For Quick Alerts
ALLOW NOTIFICATIONS  
For Daily Alerts

ಸಹಪ್ರಯಾಣಿಕರ ಕಿರಿಕಿರಿಯೆನಿಸುವ ವರ್ತನೆಗಳು

By Deepak M
|

ದಿನದ ಆರಂಭದಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ನಿಮ್ಮ ಕೆಲಸಕ್ಕೆ ಹೋಗುವುದು ನಿಜಕ್ಕು ತಲೆನೋವಿನ ವಿಚಾರ. ಅದರಲ್ಲು ನಗರಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ನಂಬಿಕೊಂಡು ಕೆಲಸಕ್ಕೆ ಹೋಗುವವರು ನಿತ್ಯ ನರಕ ಸದೃಶ್ಯ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ದಿನದ ಆರಂಭದಲ್ಲಿಯೇ ಆ ದಿನದ ಉತ್ಸಾಹ ಮತ್ತು ಸಂತೋಷವನ್ನು ಕಸಿದುಕೊಳ್ಳಲು ಸಾರ್ವಜನಿಕ ಸಾರಿಗೆಯ ಸಹ ಪ್ರಯಾಣಿಕರು ಸಾಕು. ಅಲ್ಲಿ ನಿಮಗೆ ಯಾವುದು ಸರಿ ಹೊಂದುವುದಿಲ್ಲವೋ, ಅದನ್ನು ಪದೇ ಪದೇ ಮಾಡಲು ಹಲವಾರು ಸಹ ಪ್ರಯಾಣಿಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಅಂತಹವರ ಸಹವಾಸ ಬೇಡವೆ ಬೇಡ ಎಂದು ನಿರ್ಧರಿಸಿ ಆ ಬಸ್ ಅಥವಾ ಮೆಟ್ರೋವನ್ನು ಹತ್ತುವುದನ್ನು ನೀವು ಬಿಟ್ಟು ಬಿಡುವ ಹಂತಕ್ಕೆ ಹೋಗಿ ತಲುಪುವವರೆಗು ಇವರ ಆಟಾಟೋಪ ಇರುತ್ತದೆ.

ಅದು ಬಸ್ ಆಗಿರಬಹುದು ಅಥವಾ ಟ್ರೈನ್ ಆಗಿರಬಹುದು, ಅಲ್ಲಿ ನಿಮಗೆ ಕಿರಿಕಿರಿಯನ್ನುಂಟು ಮಾಡುವ ಕೆಲವು ಪ್ರಯಾಣಿಕರು ಇದ್ದೇ ಇರುತ್ತಾರೆ. ಕೆಮ್ಮುತ್ತ, ಸೀನುತ್ತ ಮತ್ತು ಗೊಣ್ಣೆ ಸುರಿಸುತ್ತ ನಿಮಗೆ ಕಿರಿಕಿರಿಯನ್ನು ಉಂಟು ಮಾಡುತ್ತಿರುತ್ತಾರೆ. ಆಗ ನಿಮಗೆ ಪ್ರಪಂಚದಲ್ಲಿರುವವರೆಲ್ಲರು ನಿಮಗೆ ಕಿರಿಕಿರಿಯನ್ನುಂಟು ಮಾಡಲೆ ಹುಟ್ಟಿದ್ದಾರೇನೋ? ಅವರೆಲ್ಲರು ಈ ಬಸ್‍ನಲ್ಲಿಯೇ ತುಂಬಿ ಹೋಗಿದ್ದಾರೇನೊ ಎಂಬ ಅನಿಸಿಕೆ ನಿಮಗೆ ಉಂಟಾಗಬಹುದು. ಅವರಲ್ಲಿ ಕೆಲವರು ನಿಮಗೆ ಕುತೂಹಲ ಕೆರಳಿಸಬಹುದು, ಇನ್ನು ಕೆಲವರು ಬೇಸರ ತರಿಸಬಹುದು. ಇನ್ನು ಕೆಲವರಂತು ನಿಮಗೆ ಸಾರ್ವಜನಿಕ ಸಾರಿಗೆಯೆಂದರೆ ಸಾಕು ದಿಗಿಲು ಹುಟ್ಟುವಂತೆ ಮಾಡಬಹುದು. ಇಲ್ಲಿ ಕೆಲವೊಂದು ಉದಾಹರಣೆಗಳನ್ನು ನೀಡಿದ್ದೇವೆ ಓದಿ ನೋಡಿ ಬಹುಶಃ ನೀವು ಸಹ ಅಂತಹವರಿಂದ ಕಿರಿಕಿರಿ ಅನುಭವಿಸಿರಬಹುದು.

