For Quick Alerts
ALLOW NOTIFICATIONS  
For Daily Alerts

Ambedkar Jayanthi 2020 : ಅಂಬೇಡ್ಕರ್ರ ಬಗ್ಗೆ ಈವರೆಗೂ ತಿಳಿದಿರದ ಆಸಕ್ತಿಕರ ವಿಚಾರಧಾರೆಗಳು

|

ಭಾರತದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತದ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜನರ ಪರವಾಗಿ ಹೋರಾಡಿ ಗೆದ್ದ ಮತ್ತು ಅವರಿಗಾಗಿ, ಅವರ ಭವಿಷ್ಯದ ಸಮೃದ್ಧ ಜೀವನಕ್ಕಾಗಿ ಕಾನೂನುಗಳನ್ನು ರೂಪಿಸಿದ ಏಕೈಕ ವ್ಯಕ್ತಿ ಎಂದರೆ ಅದು ಡಾ. ಬಿ. ಆರ್. ಅಂಬೇಡ್ಕರ್.

Unknown Facts About B. R. Ambedkar

ಭೀಮರಾವ್ ಆಗಿ 14 ನೇ ಏಪ್ರಿಲ್, 1891 ರಂದು ಒಂದು ಬುಡಕಟ್ಟು ಕುಟುಂಬದಲ್ಲಿ ಜನಿಸಿ ಸ್ವಾತಂತ್ರ್ಯ ನಂತರದ ಇಡೀ ಭಾರತದ ಜನಜೀವನದ ಚಿತ್ರಣ ಹೇಗಿರಬೇಕೆಂದು ಸಂವಿಧಾನದ ರೂಪದಲ್ಲಿ ಹೊರ ತಂದ ಮಹಾವ್ಯಕ್ತಿ. ಹುಟ್ಟಿದ್ದು ಮಧ್ಯಪ್ರದೇಶದ ಮಹೌ ನಲ್ಲಾದರೂ ಮರಣ ಹೊಂದಿದ್ದು ಮಾತ್ರ ತಮ್ಮ 65ನೇ ವಯಸ್ಸಿನಲ್ಲಿ 6ನೇ ಡಿಸೆಂಬರ್, 1956 ರಂದು ಈಗಿನ ನವದೆಹಲಿಯಲ್ಲಿ.

ಡಾ ಬಾಬಾಸಾಹೇಬ್ ಅಂಬೇಡ್ಕರ್ ರವರ ಪರಿಚಯ ನೋಡುವುದಾದರೆ.......

ಡಾ ಬಾಬಾಸಾಹೇಬ್ ಅಂಬೇಡ್ಕರ್ ರವರ ಪರಿಚಯ ನೋಡುವುದಾದರೆ.......

ಅಂಬೇಡ್ಕರ್ ಅವರ ಜನ್ಮದಿನ : 14 ಏಪ್ರಿಲ್, 1891.

ಅಂಬೇಡ್ಕರ್ ರವರು ಹುಟ್ಟಿದ ಸ್ಥಳ : ಮಹೌ, ಮಧ್ಯಪ್ರದೇಶ (ಈಗಿನ ಡಾಕ್ಟರ್ ಅಂಬೇಡ್ಕರ್ ನಗರ )

ಅಂಬೇಡ್ಕರ್ ಅವರ ಮರಣ : 6 ಡಿಸೆಂಬರ್ 1956 ( ತಮ್ಮ 65 ನೇ ವಯಸ್ಸಿನಲ್ಲಿ )

ಅಂಬೇಡ್ಕರ್ ರವರ ತಂದೆ : ರಾಮಜಿ ಮಾಲೋಜಿ ಸಕ್ಪಾಲ್

ಅಂಬೇಡ್ಕರ್ ಅವರ ತಾಯಿ : ಭೀಮಬಾಯಿ

ಅಂಬೇಡ್ಕರ್ ಅವರ ಹೆಂಡತಿ : 1) ರಮಾಬಾಯಿ ಅಂಬೇಡ್ಕರ್ (ವಿವಾಹ: 1906, ಮರಣ: 1935 ), 2) ಡಾಕ್ಟರ್ ಸವಿತಾ ಅಂಬೇಡ್ಕರ್ (ವಿವಾಹ: 1948, ಮರಣ: 2003)

