಚಾಗಿ ಸ್ವಾಭಾವಿಕವಾಗಿರುತ್ತಾರೆ. ಸಂಬಂಧವನ್ನು ಉಳಿಸಿಕೊಳ್ಳುವ ಸಲುವಾಗಿ ಅವರು ಭಾವನಾತ್ಮಕ ಹಾಗೂ ಆಳವಾಗಿ ಯೋಚಿಸಿದಾಗ ಭಯಭೀತರಾಗುತ್ತಾರೆ. ಉದ್ದೇಶಪೂರ್ವಕವಾಗಿ ಸ್ವಯಂ ಪ್ರತಿಬಿಂಬದಲ್ಲಿ ತೊಡಗಿಸಿಕೊಳ್ಳುವುದು ಮತ್ತು ಅರ್ಥಪೂರ್ಣ ಪ್ರಶ್ನೆಗಳನ್ನು ಕೇಳಲು ಸ್ವತಃ ಸವಾಲು ಹಾಕುವುದು. ತಮ್ಮ ಜೀವನದ ಉದ್ದೇಶದ ಬಗ್ಗೆ ಹೊಸ ಮಾಹಿತಿಗಳನ್ನು ಪಡೆಯುತ್ತಾ ಇರುತ್ತಾರೆ.

ರಾಶಿ ಸಂಖ್ಯೆ 4

ರಾಶಿ ಸಂಖ್ಯೆ 4

ಈ ಸಂಖ್ಯೆಯವರು ತಮ್ಮ ಗುರಿಯ ಬಗ್ಗೆ ಬದ್ಧತೆಯಿಂದ ಇರುತ್ತಾರೆ ಮತ್ತು ಅವರ ಸ್ಥಿತಿಸ್ಥಾಪಕತ್ವವು ಉನ್ನತ ಮಟ್ಟದಲ್ಲಿರುತ್ತದೆ. ಅವರ ಪರಿಪೂರ್ಣವಾದಿತ್ವವು ಅವರನ್ನು ಅಂಟಿಕೊಳ್ಳುತ್ತದೆ. ಪರಿಪೂರ್ಣ ಸಮಯ ಮತ್ತು ಪರಿಪೂರ್ಣ ಫಲಿತಾಂಶವಿಲ್ಲವೆಂದು ಅವರು ಒಪ್ಪಿಕೊಂಡರೆ ಆಗ ಅವರು ಸಂತೋಷದಿಂದ ಇರುತ್ತಾರೆ.

ರಾಶಿ ಸಂಖ್ಯೆ 5

ರಾಶಿ ಸಂಖ್ಯೆ 5

ಈ ಸಂಖ್ಯೆಯ ವ್ಯಕ್ತಿಗಳು ಯಾವುದೇ ಬದಲಾವಣೆಗೆ ಹೊಂದಿಕೊಂಡು ಹೋಗುವಂತಹ ವ್ಯಕ್ತಿತ್ವ ಹೊಂದಿರುತ್ತಾರೆ. ತಾಳ್ಮೆ ಕಳೆದುಕೊಳ್ಳುವಂತಹ ಅವರ ಮನೋಭಾವ ಕೆಲವೊಮ್ಮೆ ಸಮಸ್ಯೆಯನ್ನು ಉಂಟು ಮಾಡುತ್ತದೆ. ಅವರು ಕೆಲವೊಂದು ಕಠಿಣ ನಿರ್ಧಾರಗಳಿಗೆ ಅಂಟಿಕೊಳ್ಳಬೇಕಾಗುತ್ತದೆ.

ರಾಶಿ ಸಂಖ್ಯೆ 6

ರಾಶಿ ಸಂಖ್ಯೆ 6

ಹೊಂದಾಣಿಕೆ ಗುಣವನ್ನು ಹೊಂದಿರುವ ರಾಶಿ ಸಂಖ್ಯೆ 6ರ ವ್ಯಕ್ತಿಗಳು ಇತರ ವ್ಯಕ್ತಿಗಳನ್ನು ಸಂತೋಷವಾಗಿಡುತ್ತಾರೆ ಮತ್ತು ಕೆಲವೊಂದು ಸಮತೋಲನದ ಸಂಬಂಧವನ್ನು ನಿರ್ಮಿಸುತ್ತಾರೆ. ಅವರ ಆವರ್ತನ ಮತ್ತು ಅಭಿವ್ಯಕ್ತಿ ಅವರಿಗೆ ಬೇಕಾದಷ್ಟು ಉನ್ನತ ಮಟ್ಟದಲ್ಲಿರುವುದಿಲ್ಲ. ಅವರು ಇತರರ ಆದ್ಯತೆಗಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ.

