For Quick Alerts
ALLOW NOTIFICATIONS  
For Daily Alerts

ಹೆಚ್ಚು ಶಿಕ್ಷಿತ ಬಾಲಿವುಡ್‌ನ ಸೆಲೆಬ್ರಿಟಿ ಸ್ಟಾರ್‌‪‎ಗಳು

By Deepak
|

ಬಾಲಿವುಡ್‌‎ನಲ್ಲಿ ತಾರೆಯರೆಂದರೆ ಅವರ ಸ್ಥಾನಮಾನ ಹಿರಿದಾಗಿರುತ್ತದೆ. ಜನಮನದಲ್ಲಿ ಅವರನ್ನು ದೇವರಂತೆ ಪೂಜಿಸಿ ಅವರಿಗಾಗಿ ದೇವಸ್ಥಾನ ಕಟ್ಟುವ ಅಭಿಮಾನಿಗಳು ಇದ್ದಾರೆಂದರೆ, ಅವರು ಜನಮಾನಸದಲ್ಲಿ ಎಂತಹ ಮೋಡಿಯನ್ನು ಮಾಡಿರಬಹುದು ಎಂಬುದನ್ನು ಅಂದಾಜಿಸಿಕೊಳ್ಳಿ. ತಮ್ಮ ಅದೃಷ್ಟದಿಂದ ಅವರು ಸಮಾಜದಲ್ಲಿ ಅತ್ಯುತ್ತಮ ಸ್ಥಾನವನ್ನು ಪಡೆದುಕೊಂಡು ಹಲವರಿಗೆ ಮಾದರಿಯಾಗಿದ್ದಾರೆ. ಆದರೆ ತಾವು ಮಾಡಿದ ವಿದ್ಯಾಭ್ಯಾಸಕ್ಕೂ ಅವರ ವೃತ್ತಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ನಿಮಗೆ ತಿಳಿದಿತ್ತೇ..? ವಿಚ್ಛೇದನ ಪಡೆದ ಪುರುಷರನ್ನು ವರಿಸಿದ ಖ್ಯಾತ ತಾರೆಯರು

ಹೌದು ಹೆಚ್ಚುವರಿ ಶಿಕ್ಷಣವನ್ನು ಪಡೆದುಕೊಂಡಿರುವ ಈ ಬಾಲಿವುಡ್ ಸೆಲೆಬ್ರಿಟಿಗಳು ಸಿನಿ ರಂಗವನ್ನು ಬಿಟ್ಟು ತಮ್ಮ ಶಿಕ್ಷಣಕ್ಕೆ ತಕ್ಕುದಾಗಿ ವೃತ್ತಿ ಕ್ಷೇತ್ರವನ್ನು ಆಯ್ದುಕೊಳ್ಳುತ್ತಿದ್ದರೆ ಇವರು ಯಾರೆಂಬುದೇ ಜನರಿಗೆ ಗೊತ್ತಿರುತ್ತಿರಲಿಲ್ಲ. ಅದಕ್ಕೆ ಹೇಳುವುದಲ್ಲವೇ ದೇವರ ಆಟ ಬಲ್ಲವರು ಯಾರು ಎಂದು. ಇಂದಿನ ಲೇಖನದಲ್ಲಿ ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆದುಕೊಂಡಿರುವ ಖ್ಯಾತ ಸೆಲೆಬ್ರಿಟಿಗಳ ಪರಿಚಯವನ್ನು ಮಾಡುತ್ತಿದ್ದೇವೆ. ಮುಂದೆ ಓದಿ..

ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್

ಭಾರತೀಯ ಸಿನಿಮಾದ ದಂತಕಥೆ ಎಂದೇ ಪ್ರಖ್ಯಾತಿ ಪಡೆದಿರುವ ಅಮಿತಾಬ್ ಬಚ್ಚನ್ ವಿದ್ಯಾಭ್ಯಾಸದ ಸಮಯದಲ್ಲಿ ತಾವು ಸೆಲೆಬ್ರಿಟಿ ಆಗುತ್ತೇವೆ ಎಂಬ ಕನಸು ಇವರು ಕಂಡಿರಲಿಲ್ಲ. ವಿಜ್ಞಾನದಲ್ಲಿ ಎರಡು ಮುಖ್ಯ ಪದವಿಯನ್ನು ಇವರು ಪಡೆದುಕೊಂಡಿದ್ದು ಆಸ್ಟ್ರೇಲಿಯಾದಲ್ಲಿರುವ ಕ್ವೀನ್ಸ್‌‎ಲ್ಯಾಂಡ್ ಯೂನಿವರ್ಸಿಟಿಯಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.

