For Quick Alerts
ALLOW NOTIFICATIONS  
For Daily Alerts

  ವಿಸ್ಮಯ ಜಗತ್ತು: ಈ ಹಣ್ಣುಗಳು ಏಷ್ಯಾ ಖಂಡದಲ್ಲಿಯೇ ಫೇಮಸ್!

  By Super Admin
  |

  ಪ್ರತಿ ಪ್ರದೇಶದಲ್ಲಿಯೂ ಅಲ್ಲಿನ ಹವಾಮಾನಕ್ಕೆ ಅನುಗುಣವಾದ ಫಲ ಪುಷ್ಪ ಸಸ್ಯಗಳು ಮತ್ತು ಅದಕ್ಕೆ ಅವಲಂಬಿತವಾದ ಪ್ರಾಣಿಸಂಕುಲ ವಿಕಾಸಗೊಂಡಿರುತ್ತದೆ. ಅಂತೆಯೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುತ್ತಿದ್ದಂತೆ ವಿವಿಧ ರೀತಿಯ ಆಹಾರ, ಹಣ್ಣು, ಹೂವುಗಳು ಎದುರಾಗುತ್ತವೆ. ಆ ಸ್ಥಳದಲ್ಲಿ ಹೇರಳವಾಗಿ ಲಭ್ಯವಿರುವ ಹಣ್ಣು, ತರಕಾರಿಗಳಿಗೆ ಅನುಗುಣವಾಗಿಯೇ ಅಲ್ಲಿನ ಖಾದ್ಯಗಳೂ ಜನಪ್ರಿಯತೆ ಪಡೆಯುತ್ತವೆ.   ಜಗತ್ತಿನ ಅತ್ಯುತ್ತಮ 12 ಆರೋಗ್ಯದಾಯಕ ಹಣ್ಣುಗಳು

  ಎಷ್ಟೋ ಸಂದರ್ಭಗಳಲ್ಲಿ ಆ ಖಾದ್ಯಕ್ಕೆ ಆ ಊರಿನ ಹೆಸರೇ ವಿಶೇಷಣವಾಗಿ ತಗಲಿಬಿಡುತ್ತದೆ. ಉದಾಹರಣೆಗೆ ಬೆಳಗಾವಿಯ ಕುಂದಾ. ಹಣ್ಣುಗಳು ಸಹಾ ಹಾಗೇ, ಅದೇ ರೀತಿ ಕೊಡಗಿನ ಕಿತ್ತಳೆಯೂ ನಾಡಿನಾದ್ಯಂತ ಜನಪ್ರಿಯವಾಗಿದೆ. ಪ್ರತಿ ಪ್ರದೇಶದಲ್ಲಿಯೂ ಒಂದು ವಿಶಿಷ್ಟ ಹಣ್ಣು ಹೇರಳವಾಗಿ ಲಭ್ಯವಾದರೂ ಇದನ್ನು ಕೊಂಡೊಯ್ದು ವಿಶ್ವದ ಇನ್ನೊಂದು ಪ್ರದೇಶದ ಮಾರುಕಟ್ಟೆಗೆ ತಲುಪಿಸಬಹುದಾದ ಸಾಧ್ಯತೆಯಿಂದ ಈ ಹಣ್ಣುಗಳು ವಿಶ್ವಮಾನ್ಯತೆ ಪಡೆಯುತ್ತವೆ.   ಮುಖದ ಅಂದ ಹೆಚ್ಚಿಸುವ 6 ಪ್ರಮುಖ ಹಣ್ಣುಗಳು

