For Quick Alerts
ALLOW NOTIFICATIONS  
For Daily Alerts

ಅದೃಷ್ಟವಂತರಿಗೆ ಮಾತ್ರ ಈ 'ಸಸ್ಯಹಾರಿ ಮೊಸಳೆ'ಯ ದರ್ಶನ ಆಗುವುದು!

By Manu
|

ಸಂಪ್ರದಾಯ, ಆಚಾರ-ವಿಚಾರಗಳು ಸುಳ್ಳೆಂದು ಕೆಲವರು ಹೇಳಬಹುದು. ಆದರೆ ಅದ್ಭುತ ಮತ್ತು ಆಶ್ಚರ್ಯವನ್ನುಂಟು ಮಾಡುವ ಹಲವು ಸಂಗತಿಗಳನ್ನು ಕಂಡಾಗ ನಿಜ ಎನಿಸುವುದು. ಪುಣ್ಯ ಕ್ಷೇತ್ರದಲ್ಲಿರುವ ಕೆಲವು ಪವಾಡಗಳು ಮತ್ತು ಅಚ್ಚರಿ ಮೂಡಿಸುವ ವಿಚಾರಗಳು ಇರುತ್ತವೆ. ಅವುಗಳನ್ನು ಕೇಳಿದಾಗ ಅಥವಾ ನೋಡಿದಾಗ ಇದು ನಿಜವೇ? ಎನ್ನುವ ಭಾವ ಉಂಟಾಗುವುದು.

ಅಂತಹ ಒಂದು ಅಪರೋಪದ ಸಂಗತಿಯನ್ನು ತೆರೆದಿಡುವುದು "ಅನಂತಪುರ ಸರೋವರ ದೇಗುಲದ ಬಾಬಿಯಾ ಎನ್ನುವ ಸಸ್ಯಹಾರಿ ಮೊಸಳೆ.'' ಸರೋವರದಲ್ಲಿ ನಿರ್ಮಿಸಿರುವ ಕೇರಳದ ಏಕೈಕ ದೇಗುಲ ಇದು. ಭಾರತದ ಅತಿ ಶ್ರೀಮಂತ ದೇವಸ್ಥಾನ ಎನ್ನುವ ಹಿರಿಮೆಯನ್ನು ಪಡೆದುಕೊಂಡಿದೆ. ಸುತ್ತಲೂ ಹಚ್ಚ ಹಸಿರಿನ ಸಿರಿ, ಮಧ್ಯೆ ಶಾಂತವಾಗಿ ನಿಂತಿರುವ ಸರೋವರ, ಸರೋವರದ ಮಧ್ಯಭಾಗದಲ್ಲಿ ತೇಲುವಂತೆ ಕಾಣುವ ಅನಂತ ಪದ್ಮನಾಭಸ್ವಾಮಿಯ ದೇಗುಲ ಕಂಗೊಳಿಸುತ್ತದೆ. ನಿಜ, ಈ ಕ್ಷೇತ್ರದ ವೈಭವ ಹಾಗೂ ವಿಶಿಷ್ಟತೆಯನ್ನು ಹೇಳಿದರೆ ಸಾಲದು.

ಅದೇನಿದ್ದರೂ ಅನುಭವಿಸಿಯೇ ಸವಿಯಬೇಕು. ಸಾಮಾನ್ಯವಾಗಿ ಮೊಸಳೆ ಎಂದರೆ ತಕ್ಷಣ ಮನಸ್ಸಿಗೆ ಬರುವುದು ಭಯ. ಎಲ್ಲಿ ನಮ್ಮನ್ನು ತಿನ್ನುವುದೋ ಎನ್ನುವ ಆತಂಕ. ಆದರೆ ಈ ದೇವಾಲಯದ ಬಳಿ ಇರುವ ಮೊಸಳೆ ಮಾತ್ರ ಹಾಗಲ್ಲ. ಎಲ್ಲಾ ಮೊಸಳೆಗಳಿಗಿಂತಲೂ ವಿಭಿನ್ನವಾದದ್ದು. ಹೌದಾ? ಎನ್ನುವ ಕುತೂಹಲವಿದ್ದರೆ ಮುಂದೆ ಓದಿ...

