For Quick Alerts
ALLOW NOTIFICATIONS  
For Daily Alerts

  ವೃಶ್ಚಿಕರಾಶಿಯ ವ್ಯಕ್ತಿಗಳಿಗೆ ಮೇ 2018 ಹೀಗಿರಲಿದೆ

  |

  ವೃಶ್ಚಿಕರಾಶಿಯ ವ್ಯಕ್ತಿಗಳು ಭಾವೋದ್ದೀಪ್ತ ಹಾಗೂ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ ಹಾಗೂ ಇವರ ಗುರಿಸಾಧನೆಗೆ ಎದುರಾಗುವ ಅಡ್ಡಿಗಳನ್ನು ಎದುರಿಸಿ ಗೆಲುವು ಸಾಧಿಸುವ ವ್ಯಕ್ತಿಗಳೂ ಆಗಿರುತ್ತಾರೆ. ಇವರಿಗೆ ಎದುರಾಗುವ ನಷ್ಟ ಅಥವಾ ಸೋಲು ಇವರನ್ನು ಗೆಲುವಿನತ್ತ ಕೊಂಡೊಯ್ಯುವುದನ್ನು ತಡೆಯಲಾಗದು.

  ಈ ವ್ಯಕ್ತಿಗಳು ಸತತವಾಗಿ ತಮ್ಮ ಗುರಿಯ ಕಡೆಗೆ ಗಮನ ಹರಿಸುವ ಹಾಗೂ ಹಿಂದೆ ಆಗಿದ್ದ ತಪ್ಪುಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದವರೂ ಆಗಿದ್ದಾರೆ. ಇವರಿಗೆ ಯಾವುದೇ ಪ್ರಶ್ನೆಗೆ ’ಇಲ್ಲ’ ಅಥವಾ ’ಆಗದು’ ಎಂಬ ಉತ್ತರ ಇಷ್ಟವಾಗುವುದಿಲ್ಲ ಹಾಗೂ ಇದೇ ಕಾರಣದಿಂದ ಈ ವ್ಯಕ್ತಿಗಳು ಅಸಾಮಾನ್ಯ ಸಾಧನೆ ಸಾಧಿಸುತ್ತಾರೆ.

  ಇವರಿಗೆ ಇತರರನ್ನು ತನ್ನತ್ತ ಸೆಳೆಯುವ ವ್ಯಕ್ತಿತ್ವವಿರುತ್ತದೆ ಹಾಗೂ ಇತರರೂ ತಮಗರಿವಿಲ್ಲದಂತೆಯೇ ಇವರತ್ತ ಆಕರ್ಷಿಸಲ್ಪಡುತ್ತಾರೆ. ಇನ್ನೊಂದು ಕಡೆಯಿಂದ, ಇವರಿಗೆ ತಮ್ಮ ಭಾವನೆಯನ್ನು ಮುಚ್ಚಿಡುವ ಅಭ್ಯಾಸವಿರುತ್ತದೆ ಹಾಗೂ ಇದು ಇವರ ಸಂಬಂಧ ಬೆಸುಗೆಯನ್ನು ಕೆಳಗೆಳೆಯಲು ಕಾರಣವಾಗುತ್ತದೆ.

  ವೃಶ್ಚಿಕರಾಶಿಯ ವ್ಯಕ್ತಿಗಳಿಗೆ ಮೇ 2018 ಹೀಗಿರಲಿದೆ

  ಇಂದಿನ ಲೇಖನದಲ್ಲಿ, ಮೇ ತಿಂಗಳು ಈ ರಾಶಿಯವರಿಗೆ ಹೇಗಿರಬಹುದು ಎಂಬುದನ್ನು ನಮ್ಮ ಜ್ಯೋತಿಷ್ಯಾಸ್ತ್ರಜ್ಞರು ವಿವರಿಸಿದ್ದಾರೆ. ಆರೋಗ್ಯ, ವೃತ್ತಿಜೀವನ, ಹಣಕಾಸು ಹೇಗಿರಲಿದೆ ಎಂಬುದನ್ನು ವಿವರಿಸಲಾಗಿದೆ. ಅಲ್ಲದೇ ಆರೋಗ್ಯದ ಬಗ್ಗೆ ವಹಿಸಬೇಕಾದ ಕಾಳಜಿಯನ್ನೂ ವಿವರಿಸಲಾಗಿದ್ದು ಇದು ಹೆಚ್ಚಿನ ಪ್ರಯೋಜನಕಾರಿ ಮಾಹಿತಿಯಾಗಲಿದೆ:

  ಆರೋಗ್ಯ ಭಾಗ್ಯ:

  ಈ ತಿಂಗಳಲ್ಲಿ ವೃಶ್ಚಿಕರಾಶಿಯ ವ್ಯಕ್ತಿಗಳ ಆರೋಗ್ಯ ಅಷ್ಟೊಂದು ಚೆನ್ನಾಗಿರುವುದಿಲ್ಲ. ಹಾಗಾಗಿ ಈ ತಿಂಗಳಲ್ಲಿ ಸಾಧ್ಯವಾದಷ್ಟು ಎಣ್ಣೆ ಅಭ್ಯಂಜನ ಅಥವಾ ಮಸಾಜ್ ಮಾಡಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳಿತು. ಅಲ್ಲದೇ ದೇಹದಿಂದ ಕಲ್ಮಶಗಳನ್ನು ನಿವಾರಿಸುವ ಕ್ರಮಗಳನ್ನು ಕೈಗೊಳ್ಳುವುದು ಹೆಚ್ಚಿನ ಆರೋಗ್ಯ ನೀಡುತ್ತದೆ.

  ವೃತ್ತಿಜೀವನದ ಬಗ್ಗೆ:

  ಈ ತಿಂಗಳು ನಿಮಗೆ ಹೆಚ್ಚಿನ ಎದುರಾಳಿಗಳು ಎದುರಾಗಲಿದ್ದಾರೆ. ವೃತ್ತಿಜೀವನದಲ್ಲಿ ನಿಮ್ಮ ಏಳ್ಗೆ ಇತರರಿಗೆ ಒಂದು ಮಾದರಿಯಾಗಿ ಪರಿಣಮಿಸಬಹುದು. ತನ್ಮೂಲಕ ಕೆಲವರಿಂದ ಅಸೂಯೆಯೂ ಪ್ರಕಟವಾಗಬಹುದು. ಈ ತಿಂಗಳಲ್ಲಿ ನೀವು ಆದಷ್ಟೂ ಸರಳ ಹಾಗೂ ಆರಾಮದಾಯಕ ಜೀವನಕ್ರಮವನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ವೃತ್ತಿಯಲ್ಲಿ ನಿಮ್ಮ ಜೀವನಸಂಗಾತಿಯಿಂದ ದೊರಕುವ ಸಹಕಾರ ನಿಮಗೆ ಹೆಚ್ಚಿನ ಏಳ್ಗೆಯನ್ನು ನೀಡಲಿದೆ. ಅಲ್ಲದೇ ನಿಮ್ಮ ಕೆಲಸದ ಸ್ಥಳದಲ್ಲಿ ವಿಸ್ತರಣೆಯ ಸಾಧ್ಯತೆಯೂ ದಟ್ಟವಾಗಿದೆ.

  ಈ ತಿಂಗಳ ಹಣಕಾಸಿನ ವ್ಯವಸ್ಥೆ ಹೇಗೆ?

  ಈ ತಿಂಗಳಲ್ಲಿ ಹೆಚ್ಚಿನ ಪ್ರಯಾಣದ ಭಾಗ್ಯವಿದ್ದರೂ ಇದರಿಂದ ಹೆಚ್ಚೇನೂ ಲಾಭವಾಗದು. ವೃತ್ತಿಪರ ಲೇಖಕರು, ಚಿತ್ರಕಾರರು ಹಾಗೂ ಇತರ ಕಲಾಸೇವಕರು ಈ ತಿಂಗಳಲ್ಲಿ ಅತ್ಯಂತ ಕಷ್ಟಕರ ಸಮಯವನ್ನು ಎದುರಿಸಲಿದ್ದಾರೆ, ಹಾಗಾಗಿ ಈ ದಿನಗಳಲ್ಲಿ ಇತರ ಕೆಲಸಗಳಿಗೆ ಬಾಧೆಯುಂಟಾಗದಂತೆ ಸಾಕಷ್ಟು ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳುವುದು ಅಗತ್ಯ. ಈ ತಿಂಗಳಲ್ಲಿ ಆದಷ್ಟೂ ಸರಳ ಜೀವನ ನಡೆಸುವುದು ಮೇಲು.