  ಇದು ಸಾಧ್ಯವಿಲ್ಲದ ಹಣ್ಣುಗಳನ್ನು ಆ ಪ್ರದೇಶದ ಹೊರತಾಗಿ ಹೊರಗಿನವರಿಗೆ ಪರಿಚಯವೇ ಇರುವುದಿಲ್ಲ. ಉದಾಹರಣೆಗೆ ಮಲೆನಾಡಿನ ಜಿರಿಕಲೆ ಹಣ್ಣು. ಅತ್ಯಂತ ರುಚಿಯಾದ ಈ ಹಣ್ಣು ನಗರಗಳಲ್ಲಿ ಬಿಡಿ, ಮಲೆನಾಡಿನ ಊರುಗಳಲ್ಲಿಯೇ ಮಾರಾಟಕ್ಕೆ ಸಿಗುವುದಿಲ್ಲ. ಏನಿದ್ದರೂ ಇದನ್ನು ಬೆಳೆಯುವವ ಮನೆಯಿಂದ ಪಡೆದುಕೊಳ್ಳಬೇಕು ಅಷ್ಟೇ. ಆದರೆ ವ್ಯತಿರಿಕ್ತವಾಗಿ ನಮ್ಮ ಹಲಸಿನ ಹಣ್ಣು ಈಗ ವಿಶ್ವಮಾನ್ಯತೆ ಪಡೆಯುತ್ತಿದೆ. ಇದಕ್ಕೆ ಮಾರುಕಟ್ಟೆಯಲ್ಲಿ ಈಗ ಲಭ್ಯವಾಗುತ್ತಿರುವ ಇದರ ಉತ್ಪನ್ನಗಳೇ ಕಾರಣ. ಇದೇ ರೀತಿ ಮಾರುಕಟ್ಟೆಯ ಮೂಲಕ ವಿಶ್ವದ ಇತರ ಭಾಗಗಳನ್ನು ಪ್ರವೇಶಿಸಿರುವ ಏಷ್ಯಾದ ಇತರ ಹಣ್ಣುಗಳ ಬಗ್ಗೆ ಕೆಳಗಿನ ಸ್ಲೈಡ್ ಶೋ ಮೂಲಕ ಹೆಚ್ಚಿನ ಮಾಹಿತಿಗಳನ್ನು ನೋಡೋಣ....

  ಡ್ಯೂರಿಯಾನ್

  ಡ್ಯೂರಿಯಾನ್

  ನಮಗೆ ಮಾವು ಹೇಗೆ ಹಣ್ಣುಗಳ ರಾಜನೋ ಹಾಗೇ ಆಗ್ನೇಯ ಏಷಿಯಾ ಪ್ರದೇಶದ ದೇಶಗಳಲ್ಲಿ ಈ ಡ್ಯೂರಿಯಾನ್ ಹಣ್ಣುಗಳ ರಾಜ. ಒಂದು ಹಲಸಿನ ಹಣ್ಣನ್ನು ಸಂಕುಚಿಸಿ ಇಟ್ಟಂತೆ ತೋರುವ ಹಣ್ಣು ಕೊಯ್ದಾಗ ಕೊಂಚ ಖಾರವಾದ ಪರಿಮಳವನ್ನು ಹೊಂದಿದ್ದು ಪ್ರಾರಂಭದಲ್ಲಿ ಅನುಮಾನ ಉಂಟು ಮಾಡಿದರೂ ಒಮ್ಮೆ ಇದರ ತೊಳೆಗಳನ್ನು ತಿನ್ನಲು ಪ್ರಾರಂಭಿಸಿದ ಬಳಿಕವೇ ಈ ಕುರೂಪಿ ಹಣ್ಣನ್ನು ಅಲ್ಲಿನ ಜನರು ಏಕೆ ರಾಜನೆಂದು ಕರೆಯುತ್ತಾರೆ ಎಂದು ಅರಿವಾಗುತ್ತದೆ. ಮುಂದಿನ ಸ್ಕೈಡ್ ಕ್ಲಿಕ್ ಮಾಡಿ

  ಡ್ಯೂರಿಯಾನ್

  ಡ್ಯೂರಿಯಾನ್

  ಆದರೆ ಈ ವಾಸನೆಯನ್ನು ಅನಿವಾರ್ಯವಾಗಿ ಸುತ್ತಮುತ್ತಲಿನವರು ಸಹಿಸಬೇಕಾಗುತ್ತದೆ. ತಮ್ಮ ಗ್ರಾಹಕರಿಗೆ ತೊಂದರೆಯಾಗಬಾರದೆಂದು ಈ ರಾಷ್ಟ್ರಗಳಲ್ಲಿ ಕೆಲವು ಹೋಟೆಲುಗಳು ಈ ಹಣ್ಣನ್ನು ಕುಯ್ಯಬಾರದು ಎಂದು ಕಟ್ಟಳೆಯನ್ನೂ ವಿಧಿಸಿವೆ.

  ರಂಬುಟಾನ್

  ರಂಬುಟಾನ್

  ಮೈತುಂಬಾ ಕೂದಲಿದ್ದು ಕೆಂಪಗೆ, ಮುಟ್ಟಲೂ ಅಸಹ್ಯವೆನಿಸುವ ರಂಬುಟಾನ್ ಸಿಪ್ಪೆ ಸುಲಿದ ಬಳಿಕ ಅಪ್ಪಟ ಎಳನೀರಿನ ಒಳಗಿನ ತಿರುಳಿನಂತಹ ಚಿಕ್ಕ ಚೆಂಡು ಅನಾವರಣಗೊಳ್ಳುತ್ತದೆ. ಕೊಂಚ ಅಂಟು ಅಂಟಾಗಿರುವ ಈ ತಿರುಳಿನ ಒಳಗೆ ದೊಡ್ಡದಾದ ಬೀಜವೊಂದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ರಂಬುಟಾನ್