ವಿದ್ಯಾ ಬಾಲನ್

ವಿದ್ಯಾ ಬಾಲನ್

ಉಲಾಲ ಹುಡುಗಿ ವಿದ್ಯಾ ಬಾಲನ್ ನಟಿಯಾಗುವ ಕನಸನ್ನು ಹೊಂದಿದ್ದರೂ, ವಿದ್ಯಾಭ್ಯಾಸಕ್ಕೆ ಮಾತ್ರ ಹೆಚ್ಚಿನ ಆದ್ಯತೆಯನ್ನು ನೀಡಿದ್ದರು. ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಸೋಶಿಯಲಜಿ ವಿಷಯದಲ್ಲಿ ಪದವಿಯನ್ನು ಪಡೆದುಕೊಂಡು, ಮುಂಬೈ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.

ಜಾನ್ ಅಬ್ರಹಾಂ

ಜಾನ್ ಅಬ್ರಹಾಂ

ತಮ್ಮ ಕಟ್ಟುಮಸ್ತಾದ ದೇಹದಿಂದ ಬಾಲಿವುಡ್‎‌ನಲ್ಲಿ ಕಿಚ್ಚು ಹಚ್ಚಿದ ಜಾನ್ ವಿದ್ಯೆಯ ವಿಷಯದಲ್ಲಿ ಜಾಣರಾಗಿದ್ದರು. ಅರ್ಥಶಾಸ್ತ್ರದಲ್ಲಿ ಪದವಿಯನ್ನು, ತನ್ನ ಉನ್ನತ ವಿದ್ಯಾಭ್ಯಾಸ ಎಮ್‌‌‎ಬಿಎಯನ್ನು ನರ್ಸಿಮೋಂಜಿ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್‎ಮೆಂಟ್ ಸ್ಟಡೀಸ್ ಇಲ್ಲಿಂದ ಪಡೆದುಕೊಂಡಿದ್ದಾರೆ. ಮಾಡೆಲಿಂಗ್ ಅಥವಾ ಸಿನಿ ಕ್ಷೇತ್ರಕ್ಕೆ ಇವರು ಬರದೇ ಇರುತ್ತಿದ್ದರೆ ಮೀಡಿಯಾ ಪ್ಲಾನಿಂಗ್‌‎ನಲ್ಲಿ ಇವರು ವೃತ್ತಿ ನಡೆಸುತ್ತಿದ್ದರು.

ಸಿದ್ಧಾರ್ಥ್

ಸಿದ್ಧಾರ್ಥ್

ಕಾಲೇಜಿನಲ್ಲಿ ಚಟುವಟಿಕೆಯಿಂದ ಕೂಡಿರುತ್ತಿದ್ದ ಸಿದ್ಧಾರ್ಥ್ ಹೆಚ್ಚು ಜಾಣರಾಗಿದ್ದರು. ರಂಗ್ ದೇ ಬಸಂತಿ ಚಿತ್ರದಲ್ಲಿ ನಟಿಸಿರುವ ಸಿದ್ಧಾರ್ಥ್ ದೆಹಲಿಯ ಕಿರೋರಿ ಮಲ್ ಕಾಲೇಜಿನಿಂದ ವಾಣಿಜ್ಯ ಪದವಿಯನ್ನು ಪಡೆದುಕೊಂಡಿದ್ದಾರೆ. ವಿಶ್ವ ಮಟ್ಟದ ಡಿಬೇಟ್ ಸ್ಪರ್ಧೆಗಳಲ್ಲಿ ಸಿದ್ಧಾರ್ಥ್ ಭಾಗವಹಿಸಿದ್ದು, ಎಮ್‌‎‌ಬಿಎ ಪದವಿಯನ್ನು ಮುಂಬೈನ ಸ್ಪಿಜಿಮರ್‎ನಿಂದ ಪಡೆದುಕೊಂಡಿದ್ದು, ತಮ್ಮ ಭಾಷಾ ಕೌಶಲ್ಯದಿಂದ 1999 ರ ಸಿಎನ್‎‌ಬಿಸಿ ಮ್ಯಾನೇಜರ್ ಆಫ್ ದ ಇಯರ್ ಪುರಸ್ಕಾರವನ್ನು ಪಡೆದುಕೊಂಡಿದ್ದಾರೆ.

