For Quick Alerts
ALLOW NOTIFICATIONS  
For Daily Alerts

ಅಂದು ಜೀವನ ನಡೆಸಲು ಪರದಾಟ, ಇಂದು ಕೋಟ್ಯಾಧಿಪತಿ...!

By Super
|

ಮುಂಬೈ ಎಂಬ ಮಹಾನಗರ ಮತ್ತು ಬಾಲಿವುಡ್ ಎಂಬ ಮಾಯಾನಗರಿಯಲ್ಲಿ ಪ್ರಖ್ಯಾತಿ ಎಲ್ಲರಿಗೂ ದಕ್ಕುವುದಿಲ್ಲ. ಇಲ್ಲಿ ಪ್ರತಿಭೆಯ ಜೊತೆ ಅದೃಷ್ಟವೂ ಮುಖ್ಯ. ಎರಡೂ ಕೈ ಸೇರಿತೆಂದರೆ ಒಂದೇ ಚಿತ್ರದ ಯಶಸ್ಸಿನ ಮೂಲಕ ಖ್ಯಾತಿ, ಹಣ ಎರಡನ್ನೂ ಗಳಿಸಬಹುದು. ಈ ಖ್ಯಾತಿಯನ್ನು ಪಡೆದವರೆಲ್ಲಾ ಗಾಡ್ ಫಾದರ್ ಅಥವಾ ಯಾರದಾದರೋ ಕೃಪಾಕಟಾಕ್ಷದಿಂದ ಬಂದವರಲ್ಲ. ನಮ್ಮ ನಿಮ್ಮಂತೆಯೇ ಸಾಮಾನ್ಯರಾಗಿದ್ದು ಪ್ರತಿಭೆಯನ್ನು ಗುರುತಿಸಲ್ಪಟ್ಟು ಜನರಿಂದ ಶಹಬ್ಬಾಸ್ ಗಿರಿ ಪಡೆದವರಾಗಿದ್ದಾರೆ.

ಉದಾಹರಣೆಗೆ ನಮ್ಮ ಕರ್ನಾಟಕದ ರಜನೀಕಾಂತ್ ಬಸ್ ಕಂಡಕ್ಟರ್ ಆಗಿದ್ದು ಅವರ ಕೆಲವು ಶೈಲಿಗಳನ್ನು ಗುರುತಿಸಲ್ಪಟ್ಟ ಬಳಿಕ ನಟರಾದರು. ಇಂದು ಅವರೊಬ್ಬ ಸುಪರ್ ಸ್ಟಾರ್. ಅಂತೆಯೇ ಬಾಲಿವುಡ್ ನಲ್ಲಿಯೂ ಹಲವು ಖ್ಯಾತ ನಟ ನಟಿಯರಿದ್ದು ತಮ್ಮ ಪ್ರತಿಭೆ, ಕೌಶಲ್ಯ ಮತ್ತು ಶ್ರಮದಿಂದ ಬಾಲಿವುಡ್ ನಲ್ಲಿ ಇಂದು ಪ್ರಮುಖ ಸ್ಥಾನ ಪಡೆದಿದ್ದಾರೆ. ಕೆಳಗಿನ ಸ್ಲೈಡ್ ಶೋ ಮೂಲಕ ಈ ಖ್ಯಾತಿಯನ್ನು ಪಡೆದ ತಾರೆಯರು ಅದಕ್ಕೂ ಮುನ್ನ ಏನಾಗಿದ್ದರು ಎಂಬ ಮಾಹಿತಿಯನ್ನು ನೀಡಲಾಗಿದೆ:

ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್

ಹಿಂದಿ ಚಿತ್ರರಂಗದ ಅತ್ಯುನ್ನತ ಸ್ಥಾನದಲ್ಲಿರುವ ಅಮಿತಾಭ್ ರವರ ಪ್ರಥಮ ಉದ್ಯೋಗ ಷಾ ವ್ಯಾಲೇಸ್ ಎಂಬ ಹಡಗಿನ ಸರಕು ಸಾಗಾಣಿಕಾ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯದ್ದಾಗಿತ್ತು. ಬಳಿಕ ಬರ್ಡ್ ಅಂಡ್ ಕಂಪನಿ ಎಂಬ ಸಂಸ್ಥೆಯಲ್ಲಿ ಸರಕು ಸಾಗಣೆಯ ಸಂಸ್ಥೆ ಮತ್ತು ಗ್ರಾಹಕರ ನಡುವಣ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್

