For Quick Alerts
ALLOW NOTIFICATIONS  
For Daily Alerts

ಲೈಫ್‌ನಲ್ಲಿ ಸೆಕೆಂಡ್ ಚಾನ್ಸ್‌ ಪಡೆಯಲು ಅರ್ಹರಾಗಿರುವ ರಾಶಿಯವರಿವರು

|

ಪ್ರೀತಿಯಲ್ಲಿ ಹಾನಿಗೊಳಗಾಗುವುದು ನಮ್ಮನ್ನು ಕಠಿಣ ವ್ಯಕ್ತಿಯನ್ನಾಗಿ ಮಾಡುತ್ತದೆ. ಆದರೆ ಅದೇ ವ್ಯಕ್ತಿಯು ಎರಡನೇ ಅವಕಾಶವನ್ನು ಕೇಳಿದಾಗ, ನಾವು ಅವರಿಗೆ ಅವಕಾಶ ನೀಡಬೇಕೆ ಅಥವಾ ಬೇಡವೇ! ಎಂಬ ಸಂಕಟಕ್ಕೆ ಸಿಲುಕಬಹುದು. ಮತ್ತು ಹೆದರುತ್ತಾ ಎರಡನೆಯ ಅವಕಾಶವನ್ನು ನೀಡಬಹುದು.

ಆದರೆ, ಜ್ಯೋತಿಷ್ಯದ ಪ್ರಕಾರ, ಪ್ರಾಮಾಣಿಕ ಪಶ್ಚಾತ್ತಾಪ ಪಡುವ ಲಕ್ಷಣಗಳನ್ನು ಹೊಂದಿದ 5 ವಿಶೇಷ ರಾಶಿ ಚಿಹ್ನೆಗಳು ಇವೆ. ಈ ರಾಶಿಚಕ್ರದ ಲಕ್ಷಣಗಳು ಏನೆಂದರೆ, ಇಂತವರು ಅವರಿಗೆ ನೀಡಲಾದ ಎರಡನೆಯ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಾರೆ ಮತ್ತು ಮೊದಲು ಮಾಡಿದ ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ.

ಈ ರಾಶಿಚಕ್ರ ಚಿಹ್ನೆಗಳ ಜನರು ಸಂಪೂರ್ಣವಾಗಿ ಎರಡನೆಯ ಅವಕಾಶವನ್ನು ಪಡೆದುಕೊಳ್ಳುತ್ತಾರೆ ಮತ್ತು ಅವರ ನಿಷ್ಠೆಯನ್ನು, ಪಶ್ಚಾತ್ತಾಪಪಡುವ ಮತ್ತು ಸಾಬೀತುಪಡಿಸುವ ವಿಧಾನದ ಪ್ರಕಾರ ಅವುಗಳಿಗೆ ಸ್ಥಾನವನ್ನು ನೀಡಲಾಗಿದೆ. ನಿಜವಾಗಿಯೂ ಎರಡನೆಯ ಅವಕಾಶಕ್ಕೆ ಅರ್ಹರಾಗಿರುವ ರಾಶಿಚಕ್ರ ಚಿಹ್ನೆಗಳನ್ನು ಪರೀಕ್ಷಿಸಿ!

 ಕುಂಭ ರಾಶಿ : ಜನವರಿ 21-ಫೆಬ್ರವರಿ 18

ಕುಂಭ ರಾಶಿ : ಜನವರಿ 21-ಫೆಬ್ರವರಿ 18

ಈ ರಾಶಿಚಕ್ರ ಚಿಹ್ನೆಗೆ ಸೇರಿದ ವ್ಯಕ್ತಿಗಳು ಅನೇಕ ವಿಷಯಗಳಲ್ಲಿ ಒಳ್ಳೆಯವರಾಗಿರುತ್ತಾರೆ ಮತ್ತು ಅವುಗಳಲ್ಲಿ ಉತ್ತಮವಾದದ್ದು- ಹೃದಯ ನೋಯಿಸುವುದು!. ಏನೇ ಇದ್ದರೂ ಇದು ಅವರ ತಪ್ಪು ಅಲ್ಲ ಬಿಡಿ, ಅವರ ನಕ್ಷತ್ರಗಳನ್ನು ಆರೋಪಿಸಿ !

ಸಾಮಾನ್ಯವಾಗಿ ಈ ರಾಶಿಚಕ್ರ ಚಿಹ್ನೆಗಳಿಗೆ ಸೇರಿದ ವ್ಯಕ್ತಿಗಳು ವಾಸ್ತವಿಕತೆಯಿಂದ ದೂರವಿರುತ್ತಾರೆ ಮತ್ತು ಬೇರೆ ಗ್ರಹದಿಂದ ಬಂದಂತೆ ವರ್ತಿಸುತ್ತಾರೆ. ಇದು ಖಂಡಿತವಾಗಿಯೂ ಎರಡನೇ ಅವಕಾಶವನ್ನು ಪಡೆಯುವ ಅರ್ಹತೆಯ ಸಂಕೇತವಾಗಿದೆ.