ರಾಶಿ ಸಂಖ್ಯೆ 7

ರಾಶಿ ಸಂಖ್ಯೆ 7

ಈ ಸಂಖ್ಯೆಯನ್ನು ಹೊಂದಿರುವ ವ್ಯಕ್ತಿಗಳು ತಾತ್ವಿಕವಾಗಿರುವಂತವರು. ಅವರು ಮೇಲ್ಮೈ ಮಾಹಿತಿಯನ್ನು ಗುಪ್ತ ಅರ್ಥಗಳಿಂದ ಸುಲಭವಾಗಿ ಕಂಡುಕೊಳ್ಳುವರು. ಅವರು ಯಾವುದೇ ರೀತಿಯ ಸಂಬಂಧವನ್ನು ಬೆಸೆದಾಗ ಅವರು ತುಂಬಾ ನಾಚಿಕೆಪಟ್ಟುಕೊಳ್ಳುತ್ತಾರೆ ಮತ್ತು ಹಿಂಜರಿಯುತ್ತಾರೆ.

ರಾಶಿ ಸಂಖ್ಯೆ 8

ರಾಶಿ ಸಂಖ್ಯೆ 8

ಯಾವುದೇ ವಸ್ತುವಿನ ಮೇಲೆ ಸ್ವಾಧೀನ ಪಡೆದುಕೊಳ್ಳದೆ ಇದ್ದರೂ ಈ ವ್ಯಕ್ತಿಗಳು ಸಂತೃಪ್ತಿಯನ್ನು ಪಡುತ್ತಾರೆ. ಅವರ ಮತ್ತು ಅವರ ಸಂಪೂರ್ಣ ಶಕ್ತಿಯ ಮಧ್ಯೆ ನಿಲ್ಲುವಂತಹ ವಿಷಯವೆಂದರೆ ಅದು ನಿಯಂತ್ರಣ. ಬಿಟ್ಟುಬಿಡುವುದನ್ನು ಕಲಿಯುವುದು ಮತ್ತು ಭೂಮಿಯ ಮೇಲೆ ನಂಬಿಕೆಯನ್ನು ಇಟ್ಟುಕೊಳ್ಳುವುದು ಅವರನ್ನು ಅಭಿವ್ಯಕ್ತಿಯ ಕಡೆ ಕರೆದೊಯ್ಯುತ್ತದೆ.

ರಾಶಿ ಸಂಖ್ಯೆ 9

ರಾಶಿ ಸಂಖ್ಯೆ 9

9 ರಾಶಿ ಸಂಖ್ಯೆಯನ್ನು ಹೊಂದಿರುವ ವ್ಯಕ್ತಿಗಳು ತುಂಬಾ ಬಲಿಷ್ಠ ಹಾಗೂ ಪರಿಣಾಮಕಾರಿಯಾಗಿರುತ್ತಾರೆ. ಅವರು ತಮ್ಮ ಭಾವನೆಗಳಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿರುತ್ತಾರೆ. ವಸ್ತುನಿಷ್ಠತೆ ಮತ್ತು ಬೇರ್ಪಡುವಿಕೆ ಬಗ್ಗೆ ಅವರು ಯೋಚಿಸುವುದೇ ಇಲ್ಲ. ಅವರು ತಮ್ಮ ಭಾವನೆಗಳನ್ನು ಸಂಪೂರ್ಣವಾಗಿ ಅನುಭವಿಸಿದ ಬಳಿಕ ತಮ್ಮ ಕನಸುಗಳನ್ನು ಸಾಕಾರಗೊಳಿಸುತ್ತಾರೆ.

ವ್ಯಕ್ತಿತ್ವ ವಿಕಸನಕ್ಕಾಗಿ ಪರಿಣಾಮಕಾರಿ ಸಲಹೆಗಳು

English summary

What Sun Numbers Reveal About Your Personality

Just the way astrology works, your Sun Number works as well. It reveals the darkest secrets about your personality. If wondering how to find out about the Sun Numbers related to your personality, then follow these steps to find out your Sun Number... To find your Sun Number, you need to simply add together the month and day of your birth.
Subscribe Newsletter