For Quick Alerts
ALLOW NOTIFICATIONS  
For Daily Alerts

Varaha Jayanti : ವರಾಹ ಜಯಂತಿ 2021: ದಿನಾಂಕ, ಮಹತ್ವ, ಆಚರಣೆ ಹಾಗೂ ಇತಿಹಾಸದ ಮಾಹಿತಿ ಇಲ್ಲಿದೆ

|

ಸೆಪ್ಟೆಂಬರ್ 9ರಂದು ವರಾಹ ಜಯಂತಿ. ಇದನ್ನು ಪ್ರತಿ ವರ್ಷ ಮಾಘ ಮಾಸದ ಎರಡನೇ ದಿನ (ದ್ವಾದಶಿ ತಿಥಿ) ಆಚರಿಸಲಾಗುತ್ತದೆ. ವಿಷ್ಣುವಿನ ವರಾಹ ಅವತಾರ ಜನ್ಮತಾಳಿದ ಸೂಚಕವಾಗಿ ಈ ಹಬ್ಬವನ್ನು ಆಚರಣೆ ಮಾಡಲಾಗುವುದು. ಈ ಕುರಿತ ಮತ್ತಷ್ಟು ಮಾಹಿತಿಗಾಗಿ ಈ ಕೆಳಗೆ ನೋಡಿ.

2021ರ ವರಾಹ ಜಯಂತಿಯ ದಿನಾಂಕ ಮತ್ತು ಸಮಯ:

2021ರ ವರಾಹ ಜಯಂತಿಯ ದಿನಾಂಕ ಮತ್ತು ಸಮಯ:

ಈ ವರ್ಷ ವರಾಹ ಜಯಂತಿಯನ್ನು ಗುರುವಾರ, ಸೆಪ್ಟೆಂಬರ್ 9, 2021 ರಂದು ಆಚರಿಸಲಾಗುತ್ತದೆ.

ವರಾಹ ಜಯಂತಿ ಮುಹೂರ್ತ 01:33 PM ರಿಂದ 04:03 PM

ತೃತೀಯ ತಿಥಿ ಆರಂಭ: ಬೆಳಿಗ್ಗೆ 02:33 ಕ್ಕೆ

ತೃತೀಯ ತಿಥಿ ಅಂತ್ಯ: 10 ನೇ ಸೆಪ್ಟೆಂಬರ್, ಮಧ್ಯಾಹ್ನ 12:18 ಕ್ಕೆ

ವರಾಹ ಜಯಂತಿ ಇತಿಹಾಸ, ಮಹತ್ವ:

ವರಾಹ ಜಯಂತಿ ಇತಿಹಾಸ, ಮಹತ್ವ:

ಮಥುರಾದಲ್ಲಿ, ವರಾಹ ದೇವರ ಹಳೆಯ ದೇವಸ್ಥಾನವಿದ್ದು, ಅಲ್ಲಿ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಜನರು ಈ ದಿನವನ್ನು ಬಹಳ ಸಂತೋಷ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ಇದಲ್ಲದೇ ತಿರುಮಲದಲ್ಲಿ ಇನ್ನೊಂದು ದೇವಸ್ಥಾನವಿದ್ದು, ಇದನ್ನು ಭೂ ವರಾಹ ಸ್ವಾಮಿ ದೇವಸ್ಥಾನ ಎಂದು ಕರೆಯಲಾಗುತ್ತದೆ.