ನಂತರ ಆಲ್ ಇಂಡಿಯಾ ರೇಡಿಯೋದಲ್ಲಿ ದೊಡ್ಡ ಧ್ವನಿಯಲ್ಲಿ ಮಾತನಾಡಬೇಕಾದ ನಿರೂಪಕನ ಹುದ್ದೆಗೂ ಅರ್ಜಿ ಹಾಕಿದ್ದರು. ಆದರೆ ಇವರ ಧ್ವನಿ ಗಡಸು ಎಂಬ ಕಾರಣ ನೀಡಿ ಉದ್ಯೋಗವನ್ನು ನಿರಾಕರಿಸಲಾಗಿತ್ತು.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ ಬ್ಯಾಂಕಾಕ್ ನಲ್ಲಿ ಮಾರ್ಷಿಯಲ್ ಆರ್ಟ್ಸ್ ಅಥವಾ ಕುಸ್ತಿಕಲೆಯನ್ನು ಕಲಿಯುವ ವೇಳೆ ಖರ್ಚನ್ನು ಸರಿದೂಗಿಸಲು ಹೋಟೆಲೊಂದರಲ್ಲಿ ಮುಖ್ಯ ಬಾಣಸಿಗ ಮತ್ತು ವೇಟರ್ ಆಗಿ ಕಾರ್ಯನಿರ್ವಹಿಸಿದ್ದರು. ಇಲ್ಲಿ ಅವರು ಟೇಕ್ವಂಡೂ ಕಲೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದರು.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

ಭಾರತಕ್ಕೆ ಹಿಂದಿರುಗಿದ ಬಳಿಕ ಅವರು ತಮ್ಮ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ತರಬೇತುದಾರರಾಗಿ ಕೆಲಕಾಲ ಕಾರ್ಯನಿರ್ವಹಿಸಿದರು. ಇವರ ಕಾರ್ಯವೈಖರಿ ಮತ್ತು ಕುಶಲತೆಯನ್ನು ಗಮನಿಸಿದ ಅವರ ವಿದ್ಯಾರ್ಥಿಯೊಬ್ಬರು ಅವರನ್ನು ಚಿಕ್ಕ ಸಂಸ್ಥೆಯಲ್ಲಿ ರೂಪದರ್ಶಿಯಾಗಿ ಮುಂದೆ ಬರಲು ಬಾಗಿಲೊಂದನ್ನು ತೆರೆದರು.

ಜಾನ್ ಅಬ್ರಹಾಂ

ಜಾನ್ ಅಬ್ರಹಾಂ

ನಾಯಕ ನಟನಾಗುವ ಮುನ್ನ ಜಾನ್ ಅಬ್ರಹಾಂ ರವರು ರೂಪದರ್ಶಿಯಾಗಿ ಬೆಳಕಿಗೆ ಬರುವ ಪ್ರಯತ್ನದಲ್ಲಿದ್ದರು. ಇದು ಕೈಗೂಡದೇ ಹೊಟ್ಟೆಪಾಡಿಗಾಗಿ ನೆಕ್ಸಸ್ ಎಂಬ ಸಂಸ್ಥೆಯಲ್ಲಿ ಮಾಧ್ಯಮ ಯೋಜಕನಾಗಿ ಕಾರ್ಯನಿರ್ವಹಿಸಿದ್ದರು.

ರಜನೀಕಾಂತ್

ರಜನೀಕಾಂತ್

ಪ್ರಖ್ಯಾತಿ ಪಡೆಯುವ ಮುನ್ನ ರಜನೀಕಾಂತ್ ಬೆಂಗಳೂರಿನ ಸಿಟಿಬಸ್ಸುಗಳಾದ ಬಿಟಿಎಸ್ (ಇಂದಿನ ಬಿಎಂಟಿಸಿ) ಒಂದರಲ್ಲಿ ಕಂಡೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ರಜನೀಕಾಂತ್

ರಜನೀಕಾಂತ್

ಕನ್ನಡ ನಾಟಕಗಳ ನಿರ್ದೇಶಕ ಟೋಪಿ ಮುನಿಯಪ್ಪನವರು ಅವರಿಗೆ ಪೌರಾಣಿಕ ನಾಟಕದೊಂದರಲ್ಲಿ ಚಿಕ್ಕ ಪಾತ್ರ ನೀಡಿದ್ದರು. ದುರ್ಯೋಧನನ ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡ ಪರಿಣಾಮವಾಗಿ ತಮಿಳು ಚಿತ್ರರಂಗದಲ್ಲಿಯೂ ಅವಕಾಶ ದೊರಕಲು ಸಾಧ್ಯವಾಯಿತು.

