For Quick Alerts
ALLOW NOTIFICATIONS  
For Daily Alerts

ಪ್ಲ್ಯಾನ್ ಹೀಗಿದ್ದರೆ ನಿವೃತ್ತಿ ಬದುಕು ಸೂಪರ್‌ ಆಗಿರುತ್ತದೆ

|

ನಿವೃತ್ತಿ ಬಹಳ ಜನರಿಗೆ ವಿಶೇಷ ಸಮಯವಾಗಿರುತ್ತದೆ. ಕೆಲವರು ತಮ್ಮ ರಿಲ್ಯಾಕ್ಸ್ ಸಮಯಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಇನ್ನೂ ಕೆಲವರು ಮುಂದಿನ ಜೀವನವನ್ನು ಹೇಗೆ ಕಳೆಯುವುದು ಎಂದು ಚಿಂತಿಸುತ್ತಾರೆ.ಕೆಲವರಿಗೆ ಸಮಯ ಕಳೆಯುವುದೇ ಕಷ್ಟವೆನಿಸಬಹುದು, ಕೆಲವರಿಗೆ ಸಮಯ ಸಾಗಿದ್ದು ತಿಳಿಯದೇ ಇರಬಹುದು.

Tips To Be Happy After Retirement

ಸರಿಯಾದ ಪ್ಲಾನ್ ಇದ್ದರೆ ನಿವೃತ್ತಿ ಅನ್ನುವುದು ಜೀವನದ ಪ್ರಮುಖ ಹಂತವಾಗಿ ಬದಲಾಗಬಹುದು.ನಿವೃತ್ತಿಯ ಸಮಯವನ್ನು ಹೇಗೆ ಕಳೆಯುವುದು ಎಂಬ ಬಗ್ಗೆ ನಾವಿಲ್ಲಿ 5 ಪ್ರಮುಖ ಸಲಹೆಯನ್ನು ನೀಡುತ್ತಿದ್ದೇವೆ. ನಿವೃತ್ತಿಯ ನಂತರ ಆರೋಗ್ಯಕರವಾಗಿರುವ ಮತ್ತು ಸಂತೋಷವಾಗಿರುವ ಜೀವನ ಸಾಗಿಸುವುದಕ್ಕೆ ಇವು ನಿಮಗೆ ನೆರವಾಗಲಿವೆ.
ದೈಹಿಕವಾಗಿ ಮತ್ತು ಮಾನಸಿಕವಾಗಿ ಚುರುಕಾಗಿರಿ

ದೈಹಿಕವಾಗಿ ಮತ್ತು ಮಾನಸಿಕವಾಗಿ ಚುರುಕಾಗಿರಿ

ನಿಮ್ಮ ಜೀವನದಲ್ಲಿ ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದೀರಿ. ನಿವೃತ್ತಿಯ ಸಮಯವೆನ್ನುವುದು ನೀವು ಖುಷಿಯಾಗಿರಬೇಕಾದ ಸಮಯ. ನೀವು ಪ್ರೀತಿಸುವುದನ್ನು ಮಾಡುವುದಕ್ಕಾಗಿ ತಯಾರಾಗಿರಿ. ಮ್ಯೂಸಿಕಲ್ ಸಾಧನಗಳನ್ನು ಕಲಿಯುವ ಆಸಕ್ತಿ ಇದ್ದರೆ ಖಂಡಿತ ಕಲಿಯಿರಿ ಅಥವಾ ನಿಮ್ಮ ಹೃದಯಕ್ಕೆ ಹತ್ತಿರವಾಗುವ ಯಾವುದೋ ಕೆಲಸ ಇಷ್ಟು ದಿನ ಕೆಲಸದ ಒತ್ತಡದಲ್ಲಿ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಅದನ್ನು ನಿವೃತ್ತಿಯ ಬಳಿಕ ಪೂರ್ಣಗೊಳಿಸಿ.ಸಂಪೂರ್ಣ ಸಮಯವನ್ನು ಏನೂ ಮಾಡದೇ ಕಳೆಯಬೇಡಿ.ನಿಮ್ಮ ಹವ್ಯಾಸಗಳಿಂದ ನಿಮ್ಮ ಸಮಯವನ್ನು ಭರ್ತಿಗೊಳಿಸಿ ಮತ್ತು ನಿಮ್ಮ ಆಸಕ್ತಿಯ ವಿಷಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.ನಿಮ್ಮ ಮನಸ್ಸಿಗೆ ಹತ್ತಿರವಾಗುವವರನ್ನು ಭೇಟಿ ಮಾಡಿ ಮಾತನಾಡಿ. ಒಟ್ಟಿನಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಚುರುಕಾಗಿರಿ.

ಸಮಯದ ಸದ್ಭಳಕೆ

ಸಮಯದ ಸದ್ಭಳಕೆ

ನೀವು ನಿವೃತ್ತರಾಗಿದ್ದರೂ ಕೂಡ ನಿಮ್ಮ ಕೆಲಸಕ್ಕೊಂದು ಟೈಂಟೇಬಲ್ ಇರಲಿ.ಸಮಯವನ್ನು ಸರಿಯಾಗಿ ಸದ್ಭಳಕೆ ಮಾಡಿ ಮುಂದಿನದ್ದೇನನ್ನೋ ಮಾಡುವುದಕ್ಕೆ ಇದು ಅನುಕೂಲ ಮಾಡಿಕೊಡುತ್ತದೆ. ನಿಮ್ಮ ವಯಕ್ತಿಕ ಇಮೇಜ್ ನ್ನು ಹಾಳು ಮಾಡುವ ಯಾವುದೇ ಕೆಲಸ ಬೇಡ. ಆದಷ್ಟು ಕೆಲಸದಲ್ಲಿ ತೊಡಗಿಕೊಳ್ಳಿ ಮತ್ತು ಆ ಕೆಲಸಕ್ಕೊಂದು ಸಮಯ ನಿಗದಿಗೊಳಿಸಿಕೊಳ್ಳಿ.ದಿನಚರಿ ರೂಪಿಸಿಕೊಂಡು ಆ ದಿನಚರಿಗೆ ನೀವು ಒಗ್ಗಿಕೊಂಡರೆ ನಿಮ್ಮ ಸಮಯ ವ್ಯರ್ಥವಾಗುವುದಿಲ್ಲ. ಹಾಗಂತ ದಿನದ ಪ್ರತಿ ನಿಮಿಷವನ್ನು ಲೆಕ್ಕವಿಟ್ಟು ಬದುಕಬೇಕಾಗಿಲ್ಲ.ಆದರೆ ಕೆಲವು ಸಮಯವನ್ನು ಆಕ್ಟಿವಿಟಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಬಳಸಿ. ಹೀಗೆ ಸರಿಯಾದ ದಿನಚರಿ ರೂಪಿಸಿಕೊಂಡರೆ ನಿಮಗೆ ಬೋರ್ ಆಗುವುದಿಲ್ಲ ಮತ್ತು ಒತ್ತಡಕ್ಕೆ ಒಳಗಾಗದೇ ನಿವೃತ್ತಿಯನ್ನು ಎಂಜಾಯ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಆರ್ಥಿಕವಾದ ಚುರುಕುತನ