ಅಂಬೇಡ್ಕರ್ ಅವರ ಮಗ : ಯಶವಂತ ಭೀಮರಾವ್ ಅಂಬೇಡ್ಕರ್

ಮೊಮ್ಮಗ : ಪ್ರಕಾಶ್ ಅಂಬೇಡ್ಕರ್

ಅಂಬೇಡ್ಕರ್ ರವರ ಪದವಿ ವಿದ್ಯಾಭ್ಯಾಸಗಳು : ಮುಂಬೈ ವಿಶ್ವವಿದ್ಯಾಲಯದಲ್ಲಿ ಬಿ ಎ ಪದವಿ, ಲಂಡನ್ ದೇಶದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಎಂ ಎ ಪಿ ಎಚ್ ಡಿ, ಎಲ್ ಎಲ್ ಡಿ

ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಎಂಎಸ್ಸಿ, ಡಿಎಸ್ಸಿ, ಗ್ರೇ'ಸ್ ಇನ್ (ಬ್ಯಾರಿಸ್ಟರ್ ಅಟ್ ಲಾ)

ಪ್ರತಿಭಾ ಪುರಸ್ಕಾರಗಳು :1956 ರಲ್ಲಿ ಬೋಧಿಸತ್ವ, 1990 ರಲ್ಲಿ ಭಾರತರತ್ನ, 2004 ರಲ್ಲಿ "ಫಸ್ಟ್ ಕೊಲಂಬಿಯನ್ ಅಹೆಡ್ ಆಫ್ ಧೇರ್ ಟೈಮ್ ", 2012 ರಲ್ಲಿ " ದಿ ಗ್ರೇಟೆಸ್ಟ್ ಇಂಡಿಯನ್" ಎಂಬ ಪುರಸ್ಕಾರ.

ಅಂಬೇಡ್ಕರ್ ರವರ ರಾಜಕೀಯ ಪಕ್ಷಗಳು : ಶೆಡ್ಯೂಲ್ಡ್ ಕ್ಯಾಸ್ಟ್ ಫೆಡರೇಶನ್, ಇಂಡಿಪೆಂಡೆಂಟ್ ಲೇಬರ್ ಪಾರ್ಟಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ

ಡಾ. ಬಿ ಆರ್ ಅಂಬೇಡ್ಕರ್ ಬಗೆಗೆ ತಿಳಿದಿರದ ಸತ್ಯಗಳು

ಡಾ. ಬಿ ಆರ್ ಅಂಬೇಡ್ಕರ್ ಬಗೆಗೆ ತಿಳಿದಿರದ ಸತ್ಯಗಳು

1. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ತಮ್ಮ ಪೋಷಕರಿಗೆ ಕೊನೆಯ ಮತ್ತು 14 ನೇ ಮಗು.

2. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಕ್ಕ ವಯಸ್ಸಿನ ನಿಜವಾದ ಅಡ್ಡಹೆಸರು ಎಂದರೆ ಅದು ಅಂಬಾವೊಡೇಕರ್. ಆದರೆ ಅವರ ಗುರುಗಳಾದ ಮಹಾದೇವ ಅಂಬೇಡ್ಕರ್ ರವರು ಹುಡುಗನ ಬುದ್ಧಿವಂತಿಕೆಯನ್ನು ಗಮನಿಸಿ ಅಂಬೇಡ್ಕರ್ ಎಂಬ ಉಪನಾಮವನ್ನು ಶಾಲೆಯ ದಾಖಲೆಗಳಲ್ಲಿ ನೀಡಿದರು.

3. ಪ್ರಥಮ ಬಾರಿಗೆ ಭಾರತದಿಂದ ಹೊರಗೆ ಅಂದರೆ ಹೊರದೇಶದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ನಮ್ಮ ಭಾರತದ ಪ್ರಥಮ ಪ್ರಜೆ ಎಂದರೆ ಅದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್.

