For Quick Alerts
ALLOW NOTIFICATIONS  
For Daily Alerts

ಪ್ರತಿ ಮಹಿಳೆ ತನ್ನ ಜೀವನದಲ್ಲಿ ಬಯಸುವ ಸಂಗತಿಗಳಿವು

|

ಈ ಭೂಮಿ ತಾಯಿ, ಆಕೆಯೂ ಒಬ್ಬ ಮಹಿಳೆ, ಈ ಪ್ರಕೃತಿ, ಆಕೆಯೂ ಒಬ್ಬ ಮಹಿಳೆ. ನಾವೆಲ್ಲರೂ ನಿಂತಿರುವ ಭೂಮಿತಾಯಿ, ಭಾರತ ಮಾತೆ ಇವರೆಲ್ಲರೂ ಮಹಿಳೆಯರೇ ಆಗಿರುವಾಗ ನಿಮ್ಮೊಂದಿಗೆ ಸದಾ ನಿಮ್ಮ ಲಾಲನೆ-ಪಾಲನೆಯಲ್ಲಿರುವ ಮಹಿಳೆಗೆ ಸರಿಯಾದ ಗೌರವ ಸಿಗಬೇಕಲ್ಲವೇ? ಅವರ ಇಷ್ಟಕಷ್ಟಗಳ ಬಗ್ಗೆ ನಿಮಗೆ ಅರಿವಿರಬೇಕಲ್ಲವೇ?! ಒಬ್ಬ ಮಹಿಳೆಯನ್ನು ಪ್ರೀತಿಸುವುದು ಮತ್ತು ಅವರನ್ನು ಗೌರವಿಸುವುದು ಪ್ರತಿಯೊಬ್ಬ ಪುರುಷನ ಕರ್ತವ್ಯ, ಜೊತೆಗೆ ಇದು ಪುರುಷರಿಗೇ ಗೌರವವನ್ನು ತಂದುಕೊಡುತ್ತದೆ.

women wants in their lives

ಆಸ್ಕರ್ ವೈಲ್ಡ್ ಅವರ ಮಾತಿನಲ್ಲಿ, "ಮಹಿಳೆಯರನ್ನು ಪ್ರೀತಿಸಬಹುದು ಆದರೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ." ಮಹಿಳೆಯರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ವಿಭಿನ್ನ ಅನುಭವಗಳನ್ನು ಪಡೆದಿರುತ್ತಾರೆ, ಆದರೆ ಎಲ್ಲರ ಕಥೆಗಳೂ ಒಂದೇ ತೆರನಾಗಿರುವುದಿಲ್ಲ. ಹಾಗಾಗಿಯೇ ಸಾಕಷ್ಟು ಪುರುಷರು 'ಮಹಿಳೆಯರನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ' ಎಂದೇ ಅಭಿಪ್ರಾಯಪಡುತ್ತಾರೆ.

ಮಹಿಳೆಯರು ವಾತ್ಸಲ್ಯ, ಪ್ರೀತಿ, ಸಂಕಲ್ಪ, ಪರಿಶ್ರಮ ಮತ್ತು ಶಕ್ತಿ ಈ ಎಲ್ಲದರ ಮಿಶ್ರಣವನ್ನು ತಮ್ಮ ವ್ಯಕ್ತಿತ್ವದಲ್ಲಿ ಹೊಂದಿರುತ್ತಾರೆ. ಬಹುಶಃ ಪುರುಷರು ಮಹಿಳೆಯರ ಈ ವ್ಯಕ್ತಿತ್ವಕ್ಕೆ ಸರಿಹೊಂದುವುದು ಕಷ್ಟ!

ಹಾಗಾಗಿ ಮಹಿಳೆಯರು ತಮ್ಮ ಜೀವನದಲ್ಲಿ ಏನನ್ನು ಬಯಸುತ್ತಾರೆ, ಅವರೊಂದಿಗೆ ಹೇಗಿರಬೇಕು ಎಂಬಿತ್ಯಾದಿ ಪ್ರಶ್ನೆಗಳು ಪುರುಷರ ಚಿಂತೆಗೆ ಕಾರಣವಾಗಿರಬಹುದು. ಹಾಗಾಗಿ ಈ ಅಂತರರಾಷ್ಟ್ರೀಯ ಮಹಿಳಾ ದಿನದಂದು ನಿಮಗೆ ಮಹಿಳೆಯರು ಬಯಸುವ ವಿಷಯಗಳ ಬಗ್ಗೆ ಕೊಂಚ ಮಾಹಿತಿಯನ್ನು ನೀಡಲು ಇಷ್ಟಪಡುತ್ತೇವೆ.

