For Quick Alerts
ALLOW NOTIFICATIONS  
For Daily Alerts

ಮಳೆಗಾಲದ ಬೈಕ್ ರೈಡ್ ಬೆಸ್ಟ್‌ ಎನ್ನುವುದು ಇದೇ ಕಾರಣಕ್ಕೆ : ರೈಡ್‌ಗೂ ಮುನ್ನ ಇರಲಿ ಎಚ್ಚರ!

|

ಮಳೆ ಆರಂಭವಾದರೆ ಸಾಕು ಬೈಕರ್ಸ್ ಲಾಂಗ್ ರೈಡ್ ಗೆ ತಮ್ಮ ಬೈಕನ್ನು ತಯಾರು ಮಾಡಿಟ್ಟುಕೊಂಡು ಟ್ರಿಪ್ ಗೆ ಹೊರಡುತ್ತಾರೆ. ಬೇಸಿಗೆಕಾಲಕ್ಕಿಂತ ಮಳೆಗಾಲದಲ್ಲೇ ಬೈಕರ್ಸ್ ರೈಡ್ ಹೋಗುವುದನ್ನು ನಾವು ಗಮನಿಸಬಹುದು. ಮಳೆಗಾಲದಲ್ಲಿ ಬೈಕ್ ರೈಡರ್ಸ್ ರೈಡ್ ಹೋಗಲು ತುಂಬಾನೆ ಖುಷಿ ಪಡುತ್ತಾರೆ. ಜಿಟಿ ಜಿಟಿ ಮಳೆ, ತಂಪು ಗಾಳಿ, ಹಚ್ಚ ಹಸಿರನ್ನು ಕಾಣಲು ಮಳೆಗಾಲದಲ್ಲಿ ಎಲ್ಲರ ಮನ ತುಡಿಯುತ್ತೇ ಆದರೆ ಬೈಕ್ ರೈಡ್ ಇಂತಹ ಕ್ಷಣಗಳನ್ನು ಮನತುಂಬಿಕೊಳ್ಳುವ ಖುಷಿ, ನೆಮ್ಮದಿ, ಸಂತೋಷ ಬೇರೆಯಾವುದರಲ್ಲೂ ಸಿಗೋದಿಲ್ಲ. ರೈನ್ ಕೋಟ್ ಧರಿಸಿ ರೈಡ್ ಗೆ ಹೊರಟರೆ ಊಟ, ತಿಂಡಿ ಏನು ಬೇಕಿಲ್ಲ. ಬೈಕ್ ರೈಡ್ ಹೊಟ್ಟೆ ತುಂಬಿಸುತ್ತೆ. ಹಾಗಾದರೆ ಮಳೆಗಾಲದ ಬೈಕ್ ರೈಡ್ ಮಾಡೋದ್ರಿಂದ ಯಾವ ರೀತಿಯ ಖುಷಿ ಸಿಗುತ್ತೆ? ಜನರು ಯಾವ ಕಾರಣಕ್ಕೆ ಮಳೆಗಾಲದಲ್ಲಿ ಬೈಕ್ ರೈಡ್ ಚೂಸ್ ಮಾಡುತ್ತಾರೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮಳೆಗಾಲದಲ್ಲಿ ಆಯಾಸ ಗೊತ್ತಾಗಲ್ಲ!

ಮಳೆಗಾಲದಲ್ಲಿ ಆಯಾಸ ಗೊತ್ತಾಗಲ್ಲ!

