For Quick Alerts
ALLOW NOTIFICATIONS  
For Daily Alerts

ರವೀಂದ್ರನಾಥ ಟಾಗೋರ್ ರಚಿಸಿದ್ದು ಒಂದಲ್ಲ ಮೂರು ರಾಷ್ಟ್ರ ಗೀತೆಗಳು

|

ಮೇ.7 ಭಾರತದ ಹೆಮ್ಮೆಯ ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ ಟಾಗೋರ್ ಅವರ ಜನ್ಮ ದಿನ . 1861 ನೇ ಇಸವಿಯಲ್ಲಿ ಪಶ್ಚಿಮ ಬಂಗಾಳದ ಬುರ್ದ್ವಾನ್ ನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ. ಚಿಕ್ಕ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು ತಂದೆಯ ದೇಶಪ್ರೇಮವನ್ನು ಮನಗಂಡು ಸಾಹಿತ್ಯ ಲೋಕದಲ್ಲಿ ಏನಾದರೂ ಕೊಡುಗೆ ನೀಡಲೇಬೇಕು ಎಂದು ನಿರ್ಧರಿಸಿ ತಮ್ಮ 16ನೇ ವಯಸ್ಸಿನಲ್ಲಿ ಹಲವಾರು ಕವನಗಳನ್ನು ಬರೆದು ಹೊರತಂದು ಮುಂದೊಂದು ದಿನ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾಗುವ ಕುರುಹು ಕೊಟ್ಟ ಧೀರ ಹುಡುಗ.

Lesser Known Facts About Rabindranath Tagore

ರವೀಂದ್ರನಾಥ ಟಾಗೋರ್ ರವರನ್ನು ಚಿಕ್ಕ ವಯಸ್ಸಿನಲ್ಲಿ ಲಾಲಿಸಿ, ಪಾಲಿಸಿ, ಬೆಳೆಸಿದ್ದು ಅವರ ಮನೆಯ ಕೆಲಸದ ಆಳುಗಳು ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ರವೀಂದ್ರನಾಥ ಟಾಗೋರ್ ಅವರ ಅಣ್ಣ ಸತ್ಯೇಂದ್ರನಾಥ್ ಟಾಗೋರ್ ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾಗಿ ನೇಮಕಗೊಂಡ ಮೊಟ್ಟ ಮೊದಲ ಭಾರತೀಯ. ಇಂತಹ ಹಲವಾರು ಆಶ್ಚರ್ಯಕರ ಸಂಗತಿಗಳು ರವೀಂದ್ರನಾಥ್ ಟ್ಯಾಗೋರ್ ರವರ ಜೀವನಧಾರೆಯಲ್ಲಿ ಸಿಗುತ್ತವೆ.

158 ನೆಯ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸುವುದರ ಜೊತೆಗೆ ಈ ಕೆಳಗಿನ ಕೆಲವು ಅವರಿಗೆ ಸಂಬಂಧಪಟ್ಟ ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇವೆ.

1. ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಮೊಟ್ಟಮೊದಲ ಯುರೋಪೇತರ ವ್ಯಕ್ತಿ

1. ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಮೊಟ್ಟಮೊದಲ ಯುರೋಪೇತರ ವ್ಯಕ್ತಿ

ರವೀಂದ್ರನಾಥ ಟಾಗೋರ್ ತಮ್ಮ ಸಾಹಿತ್ಯ ಸಾಧನೆಗೆ ನೊಬೆಲ್ ಪ್ರಶಸ್ತಿ ಪಡೆದ ಕೇವಲ ಮೊಟ್ಟಮೊದಲ ಏಷ್ಯಾದ ವ್ಯಕ್ತಿ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಪ್ರಶಸ್ತಿ ಪಡೆದ ಮೊಟ್ಟಮೊದಲ ಯುರೋಪೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.