1. ಅವರ ಕನಸುಗಳನ್ನು ನನಸಾಗಿಸಲು ಬೆಂಬಲಿಸಿ

ಪುರುಷರಂತೆ ಮಹಿಳೆಯರಿಗೂ ಸಹ ಕನಸುಗಳಿವೆ. ಅವರ ಕನಸುಗಳನ್ನು ನನಸಾಗಿಸಿಕೊಳ್ಳಲು ಅವರಿಗೆ ಮಾನಸಿಕ ಬೆಂಬಲವೂ ಬೇಕು. ಮಹಿಳೆಯರು ಏನೇ ಕನಸು ಇಟ್ಟುಕೊಂಡಿದ್ದರೂ, ಅವರ ಕಷ್ಟದ ಪರಿಸ್ಥಿತಿಯನ್ನು ಎದುರಿಸುವಾಗ ತಮ್ಮ ಪ್ರೀತಿಪಾತ್ರರು ಸಹಾಯ ಹಸ್ತ ಚಾಚಬೇಕು ಮತ್ತು ತಮಗೆ ಬೆನ್ನೆಲುಬಾಗಿರಬೇಕು ಎಂದು ಯಾವಾಗಲೂ ಬಯಸುತ್ತಾರೆ.

2. ಅವಳ ಜೀವನದಲ್ಲಿ ಸಂತೋಷದಿಂದ ಬದುಕುವ ಸ್ವಾತಂತ್ರ್ಯ

ಮಹಿಳೆಯರಿಗೂ ಸಂತೋಷದಿಂದ ಬದುಕುವ ಹಕ್ಕಿದೆ ಅಲ್ವಾ?. ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿ ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಸೀಮಿತಗೊಳಿಸುವ ಸಮಯವೊಂದಿತ್ತು. ಆದರೆ ಈಗ ಸಮಯ ಬದಲಾಗಿದೆ. ಆದಾಗ್ಯೂ ಸಾಕಷ್ಟು ಮಹಿಳೆಯರು ತಮ್ಮ ಜೀವನವನ್ನು ನಡೆಸುವಾಗ ಇನ್ನೂ ಹಲವಾರು ನಿರ್ಬಂಧಗಳಿಗೆ ಒಳಗಾಗಿದ್ದಾರೆ.

ಮಹಿಳೆ ತನ್ನ ಆಯ್ಕೆಯ ಪ್ರಕಾರ ತನ್ನ ಜೀವನವನ್ನು ನಡೆಸಲು ಪ್ರಯತ್ನಿಸಿದಾಗ ಸಮಾಜವೇ ಅವರನ್ನು ನೋಡಿ ಹುಬ್ಬೇರಿಸುತ್ತದೆ, ಮೂಗು ಮುರಿಯುತ್ತದೆ. ಆದರೆ ಈ ಜಗತ್ತಿನ ಪ್ರತಿಯೊಬ್ಬ ಮಹಿಳೆ ತನ್ನ ಜೀವನವನ್ನು ಸಂತೋಷದಿಂದ ಬದುಕಲು ಅರ್ಹಳಾಗಿದ್ದಾಳೆ. ಪುರುಷರು ಮಹಿಳೆಯರಿಗೆ ಬದುಕುವ ಸ್ವಾತಂತ್ರ್ಯ ಕಲ್ಪಿಸಿಕೊಡಬೇಕು.

3. ಸಾಮಾಜಿಕ ಒತ್ತಡ ಹೇರದಿರುವುದು

ಒಂದು ಹುಡುಗಿ ಒಂದು ನಿರ್ದಿಷ್ಟ ವಯಸ್ಸಿಗೆ ಬಂದ ಕೂಡಲೇ, ಅವಳ ಕುಟುಂಬ ಮತ್ತು ಸಮಾಜವು ಅವಳನ್ನು ಮದುವೆ ಮಾಡುವುದಕ್ಕೆ ತರಾತುರಿಯಲ್ಲಿ ತಯಾರಿ ನಡೆಸುತ್ತಾರೆ. ಆಕೆ ಮದುವೆಯಾಗುವುದರಿಂದ ಅವಳು ಅಸಹಜ ಮಗುವಾಗಿ ಹುಟ್ಟಿರುವಂತೆ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದು ಹೇಳುವ ಮೂಲಕ ಅವಳ ಮನವೊಲಿಸಲು ಪ್ರಯತ್ನಿಸುತ್ತಾರೆ. ಮದುವೆಯಾಗುವಂತೆ ಮಹಿಳೆಯ ಮೇಲೆ ಒತ್ತಡ ಹೇರುವ ಬದಲು, ಅವಳ ವೃತ್ತಿಜೀವನದಲ್ಲಿ ಉತ್ತಮ ಸಾಧನೆ ಮಾಡಲು ಅವಳನ್ನು ಪ್ರೋತ್ಸಾಹಿಸುವ ಮತ್ತು ಆಕೆಗೆ ಅಧಿಕಾರ ನೀಡುವ ಬಗ್ಗೆ ನಾವು ಏಕೆ ಯೋಚಿಸಬಾರದು?