ಆರ್ಥಿಕವಾದ ಚುರುಕುತನ

ನಿಮ್ಮ ಬಜೆಟ್ ಗೆ ನೀವು ಬದ್ಧರಾಗಿರಬೇಕು.ನಿಮ್ಮ ಆದಾಯ ಮತ್ತು ಖರ್ಚಿನ ಬಗ್ಗೆ ಲೆಕ್ಕವಿಡಿ.ಆಗಾಗ ನಿಮ್ಮ ಆರ್ಥಿಕತೆಯನ್ನು ಪ್ಲಾನ್ ಮಾಡುತ್ತಿರಿ.ಒಂದು ವೇಳೆ ನಿಮ್ಮ ಬಳಿ ಯಾರಾದರೂ ಆರ್ಥಿಕ ವ್ಯವಹಾರಗಳ ತಜ್ಞರಿದ್ದಲ್ಲಿ ಅವರ ಬಳಿ ಅಧಿಕ ರಿಟರ್ನ್ಸ್ ಪಡೆಯುವುದು ಹೇಗೆ ಎಂಬ ಬಗ್ಗೆ ಸಲಹೆ ಪಡೆಯಿರಿ. ನೀವು ನಿಮ್ಮ ಆರ್ಥಿಕ ಮತ್ತು ವ್ಯವಹಾರಿಕ ರೀತಿಯ ಬಗ್ಗೆ ಈ ಸಮಯದಲ್ಲಿ ಹೆಚ್ಚು ಕಲಿಯಬೇಕಿದೆ.

ನೀವು ಯುವಕರಾಗಿದ್ದಾಗ ನಿಮಗೆ ನಿಮ್ಮ ಫೈನಾನ್ಸ್ ಬಗ್ಗೆ ಅಧ್ಯಯನ ಮಾಡುವುದಕ್ಕೆ ಸಮಯವಿಲ್ಲದೆ ಇದ್ದಿದ್ದಲ್ಲಿ ಖಂಡಿತ ಇದೀಗ ಕಲಿಯುವುದಕ್ಕೆ ಅವಕಾಶವಿದೆ. ಆರ್ಥಿಕತೆಯ ಬಗ್ಗೆ ಕಲಿಯುವುದಕ್ಕೆ ಇದು ಸರಿಯಾದ ಸಮಯವಾಗಿದ್ದು ಅದನ್ನು ನಿಮ್ಮ ಸಲಹೆಗಾರರ ಬಳಿ ಚರ್ಚಿಸಿ ಹೂಡಿಕೆ ಮಾಡಬಹುದು.

ಪಾರ್ಟ್ ಟೈ ಜಾಬ್ ಅಥವಾ ಇತರೆ ಆದಾಯ ಹುಡುಕಿ

ಪಾರ್ಟ್ ಟೈ ಜಾಬ್ ಅಥವಾ ಇತರೆ ಆದಾಯ ಹುಡುಕಿ

ಒಂದು ವೇಳೆ ನಿಮ್ಮ ಆರೋಗ್ಯ ಚೆನ್ನಾಗಿದ್ದು ನಿಮ್ಮನ್ನು ನೀವು ಬ್ಯುಸಿಯಾಗಿಡುವುದಕ್ಕೆ ಇಚ್ಛಿಸುತ್ತೀರಾದರೆ ಖಂಡಿತ ಯಾವುದಾದರೂ ಪಾರ್ಟ್ ಟೈಮ್ ಜಾಬ್ ಹುಡುಕಿಕೊಳ್ಳಬಹುದು.ಮಕ್ಕಳಿಗೆ ಟ್ಯೂಷನ್ ಹೇಳಿಕೊಡಬಹುದು.ನೀವು ಫೈನಾನ್ಸ್ ಫೀಲ್ಡ್ ನವರಾಗಿದ್ದರೆ ಆಡಿಟಿಂಗ್, ಟ್ಯಾಕ್ಸೇಷನ್ ಅಥವಾ ಅದಕ್ಕೆ ಸಂಬಂಧಿಸಿದ ಕೆಲಸ ಮಾಡಬಹುದು.