ಕನ್ಯಾರಾಶಿ: ಆಗಸ್ಟ್ 24-ಸೆಪ್ಟೆಂಬರ್ 23

ಕನ್ಯಾರಾಶಿ: ಆಗಸ್ಟ್ 24-ಸೆಪ್ಟೆಂಬರ್ 23

ಈ ರಾಶಿಚಕ್ರ ಚಿಹ್ನೆಗೆ ಸೇರಿದ ವ್ಯಕ್ತಿಗಳು ಖಂಡಿತವಾಗಿಯೂ ಕೆಲವು ಅಪ್ರಾಮಾಣಿಕ ದೌರ್ಬಲ್ಯಗಳನ್ನು ಹೊಂದಿದ್ದಾರೆ. ಇವರು ಕೆಲವೊಮ್ಮೆ ನಿರ್ಣಾಯಕವಾಗಿ ನಡೆಯಬಹುದು, ಆದರೆ ಅವರ ನಡವಳಿಕೆಯು ಯಾವುದೇ ಕ್ರೂರವಾದ,ವಿಲಕ್ಷಣ ಉದ್ದೇಶದಿಂದ ಅಲ್ಲ. ಕೆಲವೊಮ್ಮೆ ಅರಿವಿಲ್ಲದೆ ಅವರು ಹೀಗೆ ವರ್ತಿಸಬಹುದು ಏಕೆಂದರೆ ಇದು ಕೇವಲ ಅವರ ವ್ಯಕ್ತಿತ್ವ.

ಇಂತಹ ವ್ಯಕ್ತಿಗಳು ಅವರಿಂದ ತಪ್ಪಾದಾಗ ತಪ್ಪೊಪ್ಪಿಕೊಳ್ಳುವ ಪ್ರಬಲ ಗುಣವನ್ನು ಒಳಗೊಂಡಿದ್ದಾರೆ. ಆದುದರಿಂದ ಈ ವ್ಯಕ್ತಿಗಳು ಸಂಪೂರ್ಣವಾಗಿ ಎರಡನೇ ಅವಕಾಶಕ್ಕೆ ಅರ್ಹರಾಗಿದ್ದಾರೆ.

ಮಕರ ರಾಶಿ: ಡಿಸೆಂಬರ್ 23- ಜನವರಿ 20

ಮಕರ ರಾಶಿ: ಡಿಸೆಂಬರ್ 23- ಜನವರಿ 20

ಈ ರಾಶಿಚಕ್ರ ಚಿಹ್ನೆಗೆ ಸೇರಿದ ವ್ಯಕ್ತಿಗಳು ಒಂದು ವೇಳೆ ನಿಮಗೆ ಹಾನಿಯನ್ನುಂಟುಮಾಡಿದರೆ ಅಥವಾ ನೋವುಂಟು ಮಾಡಿದರೆ ಅದು ಅವರ ವ್ಯಾವಹಾರಿಕ ಆದ್ಯತೆಗಳ ಕಾರಣದಿಂದ ಮಾತ್ರಾ.

ಇವರು ಮಹತ್ವಾಕಾಂಕ್ಷೆ ಮತ್ತು ಜವಾಬ್ದಾರರಾಗಿರುತ್ತಾರೆ. ಇವರು ಕೆಲವೊಮ್ಮೆ ತಮ್ಮ ಆಕಾಂಕ್ಷೆಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತಾರೆ ಮತ್ತು ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಇವರ ಕಠೋರತನವನ್ನು ತಪ್ಪಾಗಿ ತಿಳಿಯಬೇಡಿ, ಏಕೆಂದರೆ ಇವರು ಜೀವನವನ್ನು ತುಣುಕುಗಳ ಮೂಲಕ ಒಟ್ಟಿಗೆ ಹಿಡಿಯಲು ಪ್ರಯತ್ನಿಸುತ್ತಾರೆ. ಒಮ್ಮೆ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಎರಡನೆಯ ಅವಕಾಶ ಕೇಳಿದರೆ ಅದು ನಿಜವಾಗಿಯೂ ತಮ್ಮ ತಪ್ಪನ್ನು ಅರ್ಥಮಾಡಿಕೊಂಡು ಕೇಳಿರುತ್ತಾರೆ. ಆದ್ದರಿಂದ ಈ ವ್ಯಕ್ತಿಗಳು ಎರಡನೇ ಅವಕಾಶಕ್ಕೆ ಅರ್ಹರಾಗಿದ್ದಾರೆ.