ಸಸ್ಯಹಾರಿ ಮೊಸಳೆ

ಸಸ್ಯಹಾರಿ ಮೊಸಳೆ

ಈ ಮೊಸಳೆಯನ್ನು ಬಾಬಿಯಾ ಎಂದು ಕರೆಯುತ್ತಾರೆ. ಅರ್ಚಕರು ಸಿದ್ಧಪಡಿಸಿದ ಬೆಲ್ಲದ ಪ್ರಸಾದವೇ ಇದರ ಆಹಾರ. 60 ವರ್ಷದಿಂದ ಇಲ್ಲಿಯೇ ವಾಸವಾಗಿರುವ ವಿಶೇಷ ಮೊಸಳೆ ಇದು.

Image Courtesy

ಮೊಸಳೆಯ ಇನ್ನೊಂದು ಬಗೆ

ಮೊಸಳೆಯ ಇನ್ನೊಂದು ಬಗೆ

ಈ ಮೊಸಳೆಯ ಬಗ್ಗೆ ಯಾತ್ರಿಕರು ಯಾವುದೇ ಬಗೆಯ ಭಯ ಪಡುವ ಅಗತ್ಯವಿಲ್ಲ. ಇತರ ಮೊಸಳೆಗಿಂತ ಭಿನ್ನವಾಗಿದೆ. ಭಕ್ತರು ನೀಡುವ ಖಾದ್ಯಗಳನ್ನು ಇದು ಸವಿಯುತ್ತದೆ.

Photo Courtesy: Vinayaraj

ದೇಗುಲದ ಕಾವಲುಗಾರ

ದೇಗುಲದ ಕಾವಲುಗಾರ

ಈ ಮೊಸಳೆ ಸದಾ ದೇವಾಲಯದ ಬಳಿಯೇ ಸುತ್ತಿಕೊಂಡು ಇರುತ್ತದೆ. ಹಾಗಾಗಿ ಇದನ್ನು ದೇವಾಲಯದ ಕಾವಲುಗಾರ ಎಂದು ಕರೆಯುತ್ತಾರೆ. ಇದು ನೀರಿನಲ್ಲಿರುವ ಪ್ರಾಣಿಗಳನ್ನಾಗಲೀ ಅಥವಾ ಇನ್ಯಾವುದೇ ಜೀವಿಗಳನ್ನಾಗಲೀ ಇಲ್ಲಿಯವರೆಗೂ ತಿಂದಿಲ್ಲವಂತೆ. ಅದೃಷ್ಟ ಇದ್ದವರಿಗೆ ಮಾತ್ರ ಈ ಮೊಸಳೆ ಕಾಣಿಸಿಕೊಳ್ಳುತ್ತದೆ.

Photo Courtesy - Vinayaraj

ಮೊಸಳೆಯ ವಿಚಿತ್ರ ಹುಟ್ಟು

ಮೊಸಳೆಯ ವಿಚಿತ್ರ ಹುಟ್ಟು

ಹಿಂದೊಮ್ಮೆ ಬ್ರಿಟಿಷ್ ಅಧಿಕಾರಿಯೊಬ್ಬ ಇಲ್ಲಿಯ ಮೊಸಳೆಯನ್ನು ಗುಂಡಿಟ್ಟು ಕೊಂದಿದ್ದರು. ಆನಂತರ ಅವನಿಗೆ ಹಾವು ಕಡಿಯಿತು. ಹಾಗೆಯೇ ಅವನು ಅಸು ನೀಗಿದನು. ಬಳಿಕ ಇನ್ನೊಂದು ಮೊಸಳೆ ಬಂದು ಸೇರಿಕೊಂಡಿದೆ. ಹೀಗೇ ಒಂದರ ನಂತರ ಒಂದು ಮೊಸಳೆ ಬಂದು ಸೇರಿಕೊಳ್ಳುತ್ತದೆ ಎನ್ನುವ ಮಾತಿದೆ.