  ರಂಬುಟಾನ್

  ಈ ಬೀಜ ಮತ್ತು ಹೊರಗಿನ ಸಿಪ್ಪೆ ನಿವಾರಿಸಿದ ಬಳಿಕ ಉಳಿಯುವ ತಿರುಳು ಸಿಹಿಯಾಗಿದ್ದು ಎಳನೀರಿನ ತೆಳು ಪದರಕ್ಕೆ ಕೊಂಚ ಸಕ್ಕರೆ ಸೇರಿಸಿ ತಿಂದ ಹಾಗಿರುತ್ತದೆ.

  ಮ್ಯಾಂಗೋಸ್ಟೀನ್

  ಮ್ಯಾಂಗೋಸ್ಟೀನ್

  ಇಂಡೋನೇಶಿಯಾ ಮತ್ತು ಸುಂಡಾ ದ್ವೀಪಗಳಿಂದ ಆಗಮಿಸಿರುವ ಈ ಹಣ್ಣು ಹೆಸರಿನಲ್ಲಿ ಮಾವಿನಹಣ್ಣನ್ನು ಹೊಂದಿದೆಯೇ ಹೊರತು ಮಾವಿಗೂ ಇದಕ್ಕೂ ಯಾವುದೇ ಹೋಲಿಕೆ ಇಲ್ಲ. ಹಣ್ಣಿನ ಕಾಲುಭಾಗದಷ್ಟು ದೊಡ್ಡ ತೊಟ್ಟೇ ಇರುವ, ದಪ್ಪ ಸಿಪ್ಪೆಯ ಈ ಹಣ್ಣನ್ನು ಒಮ್ಮೆ ತೆರೆದರೆ ಇದರೊಳಗಿನ ಬಿಳಿಯ, ತಿರುಳು ಮಾತ್ರ ತಿನ್ನಲು ಅತಿ ಸಿಹಿಯಾಗಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಮ್ಯಾಂಗೋಸ್ಟೀನ್

  ಮ್ಯಾಂಗೋಸ್ಟೀನ್

  ನಮ್ಮ ನೆಲ್ಲಿಕಾಯಿ ತಿಂದ ಬಳಿಕ ಎಷ್ಟೋ ಹೊತ್ತಿನವರೆಗೆ ನಾಲಿಗೆಯಲ್ಲಿ ಉಳಿಯುವಂತೆ ಈ ಹಣ್ಣನ್ನು ತಿಂದ ಬಳಿಕವೂ ಎಷ್ಟೋ ಹೊತ್ತಿನವರೆಗೆ ಇದರ ರುಚಿ ಉಳಿಯುತ್ತದೆ.

  ಹಲಸಿನ ಹಣ್ಣು

  ಹಲಸಿನ ಹಣ್ಣು

  ನಮ್ಮ ದಕ್ಷಿಣ ಭಾರತದ ಹೆಮ್ಮೆಯ ಗುರುತಾಗಿರುವ ಹಲಸಿನ ಹಣ್ಣು ನೋಡಲಿಕ್ಕೆ ಮಾತ್ರ ಮುಳ್ಳುಮುಳ್ಳಾಗಿದ್ದರೆ ಒಳಗಿನ ತೊಳೆಗಳು ಮಾತ್ರ ಅತಿ ಸಿಹಿಯಾಗಿರುತ್ತವೆ. ಹಲಸಿನಲ್ಲಿ ಹಲವಾರು ವಿಧಗಳಿದ್ದರೂ ಬಕ್ಕೆ, ಚಂದ್ರಬಕ್ಕೆ ತಳಿಗಳು ಹೆಚ್ಚು ಸಿಹಿ ಮತ್ತು ಜನಪ್ರಿಯವಾಗಿವೆ. ಇಂದು ಮಾರುಕಟ್ಟೆಯಲ್ಲಿ ಹಲಸಿನ ಹಣ್ಣು ಮಾತ್ರವಲ್ಲದೇ ಚಿಪ್ಸ್, ಬೀಜಗಳು, ಹಪ್ಪಳ, ಸಂಡಿಗೆ ಮೊದಲಾದ ಹಲವು ರೂಪಗಳಲ್ಲಿ ವಿಶ್ವದ ಮೂಲೆಮೂಲೆಯತ್ತ ಧಾವಿಸುತ್ತಿದೆ. ಕೇವಲ ಕಾಲು ಕೇಜಿ ತೂಗುವ ಹೆಬ್ಬಲಸಿನಿಂದ ಹಿಡಿದು ಸುಮಾರು ಮೂವತ್ತಾರು ಕೇಜಿ ತೂಗುವ ಹಲಸುಗಳೂ ನಮ್ಮ ಮಲೆನಾಡಿನಲ್ಲಿ ಲಭ್ಯವಿವೆ.