ಪ್ರೀತಿ ಜಿಂಟಾ

ಪ್ರೀತಿ ಜಿಂಟಾ

ಶಾಲಾ ದಿನಗಳಲ್ಲಿ ಹೆಚ್ಚು ಬುದ್ಧಿವಂತೆ ಎಂದೆನಿಸಿದ್ದ ಪ್ರೀತಿ ಜಿಂಟಾ ಇಂಗ್ಲೀಷ್ ಭಾಷೆಯಲ್ಲಿ ಪದವಿಯನ್ನು ಶಿಮ್ಲಾದ ಸೈಂಟ್ ಬೇಡ್ಸ್ ಕಾಲೇಜಿನಿಂದ ಪಡೆದುಕೊಂಡಿದ್ದಾರೆ. ಮನಃಶಾಸ್ತ್ರದಲ್ಲಿ ಪದವಿಯನ್ನು ಪಡೆದುಕೊಂಡಿರುವ ಪ್ರೀತಿ ಕ್ರಿಮಿನಲ್ ಸೈಕೋಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಈಕೆ ಬಾಲಿವುಡ್‌‌‎ನ ಉನ್ನತ ವಿದ್ಯಾಭ್ಯಾಸ ಹೊಂದಿರುವವರಲ್ಲಿ ಒಬ್ಬರಾಗಿದ್ದಾರೆ.

ಆರ್ ಮಾಧವನ್

ಆರ್ ಮಾಧವನ್

ಇಲೆಕ್ಟ್ರಾನಿಕ್ಸ್‎‌ನಲ್ಲಿ ಪದವೀಧರರಾಗಿರುವ ಮಾಧವನ್ ರಾಯಲ್ ಆರ್ಮಿಯಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. ನೌಕಾ ಪಡೆ ಮತ್ತು ವಾಯು ಪಡೆ ಸಿದ್ಧಿಯೂ ಇವರಿಗಿದೆ. ಸಿನಿ ಕ್ಷೇತ್ರಕ್ಕೆ ಕಾಲಿಡುವ ಮುನ್ನವೇ ಇವರು ಬಹಳಷ್ಟು ಸಾಧನೆಗಳನ್ನು ಮಾಡಿದ್ದಾರೆ. ಕೆನಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ರಾಯಭಾರಿಯಾಗಿ ಮಾಧವನ್ ದೇಶವನ್ನು ಪ್ರತಿನಿಧಿಸಿದ್ದರು. ಇಂಗ್ಲೆಂಡಿಗೆ ಹೋಗುವ ಅವಕಾಶದೊಂದಿಗೆ ಉತ್ತಮ ಎನ್‌ಸಿಸಿ ಕೆಡೆಟ್ ಮಹಾರಾಷ್ಟ್ರ ಎಂಬ ಬಿರುದೂ ಇವರಿಗೆ ಲಭ್ಯವಾಗಿದೆ.

ಸೋನು ಸೂದ್

ಸೋನು ಸೂದ್

ದಬಾಂಗ್‎‌ನ ಚೇದಿ ಸಿಂಗ್ ಒಬ್ಬ ಇಂಜಿನಿಯರ್ ಎಂಬುದು ನಿಮಗೆ ಗೊತ್ತೇ? ನಾಗ್‎‌ಪುರ್‌‎ನ ಯಶವಂತರಾವ್ ಚವಾನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಇಲ್ಲಿಂದ ಇಲೆಕ್ಟ್ರಾನಿಕ್ಸ್‌‎ನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಇವರು ಪಡೆದುಕೊಂಡಿದ್ದಾರೆ. ಸಿನಿ ವೃತ್ತಿಯನ್ನು ನಿಲ್ಲಿಸಿದಲ್ಲಿ, ಪರ್ಯಾಯ ವೃತ್ತಿ ಇವರಿಗಾಗಿಯೇ ಕಾದಿದೆ.

ಸೋಹಾ ಆಲಿ ಖಾನ್

ಸೋಹಾ ಆಲಿ ಖಾನ್

ರಂಗ್ ದೇ ಬಸಂತಿಯ (2006) ಸೋನಿಯಾ ಪಾತ್ರ ನಿಮ್ಮ ಕಣ್ಣಿಗೆ ಕಟ್ಟಿದಂತಿದೆ ಅಲ್ಲವೇ. ಈ ಚಿತ್ರದ ನಟನೆಗಾಗಿ ಸೋಹಾ ಆಲಿ ಖಾನ್ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಪುರಸ್ಕಾರವನ್ನು ಇಫಾದಲ್ಲಿ ಪಡೆದುಕೊಂಡಿದ್ದು ಜಿಫಾ ಅವಾರ್ಡ್‎ ಅನ್ನು ಮುಡಿಗೇರಿಸಿಕೊಂಡವರೂ ಕೂಡ. ಬಲಿಯೋಲ್ ಕಾಲೇಜ್, ಆಕ್ಸ್‎‌‌ಪರ್ಡ್‌‌‎ನಲ್ಲಿ ಮಾಡರ್ನ್ ಹಿಸ್ಟರಿಯನ್ನು ಅಭ್ಯಸಿಸಿದ ಇವರು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಪೊಲಿಟಿಕಲ್ ಸೈನ್ಸ್‎‌ನಿಂದ ಇಂಟರ್‌ನ್ಯಾಷನಲ್ ರಿಲೇಶನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