ಲಂಡನ್ ಸಂಗ್ರಹಾಲಯದಲ್ಲಿ ಪ್ರತಿಮೆ

ಲಂಡನ್ ಸಂಗ್ರಹಾಲಯದಲ್ಲಿ ಪ್ರತಿಮೆ

4. ಲಂಡನ್ ಸಂಗ್ರಹಾಲಯದಲ್ಲಿ ಕಾರ್ಲ್ ಮಾರ್ಕ್ಸ್ ಪ್ರತಿಮೆಯ ಜೊತೆಗೆ ಸೇರಿಸಲ್ಪಟ್ಟ ಏಕೈಕ ಭಾರತೀಯ ಹೆಮ್ಮೆಯ ಪುತ್ರನ ಪ್ರತಿಮೆ ಎಂದರೆ ಅದು ಡಾ. ಬಿ ಆರ್ ಅಂಬೇಡ್ಕರ್ ಅವರದು.

5. ಭಾರತದ ತ್ರಿವರ್ಣ ಧ್ವಜದಲ್ಲಿ ನಟ್ಟನಡುವೆ ಕಂಡು ಬರುವ ಅಶೋಕ ಚಕ್ರದ ರೂವಾರಿ ಡಾ ಬಿ ಆರ್ ಅಂಬೇಡ್ಕರ್. ನಮ್ಮ ಭಾರತ ರಾಷ್ಟ್ರದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ.

6. ಅರ್ಥಶಾಸ್ತ್ರದಲ್ಲಿ ಅಂಬೇಡ್ಕರ್ ರವರನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಪ್ರೊಫೆಸರ್ ಅಮರ್ತ್ಯ ಸೇನ್ ರವರು ತಂದೆಯೆಂದು ಗೌರವಿಸಿದರು.

ವಿಶ್ವದ ಅತಿ ದೊಡ್ಡ ಖಾಸಗಿ ಗ್ರಂಥಾಲಯ

ವಿಶ್ವದ ಅತಿ ದೊಡ್ಡ ಖಾಸಗಿ ಗ್ರಂಥಾಲಯ

7. ಮಧ್ಯಪ್ರದೇಶ ಮತ್ತು ಬಿಹಾರದ ಭವಿಷ್ಯದ ಉತ್ತಮ ಬೆಳವಣಿಗೆಗಾಗಿ ಬಾಬಾಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ರವರು ಈ ರಾಜ್ಯಗಳ ವಿಭಜನೆಯನ್ನು 50 ರ ದಶಕದಲ್ಲಿಯೇ ಪ್ರಸ್ತಾಪಿಸಿದ್ದರು. ಆದರೆ ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯವನ್ನು ವಿಭಜಿಸಿ ಛತ್ತಿಸ್ಗಢ ಮತ್ತು ಜಾರ್ಖಂಡ್ ಎಂಬ ಎರಡು ರಾಜ್ಯಗಳನ್ನಾಗಿ 2000 ಇಸವಿಯ ನಂತರ ರೂಪಿಸಿದರು.

8. ಬಾಬಾಸಾಹೇಬ್ ರವರ ಸ್ವಂತ ಗ್ರಂಥಾಲಯವಾದ " ರಾಜಗ್ರಿಹ" ಸುಮಾರು 50,000ಕ್ಕೂ ಸಂಖ್ಯೆಗಿಂತ ಅಧಿಕ ಪುಸ್ತಕಗಳನ್ನು ಹೊಂದಿದ್ದು, ಇಡೀ ವಿಶ್ವದ ಅತಿ ದೊಡ್ಡ ಖಾಸಗಿ ಗ್ರಂಥಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

9. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ "ವೈಟಿಂಗ್ ಫಾರ್ ಎ ವೀಸಾ" ಎಂಬ ಪುಸ್ತಕ ಇಂದು ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಗಿ ಅಧ್ಯಯನ ಮಾಡಲಾಗುತ್ತಿದೆ. ಕೊಲಂಬಿಯಾ ವಿಶ್ವವಿದ್ಯಾಲಯ 2004 ರಲ್ಲಿ ವಿಶ್ವದ ಶ್ರೇಷ್ಠ 100 ವಿದ್ವಾಂಸರುಗಳನ್ನು ಹೆಸರಿಸಿ ಪಟ್ಟಿ ಮಾಡಲು ಮುಂದಾಯಿತು. ಅದರಲ್ಲಿ ಮೊದಲನೆ ಹೆಸರು ಡಾ ಭೀಮರಾವ್ ಅಂಬೇಡ್ಕರ್ ಅವರದು ಎಂದರೆ ನಿಜಕ್ಕೂ ಸಂತೋಷವಾಗುತ್ತದೆ.