ರಣ್ವೀರ್ ಸಿಂಗ್

ರಣ್ವೀರ್ ಸಿಂಗ್

ನಟನಾಗುವ ಮುನ್ನ ರಣ್ವೀರ್ ಸಿಂಗ್ ರವರು O&M ಹಾಗೂ J. Walter Thompson ಮೊದಲಾದ ಸಂಸ್ಥೆಗಳ ಜಾಹೀರಾತು ವಿಭಾಗದಲ್ಲಿ ಕಾಪ್ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

 ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ

ಎಪ್ಪತ್ತರ ದಶಕದ ಸುಪರ್ ಹೀರೋ ಶತ್ರುಘ್ನ ಸಿನ್ಹಾರವರ ಪುತ್ರಿಯಾಗಿದ್ದರೂ ಸೋನಾಕ್ಷಿಯವರು ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬರುವ ಸಲುವಾಗಿ ಮೊದಲು ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಇವರ ವಿನ್ಯಾಸಗಳು 2005ರ 'ಮೇರಾ ದಿಲ್ ಲೇಕೆ ದೇಖ' ಸಹಿತ ಹಲವಾರು ಚಿತ್ರಗಳಲ್ಲಿ ಬಳಸಲ್ಪಟ್ಟಿವೆ. ಬಳಿಕ 2010ರ ದಬಂಗ್ ಚಿತ್ರ ಅವರಿಗೆ ನಟಿಯಾಗಿ ಗುರುತಿಸಲು ಸಾಧ್ಯವಾಯಿತು.

ಪರಿಣೀತಿ ಛೋಪ್ರಾ

ಪರಿಣೀತಿ ಛೋಪ್ರಾ

ಓರ್ವ ಪೂರ್ಣಪ್ರಮಾಣದ ನಟಿಯಾಗುವ ಮುನ್ನ ಇವರು ಯಸ್ ರಾಜ್ ಫಿಲಂಸ್ ನಲ್ಲಿ ವಾಣಿಜ್ಯ ವಹಿವಾಟು ನೋಡಿಕೊಳ್ಳುವ ತರಬೇತಿ ಪಡೆಯುತ್ತಿದ್ದರು.

ಸಿದ್ಧಾರ್ಥ್ ಮಲ್ಹೋತ್ರಾ

ಸಿದ್ಧಾರ್ಥ್ ಮಲ್ಹೋತ್ರಾ

ತಮ್ಮ ಹದಿನೆಂಟನೆಯ ವಯಸ್ಸಿನಲ್ಲಿದ್ದಾಗ ಕೇವಲ ಹವ್ಯಾಸಕ್ಕಾಗಿ ಹಾಗೂ ಚಿಲ್ಲರೆ ಪುಡಿಗಾಸಿಗಾಗಿ ರೂಪದರ್ಶಿಯಾಗಿ ಕಾರ್ಯನಿರ್ವಹಿಸಿದ ಸಿದ್ದಾರ್ಥ್ ಬಳಿಕ ಹಲವು ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದರು.

ಸಿದ್ಧಾರ್ಥ್ ಮಲ್ಹೋತ್ರಾ

ಸಿದ್ಧಾರ್ಥ್ ಮಲ್ಹೋತ್ರಾ

ಸುಮಾರು ನಾಲ್ಕು ವರ್ಷಗಳ ಕಾಲ ಕ್ಯಾಮೆರಾಗಳಿಗೆ ಪೋಸು ಕೊಟ್ಟೂ ಕೊಟ್ಟೂ ಬೇಸರವಾಗಿ ನಂತರ ಕರಣ್ ಜೋಹರ್ ರವರ ಮೈ ನೇಮ್ ಈಸ್ ಖಾನ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.