ಮಳೆಗಾಲದಲ್ಲಿ ಬೈಕ್ ರೈಡ್ ಅತ್ಯಂತ ಕಂಫರ್ಟ್ ಯಾಕೆಂದ್ರೆ ಮಳೆಗಾಲದಲ್ಲಿ ಎಷ್ಟು ದೂರ ರೈಡ್ ಮಾಡಿದರೂ ಆಯಾಸವಾಗುವುದಿಲ್ಲ. ಹೌದು, ಬೇಸಿಗೆಕಾಲದಲ್ಲಿ ವಿಪರೀತ ಉರಿ ಬಿಸಿಲು, ದಣಿವು, ಬೆವರು ಬರುವುದರಿಂದ ಬೈಕ್ ರೈಡ್ ಮಾಡಲು ಆಯಾಸವಾಗುತ್ತದೆ. ಆದರೆ ಮಳೆಗಾಲದಲ್ಲಿ ಹಾಗಲ್ಲ ಮಳೆ ನೀರು ಬೀಳುತ್ತಲೇ ಇರುವುದರಿಂದ ಆಯಾಸ ಅನಿಸಲ್ಲ. ಮಳೆಗಾಲದಲ್ಲಿ ಕಪ್ಪಗಿನ ಮೋಡ ಹಾಗೂ ತಂಪಾದ ಗಾಳಿ ಬೈಕ್ ರೈಡ್ ಮಾಡಲು ಇನ್ನಷ್ಟು ಖುಷಿ ನೀಡುತ್ತದೆ. ಅಲ್ಲದೇ ನಾವು ಹೋಗುವ ದಾರಿಯಲ್ಲಿ ಜಲಪಾತ, ಸುಂದರ ರಮಣೀಯ ತೋಟಗಳಿದ್ದರೆ ಅದರ ಹಚ್ಚ ಹಸಿರು ನಮ್ಮ ಕಣ್ಣು ತಂಪುಗೊಳಿಸುತ್ತದೆ.ಮನಸ್ಸು ಹಗುರವಾದಂತೆ ಭಾಸವಾಗುತ್ತದೆ. ಈ ಕಾರಣಕ್ಕೆ ಅನೇಕರಿಗೆ ಮಳೆಗಾಲದಲ್ಲಿ ಬೈಕ್ ರೈಡ್ ಅಂದರೆ ತುಂಬಾನೇ ಖುಷಿ ನೀಡುತ್ತದೆ.

ಡರ್ಟ್ ರೋಡ್ ರೈಡ್ ಖುಷಿ!

ಡರ್ಟ್ ರೋಡ್ ರೈಡ್ ಖುಷಿ!

ಅನೇಕ ಬೈಕರ್ ಗಳಿಗೆ ಡರ್ಟ್ ರೋಡ್ ರೈಡ್ ಎಂದರೆ ತುಂಬಾನೇ ಖುಷಿ. ಈ ಖುಷಿ ಬೇಸಿಗೆ, ಚಳಿಗಾಲದಲ್ಲಿ ಸಿಗೋದಿಲ್ಲ. ಆದರೆ ಮಳೆಗಾಲದಲ್ಲಿ ಡರ್ಟ್ ರೋಡ್ ಎಕ್ಸ್ ಪೀರಿಯೆನ್ಸ್ ಸಿಗುತ್ತದೆ. ಮಳೆಗಾಲವಾಗಿರೋದ್ರಿಂದ ರಸ್ತೆಗಳಿಗೆ ನೀರು ಬಿದ್ದು ಸಂಪೂರ್ಣ ಕೆಸರುಮಯವಾಗುತ್ತದೆ. ಹೀಗಾಗಿ ಈ ಮಣ್ಣು ರಸ್ತೆಯಲ್ಲಿ ಬೈಕ್ ಮಾಡೋ ಆನಂದವೇ ಬೇರೆ. ಕೆಲವರು ಈ ಕೆಸರುಮಯ ರಸ್ತೆಯಲ್ಲಿ ಬೇಕಾಂತಲೇ ಬೈಕ್ ನಲ್ಲಿ ಬೀಳುವುದುಂಟು. ಜಾರುತ್ತಾ, ಬೀಳುತ್ತಾ, ಏಳುತ್ತಾ ಹೋಗುವ ಇಂತಹ ರೈಡ್ ಗಳು ನಮ್ಮ ಜೀವನದ ಪೂರ್ತಿ ಉತ್ತಮ ಮೆಮೋರಿಯಾಗಿರುತ್ತದೆ. ಹೀಗಾಗಿ ಅನೇಕರು ಮಳೆಗಾಲದಲ್ಲಿ ರೈಡ್ ಮಾಡಲು ಖುಷಿ ಪಡುತ್ತಾರೆ. ಅವರಿಗೆ ಮಳೆಗಾಲದಲ್ಲೇ ಖುಷಿ ಸಿಗುತ್ತದೆ.