64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ

64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ

10. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು 64 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರಿಗೆ 9 ಭಾಷೆಗಳು ಓದಲು, ಬರೆಯಲು ಮತ್ತು ಮಾತನಾಡಲು ಬರುತ್ತಿದ್ದವು, ಅವುಗಳೆಂದರೆ ಹಿಂದಿ, ಪಾಳಿ, ಸಂಸ್ಕೃತ, ಆಂಗ್ಲ, ಫ್ರೆಂಚ್, ಜರ್ಮನ್, ಮರಾಠಿ, ಪರ್ಷಿಯನ್ ಮತ್ತು ಗುಜರಾತಿ ಭಾಷೆಗಳು. ಇಷ್ಟೇ ಅಲ್ಲದೆ ಅಂಬೇಡ್ಕರ್ ರವರು ತಮ್ಮ 21 ವರ್ಷಗಳ ಅಧ್ಯಯನದಲ್ಲಿ ವಿಶ್ವದ ಎಲ್ಲಾ ಧರ್ಮಗಳ ಬಗ್ಗೆ ಅಪಾರವಾದ ಜ್ಞಾನ ಸಂಪಾದಿಸಿಕೊಂಡಿದ್ದರು.

11. " ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ " ನಲ್ಲಿ ಬಾಬಾಸಾಹೇಬ್ ರವರು ಎಂಟು ವರ್ಷಗಳ ಅಧ್ಯಯನವನ್ನು ಕೇವಲ 2 ವರ್ಷ 3 ತಿಂಗಳಲ್ಲಿ ಪೂರೈಸಿದರು. ಇದಕ್ಕಾಗಿ ಅವರು ಪ್ರತಿ ದಿನ 21 ಗಂಟೆಗಳ ನಿರಂತರ ಅಭ್ಯಾಸ ಮಾಡುತ್ತಿದ್ದರು.

12. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಬೌದ್ಧ ಧರ್ಮದ ಮೇಲೆ ಅಪಾರವಾದ ನಂಬಿಕೆ. ಇವರ ನಂಬಿಕೆಯನ್ನು ಬಲಗೊಳಿಸಲು ಸುಮಾರು 8,50,000 ಅನುಯಾಯಿಗಳು ಸಿದ್ಧರಾಗಿದ್ದರು. ಇದು ಇಡೀ ವಿಶ್ವದಲ್ಲೇ ಚರಿತ್ರೆಯನ್ನು ಸೃಷ್ಟಿಸಿದೆ. ಏಕೆಂದರೆ ಒಬ್ಬ ವ್ಯಕ್ತಿಯಿಂದ ಒಂದು ಧರ್ಮಕ್ಕೆ ಇಷ್ಟೊಂದು ಜನರು ಮತಾಂತರಗೊಂಡಿದ್ದು ಇದುವರೆಗೂ ಇದೇ ಮೊದಲು.

ಕಲಿಯುಗದ ಬುದ್ಧ

ಕಲಿಯುಗದ ಬುದ್ಧ

13. "ಮಹಾಂತ ವೀರ ಚಂದ್ರಮಣಿ" ಎಂಬ ದೊಡ್ಡ ಬೌದ್ಧ ಸನ್ಯಾಸಿಯೊಬ್ಬರು ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಬೌದ್ಧ ಧರ್ಮಕ್ಕೆ ಪರಿವರ್ತನೆಯಾಗಲು ಆದರ್ಶಪ್ರಾಯರಾದರು ಮತ್ತು ಅಂಬೇಡ್ಕರ್ ರವರನ್ನು "ಕಲಿಯುಗದ ಬುದ್ಧ" ಎಂದು ಕರೆದರು.

