'ಸೆಲ್ಫಿ ಎಕ್ಸ್‌ಪರ್ಟ್‌' ಒಪ್ಪೊ ಕಂಪೆನಿ ಸದ್ಯದಲ್ಲೇ ನೀಡಲಿದೆ ಸಿಹಿ ಸುದ್ದಿ!

By Super Admin
Subscribe to Boldsky

ಪ್ರಸ್ತುತ ಬಾಲಿವುಡ್‌ನಲ್ಲಿ ತಮ್ಮ ಅದ್ಭುತ ನಟನಾ ಸಾಮರ್ಥ್ಯಗಳಿಂದ ಹೆಸರುವಾಸಿಯಾಗಿರುವ ದೀಪಿಕಾ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂದೇ ಪ್ರಸಿದ್ಧರು. ಹಾಲಿವುಡ್‌ನಲ್ಲಿ xxx ರಿಟರ್ನ್ ಆಫ್ ಕ್ಸಾಂಡರ್ ಕೇಜ್‌, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ದೀಪಿಕಾ ಇದರಿಂದಲೇ ಹೆಚ್ಚು ವರ್ಚಸ್ಸಿನಿಂದ ಬೀಗುತ್ತಿದ್ದಾರೆ.

ಅಂತೆಯೇ ಹೆಚ್ಚು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಬಾಲಿವುಡ್‌ನಲ್ಲಿ ಅನಭಿಷಕ್ತ ರಾಣಿ ಎಂದೇ ಪ್ರಸಿದ್ಧಿಯ ತುತ್ತ ತುದಿಗೇರಿದ್ದಾರೆ. ದೀಪಿಕಾರ ಸಿನಿ ಜೀವನ ಆರಂಭದಲ್ಲಿ ತುಂಬಾ ತೊಡಕಿನದ್ದಾಗಿತ್ತು. ಅವರು ಸಾಕಷ್ಟು ಸೋಲುಗಳನ್ನು ಅನುಭವಿಸಿಯೇ ಇಂದು ಈ ಹಂತವನ್ನು ತಲುಪಿದ್ದಾರೆ. ತಮ್ಮ ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಅವರೀಗ ರಾಣಿಯಂತೆ ಮೆರೆಯುತ್ತಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಮುಖ ಮೈಲಿಗಲ್ಲನ್ನು ರಚಿಸಿರುವ ದೀಪಿಕಾ ಹೆಚ್ಚು ಉನ್ನತ ಬ್ರ್ಯಾಂಡ್ ಒಪ್ಪೊದ ರಾಯಭಾರಿಯಾಗಿ ತಮ್ಮ ಝಲಕ್‌ನಿಂದ ನಮ್ಮನ್ನು ರಂಜಿಸಲಿದ್ದಾರೆ. ಒಪ್ಪೊ ಎಫ್3 ಪ್ಲಸ್ (OPPO F3 Plus) ಫೋನ್‌ನ ರಾಯಭಾರಿಯಾಗಿ ದೀಪಿಕಾ ಇನ್ನುಮುಂದೆ ಕಾರ್ಯನಿರ್ವಹಿಸಲಿದ್ದು, ಮಾರ್ಚ್ 23 ರಂದು ಈ ಫೋನ್ ಬಿಡುಗಡೆಯಾಗಲಿದೆ. 

deepika-padukone

ತನ್ನ ಸೆಲ್ಫಿಗಾಗಿ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಒಪ್ಪೊ 'ಸೆಲ್ಫಿ ಎಕ್ಸ್‌ಪರ್ಟ್' (selfie expert) ಎಂದೇ ಪ್ರಸಿದ್ಧವಾಗಿದೆ. ಒಪ್ಪೊ ಎಫ್ 1 (OPPO F1) ಫೋನ್‌ನ ಮೊದಲ ರಾಯಭಾರಿಯಾಗಿ ಹೃತಿಕ್ ರೋಷನ್, ಸೋನಂ ಕಪೂರ್ ಮಿಂಚಿದ್ದರು. ಇದು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದುಕೊಂಡು 'ಸೆಲ್ಫಿ ಎಕ್ಸ್‌ಪರ್ಟ್' ಎಂದೇ ಜನಜನಿತವಾಗಿದೆ.