ತುಲಾ ರಾಶಿ: ಸೆಪ್ಟೆಂಬರ್ 24-ಅಕ್ಟೋಬರ್ 23

ತುಲಾ ರಾಶಿ: ಸೆಪ್ಟೆಂಬರ್ 24-ಅಕ್ಟೋಬರ್ 23

ಈ ರಾಶಿಚಕ್ರ ಚಿಹ್ನೆಗೆ ಸೇರಿದ ವ್ಯಕ್ತಿಗಳ ಶಾರೀರಿಕ ಮೋಡಿಯು, ಸರಿ ಮತ್ತು ತಪ್ಪನ್ನು ಅರ್ಥಮಾಡಿಕೊಳ್ಳುವಲ್ಲಿನ ಕೊರತೆಯನ್ನು ನೀಗಿಸುತ್ತದೆ, ಇವರು ತಾವು ಪ್ರೀತಿಸುವ ಮತ್ತು ಇವರ ಸುತ್ತ ಮುತ್ತಲಿನ ಜನರನ್ನು ಯಾವಾಗಲೂ ಸಂತೋಷದಿಂದಿಡಲು ಬಯಸುತ್ತಾರೆ, ಚಿಕ್ಕ ಚಿಕ್ಕ ವಿಷಯಗಳಲ್ಲಿ ಸಂತೋಷವನ್ನು ಕಾಣುತ್ತಾರೆ ಮತ್ತು ಸೌಂದರ್ಯದ ಕಡಲಲ್ಲಿ ಈಜುತ್ತಿರುತ್ತಾರೆ.

ನಿಮ್ಮ ಹೃದಯವು ಇವರಿಗಾಗಿ ಸದಾ ತೆರೆದಿರಲಿ, ಏಕೆಂದರೆ ಇವರು ನಿಜವಾಗಿಯೂ ಎರಡನೆಯ ಅವಕಾಶಕ್ಕೆ ಅರ್ಹರಾಗಿದ್ದಾರೆ!

ಮೇಷ ರಾಶಿಯ: ಮಾರ್ಚ್ 21-ಏಪ್ರಿಲ್ 19

ಮೇಷ ರಾಶಿಯ: ಮಾರ್ಚ್ 21-ಏಪ್ರಿಲ್ 19

ಈ ವ್ಯಕ್ತಿಗಳ ಆಕ್ರಮಣಶೀಲತೆ ಮತ್ತು ಸ್ಪರ್ಧಾತ್ಮಕತೆ ಎಂದೆಂದಿಗೂ ನೀವು ಅವರತ್ತ ಬೆನ್ನು ಮಾಡುವಂತೆ ಮಾಡಬಹುದು. ಈ ವ್ಯಕ್ತಿಗಳು ಮೊಂಡುತನದವರಾಗಿರಬಹುದು, ಒಂದು ವೇಳೆ ನೀವು ಆಟದಲ್ಲಿ ಇವರನ್ನು ಸೋಲಿಸಿದರೆ ಇವರು ಕೋಪದಲ್ಲಿ ಏನು ಬೇಕಾದರೂ ಮಾಡಬಹುದು.

ಸಂಕ್ಷಿಪ್ತವಾಗಿ, ಇವರು ಅತ್ಯಂತ ಅಸಹನೆಯಿಂದ ಕೂಡಿದ ವ್ಯಕ್ತಿಗಳು; ಆದರೆ ಇವರು ಒಳ್ಳೆಯ ಸ್ನೇಹಿತ ಹಾಗೂ ಸಂಗಾತಿಯಾಗಬಲ್ಲರು ಎಂಬುದರಲ್ಲಿ ಸಂಶಯವಿಲ್ಲ.

ಆತುರವಾಗಿ ಕೆಲಸಮಾಡುವಾಗ ಇವರು ತಪ್ಪುಗಳನ್ನು ಮಾಡಬಹುದು. ಆದರೆ ಉದ್ದೇಶ ಪೂರ್ವಕವಾಗಿ ಅಲ್ಲ. ಆದ್ದರಿಂದ ಇವರಿಗೆ ಎರಡನೇ ಅವಕಾಶ ಸಿಗಲಿ.

ಇಲ್ಲಿ ಪಟ್ಟಿ ಮಾಡಲಾದ ರಾಶಿಚಕ್ರದಲ್ಲಿ ನಿಮ್ಮ ಮೆಚ್ಚಿನ ಚಿಹ್ನೆ ಇದೆಯೇ? ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ. ರಾಶಿಚಕ್ರದ ಬಗ್ಗೆ ಹೆಚ್ಚು ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿಯಲು ನಮ್ಮ ವಿಭಾಗವನ್ನು ನೋಡುತ್ತಿರಿ.

Read more about: life
English summary

ಎರಡನೇ ಅವಕಾಶದ ಅರ್ಹತೆ ಹೊಂದಿರುವ ರಾಶಿಚಕ್ರದ ಚಿಹ್ನೆಗಳು !

According to astrology, there are 5 particular zodiac signs that are known to have honest repenters. These zodiac signs are known to make the best use of the second chance that they are given and do not repeat their mistakes.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more