  ಮರಸೇಬು

  ಮರಸೇಬು

  ಇದರ ಹೆಸರಿಗೇಕೆ ಮರದ ವಿಶೇಷಣ ಸೇರಿಸಿದ್ದಾರೆ ಎಂಬ ಪ್ರಶ್ನೆಗೆ ಒಮ್ಮೆ ಈ ಹಣ್ಣನ್ನು ಕೈಯಲ್ಲಿ ಹಿಡಿದು ಒಡೆಯಲು ಯತ್ನಿಸಿದರೆ ಸಾಕು ಇದು ಎಷ್ಟು ಗಟ್ಟಿ ಎಂದು ತಿಳಿಯುತ್ತದೆ. ವಾಸ್ತವವಾಗಿ ಆನೆಗಳಿಗೆ ಈ ಹಣ್ಣು ಪ್ರಿಯವಾಗಿರುವ ಕಾರಣ ಇದಕ್ಕೆ ಎಲಿಫ್ಯಾಂಟ್ ಆಪಲ್ ಎಂದೂ ಕರೆಯುತ್ತಾರೆ. ಇಂಡೋಮಲಯ ಪ್ರದೇಶ, ಬಾಂಗ್ಲಾದೇಶ, ಜಾವಾ, ಮಲೇಶ್ಯಾ ಪ್ರದೇಶದಿಂದ ಆಗಮಿಸುವ ಈ ಹಣ್ಣನ್ನು ಒಡೆದರೆ ಒಳಗಿನ ತಿರುಳು ಬೂದು ಬಣ್ಣದ ತಿರುಳು ಗಾಢಹಳದಿ ಅಥವಾ ಹಸಿರು ಸಿಪ್ಪೆಯೊಂದಿಗಿರುವುದು ಕಂಡುಬರುತ್ತದೆ. ಈ ತಿರುಳು ಹುಳಿಮಿಶ್ರಿತ ಸಿಹಿ ರುಚಿ ಹೊಂದಿದೆ. ಹಾಗೇ ತಿನ್ನುವುದಕ್ಕಿಂತಲೂ ಕೊಂಚ ಕಾಳುಮೆಣಸಿನ ಪುಡಿ ಉಪ್ಪು ಸೇರಿಸಿ ತಿಂದಾಗ ಅತಿ ಹೆಚ್ಚು ರುಚಿಯಾಗಿರುತ್ತದೆ. ಇದರ ಸೇವನೆಯಿಂದ ದೇಹದ ಹತ್ತು ಹಲವು ರೋಗಗಳು ನಿವಾರಣೆಯಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.

  ಸ್ಟಾರ್ ಫ್ರೂಟ್

  ಸ್ಟಾರ್ ಫ್ರೂಟ್

  ಫಿಲಿಪ್ಪೀನ್ಸ್, ಇಂಡೋನೇಶಿಯಾ, ಮಲೇಶ್ಯಾ, ವಿಯೆಟ್ನಾಂ ಮೊದಲಾದ ದೇಶಗಳಲ್ಲಿ ಹೇರಳವಾಗಿ ಬೆಳೆಯುವ ಈ ಹಣ್ಣನ್ನು ಅಡ್ಡಲಾಗಿ ಕೊಯ್ದರೆ ಪಂಚಭುಜ ನಕ್ಷತ್ರದಂತೆ ಕಾಣುವ ಈ ಹಣ್ಣಿಗೆ ಕ್ಯಾರಂಬೋಲಾ ಎಂಬ ಹೆಸರೂ ಇದೆ.

  ಸ್ಟಾರ್ ಫ್ರೂಟ್

  ಸ್ಟಾರ್ ಫ್ರೂಟ್

  ತಿನ್ನಲು ಸೇಬಿನಂತೆಯೇ ಕುರುಕಾಗಿರುವ ಈ ಹಣ್ಣು ಹುಳಿಮಿಶ್ರಿತ ಸಿಹಿ ರುಚಿ ಹೊಂದಿದ್ದು ಕೊಂಚ ಉಪ್ಪು ಚಿಮುಕಿಸಿಕೊಂಡು ತಿಂದಾಗ ಅತಿ ಹೆಚ್ಚು ರುಚಿ ಪಡೆಯುತ್ತದೆ.