ಬೊಮನ್ ಇರಾನಿ

ಬೊಮನ್ ಇರಾನಿ

ಮುನ್ನಾಭಾಯಿ ಚಿತ್ರದ ಡಾಕ್ಟರ್ ಅಸ್ತಾನಾ ಹೆಸರು ಯಾರು ಕೇಳಿಲ್ಲ. ಈ ಪಾತ್ರಕ್ಕೆ ಜೀವ ತುಂಬಿದ ಬಮನ್ ಇರಾನಿಯವರು ಮುಂಬೈಯ ತಾಜ್ ಮಹಲ್ ಪ್ಯಾಲೇಸ್ ಹೋಟೆಲಿನಲ್ಲಿ ರೂಂ ಸರ್ವಿಸ್ ಅಟೆಂಡೆಂಟ್ ಅಥವಾ ಪರಿಚಾರಕನಾಗಿ ಕರ್ತವ್ಯ ಸಲ್ಲಿಸುತ್ತಿದ್ದರು. ಅಲ್ಲದೇ ತಮ್ಮ ತಾಯಿ ನಡೆಸುತ್ತಿದ್ದ ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಬೇಕರಿಯನ್ನೂ ನಡೆಸುತ್ತಿದ್ದರು. ನಂತರ ಕ್ಯಾಮೆರಾ ಕೈಯಲ್ಲಿ ಹಿಡಿದು ಉತ್ತಮ ಛಾಯಾಗ್ರಾಹನೆಂಬ ಬಿರುದು ಪಡೆದು ನಂತರ ರಂಗಶಾಲೆಯನ್ನು ಪ್ರವೇಶಿಸಿದರು. ನಂತರ ಮುನ್ನಾಭಾಯಿಯಲ್ಲಿ ಪಡೆದ ಅವಕಾಶವನ್ನು ಅವರು ಸದ್ಬಳಕೆ ಮಾಡಿಕೊಂಡರು.

ನವಾಜುದ್ದೀನ್

ನವಾಜುದ್ದೀನ್

ಉತ್ತರ ಪ್ರದೇಶದ ಬಡ ಕುಟುಂಬದಲ್ಲಿ ಎಂಟು ಸಹೋದರ ಸಹೋದರಿಯರೊಂದಿಗೆ ಬೆಳೆದ ನವಾಜುದ್ದೀನ್ ಓರ್ವ ಔಷಧಿ ಅಂಗಡಿಯ ಮಾರಾಟಗಾರನಾಗಿ ಜೀವನ ನಡೆಸುತ್ತಿದ್ದರು. ಬಳಿಕ ದೆಹಲಿಗೆ ಬಂದು ಒಂದು ರಂಗಮಂದಿದರ ಕಾವಲುಗಾರನಾಗಿ ಒಂದೂವರೆ ವರ್ಷ ಕಾರ್ಯನಿರ್ವಹಿಸಿದರು. ಬಳಿಕ ಇಲ್ಲಿಂದಲೇ ಅವರು ರಾಷ್ಟ್ರೀಯ ಕಲಾ ಶಾಲೆಯನ್ನು ಸೇರಿದರು. ಮುಂದಿನದ್ದೆಲ್ಲಾ ಈಗ ಇತಿಹಾಸ.

ಅರ್ಶದ್ ವಾರ್ಸಿ

ಅರ್ಶದ್ ವಾರ್ಸಿ

ಎವರ್ ಗ್ರೀನ್ ಹೀರೋ ಎಂಬ ಪಟ್ಟ ಪಡೆದ ದೇವ್ ಆನಂದ್ ಮುಂಬೈನ ಚರ್ಚ್ ಗೇಟ್ ಬಳಿ ಇರುವ ಸೆನ್ಸಾರ್ ಕಛೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಆಗ ಅವರ ತಿಂಗಳ ಸಂಬಳ ಕೇವಲ ರೂ. 165 ಆಗಿತ್ತು.

ದಿಲಿಪ್ ಕುಮಾರ್

ದಿಲಿಪ್ ಕುಮಾರ್

ದಿಲೀಪ್ ಕುಮಾರ್ ಎಂಬ ಚಿತ್ರನಾಮವನ್ನು ಪಡೆದ ಯೂಸುಫ್ ಖಾನ್ ರವರ ತಂದೆ ಓರ್ವ ಹಣ್ಣುಗಳ ವ್ಯಾಪಾರಿಯಾಗಿದ್ದು ಒಂದು ತೋಟದ ಮಾಲಿಕರೂ ಆಗಿದ್ದರು. 1940ರ ಪ್ರಾರಂಭದ ದಿನಗಳಲ್ಲಿ ಯೂಸುಫ್ ಖಾನ್ ಕ್ಯಾಂಟೀನ್ ಒಂದನ್ನು ಪ್ರಾರಂಭಿಸಿ ಬಳಿಕ ಪುಣೆಯಲ್ಲಿ ಒಣಫಲಗಳನ್ನು ಒದಗಿಸುವ ವ್ಯಾಪಾರವನ್ನು ಮಾಡುತ್ತಿದ್ದರು.

English summary

Celebrities Who Did Odd Jobs Before They Became Famous

Though they are known for their star status today, these Bollywood celebrities weren't born with a silver spoon! They earned all the fame and power purely by their determination and hard-work!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more