Just In
- 46 min ago
ಮೇ 22ಕ್ಕೆ ಕಾಲಾಷ್ಟಮಿ: ರಾಹು, ಶನಿ ದೋಷ ನಿವಾರಣೆಗೆ ಕಾಲ ಭೈರವನ ಪೂಜೆಯನ್ನು ಹೇಗೆ ಪೂಜಿಸಬೇಕು?
- 3 hrs ago
ರನ್ನಿಂಗ್ vs ಸೈಕ್ಲಿಂಗ್:ಬೇಗ ತೂಕ ಕಡಿಮೆಯಾಗಲು ಯಾವುದು ಒಳ್ಳೆಯದು?
- 7 hrs ago
Today Rashi Bhavishya: ಶನಿವಾರದ ದಿನ ಭವಿಷ್ಯ: ಕನ್ಯಾ, ವೃಶ್ಚಿಕ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
- 15 hrs ago
ಮಳೆಗಾಲದಲ್ಲಿ ಉಲ್ಬಣವಾಗುವ ಅಸ್ತಮಾ ನಿಯಂತ್ರಣಕ್ಕೆ ಇಲ್ಲಿವೆ ಟಿಪ್ಸ್
Don't Miss
- Finance
ಸಿಎನ್ಜಿ ಬೆಲೆ ಏರಿಕೆ: ನೂತನ ದರ ಪರಿಶೀಲಿಸಿ
- News
ಭಾಷೆ ಬಗೆಗಿನ ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಮೆಚ್ಚುಗೆ!
- Technology
ಫ್ಲಿಪ್ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳಿಗೆ ವಿಶೇಷ ಆಫರ್!
- Movies
ಹಾಟ್ ಲುಕ್ನಲ್ಲಿ ನಿವೇದಿತಾ ಕ್ಯಾಟ್ ವಾಕ್, ವಿಡಿಯೋ ವೈರಲ್!
- Automobiles
ಮಾರಾಟದಲ್ಲಿ ಸತತವಾಗಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಿರುವ ಆಕ್ಟಿವಾ: ಟಾಪ್ 10 ಸ್ಕೂಟರ್ಗಳ ಪಟ್ಟಿ
- Education
DHT Karnataka Recruitment 2022 : 33 ಸಿಇಒ ಮತ್ತು ಸ್ಥಳೀಯ ಸಂಪನ್ಮೂಲ ವ್ಯಕ್ತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
MI vs DC: ಪಂದ್ಯಕ್ಕೂ ಮುನ್ನ ಇನ್ಸ್ಟಾಗ್ರಾಂ ಸ್ಟೋರಿ ಹರಿಬಿಟ್ಟ ಅರ್ಜುನ್ ತೆಂಡೂಲ್ಕರ್; ಆರ್ಸಿಬಿ ಅಭಿಮಾನಿಗಳಿಗೆ ಆತಂಕ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ಐದು ರಾಶಿಯವರಿಗೆ ದೆವ್ವ, ಭೂತ-ಪಿಶಾಚಿಗಳಲ್ಲಿ ಅತೀವ ಆಸಕ್ತಿಯಂತೆ!
ಕೆಲವು ಜನ ತುಂಬಾ ಪ್ರಾಕ್ಟಿಕಲ್ ಆಗಿರುತ್ತಾರೆ, ಅದೇ ರೀತಿ ಯೋಚನೆ ಕೂಡ ಮಾಡುತ್ತಾರೆ. ತಮ್ಮ ಸುತ್ತಲಾಗುವ ಪ್ರತಿಯೊಂದನ್ನು ಪ್ರಶ್ನಿಸುತ್ತಾರೆ. ಅದೇ ರೀತಿ ಅಜ್ಞಾತ, ಅಗೋಚರ ಮತ್ತು ಅಲೌಕಿಕ ಜೀವನದ ಬಗ್ಗೆಯೂ ಆಸಕ್ತಿ ಹೊಂದಿರುತ್ತಾರೆ. ಅದರ ಬಗ್ಗೆ ಅನ್ವೇಷಣೆ ಮಾಡುತ್ತಲೇ ಇರುತ್ತಾರೆ. ಇದರಲ್ಲಿ ಕೆಲವರು ಸುಲಭವಾಗಿ ದೆವ್ವ, ಭೂತಗಳಂತಹ ಅಗೋಚರ ಶಕ್ತಿಯನ್ನು ನಂಬದರೆ, ಇನ್ನು ಕೆಲವರು ಆ ಲೋಕದಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳಲು ಹೊರಡುತ್ತಾರೆ. ಆದ್ದರಿಂದ ನಾವಿಲ್ಲಿ ದೆವ್ವ, ಭೂತ ಪಿಶಾಚಿಗಳಂತಹ ಅಗೋಚರ ಶಕ್ತಿಗಳಲ್ಲಿ ಆಸಕ್ತಿಯಿರುವ ರಾಶಿಚಕ್ರಗಳ ಬಗ್ಗೆ ವಿವರಿಸಿದ್ದೇವೆ.
ದೆವ್ವ, ಭೂತ ಪಿಶಾಚಿಗಳಂತಹ ಅಗೋಚರ ಶಕ್ತಿಗಳಲ್ಲಿ ಆಸಕ್ತಿಯಿರುವ ರಾಶಿಚಕ್ರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಿಥುನ:
ಮಿಥುನ ರಾಶಿಯವರು ಅಜ್ಞಾತ, ಅಲೌಕಿಕ ವಿಷಯಗಳಿಗೆ ಬಂದಾಗ ಅನೇಕ ಕಥೆಗಳನ್ನು ಹೊಂದಿರುತ್ತಾರೆ. ಅಂದರೆ ಈ ಕುರಿತು ಇವರಿಗೆ ಆಸಕ್ತಿ ಹೆಚ್ಚೇ ಇದೆ. ಈ ರಾಶಿಯವರು ಭೂತ, ಪಿಶಾಚಿಗಳನ್ನು ನಂಬುವುದಿಲ್ಲ ಆದರೆ ಅವರು ವಿಭಿನ್ನ ಸಿದ್ಧಾಂತಗಳ ಬಗ್ಗೆ ಜ್ಞಾನವನ್ನು ಸಂಗ್ರಹಿಸಲು ಆಸಕ್ತಿ ವಹಿಸುತ್ತಾರೆ.

