For Quick Alerts
ALLOW NOTIFICATIONS  
For Daily Alerts

ಚಳಿಯಲ್ಲಿ ಹಿತವಾದ ಅನುಭವಕ್ಕೆ 7 ಬಗೆಯ ಟೀಗಳು

|

ಚಳಿಯಿಂದಾಗಿ ದೇಹ ಗಡಗಡ ನಡುಗುವಾಗ ಬಿಸಿ-ಬಿಸಿ ಕಾಫಿ ಕುಡಿದರೆ ತುಂಬಾ ಹಿತ ಅನಿಸುತ್ತದೆ ಅಲ್ಲವೇ? ಟೀ ಕುಡಿಯುವುದು ಒಳ್ಳೆಯದಾ, ಕೆಟ್ಟದ್ದಾ ಅನ್ನುವುದು ಟೀಯನ್ನು ಎಷ್ಟು ಪ್ರಮಾಣದಲ್ಲಿ ಕುಡಿಯುತ್ತೇವೆ ಅನ್ನುವುದರ ಮೇಲೆ ನಿರ್ಧರಿಸಲಾಗುವುದು. ದಿನದಲ್ಲಿ ಒಂದು ಅಥವಾ ಎರಡು ಲೋಟ ಟೀ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.

ಟೀಯನ್ನು ಅನೇಕ ಬಗೆಯಲ್ಲಿ ತಯಾರಿಸಬಹುದು. ಅವುಗಳಲ್ಲಿ ಕೆಲವೊಂದು ಟೀಗಳು ಮಳೆ ಹಾಗೂ ಚಳಿಗಾಲದಲ್ಲಿ ಟೀ ಕುಡಿಯಲು ತುಂಬಾ ಸೂಕ್ತವಾಗಿರುತ್ತದೆ. ಈ ಟೀಯನ್ನು ಕುಡಿದು ರೋಗಗಳು ಬರುವುದನ್ನು ಕೂಡ ತಡೆಯಬಹುದಾಗಿದೆ, ಅಲ್ಲದೆ ಇದು ಮೈಯನ್ನು ಬೆಚ್ಚಗಿಡುತ್ತದೆ. ತಂಪಾದ ವಾತಾವರಣ ಇರುವಾಗ ಯಾವ ಬಗೆಯ ಟೀ ತುಂಬಾ ಹಿತವಾದ ಅನುಭವ ನೀಡುತ್ತದೆ ಎಂದು ನೋಡೋಣ ಬನ್ನಿ.

1. ಶುಂಠಿ ಟೀ:

1. ಶುಂಠಿ ಟೀ:

ಚಳಿಗಾಲ ಹಾಗೂ ಮಳೆಗಾಲದಲ್ಲಿ ಗಂಟಲು ಕೆರತ, ಶೀತ, ಕೆಮ್ಮು ಈ ರೀತಿಯ ತೊಂದರೆಗಳು ಕಂಡು ಬರುವುದು ಸಾಮಾನ್ಯ. ಈ ರೀತಿಯ ತೊಂದರೆಗಳನ್ನು ಶುಂಠಿ ಟೀ ಕುಡಿದು ದೂರವಿಡಬಹುದು.

2. ಮಸಾಲ ಟೀ:

2. ಮಸಾಲ ಟೀ:

ಮಸಾಲ ಟೀ ಕುಡಿಯಲು ತುಂಬಾ ರುಚಿಕರವಾಗಿರುತ್ತದೆ ಹಾಗೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಟೀಗೆ ಏಲಕ್ಕಿ, ಕರಿಮೆಣಸಿನ ಪುಡಿ, ಚಕ್ಕೆ, ಲವಂಗ ಹಾಕಿ ತಯಾರಿಸಲಾಗುವುದು. ಆದ್ದರಿಂದ ಸಣ್ಣ-ಪುಟ್ಟ ಕಾಯಿಲೆಗಳನ್ನು ಹೋಗಲಾಡಿಸುತ್ತದೆ.

3. ಬ್ಲ್ಯಾಕ್ ಟೀ:

3. ಬ್ಲ್ಯಾಕ್ ಟೀ:

ಹಾಲು ಹಾಕದೆ ತಯಾರಿಸುವ ಟೀ ತಯಾರಿಸಲಾಗುವುದು. ಬ್ಲ್ಯಾಕ್ ಟೀ ಕುಡಿದರೆ ದೇಹಕ್ಕೆ ಚೈತನ್ಯ ಬರುತ್ತದೆ, ಅಲ್ಲದೆ ಸಣ್ಣಗಾಗ ಬಯಸುವವರು ಬ್ಲ್ಯಾಕ್ ಟೀ ಕಡಿಯುವುದು ಒಳ್ಳೆಯದು.

4. ಚೈನೀಸ್ ಟೀ:

4. ಚೈನೀಸ್ ಟೀ:

ಈ ಟೀಗೆ ಚೈನೀಸ್ ಗಿಡಮೂಲಿಕೆಗಳನ್ನು ಸೇರಿಸಿ ತಯಾರಿಸಲಾಗುವುದು. ಈ ಟೀಯನ್ನು ಸುಸ್ತಾದಾಗ ಕುಡಿದಾಗ ದೇಹಕ್ಕೆ ಶಕ್ತಿ ದೊರೆಯುತ್ತದೆ.

4. ಲೆಮನ್ ಟೀ:

4. ಲೆಮನ್ ಟೀ:

ಲೆಮನ್ ಟೀ ರುಚಿ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿ ಸಿಟ್ರಸ್ ಸಿ ಅಂಶವಿದ್ದು ದೇಹದಲ್ಲಿರುವ ಬೊಜ್ಜನ್ನು ಕರಗಿಸುತ್ತದೆ.

6. ಬೆಲ್ಲದ ಟೀ:

6. ಬೆಲ್ಲದ ಟೀ:

ಈ ಟೀಯನ್ನು ಪಂಜಾಬಿ ಕಡೆಯಲ್ಲಿ ತಯಾರಿಸಲಾಗುವುದು. ಈ ಟೀಗೆ ಹಾಲು ಹಾಕಿ ಸಕ್ಕರೆ ಬದಲು ಬೆಲ್ಲ ಹಾಕಿ ತಯಾರಿಸಿದರೆ ತುಂಬಾ ರುಚಿಕರವಾಗಿರುತ್ತದೆ.

7. ಇರಾನಿ ಟೀ:

7. ಇರಾನಿ ಟೀ:

ಈ ಟೀ ಮುಂಬಾಯಿಯಲ್ಲಿ ತುಂಬಾ ಪ್ರಸಿದ್ಧವಾಗಿದೆ. ತುಂಬಾ ಸಿಹಿಯಾಗಿರುವ ಈ ಟೀಯನ್ನು ಸವಿಯಲು ತುಂಬಾ ರಚಿಕರವಾಗಿರುತ್ತದೆ.

English summary

Types Of Tea To Enjoy This Season | Drinks For Winter Season | ಚಳಿಯಾದಾಗ ಹಿತ ನೀಡುವ 7 ಬಗೆಯ ಟೀಗಳು | ಈ ಕಾಲದಲ್ಲಿ ಸವಿಯಲು ಬೆಸ್ಟ್ ಡ್ರಿಂಕ್ಸ್

We Indians are very choosy about our tea; everybody likes their tea brewed in a particular way. That is why there are various types of tea that are popular in different parts of the country. Here are some of the best types of tea to try on a rainy day like this one.
X
Desktop Bottom Promotion