2. ರವೀಂದ್ರನಾಥ ಟಾಗೋರ್ ರಚಿಸಿದ್ದು ಮೂರು ರಾಷ್ಟ್ರ ಗೀತೆಗಳು

2. ರವೀಂದ್ರನಾಥ ಟಾಗೋರ್ ರಚಿಸಿದ್ದು ಮೂರು ರಾಷ್ಟ್ರ ಗೀತೆಗಳು

ಈ ವಿಷಯ ಬಹಳಷ್ಟು ಜನರಿಗೆ ತಿಳಿದೇ ಇಲ್ಲ. ಎಲ್ಲರೂ ಅಂದುಕೊಂಡಿರುವುದು ರವೀಂದ್ರನಾಥ ಟಾಗೋರರು ಭಾರತ ದೇಶಕ್ಕೆ " ಜನ ಗಣ ಮನ " ಎಂಬ ರಾಷ್ಟ್ರಗೀತೆ ಮತ್ತು ಬಾಂಗ್ಲಾದೇಶಕ್ಕೆ " ಅಮರ್ ಸೋನಾರ್ ಬಾಂಗ್ಲಾ " ಎಂಬ ರಾಷ್ಟ್ರಗೀತೆಯನ್ನು ಮಾತ್ರ ರಚಿಸಿ ದೇಶದ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು. ಆದರೆ ಶ್ರೀಲಂಕಾದ ರಾಷ್ಟ್ರಗೀತೆಯಾದ " ಶ್ರೀಲಂಕಾ ಮಾತಾ " ಕೂಡ ಸಂಪೂರ್ಣವಾಗಿ ರಚನೆಯಾಗಿದ್ದು ರವೀಂದ್ರನಾಥ ಠಾಗೋರರಿಂದಲೇ ಎಂಬ ಸತ್ಯ ಇಂದಿಗೂ ಎಲೆಮರೆಕಾಯಿಯಾಗಿಯೇ ಉಳಿದಿದೆ.

3. ನೊಬೆಲ್ ಪ್ರಶಸ್ತಿಯಿಂದ ಬಂದ ಹಣದಲ್ಲಿ ಶಾಲೆ ನಿರ್ಮಾಣ

3. ನೊಬೆಲ್ ಪ್ರಶಸ್ತಿಯಿಂದ ಬಂದ ಹಣದಲ್ಲಿ ಶಾಲೆ ನಿರ್ಮಾಣ

ಬಹಳಷ್ಟು ಜನರು ತಮಗೆ ಯಾವುದಾದರೂ ಪ್ರಶಸ್ತಿಯಿಂದ ಬಂದ ಹಣವನ್ನು ತಮ್ಮ ವೈಯಕ್ತಿಕ ಖರ್ಚಿಗೆ ಬಳಸಿಕೊಳ್ಳುತ್ತಾರೆ. ಆದರೆ ಹುಟ್ಟಿನಿಂದಲೇ ಸಾಮಾಜಿಕ ಕಳಕಳಿ ಹೊತ್ತಿದ್ದ ರವೀಂದ್ರನಾಥ ಟ್ಯಾಗೋರ್ ತಾವು ಪಡೆದ ಅಗ್ರಮಾನ್ಯ ನೊಬೆಲ್ ಪ್ರಶಸ್ತಿಯಿಂದ ಬಂದ ಹಣದಲ್ಲಿ ಶಾಂತಿನಿಕೇತನದಲ್ಲಿ " ವಿಶ್ವ ಭಾರತಿ " ಎಂಬ ಶಾಲೆಯನ್ನು ಸ್ಥಾಪಿಸಿದರು. ಠಾಗೂರರ ಶಾಂತಿನಿಕೇತನ ವಿದ್ಯಾಭ್ಯಾಸ ಸಂಸ್ಥೆ ರಾಷ್ಟ್ರಕ್ಕೆ ಕೊಟ್ಟ ಕೊಡುಗೆ ಅಪಾರ ಎಂಬುದನ್ನು ಮರೆಯುವಂತಿಲ್ಲ. ಈ ಸಂಸ್ಥೆಯಲ್ಲಿ ಕಲಿತು ಹೊರಬಂದವರು ದೇಶದ ನಾಯಕರಾಗಿದ್ದಾರೆ. ಅವರಲ್ಲಿ ಕೆಲವರನ್ನು ಹೇಳುವುದಾದರೆ ಅಮರ್ತ್ಯ ಸೇನ್, ಸತ್ಯಜಿತ್ ರೇ ಮತ್ತು ಇಂದಿರಾಗಾಂಧಿ ಇನ್ನೂ ಹಲವಾರು ಮಂದಿ ಪಟ್ಟಿಯಲ್ಲಿದ್ದಾರೆ.