14. ಇಡೀ ವಿಶ್ವದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ರವರು " ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ " ನಿಂದ ಗೌರವಾನ್ವಿತ ಡಾಕ್ಟರ್ ಆಲ್ ಸೈನ್ಸ್ ಎಂಬ ಪದವಿ ಪಡೆದ ಮೊದಲನೇ ಹಾಗೂ ಒಬ್ಬರೇ ವ್ಯಕ್ತಿಯಾಗಿದ್ದರು. ಬಹಳಷ್ಟು ಜನ ಬುದ್ಧಿವಂತ ವಿದ್ಯಾರ್ಥಿಗಳು ಇಂದಿಗೂ ಕೂಡ ಈ ಪದವಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಆದರೆ ಇದುವರೆಗೂ ಯಾರೊಬ್ಬರಿಗೂ ಸಾಧ್ಯವಾಗಿಲ್ಲ.

15. ಪ್ರಪಂಚದಾದ್ಯಂತ ಅಸಂಖ್ಯಾತ ಪುಸ್ತಕಗಳು ಮತ್ತು ಹಾಡುಗಳನ್ನು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಬರೆಯಲಾಗಿದೆ.

ಬೋಧಿಸತ್ವ ಮಹೋನ್ನತ ಬಿರುದು

ಬೋಧಿಸತ್ವ ಮಹೋನ್ನತ ಬಿರುದು

16. ಗೌರ್ನರ್ ಲಾರ್ಡ ಲಿನ್ಲಿತ್ ಗೌ ಮತ್ತು ಮಹಾತ್ಮಗಾಂಧಿಯವರು ಬಾಬಾಸಾಹೇಬ ರವರನ್ನು 500 ಪದವೀಧರರು ಮತ್ತು ಸಾವಿರಾರು ವಿದ್ವಾಂಸರುಗಳಿಗಿಂತ ಮೇಧಾವಿ ಎಂದು ಕರೆದರು.

17. ಶೂದ್ರರ ಕುಡಿಯುವ ನೀರಿಗಾಗಿ ಸತ್ಯಾಗ್ರಹ ಮಾಡಿದ ವಿಶ್ವದ ಪ್ರಥಮ ಮತ್ತು ಏಕೈಕ ಸತ್ಯಾಗ್ರಹಿ ಎಂದರೆ ಅದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮಾತ್ರ.

18. 1954 ರಲ್ಲಿ ನೇಪಾಳದ ಕಟ್ಮಂಡುವಿನಲ್ಲಿ ಆಯೋಜಿಸಲ್ಪಟ್ಟಿದ್ದ ರಾಷ್ಟ್ರೀಯ ಬೌದ್ಧ ಪರಿಷತ್ತಿನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರಿಗೆ " ಬೋಧಿಸತ್ವ " ಎಂಬ ಬೌದ್ಧ ಧರ್ಮದ ಮಹೋನ್ನತ ಬಿರುದು ನೀಡಿ ಗೌರವಿಸಿದರು.

ಹಿಂದುಳಿದ ವರ್ಗದ ಮೊಟ್ಟಮೊದಲ ವಕೀಲ

ಹಿಂದುಳಿದ ವರ್ಗದ ಮೊಟ್ಟಮೊದಲ ವಕೀಲ

19. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಗವಾನ್ ಬುದ್ಧ, ಸಂತ ಕಬೀರ ಮತ್ತು ಮಹಾತ್ಮ ಪುಲೆ ರವರನ್ನು ತಮ್ಮ ಜೀವನದ ಆದರ್ಶ ವ್ಯಕ್ತಿಗಳನ್ನಾಗಿ ಅಪಾರವಾದ ನಂಬಿಕೆ ಇಟ್ಟಿದ್ದರು.

20. ವಿಶ್ವದಾದ್ಯಂತ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗಳು ಬಹಳಷ್ಟಿವೆ. ಅವರ ಹುಟ್ಟುಹಬ್ಬವನ್ನು ಸಹ ಪ್ರಪಂಚದಾದ್ಯಂತ ಆಚರಣೆ ಮಾಡುತ್ತಾರೆ.