4. ಸೆಳೆತ ಮತ್ತು ಕಲೆ ಮುಕ್ತ ಋತುಚಕ್ರ

ಇದು ಪ್ರಪಂಚದಾದ್ಯಂತದ ಎಲ್ಲಾ ಮಹಿಳೆಯರಿಗೆ ಸಂಬಂಧಿಸಬಹುದಾದ ಸಾಮಾನ್ಯ ವಿಷಯಗಳಲ್ಲಿ ಒಂದಾಗಿದೆ. ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿ ಅನುಭವಿಸುವ ನೋವು ಮತ್ತು ಅಸ್ವಸ್ಥತೆಯನ್ನು ನೀಗಿಸಿಕೊಳ್ಳಲು ಬಯಸುತ್ತಾರೆ. ಆದರೆ ಇದು ನೈಸರ್ಗಿಕ ಕ್ರಿಯೆ. ಹಾಗಾಗಿ ಪ್ರತಿ ತಿಂಗಳು ಈ ಸೆಳೆತವನ್ನು, ಕಲೆಯ ಮುಜುಗರವನ್ನುಎದುರಿಸುವುದು ಸಾಮಾನ್ಯ. ಈ ಭೂಮಿಯಲ್ಲಿ ಪ್ರತಿಯೊಬ್ಬ ಮಹಿಳೆ ಈ ನೋವು, ಸೆಳೆತದಿಂದ ಮುಕ್ತ ಋತುಚಕ್ರವನ್ನು ಬಯಸುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

5. ಸಮಾನ ವೇತನ

ಸಮಾಜದ ಲಿಂಗ-ಪಕ್ಷಪಾತ ಧೋರಣೆ ಮಹಿಳೆಯರ ಪ್ರಗತಿಯಲ್ಲಿ ನಿರಂತರ ಅಡಚಣೆಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ, ಪುರುಷ ಸಮಾನ ಪ್ರತಿಭಾವಂತ ಮತ್ತು ಕಷ್ಟಪಟ್ಟು ದುಡಿಯುವ ಮಹಿಳೆಯರನ್ನು ಕಾಣಬಹುದು ಮತ್ತು ಆದ್ದರಿಂದ ಒಬ್ಬರ ದಕ್ಷತೆಯನ್ನು ನಿರ್ಧರಿಸಲು ಲಿಂಗವು ಎಂದಿಗೂ ಮಾನದಂಡವಾಗಲು ಸಾಧ್ಯವಿಲ್ಲ. ವೃತ್ತಿಜೀವನದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ದುಡಿಯುತ್ತಿದ್ದರೂ ಅವರು ಮಹಿಳೆಯರಾಗಿದ್ದ ಒಂದು ಕಾರಣಕ್ಕೆ ಅವರಿಗೆ ಕಡಿಮೆ ವೇತನ ನೀಡಲಾಗುತ್ತದೆ. ಮಹಿಳೆಯರಿಗೆ ಸಮಾನ ವೇತನದ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಬೇಕಾದ ಸರಿಯಾದ ಸಮಯ ಇದು.

6. ಸಮಾಜದಿಂದ ಗೌರವ

ಸಮಾಜವು ಮಹಿಳೆಯರಿಗೆ ವಿವಿಧ ಮಾನದಂಡಗಳನ್ನು ನಿಗದಿಪಡಿಸಿದೆ. ಆ ಸಾಮಾಜಿಕ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗದವರನ್ನು ನಿರ್ಣಯಿಸಲಾಗುತ್ತದೆ ಮತ್ತು ಕೀಳಾಗಿ ನೋಡಲಾಗುತ್ತದೆ. ತಡರಾತ್ರಿಯಲ್ಲಿ ಮನೆಯಿಂದ ಹೊರಗಿರು ಮಹಿಳೆಯರನ್ನು 'ನೈತಿಕಮೌಲ್ಯ ಕಳೆದುಕೊಂಡವರು' ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ಒಬ್ಬ ಮಹಿಳೆ ಒಬ್ಬಳೇ ಪ್ರಯಾಣಿಸುತ್ತಿದ್ದರೆ, ಅವಳನ್ನು ಕೂಡ ಸಮಾಜವು ತೀರ್ಮಾನಿಸುತ್ತದೆ. ಮಹಿಳೆಯ ಜೀವನ ವಿಧಾನವನ್ನು ಸ್ವೀಕರಿಸುವ ಬದಲು, ಸಮಾಜವು ಅವಳನ್ನು ಕೀಳಾಗಿ ನೋಡುವ ಮತ್ತು ಶೋಚನೀಯ ಎಂದು ಭಾವಿಸುತ್ತದೆ ಈ ಸಮಾಜ.