4. ಗೀತಾಂಜಲಿಯ ಮುನ್ನುಡಿ ಬರೆದವರು W.B.Yeats

4. ಗೀತಾಂಜಲಿಯ ಮುನ್ನುಡಿ ಬರೆದವರು W.B.Yeats

ರವೀಂದ್ರನಾಥ ಟ್ಯಾಗೋರ್ ಅವರ ಸುಪ್ರಸಿದ್ಧ ಗೀತಾಂಜಲಿ ಎಂಬ ಕವಿತೆಗಳ ಗುಂಪಿನ ಪುಸ್ತಕಕ್ಕೆ ಮುನ್ನುಡಿ ಬರೆದವರು 20ನೇ ಶತಮಾನದ ಇನ್ನೊಬ್ಬ ಧೀಮಂತ ಕವಿ ಎನಿಸಿಕೊಂಡ W.B.Yeats ರವರು ಎಂಬುದು ಆಶ್ಚರ್ಯಕರ ಸಂಗತಿ.

5. ರವೀಂದ್ರನಾಥ ಟ್ಯಾಗೋರ್ ರಿಗೆ ಚಿತ್ರಕಲೆಯ ಹುಚ್ಚು

5. ರವೀಂದ್ರನಾಥ ಟ್ಯಾಗೋರ್ ರಿಗೆ ಚಿತ್ರಕಲೆಯ ಹುಚ್ಚು

ತಮ್ಮ 60 ನೇ ವಯಸ್ಸಿನಲ್ಲಿ ರವೀಂದ್ರನಾಥ ಠಾಗೋರರು ಹಲವಾರು ಚಿತ್ರಕಲೆ ಮತ್ತು ಪೇಂಟಿಂಗ್ ಕೆಲಸಗಳನ್ನು ಮಾಡಿ ಬಹುತೇಕ ತಮ್ಮ ಎಲ್ಲಾ ಚಿತ್ರಪಟಗಳನ್ನು ಯುರೋಪಿನಾದ್ಯಂತ ಪ್ರದರ್ಶಿಸಿದರು. ಅವರ ವಿಚಿತ್ರ ಬಣ್ಣದ ಸಂಯೋಜನೆಗಳು ಮತ್ತು ಚಿತ್ರಕಲೆಯಲ್ಲಿ ಬಳಸಿದ ಸೌಂದರ್ಯ ಪ್ರಜ್ಞೆ ನೋಡುಗರ ನೋಟವನ್ನು ಕಂಡಲ್ಲೇ ನೆಡುವಂತೆ ಮಾಡಿದ್ದು ವಿಶೇಷ. ತಮ್ಮ ಚಿತ್ರಕಲೆಯಲ್ಲಿ ಹೆಚ್ಚಾಗಿ ಕೆಂಪು ಮತ್ತು ಹಸಿರು ಬಣ್ಣವನ್ನು ಬಳಸಿ ಚಿತ್ರ ಪಟಗಳ ಮೆರಗು ಹೆಚ್ಚಿಸಿದ ಖ್ಯಾತಿಯನ್ನು ಠಾಗೂರರು ಪಡೆದರು.