1. ತ್ರಿಪುರ ಸುಂದರಿ!!!

1. ತ್ರಿಪುರ ಸುಂದರಿ!!!

ಇವರು ಸುರ ಸುಂದರಾಂಗಿಯರು. ಬಸ್‍ನಲ್ಲಿ, ರೈಲಿನಲ್ಲಿ ಇನ್ನಿತರ ಸಾರ್ವಜನಿಕ ಸಾರಿಗೆಯಲ್ಲಿ ಇವರು ತಲೆ ಬಾಚ್ಕೊಳಿ, ಪೌಡ್ರು ಹಾಕ್ಕೊಳ್ಳಿ ಎಂಬ ಮಾತನ್ನು ನಡೆಸಿಕೊಡಲು ಹುಟ್ಟಿದವರ ರೀತಿ ಶೃಂಗಾರ ಮಾಡಿಕೊಳ್ಳುತ್ತಿರುತ್ತಾರೆ. ಲಿಪ್‍ಸ್ಟಿಕ್ ಹಾಕುವುದು, ತಲೆ ಬಾಚುವುದು ಇವರ ಹವ್ಯಾಸ. ಒಟ್ಟಿನಲ್ಲಿ ಅಕ್ಕ ಪಕ್ಕದವರ ಗಮನ ಸೆಳೆಯಬೇಕು ಅಷ್ಟೇ ಇವರ ಉದ್ದೇಶ.

2. ದುರ್ವಾಸನೆಯ ಜಂತುಗಳು

2. ದುರ್ವಾಸನೆಯ ಜಂತುಗಳು

ಕಿರಿ ಕಿರಿ ಮಾಡುತ್ತಾರೆ ಎಂದ ಮಾತ್ರಕ್ಕೆ ಅವರನ್ನು ಜಂತುಗಳು ಎಂದು ಕರೆಯಬೇಕೆ? ಎನ್ನಬೇಡಿ. ನಿಜ ಇವರು ತಮ್ಮ ದೇಹದಲ್ಲಿನ ಬೆವರಿನ ವಾಸನೆ ಮತ್ತು ಅಗ್ಗದ ದರದ ಡಿಯೋಡ್ರೆಂಟ್‍ಗಳಿಂದಲೆ ಗುರುತಿಸಿ ಬಿಡಬಹುದು ಅಷ್ಟು ಪ್ರಸಿದ್ಧಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಇವರ ಸಾಮೀಪ್ಯವಿರಲಿ, ಇವರ ಮೂಲಕ ಹಾದು ಬರುವ ಗಾಳಿಯೆ ಸಾಕು ನಿಮ್ಮ ಹೊಟ್ಟೆ ತೊಳೆಸಿ ಹಾಕಲು!

3. ಮೀನಾಕುಮಾರಿಯ ಮಕ್ಕಳು

3. ಮೀನಾಕುಮಾರಿಯ ಮಕ್ಕಳು

" ಜಗವೇ ಒಂದು ನಾಟಕ ರಂಗ - ನಾವೆಲ್ಲ ಇಲ್ಲಿ ಪಾತ್ರಧಾರಿಗಳು" ಇದು ಎಲ್ಲರಿಗು ಗೊತ್ತಿರುವ ಸತ್ಯ. ಅದರಲ್ಲು ಕೆಲವು ಹುಡುಗಿಯರು ಇಲ್ಲಿ ಓವರ್ ಆಕ್ಟಿಂಗ್ ಮಾಡಿ ಗಮನ ಸೆಳೆಯುತ್ತಾರೆ. ತನ್ನ ಗೆಳತಿಯರು ಬಸ್ಸಿನಿಂದ ಇಳಿದ ಕೂಡಲೆ ಇಯರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ಪಕ್ಕದವರ ಕಿವಿಯೋ!, ಅಥವಾ ಕಣ್ಣೋ! ತೂತಾಗುವಂತೆ ನುಲಿಯುತ್ತ ಕೂರುವ ಹುಡುಗಿಯರು ಯಾರಿಗೆ ತಾನೇ ಕಿರಿಕಿರಿ ತರಲಾರರು!.

4. ಕುಡಿಯೋದೆ ನನ್ನ ಬ್ಯುಸಿನೆಸ್,,,,,

4. ಕುಡಿಯೋದೆ ನನ್ನ ಬ್ಯುಸಿನೆಸ್,,,,,

ಹೀಗೆಂದು ಹಾಡಿಕೊಂಡು "ಗಂಡ ಮಕ್ಕಳ ತವರಿನಿಂದ" ಹೊರಬಿದ್ದ ಗಂಡಸರು ಬಸ್ಸಿನಲ್ಲೊ, ರೈಲಿನಲ್ಲೋ ತೂರಾಡುತ್ತ, ಲೋಕವನ್ನು ಹೀಗಳೆಯುತ್ತ ಇರುವಾಗ, ಯಾರು ತಾನೇ ಸಹಿಸಿಕೊಳ್ಳಲು ಸಾಧ್ಯ! ಕೋಡೇಶ್ವರ!!!

