For Quick Alerts
ALLOW NOTIFICATIONS  
For Daily Alerts

ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್: ಇವರಿಗೆ ಸಿಗುವ ಸಂಬಳ, ಭತ್ಯೆ ಸೌಲಭ್ಯಗಳೇನು?

|

ಭಾರತದ ನೂತನ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಮಾರ್ಗರೇಟ್‌ ಆಳ್ವ ಅವರ ವಿರುದ್ಧ ಗೆಲುವು ಸಾಧಿಸಿ, ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

71 ವರ್ಷದ ಜಗದೀಪ್‌ ಧನಕರ್‌ ರಾಜಾಸ್ಥಾನದ ಜುಂಝುನು ಜಿಲ್ಲೆಯಲ್ಲಿ 1951 ಮೇ 18ರಂದು ಕಿತಾನಾ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿದರು. ಇವರು ಮೂಲತಃ ಬಿಜೆಪಿಯವರಲ್ಲ, 1989ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ರಾಜಸ್ಥಾನದ ಜುಂಝುನು ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿ ಗೆದ್ದರು. ನಂತರ ಅಶೋಕ್‌ ಗೆಹ್ಲೋಟ್‌ ಅಧಿಕಾರಕ್ಕೆ ಬಂದ ಮೇಲೆ 2008ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. 2019ರಲ್ಲಿ ಜಗದೀಪ್‌ ಧನಕರ್‌ ಅವರು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅವರ ಕುರಿತು ಪ್ರಮುಖವಾದ ವಿಷಯಗಳನ್ನು ಇಲ್ಲಿ ನೀಡಲಾಗಿದೆ ನೋಡಿ:

* ಜಗದೀಪ್‌ ಧನಕರ್‌ ಅವರು ರಾಜಾಸ್ಥಾನದ ರೈತ ಕುಟುಂಬದಲ್ಲಿ ಜನಿಸಿದವರು.

* ಜಗದೀಪ್‌ ಧನಕರ್‌ ಅವರು ಲಾಯರ್‌ ಆಗಿ ಸುಪ್ರೀಂಕೋರ್ಟ್ ಹಾಗೂ ರಾಜಾಸ್ಥಾನದ ಹೈ ಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. 1990 ನಂತರ ರಾಜಕೀಯ ಪ್ರವೇಶಿಸುತ್ತಾರೆ.

* ಪಿ ವಿ ನರಸಿಂಹರಾವ್‌ ಇರುವಾಗ ಅವರು ಕಾಂಗ್ರೆಸ್ ಸೇರಿದರು, ನಂತರ ಅಶೋಕ್‌ ಗೆಹ್ಲೋಟ್‌ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದರು.

ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಲು ಅರ್ಹತೆಗಳೇನು?

* ಉಪರಾಷ್ಟ್ರಪತಿಯಾಗಲು ಕನಿಷ್ಠ 35 ವರ್ಷ ವಯಸ್ಸಾಗಿರಬೇಕು, ಅಭ್ಯರ್ಥಿಯು ಭಾರತೀಯ ನಾಗರಿಕರಾಗಿರಬೇಕು, ರಾಜ್ಯಸಭೆಯಲ್ಲಿ ಸದಸ್ಯತ್ವ ಹೊಂದಿದ್ದರಬೇಕು.
* ಕೇಂದ್ರ ಅಥವಾ ರಾಜ್ಯ ಸರ್ಕಾರ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದಿರಬಾರದು.

ಉಪ ರಾಷ್ಟ್ರಪತಿಗಳ ಸಂಬಳ ಎಷ್ಟು?

ಮೂಲಗಳ ಪ್ರಕಾರ ಉಪ ರಾಷ್ಟ್ರಪತಿಗಳಿಗೆ ವಿವಿಧ ಭತ್ಯೆಗಳ ಜೊತೆಗೆ ತಿಂಗಳಿಗೆ 4 ಲಕ್ಷ ರೂ. ಸಂಬಳವಿದೆ. ಇವರಿಗೆ ವೈಯಕ್ತಿಕ ಭದ್ರತೆ ಸಿಬ್ಬಂದಿ ನೀಡಲಾಗುವುದು, ಉಚಿತ ವೈದ್ಯಕೀಯ ಸೇವೆ, ಉಚಿತ ರೈಲು, ವಿಮಾನ ಪ್ರಯಾಣ, ಸಂವಹನ ಸಂಪರ್ಕ ಹೀಗೆ ಎಲ್ಲಾ ವ್ಯವಸ್ಥೆ ನೀಡಲಾಗಿರುತ್ತೆ.

ಉಪರಾಷ್ಟ್ರಪತಿಯವರು ನವದೆಹಲಿಯ ಮೌಲಾನಾ ಅಜಾದ್‌ ರಸ್ತೆಯಲ್ಲಿರುವ ಉಪರಾಷ್ಟ್ರಪತಿಯವರ ಭವನದಲ್ಲಿ ವಾಸಿಸುತ್ತಾರೆ. ಈ ಭವನ ಇರುವ ಸ್ಥಳ 6.48 ಎಕರೆ ವಿಸ್ತೀರ್ಣ ಹೊಂದಿದೆ.

English summary

Interesting Facts about India's New Vice President Jagdeep Dhankhar in Kannada

Here are interesting facts about India's New Vice President, and more detail about Vice President post, read on...
X
Desktop Bottom Promotion