For Quick Alerts
ALLOW NOTIFICATIONS  
For Daily Alerts

ವಿಶ್ವ ಮಾನವತ್ವ ದಿನಾಚರಣೆ ಇತಿಹಾಸ ಮತ್ತು ಮಹತ್ವ

|

ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕಾರ್ಯನಿರತರಾಗಿರುವ ಸಂದರ್ಭದಲ್ಲಿ ಅಸುನೀಗಿದವರನ್ನು ಸ್ಮರಿಸುವ ಸಲುವಾಗಿ ಆಗಸ್ಟ್ 19ರಂದು ವಿಶ್ವ ಮಾನವತ್ವ ದಿನವನ್ನಾಗಿ ಆಚರಿಸಲಾಗುತ್ತಿದೆ. 2019ರ ಮಾನವತ್ವ ದಿನವನ್ನು 'ಮಹಿಳಾ ಮಾನವತಾವಾದಿಗಳಿಗೆ' ಅರ್ಪಿಸಿ ಆಚರಿಸಲಾಗುತ್ತಿದೆ.

ಮಾನವತ್ವ ದಿನ ಆಚರಣೆ ಹಿನ್ನೆಲೆ

ಮಾನವತ್ವ ದಿನ ಆಚರಣೆ ಹಿನ್ನೆಲೆ

ಬಾಗ್ದಾದ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಇರಾಕ್ ದೇಶದ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಅವರ ಪ್ರತಿನಿಧಿಯಾಗಿದ್ದ ಸೆರ್ಗಿಯೋ ವಿರಾ ಡಿ ಮೆಲ್ಲೋ ಮತ್ತು ಇವರ 21 ಸಹೋದ್ಯೋಗಿಗಳು ಅಸುನೀಗುತ್ತಾರೆ. ಈ ಘಟನೆಯ ಸ್ಮರಣೆಗಾಗಿ 2009ರಿಂದ ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವ ಮಾನವತ್ವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.

ಶ್ಲಾಘಿಸಿ, ಶ್ಳಾಘನೆಗೆ ಪಾತ್ರರಾಗಿ

ಶ್ಲಾಘಿಸಿ, ಶ್ಳಾಘನೆಗೆ ಪಾತ್ರರಾಗಿ

ಇಡೀ ವೀಶ್ವದಲ್ಲಿ ಮಾನವೀಯತೆ ಮೆರೆಯುವ ಅನೇಕ ವ್ಯಕ್ತಿಗಳು, ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಅಂಥ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಬದುಕು ಕಟ್ಟಿಕೊಳ್ಳಲು ನೆರವಾದ ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಮನೋಧರ್ಮ ಬೆಳೆಸಿಕೊಳ್ಳಿ. ಪಡೆದುಕೊಳ್ಳುವಿಕೆಗಿಂತ ನೀಡುವಿಕೆಯಿಂದ ಆತ್ಮತೃಪ್ತಿ ಆಗುವುದೆನ್ನುವ ಸತ್ಯ ಅರಿವಾಗುತ್ತದೆ. ಪ್ರತಿಯೊಬ್ಬರು ತಮ್ಮ ಚೌಕಟ್ಟಿನಲ್ಲಿಯೇ ಹೇಗೆ ಇಂಥ ಕಾರ್ಯಗಳಿಗೆ ನೆರವು ನೀಡಬಹುದು ಎಂಬುದನ್ನು ಆಲೋಚಿಸಲು ಇದು ಸಕಾಲವಾಗಿದೆ. ಬದುಕಿನ ಅರ್ಥಪೂರ್ಣತೆಗೆ ಇಂಥ ಚಟುವಟಿಕೆಗಳು ಪ್ರೇರಣೆ ನೀಡುತ್ತದೆ. ಇಂಥ ಗುಣ ನಮ್ಮೆಲ್ಲರದಾಗಬೇಕು, ಸ್ಪಂದಿಸುವಿಕೆಯ ಜಬಾಬ್ದಾರಿ ನಮ್ಮೆಲ್ಲರಲ್ಲಿ ಬೆಳೆಯಬೇಕಿದೆ.