7. ಹೈ ಹೀಲ್ಸ್ (ಹೆಚ್ಚು ಎತ್ತರದ ಚಪ್ಪಲಿಗಳು)

ಮರ್ಲಿನ್ ಮನ್ರೋ ಹೇಳಿದಂತೆ "ಯಾರು ಈ ಎತ್ತರದ ಚಪ್ಪಲಿಗಳನ್ನು ಕಂಡುಹಿಡಿದಿದ್ದಾರೆಂದು ನನಗೆ ತಿಳಿದಿಲ್ಲ ಆದರೆ ಎಲ್ಲಾ ಮಹಿಳೆಯರು ಕಂದುಹಿಡಿದವನಿಗೆ ಋಣಿಯಾಗಿದ್ದಾರೆ" ಎಂದು ಹೇಳಿದರು. ಇದು ತಮಾಷೆ ಎನಿಸಿದರೂ ಅಕ್ಷರಶಃ ಸತ್ಯ. ಮಹಿಳೆಯರು ಈ ಎತ್ತರದ ಚಪ್ಪಲಿಗಳನ್ನು ಧರಿಸಿ ಆತ್ಮವಿಶ್ವಾಸದಿಂದ ನಡೆಯುವುದನ್ನು ನೋಡಿದರೆ ನೀವು ಆಶ್ಚರ್ಯಚಕಿತರಾಗಬಹುದು.

ಈ ಚಪ್ಪಲಿಗಳು ಮಹಿಳೆಯರನ್ನು ಅವರಿರುವ ಎತ್ತರಕ್ಕಿಂತ ಹೆಚ್ಚು ಎತ್ತರವಾಗಿ ಕಾಣುವಂತೆ ಮಾಡಿದರೂ, ಇದು ಅವರ ಕಾಲ್ಬೆರಳುಗಳಿಗೆ ಅಷ್ಟು ಒಳ್ಳೆಯದಲ್ಲ ಎಂದೂ ಹೇಳಲಾಗುತ್ತದೆ. ಆದರೂ ಈ ಕಾರಣದಿಂದಾಗಿ ಎತ್ತರದ ಚಪ್ಪಲಿಗಳನ್ನು ಧರಿಸಲು ಮಹಿಳೆಯರು ಹಿಂಜರಿಯುವುದಿಲ್ಲ. ಹಾಗಾಗಿ ಎತ್ತರದ ಹಾಗೂ ಆರಾಮದಾಯಕ ಚಪ್ಪಲಿಗಳನ್ನು ಮಹಿಳೆಯರು ಬಯಸುತ್ತಾರೆ. ಮಹಿಳೆ ತನ್ನ ವಾರ್ಡ್ರೋಬ್ (ಬೀರು) ನಲ್ಲಿ ಅತ್ಯಂತ ಆರಾಮದಾಯಕ ಮತ್ತು ಎತ್ತರದ ಚಪ್ಪಲಿಗಳನ್ನು ಹೊಂದಿದ್ದರೆ ಆಗ ಅವರಿಗಾಗುವ ಸಂತೋಷವನ್ನು ನೀವು ಅಳೆಯಲು ಸಾಧ್ಯವೇ ಇಲ್ಲ!

8. ಜೀನ್ಸ್ ನಲ್ಲಿ ದೊಡ್ಡದಾದ ಜೇಬು ಬೇಕು

ಇದೊಂದು ತಮಾಷೆಯಾದರೂ ದಿನನಿತ್ಯ ನಾವು ಹುಡುಗಿಯರು ಎದುರಿಸುತ್ತಿರುವ ಸವಾಲು ಸ್ಮಾರ್ಟ್ಫೋನ್ಗಳು ದೊಡ್ಡದಾಗುತ್ತಿದ್ದಂತೆ, ಮಹಿಳೆಯರ ಜೀನ್ಸ್ನಲ್ಲಿನ ಪಾಕೆಟ್ಗಳು ಚಿಕ್ಕದಾಗುತ್ತಿದೆ. ಈ ಕಾರಣದಿಂದಾಗಿ, ಮಹಿಳೆಯರು ಪರ್ಸ್ ಅಥವಾ ಬ್ಯಾಗ್ ಗಳನ್ನು ಕೊಂಡೊಯ್ಯಲು ಇಷ್ಟಪಡದಿದ್ದರೂ ಕೂಡ ಮೊಬೈಲ್ ಗಳನ್ನು ಇಟ್ಟುಕೊಳ್ಳಲು ಬಳಸಬೇಕಾಗಿದೆ. ದೊಡ್ಡ ಜೇಬಿರುವ ಜೀನ್ಸ್ ಅನ್ನು ಹೊಂದುವುದೇ ಸಧ್ಯಕ್ಕೆ ಮಹಿಳೆಯರ ಕನಸು! ಮಹಿಳೆಯರಿಗೆ ಕೆಲವೊಮ್ಮೆ ಯಾವುದೇ ಅಡಚಣೆಯಿಲ್ಲದೆ ಕೈಬೀಸಿಕೊಂಡು ಸುತ್ತಾಡುವ ಸಮಯ ಇಷ್ಟ. ಇಂಥ ಪ್ಯಾಂಟ್ ಎಲ್ಲಾದರೂ ನೋಡಿದ್ದೀರಾ?!

