For Quick Alerts
ALLOW NOTIFICATIONS  
For Daily Alerts

ಕಾರ್ಮಿಕ ದಿನಕ್ಕೆ ಉತ್ತಮ ಸ್ಲೋಗನ್ ಗಳು ಇಲ್ಲಿವೆ

|

ಕಾಯಕವೇ ಕೈಲಾಸ ಅನ್ನೋ ಮಾತಿದೆ.ಮೇ 1 ರಂದು ಕಾರ್ಮಿಕ ದಿನಾಚರಣೆ. ಕಾರ್ಮಿಕರಿಲ್ಲದೆ ಯಾವ ಸಂಸ್ಥೆಯೂ ಕೂಡ ಉತ್ತುಂಗಕ್ಕೇರಲು ಸಾಧ್ಯವಿಲ್ಲ. ಪ್ರತಿಯೊಬ್ಬ ಕಾರ್ಮಿಕನ ಶ್ರಮವೂ ಕೂಡ ಒಂದು ಸಂಸ್ಥೆಯ ಯಶಸ್ಸಿನ ಕೀಲಿಕೈ ಆಗಿರುತ್ತದೆ.

ಈ ಹಿನ್ನೆಲೆಯಲ್ಲಿ ಮಹಾನ್ ವ್ಯಕ್ತಿಗಳು ಹೇಳಿರುವ ಕೆಲವು ಕಾಯಕ ಮತ್ತು ಕಾರ್ಮಿಕರ ಬಗೆಗಿನ ಸ್ಲೋಗನ್ ಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಇವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತ ನಾವು ಮೇಲ್ದರ್ಜೆಗೆ ಹೋಗಬಹುದೇನೋ ಎನ್ನಿಸುತ್ತದೆ. ಹಾಗಾದ್ರೆ ಯಾರ್ಯಾರು ಏನೇನು ಹೇಳಿದ್ದಾರೆ ನೋಡೋಣ ಬನ್ನಿ.

ಜೀವನಕ್ಕೊಂದು ಅರ್ಥ

ಜೀವನಕ್ಕೊಂದು ಅರ್ಥ

1. "ಕೆಲಸ ಮಾಡುವುದು ಕೇವಲ ಹಣ ಸಂಪಾದನೆಗಲ್ಲ ಬದಲಾಗಿ ನಿಮ್ಮ ಜೀವನಕ್ಕೊಂದು ಅರ್ಥ ನೀಡಲು." - ಮಾರ್ಕ್ ಚಾಗಲ್

ವಿರಾಮ

ವಿರಾಮ

2. "ಶ್ರಮದ ಅಂತ್ಯ ಎಂದರೆ ವಿರಾಮವನ್ನು ಪಡೆಯುವುದು." - ಅರಿಸ್ಟಾಟಲ್

ಶ್ರೇಷ್ಟ

ಶ್ರೇಷ್ಟ

3. "ಮಾನವೀಯತೆಯನ್ನು ಹೆಚ್ಚಿಸುವ ಎಲ್ಲಾ ಕೆಲಸವು ಘನತೆ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಅದನ್ನು ಶ್ರೇಷ್ಟವೆಂದೇ ಪರಿಗಣಿಸಬೇಕು " - ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್

 ಏಕಾಂಗಿ

ಏಕಾಂಗಿ

4. "ಅರಸ ಕೆಲಸ ಪ್ರಾರಂಭಿಸಿದರೆ ಆಳೊಬ್ಬ ಏಕಾಂಗಿಯಾಗಿ ಅದನ್ನು ಮುಗಿಸುತ್ತಾನೆ " - ಜೋಸೆಫ್ ಜೋಬರ್ಟ್

ಮುಂದಿನ ದಾರಿ ಸುಗಮ

ಮುಂದಿನ ದಾರಿ ಸುಗಮ

5. "ಎಷ್ಟೇ ಕಷ್ಟ ಎದುರಾದರೂ ಕೂಡ ನಾವು ಮುಂದುವರಿಯುತ್ತಲೇ ಸಾಗಬೇಕು. ಆಗಲೇ ನಮ್ಮ ಮುಂದಿನ ದಾರಿ ಸುಗಮವಾಗುತ್ತಲೇ ಇರುತ್ತದೆ." - ಗ್ರೆಗ್ ಕಿನ್ಕೈಡ್

ಗೌರವ

ಗೌರವ

6. "ಕೆಲಸವಿಲ್ಲದ ಪುರುಷರಿಗೆ ಗೌರವ ಕಡಿಮೆ " - ನೆವಿಲ್ ಶ್ಯೂಟ್

ಗೌರವಿಸಿ

ಗೌರವಿಸಿ

7. "ಸಣ್ಣ ಕೆಲಸವನ್ನು ಗೌರವಿಸಿ ಮತ್ತು ವೈಭವೀಕರಿಸಿ. ಯಾಕೆಂದರೆ ನಮ್ಮ ಜೀವನದ ಕೆಳಗಿನಿಂದ ಪ್ರಾರಂಭವಾಗುತ್ತದೆಯೇ ಹೊರತು ಮೇಲಿನಿಂದಲ್ಲ." - ಬುಕರ್ ವಿ ವಾಷಿಂಗ್ಟನ್