5. ಗ್ಯಾಡ್ಜೆಟ್ ಗುಮ್ಮಂದಿರು

5. ಗ್ಯಾಡ್ಜೆಟ್ ಗುಮ್ಮಂದಿರು

ನಂತರದ ಹೊಸ ಸರದಿ ಗ್ಯಾಡ್ಜೆಟ್ ಗುಮ್ಮಂದಿರು, ಐಪಾಡ್, ಐಫೋನ್, ಟ್ಯಾಬ್ಲೆಟ್ ಮತ್ತು ಗ್ಯಾಲಾಕ್ಸಿಗಲನ್ನು ಹಿಡಿದುಕೊಂಡು ಇನ್ನಿಲ್ಲದ ಆಪ್ಪ್ ಗಳನ್ನು ತಿರುಗಿ ತಿರುಗಿ ನೋಡುತ್ತ ಕೂರುವವರು!, ಕ್ಷಮಿಸಿ, ತೋರಿಸುತ್ತ ಕೂರುವವರು ಅಕ್ಕ ಪಕ್ಕದವರು ಗಮಾರುಗಳೆಂದು ಕಿರಿಕಿರಿ ಮಾಡುವುದಿಲ್ಲವೇ?

6. ಪ್ಯಾರ್ಗೇ,, ಆಗ್ಬಿಡುತೈತೆ, ಇವ್ರುದುಕ್ಕೆ ಸುಮ್‍ಸುಮ್ಕೆ ,,,,,,

6. ಪ್ಯಾರ್ಗೇ,, ಆಗ್ಬಿಡುತೈತೆ, ಇವ್ರುದುಕ್ಕೆ ಸುಮ್‍ಸುಮ್ಕೆ ,,,,,,

ಇವರು ನಿಜವಾದ ಪ್ರೇಮಿಗಳು. ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಎಂದು ಹಾಡುವವರು. ಹೆದರದಿದ್ದರು ಪರವಾಗಿಲ್ಲ. ಆದರೆ ಅಕ್ಕ ಪಕ್ಕದವರ ಗಮನವನ್ನೆಲ್ಲ ತಮ್ಮತ್ತ ಸೆಳೆಯಲು ಕೈ ಕೈ ಬಿಡಿಸದೆ ಕೂರುವ ಮಂದಿ, ಅದರಲ್ಲು ವಯಸ್ಕ ಹೆಂಗಸರು ಇರುವಾಗ! ಆಗ ಅದೆಂತಹ ಕಿರಿ ಕಿರಿಯಾಗುವುದಿಲ್ಲ ನೋಡಿದವರಿಗೆ.

7. ಬಾಯಾ ? ಬೊಂಬಾಯಾ?

7. ಬಾಯಾ ? ಬೊಂಬಾಯಾ?

ಸಾರ್ವಜನಿಕ ಸಾರಿಗೆಯನ್ನು ತಮ್ಮಪ್ಪನ ಆಸ್ತಿಯೆಂಬಂತೆ ಭಾವಿಸಿಕೊಂಡು ಜೋರಾಗಿ ಮಾತನಾಡುವವರು ಕಿರಿಕಿರಿ ಜನರಲ್ಲವೇ? ಸುಮ್ಮ ಸುಮ್ಮನೆ ಸಾರ್ವಜನಿಕ ಸಾರಿಗೆಯ ಸೂರು ಹಾರಿ ಹೋಗುವಂತೆ ಮಾತನಾಡುತ್ತಿರುತ್ತಾರೆ. ಇವರಿಗಿಂತಲು ಕಿರಿಚುವ ಸಾಮಾರ್ಥ್ಯ ನಿಮ್ಮಲ್ಲಿದ್ದರೆ ಮುಗೀತು, ನಿಮಗೆ ಕಿರಿಕಿರಿ ಆರಂಭವಾಗಲು.

Read more about: behaviour ನಡತೆ
English summary

Annoying People You Meet In Public Transport

Taking a public transport for work or function is the worst thing that can happen to you at the start of a good day. The world is filled with annoying people and why is that all are gathered in a town Bus or a metro I travel? Do you have this feeling? If so, you are not the only one.
X
Desktop Bottom Promotion