9. ಪರಿಪೂರ್ಣ ಐ-ಲೈನರ್

ಇಷ್ಟೇಲ್ಲ ಹೇಳಿ ಮೇಕಪ್ ಬಗ್ಗೆ ಮರೆತರೆ ಹೇಗೆ? ಸಾಕಷ್ಟು ಮಹಿಳೆಯರಿಗೆ ಕಣ್ಣಿಗೆ ಕಪ್ಪು ಹಚ್ಚುವುದೆಂದರೆ ಒಂದು ಸವಾಲೇ ಸರಿ. ಎಷ್ಟೇ ಸರಿಯಾಗಿ ಮೇಕಪ್ ಮಾಡಿಕೊಂಡರೂ ಕೊನೆಯಲ್ಲಿ ಒಂದು ಐ ಲೈನರ್ ಹಚ್ಚುವುದರಲ್ಲಿ ಗಂಟೆಗಟ್ಟಲೆ ಕಳೆದು ಕೊನೆಗೂ ಅದರಲ್ಲಿ ಯಶಸ್ವಿಯಾಗದೇ ಇರೋ ದಿನಗಳೇ ಹೆಚ್ಚು.

ಇದಕ್ಕಿಂತ ಇನ್ನೊಂದು ಭಯಾನಕ ಸಂಗತಿಯೆಂದರೆ ಒಂದು ಕಣ್ಣಿಗೆ ಸರಿಯಾಗಿ ಕಣ್ಕಪ್ಪು ಲೇಪನ ಮಾಡಿ ಇನ್ನೊಂದು ಕಣ್ಣಿಗೆ ಮಾಡುವಾಗ ಹಾಳಾಗುವುದು! ಎಷ್ಟು ಜನರಿಗೆ ಈ ಅನುಭವವಾಗಿದೆ ಹೇಳಿ? ಈ ಕಣ್ಣಿಗೆ ಕಾಡಿಗೆ ಹಚ್ಚುವುದು ರಾಕೆಟ್ ಸೈನ್ ಏನು ಅಲ್ಲ. ಪುನಃ ಪುನಃ ಅಭ್ಯಾಸದಿಂದ ಖಂಡಿತವಾಗಿಯೂ ಕರಗತವಾಗುತ್ತದೆ. ಪ್ರಯತ್ನ ಮುಂದುವರೆಸಿ!

10.ಮಹಿಳೆಯರನ್ನು ಗೌರವಿಸುವ ಪುರುಷರು ಬೇಕು

ಮಹಿಳೆಯರ ಮೇಲಿನ ಅಪರಾಧ, ಅತ್ಯಾಚಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರ ವಿನಯವನ್ನು ಗೌರವಿಸುವ ಮಹತ್ವದ ಬಗ್ಗೆ ನಮ್ಮ ಪುರುಷರಿಗೆ ಶಿಕ್ಷಣ ನೀಡಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಮಹಿಳೆಯರು ವಿವಿಧ ಹಲ್ಲೆ ಮತ್ತು ಅನ್ಯಾಯಗಳಿಗೆ ಒಳಗಾಗುತ್ತಿದ್ದಾರೆ. ಈ ಅಪರಾಧಗಳನ್ನು ಎಸಗಿದ ಅಪರಾಧಿಗಳನ್ನು ದೂಷಿಸುವುದಕ್ಕಿಂತ ಮೊದಲು, ಸಮಾಜವು ಮಹಿಳೆಯರನ್ನು ತಪ್ಪು ಎಂದು ನೋಡುವ ದೃಷ್ಟಿಕೋನ ಬದಲಾಗಬೇಕು.

11. ಸುರಕ್ಷಿತ ಪರಿಸರದಲ್ಲಿ ಬೆಳೆಯುವುದು

ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧವು ಎಷ್ಟು ಭಯಾನಕ ಮತ್ತು ಹೃದಯಸ್ಪರ್ಶಿಯಾಗಿದೆ ಎಂದರೆ ಹಾಡು ಹಗಲಲ್ಲಿಯೂ ಕೂಡ ಬೀದಿಗಳಲ್ಲಿ ನಡೆಯುವುದು ಕಷ್ಟ ಎಂಬಂತಾಗಿದೆ. ಹೀಗಿರುವಾಗ ಕಿರುಕುಳಕ್ಕೆ ಒಳಗಾಗುವ ಭಯದಿಂದ ಯಾವ ಮಹಿಳೆ ತಾನೇ ಬದುಕಲು ಬಯಸುತ್ತಾಳೆ? ಇದು ಮಾತ್ರವಲ್ಲ, ಎಷ್ಟೋ ಮಹಿಳೆಯರು ತಮ್ಮ ಸ್ವಂತ ಮನೆಗಳಲ್ಲಿಯೂ ಕೂಡ ಅಸುರಕ್ಷಿತರಾಗಿದ್ದಾರೆ. ಮಹಿಳೆಯರ ವಿರುದ್ಧ ಘೋರ ಅಪರಾಧಗಳನ್ನು ಮಾಡುವವರು ಮೊದಲು ಸ್ವಲ್ಪ ಯೋಚಿಸುವುದು ಒಳಿತು. ಮಹಿಳೆಯರೂ ಕೂಡ ಮನುಷ್ಯರೇ. ಅವರು ಅಪಹರಣ, ಅತ್ಯಾಚಾರ ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾಗುವ ಭಯವಿಲ್ಲದೆ ತಮ್ಮ ಜೀವನವನ್ನು ನಡೆಸಲು ಬಯಸುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು.