ಬಾಳಿಗೊಂದು ಅರ್ಥ ಕಲ್ಪಿಸಿ

ಬಾಳಿಗೊಂದು ಅರ್ಥ ಕಲ್ಪಿಸಿ

ಹುಟ್ಟ-ಸಾವು ನಡುವಿನ ಈ ಬಾಳಿಗೊಂದು ಅರ್ಥ ಕಲ್ಪಿಸಲು ನಮ್ಮ ತೆರೆದ ಮನಸ್ಸು, ನೀಡುವ ಕೈಗಳು ಸದಾ ಸಿದ್ಧವಿರಲಿ. ನೀವು ಈ ನಿಟ್ಟಿನಲ್ಲಿ ಆಲೋಚಿಸಿ, ಜಾಗೃತ ಸಮಾಜ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿ. ಎಲೆಮರೆಕಾಯಿಯಂತೆ ನಿಸ್ವಾರ್ಥದಿಂದ ನಿಮ್ಮ ಕೈಂಕರ್ಯ ಮಾಡಿ, ಫಲಾಪೇಕ್ಷೆ ಖಂಡಿತ ನಿಮ್ಮದಾಗುತ್ತದೆ.

ಮಾನವೀಯತೆ ತೋರಿದ ನಿಮಗಿದೋ ವಂದನೆ

ಮಾನವೀಯತೆ ತೋರಿದ ನಿಮಗಿದೋ ವಂದನೆ

ಇತ್ತೀಚೆಗೆ ನೆರೆಹಾನಿಗೆ ಒಳಗಾದವರ ನೆರವಿಗೆ ಅನೇಕ ಮನಸ್ಸುಗಳು ಒಂದಾಗಿ ಕೈಜೋಡಿಸಿರುವುದು ಸ್ತುತ್ಯಾರ್ಹ ಕೆಲಸವಾಗಿದೆ. ಜಾತಿ, ಮತ ಪಂಥಗಳನ್ನು ಮರೆತು ಒಟ್ಟಾಗಿ ನಿಷ್ಕಲ್ಮಷ ಮನಸ್ಸಿನಿಂದ ನಿಮ್ಮ ಸೇವೆಯ ಹಸ್ತವನ್ನು ಚಾಚಿರುವುದು ನೊಂದ ಮನಕ್ಕೆ ಕೊಂಚ ನಿರಾಳತೆ ನೀಡಿದೆ. ಇದನ್ನೆ ಅಲ್ಲವೇ ಮಾನವೀಯತೆ ಎನ್ನುವುದು, ಇದರಿಂದಲೇ ಅಲ್ಲವೇ ಮಾನವೀಯತೆಯ ಸಾರ್ಥಕತೆ ಸಿಗುವುದು.

ಏನಾದರೂ ಆಗು ಮೊದಲು ಮಾನವನಾಗು

ಏನಾದರೂ ಆಗು ಮೊದಲು ಮಾನವನಾಗು

ಈ ದಿನಾಚರಣೆಯ ಸಂದರ್ಭದಲ್ಲಿ ನಾವೆಲ್ಲರೂ ಪಣ ತೊಡೋಣ. 'ಏನಾದರು ಆಗು ಮೊದಲು ಮಾನವನಾಗು' ಎಂಬ ಕುವೆಂಪು ಕವಿವಾಣಿಯಂತೆ ಬಾಳೋಣ. ಮಾನವೀಯತೆ ಮೆರೆದು ಅಮರರಾಗಿರುವ ಜೀವಿಗಳಿಗೊಂದು ವಂದನೆಗಳನ್ನು ಸಲ್ಲಿಸೋಣ.

Source: Anukshana anubhavisi (ಅನುಕ್ಷಣ ಅನುಭವಿಸಿ) book written by Jayaprakash Nagathihalli

English summary

World Humanitarian Day Histrory and Significance

The world humanitarian day 2019 was observed on August 19, 2019. The day is observed annually to pay tribute to the humanitarian aid workers who endanger their lives for humanitarian service as well as to rally support for the people affected by crisis across the world.
X
Desktop Bottom Promotion