ಸಿಂಹ:
ಸಿಂಹ ರಾಶಿಯವರು ಸಾಮಾನ್ಯವಾಗಿ ಬ್ಲ್ಯಾಕ್ ಮ್ಯಾಜಿಕ್‌ಅಥವಾ ಮಂತ್ರ-ತಂತ್ರಗಳಿಗೆ ಆಕರ್ಷಿತರಾಗುತ್ತಾರೆ. ಇವರು ಅಪರಿಚಿತರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಾರೆ ಅದರಲ್ಲಿ ಕೆಲವು ವಿಷಯಗಳನ್ನು ನಂಬುತ್ತಾರೆ. ಆದಾಗ್ಯೂ, ಅದಕ್ಕೆ ಎಷ್ಟು ಆಳವಾಗಿ ಪ್ರವೇಶಿಸಲು ಬಯಸುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು.

ತುಲಾ:
ಈ ರಾಶಿಯವರು ಮ್ಯಾಜಿಕ್ ಮತ್ತು ಯಕ್ಷಯಕ್ಷಿಣಿಯರಿಗೆ ಆಕರ್ಷಿತರಾಗುತ್ತಾರೆ ಆದರೆ ಅವರು ಅದನ್ನು ತೋರಿಸದಿರಲು ಪ್ರಯತ್ನಿಸುತ್ತಾರೆ. ಅಂದರೆ, ತುಲಾ ರಾಶಿಯವರು ಅಲೌಕಿಕ ವಿಷಯಗಳಿಗೆ ಆಕರ್ಷಿತರಾಗುವುದು ನಿಜ, ಆದರೆ ಅದರಲ್ಲಿ ಧನಾತ್ಮಕವಾಗಿ ಹೆಚ್ಚು ತೊಡಗಿಕೊಳ್ಳುತ್ತಾರೆ, ಅದರಿಂದ ಯಾವ ಒಳ್ಳೆಯ ವಿಚಾರಗಳು ಸಿಗಲಿವೆ ಅದರ ಬಗ್ಗ ಗಮನ ಕೊಡುತ್ತಾರೆ.

ಕುಂಭ:
ಈ ರಾಶಿಚಕ್ರದ ಚಿಹ್ನೆಯು ವಿಭಿನ್ನ ವಿಷಯಗಳನ್ನು ಪ್ರಯತ್ನಿಸುವ ಕಡೆಗೆ ಒಲವನ್ನು ಹೊಂದಿದ್ದಾರೆ. ಅಗೋಚರ ಶಕ್ತಿಗಳ ಬಗ್ಗೆ ತಿಳಿದುಕೊಳ್ಳುವುದರ ಅವರ ಕುತೂಹಲವು ಕೆಲವೊಮ್ಮೆ ಉತ್ತಮವಾದ ಫಲಿತಾಂಶವನ್ನು ನೀಡುತ್ತದೆ. ಇವರು ಪ್ರೇತದ ಕಥೆಗಳನ್ನು ಆನಂದಿಸುತ್ತಾರೆ ಆದರೆ ವಿರಳವಾಗಿ ಹೆದರುತ್ತಾರೆ.

ಮೀನ:
ಮೀನವು ಅಗೋಚರ ಜಗತ್ತಿಗೆ ಆಕರ್ಷಿತವಾಗುತ್ತದೆ. ಇವರು ಬಹಳಷ್ಟು ಹಗಲುಗನಸುಗಳನ್ನು ಕಾಣುತ್ತಾರೆ. ಅದರಲ್ಲಿ ದೆವ್ವಗಳು ಮತ್ತು ಆತ್ಮಗಳು, ಅಲೌಕಿಕವಾದವುಗಳೂ ಸೇರಿವೆ. ಜೊತೆಗೆ ಅದರ ಬಗ್ಗೆ ಆಸಕ್ತಿದಾಯಕ ಕಥೆಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಈ ವಿಷಯವನ್ನು ಅನ್ವೇಷಿಸುವುದು ಅವರ ಹವ್ಯಾಸವಾಗಬಹುದು.