12. ಹೊಳಪುಳ್ಳ ಕೂದಲು ಬೇಕು; ಆದರೆ ಕೂದಲು ಉದುರುವುದು ಬೇಡ

ಕೂದಲು ಉದುರುವುದು ಮಹಿಳೆಯರು ಅನುಭವಿಸುವ ದುಃಖಕರ ಸಮಸ್ಯೆಗಳಲ್ಲಿ ಒಂದಾಗಿದೆ. ಕೂದಲನ್ನು ಮಹಿಳೆಯನ್ನು ಸುಂದರವಾಗಿಸುವ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ, ಅತೀಯಾಗಿ ಕೂದಲು ಉದುರುವುದನ್ನು ಮಹಿಳೆಯರು ಸಹಿಸುವುದಿಲ್ಲ ಮತ್ತು ಇದು ಮನಸ್ಸಿಗೆ ನೋವುಂಟು ಮಾಡುವ ಸಂಗತಿ. ಮಹಿಳೆಯರು ಯಾವಾಗಲೂ ಮೃದುವಾದ, ಹೊಳೆಯುವ ಮತ್ತು ಆರೋಗ್ಯಕರ ಕೂದಲನ್ನು ಹೊಂದಬೇಕೆಂದು ಕನಸು ಕಾಣುತ್ತಾರೆ. ಇದಕ್ಕಾಗಿ, ಅವರು ತಮ್ಮ ಹೆಚ್ಚುವರಿ ಸಮಯವನ್ನು ಕೂದಲಿನ ಕಾಳಜಿಮಾಡಲು ಮೀಸಲಿಡುತ್ತಾರೆ.

13. 'ಧರಿಸಲು ಏನೂ ಇಲ್ಲ' ಎಂಬುದಕ್ಕೆ ಶಾಶ್ವತ ಪರಿಹಾರ!

ಮಹಿಳೆಯರ ಬೀರುವಿನಲ್ಲಿ ಸಾವಿರಾರು ಬಟ್ಟೆಗಳು ತುಂಬಿದ್ದರೂ ಸಹ, ಯಾವುದೇ ಸಮಾರಂಭಕ್ಕೆ ಹೋಗುವ ಮೊದಲು ಧರಿಸಲು ಏನೂ ಇಲ್ಲ ಎಂಬ ದೂರು ನೀಡುವುದನ್ನು ನೀವು ಖಂಡಿತವಾಗಿಯೂ ಕೇಳಿರುತ್ತೀರಿ! ಮಹಿಳೆಯರು ಪ್ರತಿ ಸಂದರ್ಭದಲ್ಲೂ ಉತ್ತಮವಾಗಿ ಕಾಣಬೇಕೆಂದು ಬಯಸುತ್ತಾರೆ ಮತ್ತು ಆದ್ದರಿಂದ, ಅವರು ಧರಿಸಿರುವ ಯಾವುದೇ ವಸ್ತುಗಳು ತಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ ಎಂಬ ನಿಲುವು ಅವರದ್ದಾಗಿರುತ್ತದೆ.

14. ಪರಿಪೂರ್ಣ ಪೋಟೋ

ತಾವು ಫೋಟೋದಲ್ಲಿ ಸುಂದರವಾಗಿ ಮತ್ತು ಅದ್ಭುತವಾಗಿ ಕಾಣಲು ಯಾರು ತಾನೇ ಬಯಸುವುದಿಲ್ಲ? ಯಾರಾದರೂ ಕೆಟ್ಟದಾಗಿ ನಿಮ್ಮ ಫೋಟೋವನ್ನು ಕ್ಲಿಕ್ಕಿಸಿದರೆ ನಿಮಗೆ ಎಲ್ಲಿಲ್ಲದ ಅಸಮಾಧಾನವಾಗುತ್ತದೆ ಅಲ್ಲವೇ? ಬಹುತೇಕ ಎಲ್ಲ ಮಹಿಳೆಯಿಗೂ ಇದೇ ಸಮಸ್ಯೆ! ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷದಿಂದ ಹಾಕಬಹುದಾದ 'ಪರ್ಫೆಕ್ಟ್ ಫೋಟೋ' ತೆಗೆಸಿಕೊಳ್ಳಲು ರಹಸ್ಯವಾಗಿಯೇ ಬಯಸುತ್ತಿರುತ್ತಾರೆ!