  ವೃಶ್ಚಿಕರಾಶಿಯ ವ್ಯಕ್ತಿಗಳಿಗೆ ಮೇ 2018 ಹೀಗಿರಲಿದೆ

  ಪ್ರೀತಿಯ ಜೀವನದ ಬಗ್ಗೆ:

  ಈ ತಿಂಗಳಲ್ಲಿ ಅವಿವಾಹಿತರಿಗೆ ಸಂಬಂಧಗಳು ಕುದುರುವ ಸಾಧ್ಯತೆಗಳು ಹೆಚ್ಚು ಹಾಗೂ ವೃತ್ತಿಪರರಿಗೆ ತಮ್ಮ ಮಹತ್ವಾಕಾಂಕ್ಷೆಯತ್ತ ತೆರಳಲು ಹೆಚ್ಚು ಅನುಕೂಲಕರವಾಗಲಿದೆ. ಈ ತಿಂಗಳಲ್ಲಿ ಸಾಮಾಜಿಕ ಸಂಬಂಧಗಳು ಹೆಚ್ಚು ಮುದ ನೀಡುವಂತಹದ್ದೂ ಹಾಗೂ ಹೆಚ್ಚು ಚಟುವಟಿಕೆಯಿಂದ ಕೂಡಿರುವುದೂ ಆಗಿರುತ್ತದೆ. ಇವುಗಳನ್ನು ನಿಮ್ಮ ವೃತ್ತಿಯ ಏಳ್ಗೆಗೆ ಬಳಸಿಕೊಳ್ಳುವುದರಲ್ಲಿಯೇ ಜಾಣತನವಿದೆ. ನಿಮ್ಮ ಸಂಗಾತಿಯೊಂದಿಗೆ ಈ ನಿಟ್ಟಿನಲ್ಲಿ ಜೊತೆಯಾಗಿರುವುದು ನಿಮ್ಮ ಅನ್ಯೋನ್ಯತೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

  ಅದೃಷ್ಟಶಾಲಿ ದಿನಾಂಕ ಮತ್ತು ಬಣ್ಣಗಳು:

  ಈ ತಿಂಗಳಲ್ಲಿ ನಿಮಗೆ ಅದೃಷ್ಟಶಾಲಿಯಾಗಿರುವ ಸಂಖ್ಯೆಗಳೆಂದರೆ: 27, 29, 45, 53 ಮತ್ತು 89.

  ಅದೃಷ್ಟಶಾಲಿ ದಿನಾಂಕಗಳೆಂದರೆ: 9, 10, 19, 20, 27, 28.

  ಅದೃಷ್ಟ ತರುವ ಬಣ್ಣಗಳೆಂದರೆ: ಬಿಳಿ ಮತ್ತು ಗಾಢನೀಲಿ ಬಣ್ಣ

  Read more about: zodiac signs
  English summary

  ವೃಶ್ಚಿಕರಾಶಿಯ ವ್ಯಕ್ತಿಗಳಿಗೆ ಮೇ 2018 ಹೀಗಿರಲಿದೆ | May 2018 Horoscope Predictions For Scorpio

  The Scorpio sign individuals are known to be very passionate and emotional who have the power to overcome all types of hurdles. These individuals don't get bogged down by losses and tend to strive to move ahead. These individuals are known for their determination and unrelenting traits. They will never take a no for an answer and tend to achieve the impossible.
  Story first published: Tuesday, May 1, 2018, 9:16 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more