ಸ್ಥಳಗಳನ್ನು ಬೈಕ್ ನಲ್ಲೇ ನೋಡುವ ಬಯಕೆ!

ಸ್ಥಳಗಳನ್ನು ಬೈಕ್ ನಲ್ಲೇ ನೋಡುವ ಬಯಕೆ!

ಮಳೆಗಾಲ ಎಂದರೆ ಗಿಡ-ಮರಗಳು ಹಚ್ಚ ಹಸಿರಿನಿಂದ ನಲಿಯುತ್ತಿರುವ ಸಮಯ. ಈ ಸಂದರ್ಭದಲ್ಲಿ ಅನೇಕರು ಪ್ರಕೃತಿ ರಮಣೀಯ ಸ್ಥಳಗಳನ್ನು ನೋಡಲು ಬಯಸುತ್ತಾರೆ. ಆದರೆ ಈ ಪೈಕಿ ಹೆಚ್ಚಿನವರು ಬೈಕ್ ನಲ್ಲೇ ಇಂತಹ ಸ್ಥಳಗಳನ್ನು ನೋಡಲು ಬಯಸುತ್ತಾರೆ ಎನ್ನುವುದು ಅಧ್ಯಯನದಿಂದ ಬಯಲಾಗಿದೆ. ರೈನ್ ಕೋಟ್ ಹಾಕಿ ಒದ್ದೆಯಾಗುತ್ತ ಮಳೆಯ ರಿಯಲ್ ಫೀಲ್ ಅನುಭವಿಸುತ್ತ ಇಂತಹ ಸ್ಥಳಗಳನ್ನು ವೀಕ್ಷಿಸಲು ಬಯಸುತ್ತಾರೆ. ಇದೇ ಅವರಿಗೆ ಹ್ಯಾಪಿ ಫೀಲ್ ನೀಡುತ್ತದೆ.

ಸವಾಲುಗಳೊಂದಿಗೆ ಬೈಕ್ ರೈಡ್!

ಸವಾಲುಗಳೊಂದಿಗೆ ಬೈಕ್ ರೈಡ್!

ಮಳೆಗಾಲ ಎಂದರೆ ಬೈಕ್ ರೈಡಿಂಗ್ ಕಷ್ಟದ ಕೆಲಸ. ಯಾಕೆಂದರೆ ಮಳೆ ಬಂದರೆ ದಾರಿ ಕಾಣದೆ ಸಮಸ್ಯೆಯಾಗುವುದು, ಬ್ಯಾಡ್ ಲೈಟ್ ಹೀಗೆ ಹಲವು ಸಮಸ್ಯೆಗಳು ಇರುತ್ತದೆ. ಆದರೆ ಅನೇಕರಿಗೆ ಈ ಸವಾಲುಗಳೇ ತುಂಬಾ ಇಷ್ಟವಾಗುತ್ತದೆ. ಇಂತಹ ಸವಾಲುಗಳನ್ನು ಎದುರಿಸಿ ಬೈಕ್ ರೈಡ್ ಮಾಡಲು ಹೋಗುತ್ತಾರೆ. ಹೀಗಾಗಿ ಮಳೆಗಾಲದಲ್ಲಿ ಬೈಕ್ ರೈಡಿಂಗನ್ನು ಅನೇಕರು ಇಷ್ಟಪಡುತ್ತಾರೆ. ಇನ್ನು ಮಳೆಗಾಲದಲ್ಲಿ ಬೈಕ್ ರೈಡಿಂಗ್ ಅಂದರೆ ಫನ್ನಿ ಕೂಡ ಹೌದು, ಯಾಕೆಂದರೆ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತಿರುತ್ತದೆ ಇದನ್ನು ಜೋರಾಗಿ ಹಾರಿಸಿ ಕೆಲವರು ಬೈಕ್ ರೈಡ್ ಮಾಡುತ್ತಾರೆ. ಇನ್ನು ಕೆಲವರು ಈ ರೀತಿ ನೀರು ನಿಂತಿದ್ದರೆ ಕಾಲಿನಿಂದ ಹಾರಿಸಿಕೊಂಡು ಹೋಗುತ್ತಾರೆ. ಈ ಎಂಜಾಯ್ ಮೆಂಟ್ ಕೇವಲ ಮಳೆಗಾಲದಲ್ಲಿ ಸಿಗುತ್ತದೆ.