15. ಕೊಬ್ಬಿಲ್ಲದ ರುಚಿಕರ ಆಹಾರ

ಕೊಬ್ಬಿನಂಶವಿಲ್ಲದ ರುಚಿಕರವಾದ ಆಹಾರವನ್ನು ಸೇವಿಸುವುದು ಬಹುಶಃ ಮಹಿಳೆಯರ ಸಾಮಾನ್ಯ ಕನಸುಗಳಲ್ಲಿ ಒಂದಾಗಿದೆ. ಹೆಚ್ಚುವರಿ ಹೊಟ್ಟೆಯ ಕೊಬ್ಬು ಅಥವಾ ಹೆಚ್ಚು ದಪ್ಪವಾಗಲು ಮಹಿಳೆಯರು ಎಂದಿಗೂ ಇಷ್ಟಪಡುವುದಿಲ್ಲ. ತಮ್ಮ ಆಕಾರವನ್ನು ಹಾಗೆಯೇ ಉಳಿಸಿಕೊಳ್ಳಲು ಅನೇಕ ಮಹಿಳೆಯರು ತಮ್ಮ ನೆಚ್ಚಿನ ಆಹಾರ ಮತ್ತು ಸಿಹಿತಿಂಡಿಗಳನ್ನು ದೂರವಿಡುತ್ತಾರೆ. ಆದರೆ ಒಳಗೊಳಗೆ ಅವರ ಮನಸ್ಸಿನಲ್ಲಿ ತಾವು ತಮ್ಮ ನೆಚ್ಚಿನ ಆಹಾರವನ್ನು ತಿಂದೂ ತೆಳ್ಳಗೆ ಇರಬೇಕೆಂದು ಬಯಸುತ್ತಾರೆ.

16. ದೀರ್ಘಕಾಲ ಉಳಿಯುವ ಲಿಪ್ಸ್ಟಿಕ್

ಲಿಪ್ಸ್ಟಿಕ್ ,ಮಹಿಳೆಯರ ಅತ್ಯುತ್ತಮ ಸ್ನೇಹಿತ ಎಂದರೆ ತಪ್ಪಾಗಲಿಕ್ಕಿಲ್ಲ. ಲಿಪ್ಸ್ಟಿಕ್ ನ್ನು ಹಚ್ಚಲು ದ್ವೇಷಿಸುವ ಮಹಿಳೆಯರು ಸಾಕಷ್ಟು ಕಡಿಮೆ. ಮಹಿಳೆಯರು ತಮ್ಮ ಲಿಪ್ಸ್ಟಿಕ್ ಚಹಾ / ಕಾಫಿಯನ್ನು ಕುಡಿದಾಗ ಕಪ್ ನಲ್ಲಿ ಅಂತಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಹಾಗೆಯೇ ಮುಖ ಒರೆಸಿಕೊಳ್ಳುವಾಗ, ಬಾಯಿ ತೊಳೆದುಕೊಳ್ಳುವಾಗ ಲಿಪ್ಸ್ಟಿಕ್ ಅಳಿಸಿ ಹೋಗುವುದನ್ನೂ ಅವರು ಸಹಿಸುವುದಿಲ್ಲ.

17. ಕುಂದಿಲ್ಲದ ಚರ್ಮ

ಪ್ರಪಂಚದಾದ್ಯಂತದ ಮಹಿಳೆಯರು ಮೃದುವಾದ, ಕುಂದಿಲ್ಲದ ಮತ್ತು ಹೊಳೆಯುವ ಚರ್ಮವನ್ನು ಹೊಂದಬೇಕೆಂದು ಕನಸು ಕಾಣುತ್ತಿರುತ್ತಾರೆ. ಇದಕ್ಕಾಗಿ, ಅವರ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಕಲೆರಹಿತವಾಗಿಡಲು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಅನುಸರಿಸುತ್ತಾರೆ. ತಮ್ಮ ತ್ವಚೆಯಲ್ಲಿ ಗುಳ್ಳೆಗಳು, ಕಲೆಗಳು ಮತ್ತು ಮೊಡವೆಗಳನ್ನು ಹೊಂದುವುದೆ ಎಂದರೆ ಮಹಿಳೆಯರಿಗೆ ಒಂದು ಭಯಾನಕ ಕನಸೇ ಸರಿ!

18. ಮಹಿಳೆಯರು ಇತರ ಮಹಿಳೆಯರಿಗಾಗಿ ನಿಲ್ಲುತ್ತಾರೆ

ಒಬ್ಬ ಮಹಿಳೆಯನ್ನು ಇತರರು ಕೆಳಗಿಳಿಸುವ ಪರಿಯನ್ನು ನಾವು ಸಮಾಜದಲ್ಲಿ ನೋಡಿದ್ದೇವೆ. ಆದರೆ ಮಹಿಳೆಯರೇ ಇನ್ನೊಬ್ಬ ಮಹಿಳೆಯ ಬೆಂಬಲಕ್ಕೆ ನಿಂತರೆ ಒಳ್ಳೆಯದಲ್ಲವೇ? ಖಂಡಿತವಾಗಿಯೂ ಮಹಿಳೆಯರು ಹೆಚ್ಚು ಸ್ವತಂತ್ರರಾಗುತ್ತಾರೆ. ಇತರ ಮಹಿಳೆಯರು ತಮ್ಮ ಮತ್ತು ಇತರರ ಬಗ್ಗೆ ನಿಲುವನ್ನು ತೆಗೆದುಕೊಳ್ಳುವುದನ್ನು ನೋಡಿದರೆ, ದೀನದಲಿತ ಮಹಿಳೆಯರ ಜೀವನ ಪರಿಸ್ಥಿತಿಗಳು ಖಂಡಿತವಾಗಿಯೂ ಸುಧಾರಿಸಬಹುದು.