ವರಾಹವನ್ನು ಪೂಜಿಸುವುದರಿಂದ, ಸಂತೋಷ, ಆರೋಗ್ಯ ಮತ್ತು ಸಂಪತ್ತನ್ನು ನೀಡುತ್ತಾನೆ ಎಂದು ಭಕ್ತರು ನಂಬುತ್ತಾರೆ. ದಂತಕಥೆಯ ಪ್ರಕಾರ ಅರ್ಧ ಹಂದಿ ಮತ್ತು ಅರ್ಧ ಮಾನವ ರೂಪದಲ್ಲಿ ವರಾಹನು ಹಿರಣ್ಯಾಕ್ಷನನ್ನು ಸೋಲಿಸಿ, ಕೆಟ್ಟದ್ದಕ್ಕೆ ಕೊನೆ ಹಾಡಿದನು. ಆದ್ದರಿಂದ, ಈ ಹಬ್ಬವು ಯಾವಾಗಲೂ ಕೆಟ್ಟ ವಿಚಾರಗಳ ವಿರುದ್ದ ಒಳ್ಳೆಯದಕ್ಕೆ ಜಯವನ್ನು ನೀಡುತ್ತದೆ ಎಂಬದನ್ನು ಸೂಚಿಸುವುದು.

 ವರಾಹ ಜಯಂತಿ ಆಚರಣೆಗಳು, ಪೂಜಾ ವಿಧಾನ:

ವರಾಹ ಜಯಂತಿ ಆಚರಣೆಗಳು, ಪೂಜಾ ವಿಧಾನ:

ವರಾಹ ಜಯಂತಿಯು ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿದ್ದು, ಈ ಶುಭ ದಿನದಂದು, ಭಕ್ತರು ಬೇಗನೆ ಎದ್ದು, ಸ್ನಾನ ಮಾಡಿ, ನಂತರ ದೇವರನ್ನು ಪೂಜಿಸುತ್ತಾರೆ. ವರಾಹ ಸ್ವಾಮಿಯ ಮೂರ್ತಿಗೆ ತುಪ್ಪ, ಬೆಣ್ಣೆ, ಹಾಲು, ಜೇನುತುಪ್ಪ ಮತ್ತು ತೆಂಗಿನ ನೀರನ್ನ ಹೊಂದಿರುವ ಪವಿತ್ರ ಅಭಿಷೇಕ ಮಾಡಲಾಗುವುದು. ತದನಂತರ ಮಾವಿನೆಲೆ, ನೀರು, ತೆಂಗಿನಕಾಯಿಯ ಕಲಶದ ಮೇಲೆ ವರಾಹ ದೇವರ ವಿಗ್ರಹವನ್ನು ಇಟ್ಟು, ಪೂಜಿಸುತ್ತಾರೆ. ಪೂಜೆ ಪೂರ್ಣಗೊಂಡ ನಂತರ, ದೇವರ ಆಶೀರ್ವಾದಕ್ಕಾಗಿ ಭಗವದ್ಗೀತೆ ಮತ್ತು ಮಂತ್ರಗಳನ್ನು ಪಠಿಸುತ್ತಾರೆ.

ವರಾಹ ಜಯಂತಿಯ ಪ್ರಯೋಜನಗಳು:

ವರಾಹ ಜಯಂತಿಯ ಪ್ರಯೋಜನಗಳು:

ಭಕ್ತರು ವರಾಹ ಜಯಂತಿಯಂದು ಉಪವಾಸ ಮಾಡುತ್ತಾರೆ, ಇದರಿಂದ ದೇವರು ಅವರಿಗೆ ಆರೋಗ್ಯ, ಸಂಪತ್ತು ಮತ್ತು ಸಂತೋಷವನ್ನು ನೀಡುತ್ತಾನೆ ಎಂದು ನಂಬುತ್ತಾರೆ. ಹೆಚ್ಚಿನ ಕೃಪೆಗಾಗಿ ಈ ದಿನ ಹಣ ಅಥವಾ ಬಟ್ಟೆಗಳನ್ನು ಬಡಜನರಿಗೆ ನೀಡಬೇಕು.

English summary

Varaha Jayanti 2021 Date, History, Rituals. Significance, Worship method and Benefits in Kannada

Here we talking about Varaha Jayanti 2021 date, history, rituals. significance, worship method and benefits, read on
Story first published: Wednesday, September 8, 2021, 9:00 [IST]
X