21. ಹಿಂದುಳಿದ ವರ್ಗಗಳಿಂದ ಬಾಬಾಸಾಹೇಬ್ ರವರೇ ಮೊಟ್ಟಮೊದಲ ವಕೀಲರು ಎಂಬುದು ನೆನಪಿರಲಿ.

ದಿ ಮೇಕರ್ಸ್ ಆಫ್ ದಿ ಯೂನಿವರ್ಸ್ ಮಾನವತಾವಾದಿ ಪಟ್ಟಿಯಲ್ಲಿ ಅಂಬೇಡ್ಕರ್ ಹೆಸರು

ದಿ ಮೇಕರ್ಸ್ ಆಫ್ ದಿ ಯೂನಿವರ್ಸ್ ಮಾನವತಾವಾದಿ ಪಟ್ಟಿಯಲ್ಲಿ ಅಂಬೇಡ್ಕರ್ ಹೆಸರು

22. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಒಂದು ಪ್ರಾಪಂಚಿಕ ಸಮೀಕ್ಷೆ " ದಿ ಮೇಕರ್ಸ್ ಆಫ್ ದಿ ಯೂನಿವರ್ಸ್ " ನಲ್ಲಿ ಕಳೆದ 10 ಸಾವಿರ ವರ್ಷಗಳ ಮೊದಲ 100 ಮಾನವತಾವಾದಿ ಜನರ ಪಟ್ಟಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರದು 4 ನೇ ಹೆಸರು ಎಂದರೆ ನಿಜಕ್ಕೂ ಎಂತಹವರೂ ನಿಬ್ಬೆರಗಾಗುತ್ತಾರೆ.

23. ಈಗಿನ ಕಾಲಮಾನದಲ್ಲಿ ಆಗಾಗ ಎದುರಾಗುವ ನಗದು ಅಮಾನ್ಯಿಕರಣ ಸಮಸ್ಯೆಯ ಬಗ್ಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ತಮ್ಮ ಪುಸ್ತಕ " ದಿ ಪ್ರಾಬ್ಲಮ್ ಆಫ್ ರುಪೀ - ಇಟ್ಸ್ ಆರಿಜಿನ್ ಅಂಡ್ ಇಟ್ಸ್ ಸಲ್ಯೂಷನ್ " ನಲ್ಲಿ ಬಹಳಷ್ಟು ಸಲಹೆ ಸೂಚನೆಗಳನ್ನು ಅದಾಗಲೇ ನೀಡಿದ್ದರು. ಈಗಲೂ ಕೂಡ ಇವುಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ.

24. ಪ್ರಪಂಚದಲ್ಲಿ ಎಲ್ಲೇ ಹೋದರು ಬುದ್ಧನ ಕೇವಲ ಕಣ್ಣು ಮುಚ್ಚಿದ ಪ್ರತಿಮೆಗಳು ಮತ್ತು ಚಿತ್ರಕಲೆಗಳು ಮಾತ್ರ ಕಂಡುಬರುತ್ತವೆ. ಆದರೆ ಬಾಬಾಸಾಹೇಬ ರವರು ಒಳ್ಳೆಯ ಚಿತ್ರಕಲಾಕಾರ ಆಗಿದ್ದರಿಂದ ಮೊದಲ ಬಾರಿಗೆ ಬುದ್ಧನ ಕಣ್ಣು ತೆರೆದ ಚಿತ್ರಕಲೆಯನ್ನು ಚಿತ್ರಿಸಿದ್ದರು.

25. ಬಾಬಾಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಅವರು ಬದುಕಿದ್ದಾಗ ಅಂದರೆ 1950 ರಲ್ಲಿ ನಿರ್ಮಿಸಲಾಗಿತ್ತು ಮತ್ತು ಅದನ್ನು ಕೊಲ್ಲಾಪುರ ನಗರದಲ್ಲಿ ಪ್ರತಿಷ್ಠಾಪನೆ ಸಹ ಮಾಡಲಾಯಿತು.

English summary

Unknown Facts About B. R. Ambedkar

Here we are discussing about Unknown Facts About B. R. Ambedkar Life. Bharat Ratna Dr. Bhimrao Ambedkar is popularly known as Babasaheb, Dr. Bhimrao Ambedkar. Read more.
X
Desktop Bottom Promotion