Photo courtesy -Sreehulem

ದೇವಾಲಯದ ವಿವರ....

ದೇವಾಲಯದ ವಿವರ....

ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಎಂಬ ಗ್ರಾಮದಲ್ಲಿ ಈ ದೇವಾಲಯವಿದೆ. ಇದಕ್ಕೆ ಅನಂತಪುರ ಸರೋವರದ ದೇವಾಲಯ ಎಂದು ಕರೆಯುತ್ತಾರೆ. ಕಾಸರಗೋಡಿನಿಂದ 15 ಕಿ.ಮೀ. ದೂರದಲ್ಲಿರುವ ಈ ದೇವಾಲಯಕ್ಕೆ ಸಾರಿಗೆ ಸಂಪರ್ಕವೂ ಸಾಕಷ್ಟಿದೆ.

Image Courtesy

ವಿಶೇಷ ರಚನೆ

ವಿಶೇಷ ರಚನೆ

ಸುಮಾರು ಎರಡು ಎಕರೆ ವಿಸ್ತಾರದಲ್ಲಿ ಹರಡಿಕೊಂಡಿರುವ ಈ ದೇವಾಲಯದ ಒಳ ಪ್ರವೇಶಕ್ಕೆಂದು ಸೇತುವೆ ರೀತಿಯ ಮಾರ್ಗವನ್ನು ರಚಿಸಲಾಗಿದೆ. ದೇವಾಲಯದ ಬಲ ಭಾಗದಲ್ಲಿ ಗುಹೆಯ ರಚನೆ ಇರುವುದನ್ನು ಕಾಣಬಹುದು. ದಂತ ಕಥೆಯ ಪ್ರಕಾರ ದೇವಾಲಯದ ಪ್ರಮುಖ ದೇವರಾದ ಪದ್ಮನಾಭ ದೇವರು ಇಲ್ಲಿರುವ ಗುಹೆಯ ಮಾರ್ಗವಾಗಿಯೇ ತಿರುವನಂತಪುರಕ್ಕೆ ಸಾಗಿ, ಅನಂತ ಪದ್ಮನಾಭನಾದ ಎನ್ನುವ ಪ್ರತೀತಿಯಿದೆ.

Image courtesy -Vinayaraj

ಹಿನ್ನೆಲೆಯ ಕಥೆ

ಹಿನ್ನೆಲೆಯ ಕಥೆ

ವಿಲ್ವಮಂಗಲನೆಂಬ ಋಷಿ ಮುನಿಯು ನಾರಾಯಣನ ಭಕ್ತನಾಗಿ ತಪಸ್ಸು ಗೈಯುತ್ತಿದ್ದ. ಈ ಸಮಯದಲ್ಲಿ ನಾರಾಯಣನು ಬಾಲಕನ ರೂಪದಲ್ಲಿ ಋಷಿಯ ಮುಂದೆ ಹೋದನು. ಬಾಲಕನ ಮುಖವು ದಿವ್ಯ ತೇಜಸ್ಸಿನಿಂದ ಕೂಡಿತ್ತು. ಅದನ್ನು ಗಮನಿಸಿದ ಋಷಿಯು ನೀನು ಯಾರೆಂದು ಪ್ರಶ್ನಿಸಿದನು. ಉತ್ತರವಾಗಿ ಬಾಲಕ ನನಗೆ ಯಾರು ಇಲ್ಲವೆಂದು ಹೇಳಿದನು. ಆಗ ಋಷಿ ತನ್ನೊಡನೆ ವಾಸವಾಗಿರುವಂತೆ ಹೇಳಿದನು. ಒಪ್ಪಿಕೊಂಡ ಬಾಲಕ ಒಂದು ಷರತ್ತು ವಿಧಿಸಿದನು. ಇಲ್ಲಿ ನನಗೆ ಅವಮಾನವಾಗುವ ಸಂಗತಿ ನಡೆದರೆ ಆ ಕ್ಷಣವೇ ಇಲ್ಲಿಂದ ಹೊರಡುವೆನು ಎಂದನು.

