For Quick Alerts
ALLOW NOTIFICATIONS  
For Daily Alerts

ಪ್ರಪಂಚ ಕಂಡ 5 ಭಯಂಕರ ಜ್ವಾಲಾಮುಖಿಗಳು

|

ಪ್ರಪಂಚದಲ್ಲಿ ಇದುವರೆಗೆ ಅನೇಕ ಜ್ವಾಲಾಮುಖಿಗಳು ಅಥವಾ ಅಗ್ನಿ ಪರ್ವತಗಳು ಉಂಟಾಗಿವೆ. ಇದೊಂದು ದೀರ್ಘ ಕಾಲದ ಪ್ರಕ್ರಿಯೆ. ಜ್ವಾಲಾಮುಖಿ ಭೂಮಿಯ ಮೇಲ್ಮೈ ಅಥವಾ ಚಿಪ್ಪಿನಲ್ಲಿ ಬಿರುಕು ಉಂಟಾಗಿ ಉಂಟಾಗುತ್ತದೆ. ಆ ಬಿರುಕಿನ ಮುಖಾಂತರ ಭೂಗರ್ಭದಿಂದ ಕುದಿಯುವ ದ್ರವರೂಪದಲ್ಲಿನ ಕಲ್ಲುಗಳು, ಬೂದಿ ಹಾಗ ಇತರ ಅನಿಲಗಳು ಹೊರಗೆ ಚಿಮ್ಮುತ್ತವೆ, ಆ ಸಮಯದಲ್ಲಿ ಆ ಸುತ್ತಮುತ್ತಲಿನ ಪ್ರದೇಶಕ್ಕೆ ಹಾನಿ ಉಂಟಾಗುತ್ತದೆ.

ಈ ಜ್ವಾಲಾಮುಖಿ ಉಂಟಾದಾಗ ಘನರೂಪದಲ್ಲಿ ಅಥವಾ ದ್ರವರೂಪದಲ್ಲಿರುವ ಕಲ್ಲುಗಳನ್ನು ಭೂಮಿಯಿಂದ ರಭಸವಾಗಿ ಹೊರ ಹಾಕುತ್ತವೆ. ಈ ರೀತಿಯ ಜ್ವಾಲಾಮುಖಿಗಳು ಪರ್ವತದ ಶಿಖರಭಾಗದಲ್ಲಿ ಕಂಡು ಬರುತ್ತದೆ. ಜ್ವಾಲಾಮುಖಿ ಉಂಟಾದಾಗ ಹಬೆಯ ರಾಶಿ, ಸಿಲಿಕ ಹೆಚ್ಚಾಗಿರುವ ಲಾವಾ, ಸಿಲಿಕ ಕಡಿಮೆಯಿದ್ದು ಕಲ್ಲು ಹೆಚ್ಚಿರುವ ಲಾವಾ, ಪೈರೋಕ್ಲಾಸ್ಟಿಕ್ ಲಾವಾ ಮತ್ತು ಕಾರ್ಬನ್ ಡೈ ಆಕ್ಸೈಡ್ ಇವುಗಳನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ಹೊರಭಾಗಕ್ಕೆ ಎಸೆಯುತ್ತದೆ. ಇವೆಲ್ಲವೂ ಮಾನವ ಪರಿಸರಕ್ಕೆ ತೀವ್ರ ಹಾನಿಕಾರಕವಾಗಿವೆ. ಅಲ್ಲದೆ ಕೆಲವೊಮ್ಮೆ ಭೂಕಂಪ, ಬಿಸಿನೀರಿನ ಬುಗ್ಗೆಗಳು ಮತ್ತು ಬೃಹತ್ ಕೆಸರುಗುಂಡಿಗಳು ಸಹ ಜ್ವಾಲಾಮುಖಿಯ ಚಟುವಟಿಕೆಯಿಂದ ಉಂಟಾಗುತ್ತದೆ.

ಜ್ವಾಲಾಮುಖಿ ಉಂಟಾದಾಗ ನೀರಾವಿ, ಸಲ್ಫರ್ ಡೈ ಆಕ್ಸೈಡ್, ಹೈಡ್ರೋಜನ್ ಕ್ಲೋರೈಡ್, ಹೈಡ್ರೋಜನ್ ಫ್ಲೂರೈಡ್ ಕೂಡ ಇರುತ್ತದೆ. ಇದು ಉಂಟಾದಾಗ ಜಾಗತಿಕ ತಾಪಮಾನದ ಉಷ್ಣತೆ ಸ್ವಲ್ಪ ಕಡಿಮೆಯಾಗುವುದು. ಜ್ವಾಲಾಮುಖಿ ಉಂಟಾದಾಗ ಸುತ್ತಮುತ್ತಲಿನ ಪ್ರದೇಶ ನಾಶವಾಗುತ್ತದೆ, ಆದರೆ ಕೆಲವೊಮ್ಮೆ ಸುತ್ತಮುತ್ತಲಿನ ಪ್ರದೇಶಗಳನ್ನು ಫಲವತ್ತಾಗಿಸುತ್ತದೆ, ಕೆಲವೊಮ್ಮೆ ಹೊಸ ದ್ವೀಪದ ರಚನೆ ಉಂಟಾಗುವುದು.