6. ರವೀಂದ್ರನಾಥ ಟಾಗೋರರು ಪಡೆದ ನೊಬೆಲ್ ಪ್ರಶಸ್ತಿ ಕಳ್ಳನ ಪಾಲು

6. ರವೀಂದ್ರನಾಥ ಟಾಗೋರರು ಪಡೆದ ನೊಬೆಲ್ ಪ್ರಶಸ್ತಿ ಕಳ್ಳನ ಪಾಲು

2004 ನೇ ಇಸವಿಯಲ್ಲಿ ರವೀಂದ್ರನಾಥ ಠಾಗೋರರು ಸ್ಥಾಪಿಸಿದ ಶಾಂತಿನಿಕೇತನದಲ್ಲಿ ಈ ಒಂದು ವಿಚಿತ್ರ ಘಟನೆ ನಡೆದೇ ಹೋಯಿತು. ಟಾಗೋರ್ ಅವರ ಸಾಹಿತ್ಯ ಕೊಡುಗೆಯನ್ನು ಗಮನಿಸಿ ನೀಡಲಾಗಿದ್ದ ನೊಬೆಲ್ ಪ್ರಶಸ್ತಿ ಪದಕವನ್ನು ಯಾರೋ ಕದ್ದುಕೊಂಡು ಹೋಗಿದ್ದರು. ಈ ವಿಷಯವನ್ನು ಹೇಗೋ ತಿಳಿದ ಸ್ವೀಡಿಶ್ ಅಕಾಡೆಮಿ ರವೀಂದ್ರನಾಥ ಟ್ಯಾಗೋರ್ ರಿಗೆ ಮತ್ತೊಮ್ಮೆ ಅದೇ ಪದಕವನ್ನು ಚಿನ್ನ ಮತ್ತು ಬೆಳ್ಳಿಯ ಎರಡು ರೂಪಗಳಲ್ಲಿ ನೀಡಿತು. ಒಂದೇ ಪ್ರಶಸ್ತಿಯನ್ನು ಮತ್ತೊಮ್ಮೆ ಗೌರವಯುತವಾಗಿ ಪಡೆದ ಹೆಗ್ಗಳಿಕೆ ರವೀಂದ್ರನಾಥ ಟ್ಯಾಗೋರ್ ಅವರಿಗೆ ಸಲ್ಲುತ್ತದೆ.

7. ಆಲ್ಬರ್ಟ್ ಐನ್ಸ್ಟೀನ್ ಜೊತೆ ಮಾತುಕತೆ

7. ಆಲ್ಬರ್ಟ್ ಐನ್ಸ್ಟೀನ್ ಜೊತೆ ಮಾತುಕತೆ

ರವೀಂದ್ರನಾಥ ಟ್ಯಾಗೋರ್ ಅವರ ಸಾಹಿತ್ಯ ಸಾಧನೆಯನ್ನು ಮೊದಲಿನಿಂದಲೂ ಗಮನಿಸಿದ್ದ ಆಲ್ಬರ್ಟ್ ಐನ್ಸ್ಟೀನ್ ರವರು ಒಮ್ಮೆ ಟಾಗೋರ್ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದರು. ಊಟೋಪಚಾರಗಳ ನಂತರ ಇಬ್ಬರೂ ಸಾಕಷ್ಟು ಹೊತ್ತು ಕುಳಿತು ಧರ್ಮ ಮತ್ತು ವಿಜ್ಞಾನಗಳ ಸಮನ್ವಯದ ಬಗ್ಗೆ ಚರ್ಚೆ ಮಾಡಿದರು ಮತ್ತು ಇವರ ಈ ಚರ್ಚೆ " ನೋಟ್ ಆನ್ ದ ನೇಚರ್ ಆಫ್ ರಿಯಾಲಿಟಿ " ಯಲ್ಲಿ ದಾಖಲಾಗಿದೆ.

8. ಎಲ್ಲಾ ಪ್ರಕಾರಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ ಟಾಗೋರ್ ಅವರದ್ದು

8. ಎಲ್ಲಾ ಪ್ರಕಾರಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆ ಟಾಗೋರ್ ಅವರದ್ದು

ರವೀಂದ್ರನಾಥ ಠಾಗೋರರು ಕೇವಲ ತಮ್ಮ ಸಾಹಿತ್ಯ ವೃತ್ತಿಯನ್ನು ಕಾವ್ಯಗಳಿಗೆ ಮಾತ್ರ ಸೀಮಿತಗೊಳಿಸದೆ ಹಲವಾರು ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ಪ್ರಬಂಧಗಳು, ಪದ್ಯಗಳು, ನಾಟಕಗಳು, ಹಾಡುಗಳು ಮತ್ತು ಇನ್ನು ಹಲವಾರು ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮೆರೆದಿದ್ದಾರೆ. ಹಲವಾರು ವಿದ್ವಾಂಸರು ಹೇಳುವ ಪ್ರಕಾರ ರವೀಂದ್ರನಾಥ ಠಾಗೋರರು ಕೆಲಸ ಮಾಡದೇ ಇರುವ ಪ್ರಕಾರಗಳೇ ಇಲ್ಲ ಎಂಬ ಮಾತಿದೆ.