ಲವರ್ಸ್ ಗಳ ಬೈಕ್ ರೈಡ್!

ಲವರ್ಸ್ ಗಳ ಬೈಕ್ ರೈಡ್!

ಅನೇಕ ಲವರ್ಸ್ ಗಳು ಮಳೆಗಾಲದಲ್ಲಿ ಬೈಕ್ ರೈಡ್ ಹೋಗುವುದಂಟು. ಈ ಸಮಯದಲ್ಲಿ ಅವರಿಗೆ ವಿಶೇಷವಾದ ಅನುಭವ ಬೈಕ್ ನಿಂದ ಸಿಗುತ್ತದೆ. ಮಳೆಯಲ್ಲಿ ತಬ್ಬಿಕೊಂಡು ಹೋಗುವುದು, ಇಬ್ಬರು ಮಳೆಯನ್ನ ಒಟ್ಟಿಗೆ ಫೀಲ್ ಮಾಡೋದು, ಮಳೆಯಲ್ಲಿ ಬಿಸಿ ಬಿಸಿಯಾಗಿ ಏನಾದ್ರೂ ತಿನ್ನೋದು ಇವೆಲ್ಲ ರೊಮ್ಯಾನ್ಸ್ ನ ಭಾಗವಾಗಿರೋದ್ರಿಂದ ಮಳೆಯನ್ನು ರೊಮ್ಯಾಂಟಿಕ್ ಕಾಲ ಅಂತಲೂ ಕರೆಯುತ್ತಾರೆ.

ಬೈಕ್ ರೈಡ್ ಜೊತೆಗೆ ಇರಲಿ ಮುನ್ನೆಚ್ಚರಿಕೆ!

ಬೈಕ್ ರೈಡ್ ಜೊತೆಗೆ ಇರಲಿ ಮುನ್ನೆಚ್ಚರಿಕೆ!

ಮಳೆಗಾಲದಲ್ಲಿ ಬೈಕ್ ರೈಡ್ ಅಂದರೆ ತುಂಬಾನೇ ಡೇಂಜರಸ್ ಯಾಕೆಂದ್ರೆ ರಸ್ತೆಗಳು ಸರಿಯಾಗಿ ಕಾಣಿಸುವುದಿಲ್ಲ, ರಸ್ತೆಗಳು ಜಾರುವುದು , ಅಪಘಾತ ಹೀಗೆ ಅನೇಕ ಸಮಸ್ಯೆಗಳು ಇರುತ್ತದೆ. ಹಾಗಾದರೆ ನಮ್ಮ ಮುನ್ನೆಚ್ಚರಿಕಾ ಕ್ರಮಗಳು ಹೇಗೆ ಇರಬೇಕು ಅನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಜ್ವರ, ಶೀತ ಉಂಟಾಗುತ್ತದೆ!

ಜ್ವರ, ಶೀತ ಉಂಟಾಗುತ್ತದೆ!