ಹೀಗೆ ನೀವು ಮಾಡುವ ಸಣ್ಣ ಕೆಲಸವು ನಿಮ್ಮ ವೇತನವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ನೀವು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುತ್ತದೆ. ಆದರೆ ಆರ್ಥಿಕವಾಗಿ ಬಲಾಢ್ಯರಾಗಿದ್ದರೆ ಸುಮ್ಮನೆ ಅನಗತ್ಯ ಒತ್ತಡ ಹೇರಿಕೊಳ್ಳಬೇಡಿ. ಫ್ರೀಯಾಗಿದ್ದು ಟೂರು, ಟ್ರಿಪ್ಪು ಅಂತ ಹಾಕಿ ನಿವೃತ್ತಿಯ ಸಮಯವನ್ನು ಎಂಜಾಯ್ ಮಾಡಿ.

ನಿವೃತ್ತಿಯನ್ನು ಜೀವನದ ಧನಾತ್ಮಕ ಹಂತವಾಗಿಸಿ

ನಿವೃತ್ತಿಯನ್ನು ಜೀವನದ ಧನಾತ್ಮಕ ಹಂತವಾಗಿಸಿ

ನಿಮ್ಮ ಜೀವನವನ್ನು ಧನಾತ್ಮಕತೆಯೆಡೆಗೆ ಕೊಂಡೊಯ್ಯಲು ನಿವೃತ್ಥಿಯ ಸಮಯ ಬಹಳ ಉತ್ತಮ ಸಮಯವಾಗಿರುತ್ತದೆ. ನೀವು ಬೇರೆಬೇರೆ ಪ್ರದೇಶಗಳಿಗೆ ಪ್ರಯಾಣ ಬೆಳಿಸಿ, ನಮ್ಮ ದೇಶ, ಜನ, ಬದುಕಿನ ಶೈಲಿ ಮತ್ತು ಜಗತ್ತಿನ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಬಹುದು.ಒಂದು ವೇಳೆ ನೀವು ಫಿಟ್ ಆಗಿದ್ದಲ್ಲಿ ಹೊಸ ಅನುಭವಕ್ಕೆ ತೆರೆದುಕೊಳ್ಳಿ. ನೀವು ಓದುವುದನ್ನು ಪ್ರಾರಂಭಿಸಬಹುದು. ಜೀವನದ ಬೇರೆಬೇರೆ ಮುಖಗಳ ಅಧ್ಯಯನ ಕೈಗೊಳ್ಳಬಹುದು. ಕೋಶ ಓದು ದೇಶ ಸುತ್ತು ಅನ್ನೋ ಮಾತೇ ಇಲ್ಲವೆ. ಇವೆರಡು ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ.

ಮನಸ್ಸನ್ನು ಉಲ್ಲಾಸಿತಗೊಳಿಸುತ್ತದೆ. ನಿಮಗೆ ಮೊಮ್ಮಕ್ಕಳಿದ್ದಲ್ಲಿ ಅವರ ಜೊತೆ ಸಮಯ ಕಳೆಯಿರಿ. ಇಲ್ಲದೇ ಇದ್ದಲ್ಲಿ ನಿಮ್ಮ ಸುತ್ತ ಇರುವ ನಿಮಗಿಂತ ಚಿಕ್ಕವರೊಡನೆ ಸಮಯ ಕಳೆಯಿರಿ. ಇದು ನಿಮ್ಮ ಜೀವನಕ್ಕೆ ಹೊಸ ಅನುಭೂತಿ ನೀಡುತ್ತದೆ. ಇವೆಲ್ಲವೂ ಕೂಡ ಇಂದಿನ ಜಗತ್ತಿನ ಬಗ್ಗೆ ಹೊಸತನ್ನು ಕಲಿಯುವುದಕ್ಕೆ ನಿಮಗೆ ಅನುಕೂಲ ಮಾಡಿಕೊಡುತ್ತದೆ.

English summary

Tips To Be Happy After Retirement

IF you are planing for retirement, here are tips how you can happily spend post retirement, Read on.
Story first published: Saturday, April 11, 2020, 15:42 [IST]
X
Desktop Bottom Promotion