ಋಷಿಯೊಂದಿಗೆ ಬಾಲಕ

ಋಷಿಯೊಂದಿಗೆ ಬಾಲಕ

ಬಾಲ ಬುದ್ಧಿಯನ್ನು ಹೊಂದಿದ್ದ ಹುಡುಗ ಋಷಿಗಳೊಂದಿಗೆ ಬಹಳ ಚೇಷ್ಟೆ ಮಾಡುತ್ತಿದ್ದ. ಒಂದು ದಿನ ಚೇಷ್ಟೆಯಿಂದ ಬೇಸತ್ತ ಋಷಿ ಬಾಲಕನಿಗೆ ಸುಮ್ಮನಿರುವಂತೆ ಬೈದರು. ಮನನೊಂದ ಬಾಲಕ "ಋಷಿಮುನಿಗಳು ನನ್ನನ್ನು ನೋಡಬೇಕೆಂದರೆ ಸರ್ಪದೇವತೆಗಳ ಕಾಡಾದ ಅನಂತನಕಟ್ಟೆಗೆ ಬರಬೇಕು" ಎಂದು ನುಡಿದು ಗುಹೆಯೊಂದರಲ್ಲಿ ಅದೃಷ್ಯನಾದನು.

ಬಾಲಕನ ಹುಡುಕಾಟ

ಬಾಲಕನ ಹುಡುಕಾಟ

ಋಷಿಗೆ ಆ ಬಾಲಕನು ನಾರಾಯಣನೆಂಬುದು ಅರಿವಾಯಿತು. ಮರು ಕ್ಷಣವೇ ಬಾಲಕನನ್ನು ಅರಸುತ್ತಾ ಗುಹೆಯ ಮಾರ್ಗದಿಂದಲೇ ಸಮುದ್ರದೆಡೆಗೆ ಬಂದರು. ಅಲ್ಲಿಂದ ದಕ್ಷಿಣಾಭಿಮುಖವಾಗಿ ಸಾಗಿದರು. ಅಲ್ಲಿಯೇ ಬಾಲಕನನ್ನು ಕಂಡರು. ಕೂಡಲೆ ಬಾಲಕನು ಗಿಡವೊಂದರಲ್ಲಿ ಪ್ರವೇಶಿಸಿದ. ಆ ಗಿಡವು ಮಲಗಿರುವ ಶೇಷ ನಾಗನ ಭಂಗಿಯಲ್ಲಿ ಗೋಚರಿಸಿತು. ಅದರ ಮೇಲೆ ನಾರಾಯಣನ ರೂಪ ಕಂಡರು ಎನ್ನುವ ಕಥೆಯಿದೆ. (ಚಿತ್ರದಲ್ಲಿಬೇಕಾದ ಬಾಬಿಯಾ ಎನ್ನುವ ಸಸ್ಯಹಾರಿ ಮೊಸಳೆಯೊಂದಿಗೆ ದೇಗುಲದ ಅರ್ಚಕರು)

Image Courtesy

English summary

A 'Vegetarian' Crocodile Who Guards A Temple In Kerela!

When we talk about crocodiles, we always think about their vicious killer instincts and their ability to gulp anything within seconds. But, there is a crocodile in Kerala who totally defies this characteristic of a crocodile. This is a crocodile who is a vegetarian and acts as a guard at the Ananthpura lake temple.
X
Desktop Bottom Promotion