ಇಲ್ಲಿ ಜ್ವಾಲಾಮುಖಿಯಿಂದಾಗಿ ನಾಶವಾದ ಪ್ರದೇಶಗಳ ಬಗ್ಗೆ ಹೇಳಲಾಗಿದೆ ನೋಡಿ:

ತಂಬೂರ ಶಿಖರ, ಇಂಡೋನೇಷಿಯಾ(Tambora):

ತಂಬೂರ ಶಿಖರ, ಇಂಡೋನೇಷಿಯಾ(Tambora):

ಇತಿಹಾಸದಲ್ಲಿ ಕಂಡು ಬರುವ ಅತಿಯಾದ ಭಯಾನಕವಾದ ಭೂಕಂಪ ಇದಾಗಿದೆ. ಈ ಭೂಕಪವು ಸುಮಾರು 92,000 ಜನರನ್ನು ಬಲಿ ತೆಗೆದುಕೊಂಡಿತು. ಇದರಲ್ಲಿ ಸ್ವಲ್ಪ ಜನರು ಜ್ವಾಲಾಮುಖಿ ಉಂಟಾದಾಗ ಸಾವನ್ನಪ್ಪಿದರೆ ಉಳಿದವರು ಅದರಿಂದ ಉಂಟಾದ ಬೂದಿ ಆ ಸುತ್ತಲಿನ ಪ್ರದೇಶವನ್ನು ಮುಚ್ಚಿ ಸಾವನ್ನಪ್ಪಿದರು.

 ಪಿಲೆ, ವೆಸ್ಟ್ ಇಂಡೀಸ್ (Pelle West Indies):

ಪಿಲೆ, ವೆಸ್ಟ್ ಇಂಡೀಸ್ (Pelle West Indies):

ಈ ಪ್ರದೇಶದಲ್ಲಿ ಜ್ವಾಲಾಮುಖಿ 1902ರಲ್ಲಿ ಉಂಟಾಯಿತು. ಈ ಜ್ವಾಲಾಮುಖಿಯು ಸಾವಿರಕ್ಕಿಂತ ಅಧಿಕ ಜನರನ್ನು ಬಲಿ ತೆಗೆದುಕೊಂಡು ಸೆಂಟ್ ಪಿರೆ ನಗರವನ್ನು ನಾಶ ಪಡಿಸಿತು.

 ಲಕಿ ಐಲ್ಯಾಂಡ್ (Laki, Iceland):

ಲಕಿ ಐಲ್ಯಾಂಡ್ (Laki, Iceland):

ಇಲ್ಲಿ ಉಂಟಾದ ಜ್ವಾಲಾಮುಖಿಯಿಂದ ಅಧಿಕ ನಾಶ ಉಂಟಾಗದಿದ್ದರೂ ಶಿಖರದಲ್ಲಿ ಲಾವಾರಸ ಹಾಗೂ ಹೈಡ್ರೋಫ್ಲೋರಿಕ್ ಆಸಿಡ್ ನಿಂದಾಗಿ ಅನೇಕ ಜೀವಿಗಳು ನಾಶವಾದವು. ನಂತರ ಆ ಪ್ರದೇಶ ಬರಡು ಭೂಮಿಯಾಯಿತು.

 ವೆಸುವಿಯಸ್ ಇಟಲಿ(Vesuvius Italy):

ವೆಸುವಿಯಸ್ ಇಟಲಿ(Vesuvius Italy):

ಈ ಪ್ರದೇಶದಲ್ಲಿ ಉಂಟಾದ ಉಂಟಾದ ಜ್ವಾಲಾಮುಖಿಯಿಂದಾಗಿ ಅನೇಕ ನಷ್ಟ ಸಂಭವಿಸಿತು. ಪಾಂಪೆ ಪರ್ವತ ಪ್ರದೇಶವು ಭೂಮಿಯ ಬೆಂಕಿ ಉಗುಳುವಿಕೆಯಿಂದ ಸರ್ವ ನಾಶವಾಯಿತು. ಕೇವಲ 19 ಗಂಟೆಯಲ್ಲಿ 10 ಅಡಿಯಷ್ಟು ಬೂದಿ ಉಂಟಾಯಿತು.

ಕ್ರಕೋಟ ಇಂಡೋನೇಷಿಯಾ(( Krakatoa, Indonesia):

ಕ್ರಕೋಟ ಇಂಡೋನೇಷಿಯಾ(( Krakatoa, Indonesia):

ಸುಮಾರು ಮುಕ್ಕಾಲು ಭಾಗದಷ್ಟು ಐಲ್ಯಾಂಡ್ ಜ್ವಾಲಾಮುಖಿಯಿಂದಾಗಿ ಸರ್ವನಾಶವಾಯಿತು. ಅನೇಕ ಜೀವಿಗಳನ್ನು ಈ ಜ್ವಾಲಾಮುಖಿಯೂ ಬಲಿ ತೆಗೆದುಕೊಂಡಿತು.

English summary

Worst Volcanic Eruption | Nature Feature | ಅತ್ಯಂತ ಭಯಾನಕವಾದ ಜ್ವಾಲಾಮುಖಿ | ಪ್ರಕೃತಿಯ ಗುಣಗಳು

There are also many after-effects of such natural disasters. Check out some of the most famous eruptions that have shocked the whole world with its devastating effects.
X
Desktop Bottom Promotion