  ಡ್ರ್ಯಾಗನ್ ಫ್ರೂಟ್

  ಡ್ರ್ಯಾಗನ್ ಫ್ರೂಟ್

  ಹಣ್ಣಿಗೂ ಡ್ರ್ಯಾಗನ್‌ಗೂ ಏನು ಸಂಬಂಧ ಎಂದು ಕೇಳಿದರೆ ಕೊಂಚ ದೂರದಿಂದ ಈ ಹಣ್ಣನ್ನು ನೋಡಿದರೆ ಡ್ರ್ಯಾಗನ್ ಎಂಬ ಚೀನಾದ ಕಾಲ್ಪನಿನ ಜೀವಿಯ ಮೈಮೇಲಿನ ಹುರುಪೆಗಳನ್ನು ಹೊಂದಿರುವಂತೆ ಕಾಣುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಡ್ರ್ಯಾಗನ್ ಫ್ರೂಟ್

  ಡ್ರ್ಯಾಗನ್ ಫ್ರೂಟ್

  ಇದು ಏನಿದ್ದರೂ ಇದರ ಹೊರಗಿನ ಸಿಪ್ಪೆಯೇ ಹೊರತು ಇದನ್ನು ಕೊಯ್ದಾಗ ಮಾತ್ರ ಇದರ ಒಳಗೆ ಎಳನೀರನ್ನು ಅರೆದು ಭರ್ತಿ ಚಿಕ್ಕ ಚಿಕ್ಕ ಕಪ್ಪು ಬೀಜಗಳೊಂದಿಗೆ ಬೆರೆಸಿ ಇಟ್ಟಂತೆ ತೋರುತ್ತದೆ. ಇದು ಅತಿ ಹೆಚ್ಚು ಸಿಹಿಯಲ್ಲದಿದ್ದರೂ ಹಾಗೇ ತಿನ್ನಬಹುದಾಗಿದೆ. ಆದರೆ ಇದನ್ನು ಚಿಕ್ಕದಾಗಿ ಕತ್ತರಿಸಿ ಇತರ ಹಣ್ಣುಗಳ ತುಂಡುಗಳೊಡನೆ ಇಟ್ಟರೆ ಹೆಚ್ಚು ಅಲಂಕಾರಿಕವಾಗಿ ಕಾಣುತ್ತದೆ.

  ಲಿಚ್ಚೀ

  ಲಿಚ್ಚೀ

  ಮೂಲತಃ ಚೀನಾದ ಈ ಪುಟ್ಟ ಹಣ್ಣು ನಮ್ಮ ಮಾವಿನಂತೆ ಬೇಸಿಗೆಯಲ್ಲಿ ಫಲಬಿಡುವ ಹಣ್ಣಾಗಿದ್ದು ಈಗ ಭಾರತ, ಬಾಂಗ್ಲಾದೇಶ, ಮಲೇಶ್ಯಾ ವಿಯೆಟ್ನಾಂಗಳಲ್ಲೆಲ್ಲಾ ಬೆಳೆಲಾಗುತ್ತಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ಲಿಚ್ಚೀ

  ಲಿಚ್ಚೀ

  ಒಂದು ದೊಡ್ಡ ನೆಲ್ಲಿಕಾಯಿಯಷ್ಟೇ ದೊಡ್ಡದಿರುವ ಲಿಚ್ಚೀಯ ಹೊರಕವಚ ಕೊಂಚ ಮುಳ್ಳುಮುಳ್ಳಾಗಿದ್ದರೂ ಇದರೊಳಗಿನ ತಿರುಳು ಎಳನೀರಿನ ತಿರುಳಿನಂದಿದ್ದು ಒಳಗಿನ ಬೀಜ ನಿವಾರಿಸಿ ತಿನ್ನಬಹುದಾಗಿದೆ. ಆದರೆ ಇದರ ರುಚಿ ಮಾತ್ರ ಅಪ್ರತಿಮ. ಚೀನಾದ ಸಿಹಿಪದಾರ್ಥಗಳಲ್ಲಿ ಲಿಚ್ಚೀಯ ಈ ತಿರುಳನ್ನು ಬಳಸಿ ಹಲವಾರು ಖಾದ್ಯಗಳನ್ನು ತಯಾರಿಸಲಾಗುತ್ತದೆ.

   

  English summary

  Exotic Fruits From Asia That You Should Know About

  Every region is known for its habitat and culture. There are different things that you come across when you visit these places. Different places, cultures, practices and foods are something that define any given place. Here, in this article, we've shared details on some of the exotic fruits from across Asia which are quite popular in certain regions.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more