Just In
Don't Miss
- Automobiles
ಅನಾವರಣಕ್ಕೂ ಮುನ್ನ ಡೀಲರ್ಸ್ ಯಾರ್ಡ್ ತಲುಪಿದ ಟಾಟಾ ನ್ಯೂ ಜನರೇಷನ್ ಸಫಾರಿ
- Finance
ಕೊರೊನಾ ಕೃಪೆಯಿಂದ ತುಂಬಿ ತುಳುಕುತ್ತಿರುವ ಸಿರಿವಂತರ ತಿಜೋರಿ; ಬಡವರ ಬದುಕು ಮತ್ತೂ ಕಷ್ಟ ರೀ
- News
ಇನ್ನು ಶೇ 5ರಷ್ಟು ಅಸಮಾಧಾನ ಉಳಿದಿದೆ; ಲಕ್ಷ್ಮಣ ಸವದಿ!
- Movies
ಸುದೀಪ್ 'ಫ್ಯಾಂಟಮ್' ಸಿನಿಮಾ 'ವಿಕ್ರಾಂತ್ ರೋಣ' ಆಗಿದ್ದೇಕೆ? ನಿರ್ದೇಶಕರು ಹೇಳಿದ್ದೇನು?
- Sports
ಐಎಸ್ಎಲ್ 2020-21: ಅಂಕ ಹಂಚಿಕೊಂಡ ಜೆಮ್ಷೆಡ್ಪುರ, ಹೈದರಾಬಾದ್
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಷ್ಟೀಯ ಯುವ ದಿನಾಚರಣೆಯ ಪ್ರಯುಕ್ತ ವಿವೇಕಾನಂದರ ನುಡಿಮುತ್ತುಗಳು
ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ..' ಎಂಬ ಮಾತನ್ನು ಹೇಳಿ ಅದು ಯುವಜನರ ಮನದಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು. ಮನದ ಸೋಂಬೇರಿತನವನ್ನು ಬಡಿದೆಚ್ಚರಿಸುವ ಅವರ ನುಡಿಮುತ್ತುಗಳು ಸದಾ ಕಾಲಕ್ಕೂ ಸ್ಫೂರ್ತಿ ನೀಡುವಂಥದ್ದು.
ದೇಶದ ಅತ್ಯಂತ ಪ್ರಭಾವಿ ಆಧ್ಯಾತ್ಮಿಕ ಚಿಂತಕರಾಗಿದ್ದ ವಿವೇಕಾನಂದ ಅವರು ತಮ್ಮ ಭಾಷಣದ ಮೂಲಕ ಧಾರ್ಮಿಕತೆಯನ್ನು ಬಡಿದೆಬ್ಬಿಸುವಲ್ಲಿ ಯಶಸ್ವಿಯಾದವರು. ವೇದಾಂತ ತತ್ವಗಳ ಮೂಲಕ ದೌರ್ಜನ್ಯಕ್ಕೊಳಗಾದವರನ್ನು ಮೇಲೆತ್ತಲು ಶ್ರಮಿಸಿದರು. ಇಂತಹ ಮೇರು ವ್ಯಕ್ತಿತ್ವ ಉಳ್ಳ ವಿವೇಕಾನಂದರ ಜಯಂತಿಯಾದ ಇಂದಿನ ದಿನವನ್ನು 'ರಾಷ್ಟ್ರೀಯ ಯುವ ದಿನ' ಎಂದು ಆಚರಿಸುತ್ತಾರೆ. ಈ ಶುಭ ಘಳಿಗೆಯಲ್ಲಿ ಯುವಜನತೆಯನ್ನು ಬಡಿದೆಬ್ಬಿಸಿದ ವಿವೇಕಾನಂದರ ಆಯ್ದ ನುಡಿಮುತ್ತುಗಳು ಇಲ್ಲಿವೆ.
ವಿವೇಕಾನಂದರ ಆಯ್ದ ನುಡಿಮುತ್ತುಗಳು:

ನುಡಿಮುತ್ತು 1:
ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.

ನುಡಿಮುತ್ತು 2:
ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.

ನುಡಿಮುತ್ತು 3:
ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು, ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.

ನುಡಿಮುತ್ತು 4:
ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೆ ಬದುಕು. ಅವರು ನಿನ್ನೆದುರಲ್ಲಿ ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.

ನುಡಿಮುತ್ತು 5:
ಧೈರ್ಯದಿಂದ ಸತ್ಯವನ್ನು ಎದುರಿಸು. ಜಯ ಎಂಬುದು ಕಟ್ಟಿಟ್ಟ ಬುತ್ತಿ.

ನುಡಿಮುತ್ತು 6:
ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ, ಕಾಲ ಕೆಡುವುದಿಲ್ಲ. ಕೆಡುವುದು ಜನರ ನಡತೆ ಮತ್ತು ಆಚಾರ- ವಿಚಾರ ಮಾತ್ರ.

ನುಡಿಮುತ್ತು 7:
ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ಧವೇ ಗುರು.

ನುಡಿಮುತ್ತು 8:
ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ.

ನುಡಿಮುತ್ತು 9:
ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.

ನುಡಿಮುತ್ತು 10:
ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ.ಮಾರ್ಗದರ್ಶನ ನೀಡುವವರು ಇಲ್ಲದಿದ್ದರೇನು? ಹೊಸ ಮಾರ್ಗ ಸೃಷ್ಟಿಸುವ ಧೈರ್ಯ, ತಾಕತ್ತು ನಿನ್ನಲ್ಲಿದ್ದರೆ ಇಡೀ ಜಗತ್ತು ನಿನ್ನ ಹಿಂದೆ

ನುಡಿಮುತ್ತು 11:
ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತಿರೋ ಅದರ ಬಗ್ಗೆ ಎಚ್ಚರದಿಂದಿರಿ.

ನುಡಿಮುತ್ತು 12:
ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು,ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಹುದು.

ನುಡಿಮುತ್ತು 13:
ನನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ, ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ.

ನುಡಿಮುತ್ತು 14:
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ.

ನುಡಿಮುತ್ತು 15:
ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.