ಇಮ್ರಾನ್ ಖಾನ್

ಇಮ್ರಾನ್ ಖಾನ್

ಅಮೀರ್ ಖಾನ್ ಮತ್ತು ನಿರ್ದೇಶಕ/ನಿರ್ಮಾಪಕ ಮನ್ಸೂರ್ ಖಾನ್ ಸೋದರಳಿಯ, ನಿರ್ದೇಶಕ - ನಿರ್ಮಾಪಕ ನಾಸಿರ್ ಹುಸೇನ್ ಮೊಮ್ಮಗ ಇಮ್ರಾನ್ ಖಾನ್ ಜನಿಸಿದ್ದು ಮೆಡಿಸನ್, ವಿಸ್ಕೊನ್ಸಿ‌ನ್, ಯುಎಸ್‌‌ನಲ್ಲಿ. ಫ್ರಿಮೆಂಟ್ ಸ್ಕೂಲ್‌‎‌ನಲ್ಲಿ ಕಲಿಕೆಯನ್ನು ಆರಂಭಿಸಿದ ಇವರು ಲಾಸ್ ಏಂಜಲೀಸ್‌‎ನ ನ್ಯೂರ್ಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಫಿಲ್ಮ್ ಮೇಕಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಪರಿಣೀತಿ ಚೋಪ್ರಾ

ಪರಿಣೀತಿ ಚೋಪ್ರಾ

17 ಹರೆಯದಲ್ಲೆ ಲಂಡನ್‌‌‌‎ಗೆ ತೆರಳಿದ ಪರಿಣೀತಿ ಚೋಪ್ರಾ ಇನ್‌‎ವೆಸ್ಟ್‎ಮೆಂಟ್ ಬ್ಯಾಂಕರ್ ಆಗಬೇಕೆಂಬ ಗುರಿ ಹೊಂದಿದವರು. ಮ್ಯಾಂಚೆಸ್ಟರ್ ಬ್ಯುಸಿನೆಸ್ ಸ್ಕೂಲ್ ಅನ್ನು ಸೇರಿದ ಇವರು ವ್ಯವಹಾರ, ಹಣಕಾಸು ಮತ್ತು ಅರ್ಥಶಾಸ್ತ್ರದಲ್ಲಿ ಮೂರು ಪದವಿಗಳನ್ನು ಪಡೆದುಕೊಂಡವರು. ಆದರೆ 2011 ರಲ್ಲಿ ಸಿನಿ ರಂಗವನ್ನು ಆಯ್ದುಕೊಂಡು ಅದರಲ್ಲೇ ತಮ್ಮನ್ನು ತೊಡಗಿಸಿಕೊಂಡರು.

ರಿಚಾ ಚಡ್ಡಾ

ರಿಚಾ ಚಡ್ಡಾ

ಗ್ಯಾಂಗ್ಸ್ ಆಫ್ ವಾಸೇಪುರ್ ಭಾಗ 1 ಮತ್ತು ಭಾಗ 2 ರ ಅನೂಹ್ಯ ಅಭಿನಯಕ್ಕಾಗಿ ಫಿಲ್ಮ್‌‎ಫೇರ್ ಕ್ರಿಟಿಕ್ಸ್ ಪುರಸ್ಕಾರವನ್ನು ರಿಚಾ ಪಡೆದುಕೊಂಡಿದ್ದಾರೆ. ಅತ್ಯುತ್ತಮ ನಟಿ ಮಾತ್ರವಲ್ಲದೆ ಹೆಚ್ಚು ಶಿಕ್ಷಿತ ಬಾಲಿವುಡ್ ಸೆಲೆಬ್ರಿಟಿ ಕೂಡ ಹೌದು. 2002 ರಲ್ಲಿ ಸರ್ದಾರ್ ಪಟೇಲ್ ವಿದ್ಯಾಲಯದಿಂದ ಶಾಲಾ ಶಿಕ್ಷಣವನ್ನು ಮುಗಿಸಿಕೊಂಡ ನಂತರ, ದೆಹಲಿಯ ಸೈಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸ ವಿಷಯದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ.

English summary

Highly Educated Bollywood Celebrities in Kannada

We all know them for their glamor and acting skills, but hardly did we know that some of these Bollywood celebrities that we adore are highly educated too.
X
Desktop Bottom Promotion