Latest Updates
-
ಡೇಟಿಂಗ್ ಆ್ಯಪ್ನಲ್ಲಿ ಬ್ಲ್ಯಾಕ್ಮೇಲ್: 6 ಲಕ್ಷ ವಸೂಲಿ, ನೀವು ಬಚಾವಾಗುವುದು ಹೇಗೆ? -
ಚಂಡಮಾರುತದ ನಂತರ ಮನೆ ಸುರಕ್ಷತೆ: 24 ಗಂಟೆಗಳಲ್ಲಿ ತೇವಾಂಶ ನಿವಾರಣೆ ಮತ್ತು ವಿದ್ಯುತ್ ಉಪಕರಣಗಳ ರಕ್ಷಣೆ ಹೇಗೆ? -
ಕರ್ವಾ ಚೌತ್ 2026: ಮಧುಮೇಹಿಗಳು ಮತ್ತು ಉದ್ಯೋಗಿ ಮಹಿಳೆಯರು ಉಪವಾಸ ಮಾಡುವಾಗ ಈ ಆರೋಗ್ಯ ಸಲಹೆಗಳನ್ನು ಮರೆಯದಿರಿ! -
ದೆಹಲಿ-ಎನ್ಸಿಆರ್ ವಾಯುಮಾಲಿನ್ಯ: ಉಸಿರಾಡಲು ಕಷ್ಟವಾಗ್ತಿದೆಯಾ? ನಿಮ್ಮ ಆರೋಗ್ಯ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ -
ದೆಹಲಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಆತಂಕ: ಸೊಳ್ಳೆ ನಿಯಂತ್ರಣಕ್ಕೆ ಬೆಳಗಿನ 10 ನಿಮಿಷದ ಸಿಂಪಲ್ ರೂಟಿನ್! -
ಚಂಡಮಾರುತದ ಭೀತಿ: ನಿಮ್ಮ ಬಾಲ್ಕನಿ ಮತ್ತು ಕಿಟಕಿಗಳನ್ನು 30 ನಿಮಿಷದಲ್ಲಿ ಸುರಕ್ಷಿತವಾಗಿಡುವುದು ಹೇಗೆ? -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: ದೆಹಲಿಯಲ್ಲಿ 922 ಕೆಜಿ ಕಲ್ಮಷ ಸ್ವೀಟ್ಸ್ ವಶ, ಸುರಕ್ಷಿತವಾಗಿರುವುದು ಹೇಗೆ? -
ಆಫೀಸ್ನಲ್ಲೇ IND vs NZ ಮ್ಯಾಚ್ ಎಂಜಾಯ್ ಮಾಡ್ಬೇಕಾ? ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪ್ಲೇಯಿಂಗ್ 11! -
ವಿಶ್ವ ಸ್ಟ್ರೋಕ್ ದಿನ: ಪಾರ್ಶ್ವವಾಯು ಲಕ್ಷಣಗಳ ಪತ್ತೆಗೆ 'FAST' ಪರೀಕ್ಷೆ ಮತ್ತು ಬಿಪಿ ನಿಯಂತ್ರಣಕ್ಕೆ 7 ನಿಮಿಷದ ವ್ಯಾಯಾಮ! -
'ಅರ್ನಬ್' ಚಂಡಮಾರುತದ ಅಬ್ಬರ: ಆಂಧ್ರದ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ಪರೀಕ್ಷೆಗಳು ಮುಂದೂಡಿಕೆ
ನವರಾತ್ರಿ 2021: ನಿಮ್ಮ ರಾಶಿಚಕ್ರದ ಪ್ರಕಾರ, ದುರ್ಗೆಯ ಯಾವ ಅವತಾರಗಳನ್ನು ಪೂಜಿಸಿದರೆ, ನಿಮಗೆ ಶುಭಫಲ?
ಶಾರದಿಯಾ ನವರಾತ್ರಿ ಅಕ್ಟೋಬರ್ 07 ರಿಂದ ಆರಂಭವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ನವರಾತ್ರಿಯ ಸಮಯವನ್ನು ದುರ್ಗಾಮಾತೆಯನ್ನು ಮೆಚ್ಚಿಸಲು ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗಿದೆ. ನವರಾತ್ರಿಯ 9 ದಿನಗಳಲ್ಲಿ, ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸುವುದು ಎಲ್ಲರಿಗೂ ತಿಳಿದೇ ಇದೆ. ಆದರೆ, ನಿಮ್ಮ ರಾಶಿಯ ಪ್ರಕಾರ, ದುರ್ಗೆಯ ಯಾವ ರೂಪವನ್ನು ಪೂಜಿಸಿದರೆ, ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ಅದನ್ನು ತಿಳಿದುಕೊಳ್ಳಲು ಈ ಲೇಖನ ಕೊನೆ ತನಕ ಓದಿ.
ನಿಮ್ಮ ರಾಶಿಚಕ್ರದ ಪ್ರಕಾರ, ನವರಾತ್ರಿಯಂದು ದುರ್ಗೆಯ ಯಾವ ಅವತಾರಗಳನ್ನು ಪೂಜಿಸಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ:
ಮೇಷ ರಾಶಿಯ ಜನರು ದುರ್ಗೆಯ ಶೈಲಪುತ್ರಿ ರೂಪವನ್ನು ಪೂಜಿಸಬೇಕು. ಪ್ರತಿ ತಿಂಗಳ ನವಮಿಯಂದು, ದೇವಿ ಶೈಲಪುತ್ರಿಗಾಗಿ ಉಪವಾಸ ಮಾಡಿ. ನಿಮ್ಮ ಆಸೆ ಈಡೇರುತ್ತದೆ.