19. ದೇಹದಲ್ಲಿ ಕೂದಲಿನ ಕಡಿಮೆ ಬೆಳವಣಿಗೆ

ವ್ಯಾಕ್ಸಿಂಗ್ ನೋವು ಮಹಿಳೆಗೆ ಚೆನ್ನಾಗಿಯೇ ತಿಳಿದಿರುತ್ತದೆ. ಮಹಿಳೆಯರು ತಮ್ಮ ಜೀವನದಲ್ಲಿ ಬಯಸುವ ಇನ್ನೊಂದು ವಿಷಯವೆಂದರೆ ಮುಖದ ಅಥವಾ ದೇಹದಲ್ಲಿ ಕಡಿಮೆ ಕೂದಲಿನ ಬೆಳವಣಿಗೆ. ವ್ಯಾಕ್ಸಿಂಗ್ ಮತ್ತು ಶೇವಿಂಗ್ ಅಷ್ಟು ಸುಲಭವೇನಲ್ಲ. ಮೃದು ಮತ್ತು ಕೂದಲುರಹಿತ ಚರ್ಮವನ್ನು ಹೊಂದುವುದು ದೊಡ್ಡ ವಿಷಯವಲ್ಲ ಎಂದು ನೀವು ಭಾವಿಸಿದರೆ, ವ್ಯಾಕ್ಸಿಂಗ್ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು ನಿಮಗೆ ತಿಳಿದಿಲ್ಲವೆಂದೇ ಅರ್ಥ.

20. ಸಂಗಾತಿಯೊಂದಿಗೆ ಅನ್ಯೋನ್ಯತೆ

ನಿಮ್ಮ ಸಂಗಾತಿಯೊಂದಿಗೆ ಆತ್ಮೀಯತೆಯಿಂದಿರುವುದು ನಿಮ್ಮ ಲೈಂಗಿಕ ಜೀವನವನ್ನು ಹೆಚ್ಚು ರೋಮಾಂಚನಕಾರಿಯಾಗಿಸುತ್ತದೆ, ಆದ್ದರಿಂದ, ಇದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವನ್ನು ಉತ್ತಮಗೊಳಿಸುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಸಮಾನವಾಗಿ ಆಹ್ಲಾದಕರ ಅನುಭವವನ್ನು ನೀಡುವ ವಿಷಯ. ಮಹಿಳೆಯರಿಗೆ ಅವರ ಲೈಂಗಿಕ ಆಸೆಗಳು ಮತ್ತು ಕಲ್ಪನೆಗಳು ಇರುವುದಿಲ್ಲ ಎಂದು ನೀವು ಭಾವಿಸಿದರೆ ಅದು ಖಂಡಿತ ತಪ್ಪು. ಮಹಿಳೆಯರು ಯಾವಾಗಲೂ ಉತ್ತಮ ಮತ್ತು ರೋಮಾಂಚಕಾರಿ ಲೈಂಗಿಕ ಜೀವನವನ್ನು ಹೊಂದಲು ಬಯಸುತ್ತಾರೆ, ಅದು ಅವರನ್ನು ತೃಪ್ತಿಪಡಿಸುವುದಲ್ಲದೆ ಅವರನ್ನು ಪ್ರೀತಿಸುವಂತೆ ಮಾಡುತ್ತದೆ.

ಮಹಿಳೆಯರು ದೊಡ್ಡ ದೊಡ್ಡ ಕನಸುಗಳಿಂತ ನಿತ್ಯಜೀವನದಲ್ಲಿ ಸಣ್ಣಪುಟ್ಟ ಆಸೆಗಳನ್ನು ಇಡೇರಿಸಿಕೊಳ್ಳುವುದಕ್ಕೇ ಹೆಚ್ಚು ಇಷ್ಟಪಡುತ್ತಾರೆ. ನಿವು ಅವರನ್ನು ಪ್ರೀತಿಸುವವರಲ್ಲಿ ಒಬ್ಬರಾಗಿದ್ದರೆ, ನಿಮ್ಮೊಬ್ಬರನ್ನೇ ಪ್ರೀತಿಸುವಷ್ಟರ ಮಟ್ಟಿಗೆ ಅವರೊಂದಿಗೆ ಬೆರೆತು ಅವರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಅವರ ಜೊತೆಗಿರಿ.

English summary

International Women's Day 2020:Things Women Want In Their Lives

Here we are discussing about International Women's Day 2020 special what are the things Women Want In Their Lives. on this International Women's Day, we thought of helping you with a list of things about the things women want. Read more.
X
Desktop Bottom Promotion