ಅನೇಕರು ಮಳೆಗಾಲದಲ್ಲಿ ಬೈಕ್ ರೈಡ್ ಹೋಗುತ್ತ ಒದ್ದೆಯಾಗುತ್ತಾರೆ. ಕೆಲವರಿಗೆ ಮಳೆಯಿಂದ ಯಾವುದೇ ಸಮಸ್ಯೆ ಸಂಭವಿಸುದಿಲ್ಲ ಆದರೆ ಕೆಲವರಿಗೆ ಜ್ವರ, ಶೀತ, ನೆಗಡಿ ಉಂಟಾಗುವ ಸಾಧ್ಯತೆ ಹೆಚ್ಚು. ಕೆಲವರು ಬೈಕ್ ರೈಡ್ ನಿಂದ ಒಂದುವಾರ ಮಲಗಿದರೂ ಅಚ್ಚರಿಯಿಲ್ಲ. ಹೀಗಾಗಿ ಒದ್ದೆಯಾಗದಂತೆ, ಕಿವಿಗೆ ಗಾಳಿ ಹೋಗದಂತೆ ರೈಡ್ ಮಾಡುವುದು ಒಳ್ಳೆಯ ಐಡಿಯಾ.

ರಸ್ತೆ ಬಗ್ಗೆ ಅರಿತಿರುವುದು ಒಳ್ಳೆಯದು!

ರಸ್ತೆ ಬಗ್ಗೆ ಅರಿತಿರುವುದು ಒಳ್ಳೆಯದು!

ಮಳೆ ಬಂದರೆ ರಸ್ತೆಗಳು ಜಾರುವುದು ಜಾಸ್ತಿ, ಅಲ್ಲದೇ ಜೋರು ಮಳೆಯಿಂದ ರಸ್ತೆಗಳು ಕಾಣುವುದಿಲ್ಲ ಇದರಿಂದ ಅಪಘಾತಗಳು ಸಂಭವಿಸಬಹುದು. ಹೀಗಾಗಿ, ಮಳೆಗಾಲದಲ್ಲಿ ಮೆಲ್ಲಗೆ ಬೈಕ್ ರೈಡ್ ಮಾಡುವುದು ಉತ್ತಮ. ಮೆಲ್ಲಗೆ ರೈಡ್ ಮಾಡಿದರೆ ಸಮಸ್ಯೆ ಬರುವುದು ಕಡಿಮೆ. ಅತೀ ವೇಗ ಅಪಘಾತ ಅಥವಾ ದುರಂತಕ್ಕೆ ಕಾರಣವಾಗುತ್ತದೆ.

ಬೈಕ್ ಕಂಡೀಶನ್ ನೋಡಿಕೊಳ್ಳಬೇಕು!

ಬೈಕ್ ಕಂಡೀಶನ್ ನೋಡಿಕೊಳ್ಳಬೇಕು!

ಮಳೆಗಾಲದಲ್ಲಿ ಲಾಂಗ್ ರೈಡ್ ಮಾಡುವ ಪ್ಲಾನ್ ಇದ್ದರೆ ಬೈಕನ್ನು ಮೊದಲು ರೆಡಿ ಮಾಡಬೇಕು. ಹೌದು, ಬೈಕ್ ಕಂಡೀಶನ್ ಆಗಿ ಇಟ್ಟುಕೊಳ್ಳಬೇಕು. ಬೈಕ್ ನ ಬ್ರೇಕ್, ಕ್ಲಚ್, ಟಯರ್ ಹೀಗೆ ಎಲ್ಲಾ ಪಾರ್ಟ್ ಗಳ ಜನರಲ್ ಚೆಕ್ ಅಪ್ ಮಾಡಿಕೊಳ್ಳಬೇಕು. ಯಾಕೆಂದರೆ ಮಳೆಗಾಲದಲ್ಲಿ ಬ್ರೇಕ್, ಕ್ಲಚ್ ನ ಸಮಸ್ಯೆ ಆಗಾಗ ಬರುತ್ತಿರುತ್ತದೆ. ಹೀಗೆ, ಮಳೆಯಿಂದ ಬೈಕ್ ರೈಡ್ ಎಷ್ಟು ನೆಮ್ಮದಿ ನೀಡುತ್ತದೋ ಅಷ್ಟೇ ಅಪಾಯವು ಇರುತ್ತದೆ.

English summary

why bike ride gives happiness in monsoon in kannada

why bike ride gives happiness in monsoon in kannada , Read on....
X
Desktop Bottom Promotion