ವೃಷಭ:
ವೃಷಭ ರಾಶಿಯವರು ತಾಯಿ ಬ್ರಹ್ಮಚಾರಿಣಿಯನ್ನು ಪೂಜಿಸಬೇಕು. ನೀವು ಪ್ರತಿ ತಿಂಗಳ ಒಂಬತ್ತನೇ ದಿನದಂದು ಬ್ರಹ್ಮಚಾರಿಣಿಯ ಉಪವಾಸವನ್ನು ಆಚರಿಸಬೇಕು.

ಮಿಥುನ:
ಈ ರಾಶಿಚಕ್ರದ ಜನರು ದುರ್ಗೆಯ ಚಂದ್ರಘಂಟೆ ರೂಪವನ್ನು ಪೂಜಿಸಬೇಕು. ಪ್ರತಿ ತಿಂಗಳ ಎಂಟನೇ ದಿನ, ತಾಯಿ ಚಂದ್ರಘಂಟೆಯ ಉಪವಾಸವನ್ನು ಮಾಡಿ. ನಿಮ್ಮ ಬಿಕ್ಕಟ್ಟು ಮುಗಿಯುವುದು.

ಕರ್ಕ:
ಕರ್ಕಾಟಕ ರಾಶಿಯವರು ತಾಯಿ ಸಿದ್ಧಿದಾತ್ರಿಯ ಪೂಜೆಯನ್ನು ಮಾಡುವುದು ಒಳ್ಳೆಯದು. ನೀವು ಪ್ರತಿ ತಿಂಗಳು ನವಮಿ ತಿಥಿಯಂದು ದೇವಿ ಸಿದ್ದಿದಾತ್ರಿಯ ಉಪವಾಸವನ್ನು ಸಹ ಮಾಡಬೇಕು. ಎಲ್ಲಾ ಆಸೆಗಳು ಈಡೇರಿಕೆಯಾಗುವುದು.

ಸಿಂಹ:
ಈ ರಾಶಿಚಕ್ರದವರು ದೇವಿಯ ಕಾಳರಾತ್ರಿ ರೂಪವನ್ನು ಪೂಜಿಸಬೇಕು. ನೀವು ಪ್ರತಿ ತಿಂಗಳ ಅಷ್ಟಮಿಯಂದು ದೇವಿಗಾಗಿ ಕಾಳರಾತ್ರಿಯ ಉಪವಾಸವನ್ನು ಮಾಡಬೇಕು.