9. ರಾಜನಿಂದ ಟಾಗೋರ್ ಅವರಿಗೆ ಸಾಹಿತ್ಯ ಯೋಧ ಎಂಬ ಗೌರವ

9. ರಾಜನಿಂದ ಟಾಗೋರ್ ಅವರಿಗೆ ಸಾಹಿತ್ಯ ಯೋಧ ಎಂಬ ಗೌರವ

ರವೀಂದ್ರನಾಥ ಟ್ಯಾಗೋರ್ ಅವರ ತಮ್ಮ ಸಾಹಿತ್ಯ ಕ್ಷೇತ್ರದಲ್ಲಿ ನೀಡಿದ ಅಪಾರ ಕೊಡುಗೆಗೆ ಆಗಿನ ಇಂಗ್ಲೆಂಡ್ ದೇಶದ 5 ನೇ ರಾಜ ಜಾರ್ಜ್ ಟಾಗೋರ್ ಅವರಿಗೆ 1915 ನೇ ಇಸವಿಯಲ್ಲಿ " ಸಾಹಿತ್ಯ ಯೋಧ " ಎಂಬ ಬಿರುದು ಕೊಟ್ಟು ಗೌರವಿಸಿದರು. ಆದರೆ ಭಾರತ ದೇಶದ ಹೆಮ್ಮೆಯ ಪುತ್ರರಾದ ರವೀಂದ್ರನಾಥ ಠಾಗೋರರು1919 ರ ಜಲಿಯನ್ ವಾಲಾಬಾಗ್ ಸಂದರ್ಭದಿಂದ ಮನನೊಂದು ತಾವು ಪಡೆದ ಬಿರುದನ್ನು ಹಿಂದಿರುಗಿಸಿದರು.

10. ತಂದೆಯಂತೆ ಮಗ ಎಂಬ ಕೀರ್ತಿ

10. ತಂದೆಯಂತೆ ಮಗ ಎಂಬ ಕೀರ್ತಿ

ರವೀಂದ್ರನಾಥ ಠಾಗೋರರು ದೇವೇಂದ್ರನಾಥ ಟ್ಯಾಗೋರ್ ಅವರ ಮಗ. ದೇವೇಂದ್ರನಾಥ ಟ್ಯಾಗೋರ್ ರವರು ಬಂಗಾಳಿ ನವೋದಯದ ಮೇಲೆ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಂತೆ ರವೀಂದ್ರನಾಥ ಠಾಗೋರರು ಸಹ ಬಂಗಾಳಿ ಕಲೆ, ಸಾಹಿತ್ಯ, ಸಂಗೀತ ಮತ್ತು ನಾಟಕಗಳಿಗೆ ಸಂಬಂಧಪಟ್ಟ ಸಾಧನೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿ ತಂದೆಯ ಗೌರವವನ್ನು ಹೆಚ್ಚು ಮಾಡಿದರು. ಭಾರತ ದೇಶದ ರಾಷ್ಟ್ರಪತಿ ಗಾಂಧೀಜಿಯವರನ್ನು ಮೊಟ್ಟಮೊದಲ ಬಾರಿಗೆ ಮಹಾತ್ಮ ಎಂದು ಕರೆದ ಕೀರ್ತಿ ರವೀಂದ್ರನಾಥ ಟ್ಯಾಗೋರ್ ರಿಗೆ ಸಲ್ಲುತ್ತದೆ. ಒಟ್ಟಾರೆ ಹೇಳುವುದಾದರೆ ನಮ್ಮ ಭಾರತ ದೇಶ ಕಂಡ ಅಪ್ರತಿಮ ಸಾಧಕರಲ್ಲಿ ರವೀಂದ್ರನಾಥ ಟ್ಯಾಗೋರರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ತಮ್ಮ ಕೊನೆಯ ಹಾಸಿಗೆ ಹಿಡಿದ ದಿನಗಳಲ್ಲಿ ಸಹ ಟಾಗೋರರು ತಮ್ಮ ಮನಸ್ಸಿಗೆ ಬಂದಿದ್ದ ಹಲವಾರು ಕಾವ್ಯಗಳನ್ನು ರಚನೆ ಮಾಡಲು ಸಾಧ್ಯವಾಗದೇ ತೀವ್ರವಾಗಿ ಕೊರಗಿದ್ದ ಸಂದರ್ಭವೇ ಇದಕ್ಕೆ ಒಂದು ಒಳ್ಳೆಯ ನಿದರ್ಶನ.

English summary

Lesser Known Facts About Rabindranath Tagore

Here we are discussing about Lesser Known Facts About Rabindranath Tagore. Read more.
X
Desktop Bottom Promotion