ಹೃದಯ

ಹೃದಯ

8. "ದೂರದ ಗುರಿಯತ್ತ ಸಾಗುತ್ತಿರುವಾಗ ನಮ್ಮ ಹೃದಯದ ಬಾಗಿಲಿನಲ್ಲಿರುವ ದೊಡ್ಡ ಆಸೆಯನ್ನು ಪೂರೈಸುವುದಕ್ಕಾಗಿ ಹೀಗೆ ಬೇಡಿಕೊಳ್ಳಬೇಕಾಗುತ್ತದೆ. 'ನಮ್ಮ ಶಕ್ತಿಗೆ ಸರಿಸಮನಾದ ಕೆಲಸಕ್ಕಾಗಿ ಪ್ರಾರ್ಥಿಸಬೇಡಿ ಆದರೆ ನಮ್ಮ ಕೆಲಸಕ್ಕೆ ಬೇಕಾಗುವ ಶಕ್ತಿಗಾಗಿ ಪ್ರಾರ್ಥಿಸಿ'.- ಹೆಲನ್ ಕೆಲ್ಲರ್

ಪರಿಪೂರ್ಣತೆ

ಪರಿಪೂರ್ಣತೆ

9."ಉದ್ಯೋಗದಲ್ಲಿರುವ ಸಂತೋಷವು ಕೆಲಸದಲ್ಲಿ ಪರಿಪೂರ್ಣತೆಯನ್ನು ನೀಡುತ್ತದೆ." -ಅರಿಸ್ಟಾಟಲ್

ಸ್ಪೂರ್ತಿ

ಸ್ಪೂರ್ತಿ

10."ಗೆದ್ದವರು 1% ಸ್ಪೂರ್ತಿ ನೀಡುವುದಾದರೆ 99% ಸ್ಪೂರ್ತಿ ಕಾರ್ಮಿಕ ವರ್ಗ ನೀಡುತ್ತದೆ." - ಥಾಮಸ್ ಎಡಿಸನ್

ಸಮೃದ್ಧಿ

ಸಮೃದ್ಧಿ

11."ಶ್ರಮವಿಲ್ಲದೆ ಏನೂ ಸಮೃದ್ಧಿಯಾಗುವುದಿಲ್ಲ" - ಸೋಫೋಕ್ಲಿಸ್

ಪರಿಶ್ರಮ

ಪರಿಶ್ರಮ

12."ಕಠಿಣ ಪರಿಶ್ರಮಕ್ಕೆ ಯೋಗ್ಯವಾಗಿರುವುದು ಬೇರೆ ಯಾವುದೂ ಇಲ್ಲ." - ಬುಕರ್ ಟಿ. ವಾಷಿಂಗ್ಟನ್

ಭಯಬೇಡ

ಭಯಬೇಡ

13."ಪ್ರಾಮಾಣಿಕವಾಗಿರಲು ಧೈರ್ಯ ಬೇಕು ಮತ್ತು ಕಾರ್ಮಿಕನಾಗಿರಲು ಭಯಬೇಡ." - ರಾಬರ್ಟ್ ಬರ್ನ್ಸ್

ಪ್ರೀತಿ

ಪ್ರೀತಿ

14."ನೀವು ಪ್ರೀತಿಸುವುದನ್ನು ಮಾಡುವುದಕ್ಕೆ ಹುಡುಕಾಡಿ, ಆಗ ನೀವು ಜೀವನಪೂರ್ತಿ ಕೆಲಸ ಮಾಡುತ್ತಲೇ ಇರಬೇಕಾಗಿಲ್ಲ." - ಹಾರ್ವೇ ಮ್ಯಾಕೆ

ಪವಾಡ

ಪವಾಡ

15."ಯಾವ ಕೆಲಸ ಮಾಡುತ್ತೇವೆ ಎಂಬುದು ಪವಾಡವಲ್ಲ. ಯಾವ ಕೆಲಸವನ್ನು ನಾವು ಖುಷಿಯಿಂದ ಮಾಡುತ್ತೇವೆ ಎಂಬುದು ಪವಾಡ" - ಮದರ್ ಥೆರೆಸಾ

ಶ್ರಮ

ಶ್ರಮ

16."ದೊಡ್ಡ ಶ್ರಮವಿಲ್ಲದೆ ಯಾವ ವ್ಯಕ್ತಿಯೂ ದೊಡ್ಡ ಮನುಷ್ಯನೆನಿಸಲಾರ" - ಆಂಡ್ರೆ ಗೈಡ್

ಕೆಲಸ

ಕೆಲಸ

17."ನೀವು ಮಾಡದ ಹೊರತು ಏನೂ ಕೆಲಸವಾಗುವುದಿಲ್ಲ" - ಮಾಯಾ ಏಂಜೆಲೋ

English summary

Labour Day Quotes By Famous Personality

Here we are discussing about Labour Day Quotes By Famous Personality. Read more.
X