ಅಲ್ಲದೆ ಅಮಿ ಜಾಕ್ಸನ್, ತಮನ್ನಾ ಭಾಟಿಯಾ, ಕ್ರಿಕೆಟ್ ಪಟು ಯುವರಾಜ್ ಸಿಂಗ್ ಕೂಡ ಒಪ್ಪೊ ಫೋನಿನ ನಂತರದ ಶ್ರೇಣಿ OPPO F1S ಫೋನ್‌ನ ಪ್ರಚಾರ ರಾಯಭಾರಿ ಆಗಿ ಪ್ರಸಿದ್ಧರಾಗಿದ್ದರು. ಇದು 64 ಜಿಬಿ ಸಂಗ್ರಹಣೆ ಮತ್ತು 4 ಜಿಬಿ RAM ಅನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ತನ್ನದೇ ಹವಾ ಸೃಷ್ಟಿಸಿತು.

ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶಾ ಬಸು ದಂಪತಿಗಳೂ ಕೂಡ ಒಪ್ಪೊ ಎಫ್ 1 ಸಿರೀಸ್‌ಗೆ (OPPO F1 S)ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಕಂಪೆನಿಯು ಪ್ರೇಮಿಗಳ ದಿನದಂದು ಒಂದು ಕ್ಯಾಂಪೈನ್ ಅನ್ನು ನಡೆಸಿತ್ತು. ಈ ಸಂದರ್ಭದಲ್ಲಿ ಇವರಿಬ್ಬರೂ ಜಾಹೀರಾತಿನಲ್ಲಿ ಅಮೋಘ ಅಭಿನಯವನ್ನು ನೀಡಿ ಯಶಸ್ಸಿಗೆ ಕಾರಣರಾಗಿದ್ದರು.

ಇದೀಗ ದೀಪಿಕಾ ಕೂಡ ಹೊಚ್ಚ ಹೊಸ OPPO F3 Plus ಫೋನ್‌ಗೆ ರಾಯಭಾರಿಯಾಗಿ ಮಿಂಚುವ ಮೂಲಕ ಒಪ್ಪೊದ ಒಪ್ಪವನ್ನು ಜಗಜ್ಜಾಹೀರು ಮಾಡಲಿದ್ದಾರೆ. 'ಡ್ಯುಯಲ್ ಸೆಲ್ಫಿ' (dual selfie) ಕ್ಯಾಮೆರಾ ಫೀಚರ್ ಅನ್ನು ಈ ಡಿವೈಸ್ ಒಳಗೊಂಡಿದ್ದು ಇಂತಹ ವಿಶೇಷ ವೈಶಿಷ್ಟ್ಯವನ್ನು ಇತರ ಫೋನ್‌ಗಳು ಇದುವರೆಗೆ ಕಂಡುಕೊಂಡಿಲ್ಲ.

ಒಪ್ಪೊದ VOCC ಚಾರ್ಜ್ ಅನ್ನು ಇದು ಪಡೆದುಕೊಳ್ಳಲಿದ್ದು, ಬರೇ 5 ನಿಮಿಷಗಳ ಚಾರ್ಜ್‌ನಲ್ಲಿ 2 ಗಂಟೆಗಳ ಮಾತನಾಡಿಕೊಳ್ಳಬಹುದು ಎಂದು ಸಂಸ್ಥೆ ಹೇಳಿ ಕೊಂಡಿದೆ ಒಪ್ಪೊ ಎಫ್ 3 ಇನ್ನಷ್ಟು ಅದ್ಭುತ ಫೀಚರ್‌ಗಳೊಂದಿಗೆ ನಮ್ಮ ಮುಂದೆ ಬರಲಿದ್ದು ಒಪ್ಪೊ ಅಭಿಮಾನಿಗಳು ಈ ಡಿವೈಸ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂಬುದನ್ನು ಮಾತ್ರ ಮರೆಯುವಂತಿಲ್ಲ. ಅಂತೂ ದೀಪಿಕಾ ತಮ್ಮ ಕಮಾಲಿನ ಮೋಡಿಯಿಂದ ಡಿವೈಸ್‌ ಅನ್ನು ಪ್ರಸಿದ್ಧಿಯ ತುತ್ತ ತುದಿಗೆ ಏರಿಸಲಿದ್ದಾರೆ ಎಂಬುದಂತೂ ನಿಜ. 

ವಿಡಿಯೋ ವೀಕ್ಷಿಸಿ- https://www.youtube.com/watch?v=ejma_TTbvyc    

For Quick Alerts
ALLOW NOTIFICATIONS
For Daily Alerts

    English summary

    there-is-something-new-deepika-padukone-life-oppo-phone

    Deepika Padukone is the brand ambassador for the new OPPO F3 Plus phone. The Chinese mobile manufacturer has already announced that the big highlight of this phone is its 'dual selfie' camera.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more