ಕನ್ಯಾ:
ನವರಾತ್ರಿಯಲ್ಲಿ, ಈ ರಾಶಿಚಕ್ರದ ಜನರು ದುರ್ಗೆಯ ಚಂದ್ರಘಂಟೆಯ ರೂಪವನ್ನು ಪೂಜಿಸಬೇಕು. ಜೊತೆಗೆ ಪ್ರತಿ ತಿಂಗಳ ಒಂಬತ್ತನೇ ದಿನ, ಕಾನೂನಿನ ಪ್ರಕಾರ ತಾಯಿ ಚಂದ್ರಘಂಟೆಗಾಗಿ ಉಪವಾಸವನ್ನು ಆಚರಿಸಬೇಕು. ಈ ಮೂಲಕ ದೇವಿಯು ಎಲ್ಲಾ ದುಃಖಗಳನ್ನು ತೆಗೆದುಹಾಕುತ್ತಾಳೆ.

ತುಲಾ:
ತುಲಾ ರಾಶಿಯವರು ನವರಾತ್ರಿಯ ಸಮಯದಲ್ಲಿ ಬ್ರಹ್ಮಚಾರಿಣಿಯನ್ನು ಪೂಜಿಸುವುದು ಉತ್ತಮ. ಪ್ರತಿ ತಿಂಗಳ ಒಂಬತ್ತನೆಯ ದಿನ ಬ್ರಹ್ಮಚಾರಿಣಿ ಮಾತೆಯ ಉಪವಾಸ ಮಾಡಿ. ಇದರಿಂದ ಆಕೆಯ ಶೀರ್ವಾದ ಪಡೆಯುತ್ತೀರಿ.

ವೃಶ್ಚಿಕ:
ಈ ರಾಶಿಚಕ್ರದ ಜನರು ದುರ್ಗೆಯ ಶೈಲಪುತ್ರಿ ರೂಪವನ್ನು ಪೂಜಿಸಬೇಕು. ಪ್ರತಿ ತಿಂಗಳ ಅಷ್ಟಮಿಯಂದು ಶೈಲಪುತ್ರಿಯ ಉಪವಾಸವನ್ನು ಮಾಡಬೇಕು. ದುರ್ಗಾ ಮಾತೆ ನಿನ್ನನ್ನು ಸಂತೋಷವಾಗಿಡುತ್ತಾಳೆ.

ಧನುಸ್ಸು:
ಧನು ರಾಶಿಯ ಜನರು ಮಹಾ ಸಿದ್ಧಿಧಾತ್ರಿಯನ್ನು ಪೂಜಿಸಬೇಕು. ಪ್ರತಿ ತಿಂಗಳ ಅಷ್ಟಮಿ ದಿನಾಂಕದಂದು ಮಹಾ ಸಿದ್ಧಿದಾತ್ರಿಯ ಉಪವಾಸವನ್ನು ಮಾಡಬೇಕು.

ಮಕರ ರಾಶಿ:
ಮಕರ ರಾಶಿಯವರು ಮಹಾ ಸಿದ್ಧಿದಾತ್ರಿಯೊಂದಿಗೆ ಕಾಳಿಯನ್ನು ಪೂಜಿಸುವುದು ಉತ್ತಮ. ಇದರ ಹೊರತಾಗಿ, ಪ್ರತಿ ತಿಂಗಳ ಅಷ್ಟಮಿಯಂದು ಉಪವಾಸ ಮಾಡಬೇಕು.

ಕುಂಭ:
ರಾಶಿಚಕ್ರದ ಜನರು ಕೂಡ ಮಕರದ ಹಾಗೆ ಸಿದ್ಧಿಧಾತ್ರಿ ಮತ್ತು ಕಾಳಿ ಪೂಜೆ ಮಾಡಬೇಕು. ಪ್ರತಿ ತಿಂಗಳು ಅಷ್ಟಮಿಯಂದು ಉಪವಾಸ ಮಾಡಬೇಕು. ಇದರಿಂದ ತೊಂದರೆಗಳು ನಿವಾರಣೆಯಾಗಿ, ಜೀವನವು ಸಂತೋಷವಾಗಿರುತ್ತದೆ.

ಮೀನ:
ಮೀನ ರಾಶಿಯ ಜನರು ಸಹ ದುರ್ಗೆಯ ಸಿದ್ಧಿದಾತ್ರಿ ರೂಪವನ್ನು ಪೂಜಿಸಬೇಕು. ಪ್ರತಿ ಅಷ್ಟಮಿ ದಿನಾಂಕದಂದು, ಸಿದ್ದಿದಾತ್ರಿಯ ಉಪವಾಸವನ್ನು ಮಾಡಿ.



Click it and Unblock the Notifications
