For Quick Alerts
ALLOW NOTIFICATIONS  
For Daily Alerts

ಹಿಂದೂ ದೇವಸ್ಥಾನಗಳಲ್ಲಿ ಪುರುಷರು ಪ್ರವೇಶಿಸುವ ಮುನ್ನ ಯಾಕೆ ಶರ್ಟ್‍ಗಳನ್ನು ತೆಗೆದು ಹೋಗಬೇಕು?

|

ಹಿಂದೂ ಸಂಸ್ಕೃತಿ ಹಾಗೂ ಆಚರಣೆಗಳು ಬಹಳ ಪ್ರಸಿದ್ಧವಾದದ್ದು. ವಿಶಾಲವಾದ ವ್ಯಾಪ್ತಿ ಹಾಗೂ ವಿಭಿನ್ನ ಆಚರಣೆಗಳೊಂದಿಗೆ ಜನರ ಮನವನ್ನು ಗೆಲ್ಲುವ ಧರ್ಮ. ಸತ್ಯ-ನಿಷ್ಠೆ, ಧರ್ಮ-ತ್ಯಾಗ, ವಿಜ್ಞಾನ ಹಾಗೂ ಸಂಸ್ಕೃತಿಗಳನ್ನು ಒಳಗೊಂಡಂತಹ ಪವಿತ್ರವಾದ ಧರ್ಮ. ಈ ಧರ್ಮದಲ್ಲಿ ಕೈಗೊಳ್ಳುವ ಆಚರಣೆಗಳು, ವಿಧಿ-ವಿಧಾನಗಳು ವಿಶೇಷ ನಂಬಿಕೆ ಹಾಗೂ ಹಿನ್ನೆಲೆಯನ್ನು ಪಡೆದುಕೊಂಡಿರುತ್ತವೆ. ವೈಜ್ಞಾನಿಕವಾಗಿಯೂ ವಿಶೇಷತೆಯನ್ನು ಹೊಂದಿರುವುದರ ಮೂಲಕ ಜನರ ಜೀವನಕ್ಕೆ ಸೂಕ್ತ ದಾರಿಯನ್ನು ತೋರಿಸಿಕೊಡುವುದು.

ದೇವಸ್ಥಾನ, ಮಠ ಹಾಗೂ ಕೆಲವು ಪವಿತ್ರ ಕ್ಷೇತ್ರಗಳಲ್ಲಿ ದೇವರ ಆರಾಧನೆ, ದೇವರಿಗಾಗಿ ಕೈಗೊಳ್ಳುವ ಕೆಲಸ-ಕಾರ್ಯಗಳು, ಹಬ್ಬ ಹರಿದಿನಗಳು, ಉತ್ಸವ ಹಾಗೂ ದೇವರ ದರ್ಶನ ಎಲ್ಲವೂ ವಿಶೇಷ ಬಗೆಯಿಂದ ಕೂಡಿರುತ್ತವೆ. ಕೆಲವು ಸೂಕ್ತ ನಿಯಮಗಳನ್ನು ಅನುಸರಿಸುವುದರ ಮೂಲಕ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು ಹಾಗೂ ದೇವರ ಕೃಪೆಗೆ ಒಳಗಾಗಬಹುದು ಎನ್ನುವ ನಂಬಿಕೆ ಇದೆ. ಈ ನಂಬಿಕೆಯಂತೆಯೇ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಹಾಗೂ ಉತ್ಸವಗಳು ನಡೆಯುತ್ತವೆ ಎಂದು ಹೇಳಬಹುದು.

ದೇವಾಲಯದ ಒಳಗೆ ಹೋಗುವ ಮುನ್ನ

ದೇವಾಲಯದ ಒಳಗೆ ಹೋಗುವ ಮುನ್ನ

ದೇವಾಲಯಕ್ಕೆ ಬರುವುದು, ಪೂಜೆಯನ್ನು ನೀಡುವುದು ಎಲ್ಲವೂ ಸಾಮಾನ್ಯ ಹಾಗೂ ಸಾರ್ವಜನಿಕವಾಗಿ ಕೈಗೊಳ್ಳಬಹುದಾದ ಕ್ರಮ. ಆದರೆ ಪ್ರತಿಯೊಂದು ದೇವಾಲಯದ ಒಳಗೆ ಹೋಗುವ ಮುನ್ನ ಅಥವಾ ದೇವರ ದರ್ಶನ ಪಡೆಯುವ ಮುನ್ನ ಮಹಿಳೆಯರು ಹಾಗೂ ಪುರುಷರು ಕೆಲವು ನಿಯಮಗಳನ್ನು ಅನುಸರಿಸ ಬೇಕಾಗುತ್ತದೆ. ಹಿಂದೂ ಧರ್ಮದ ಕೆಲವು ದೇವಾಲಯದಲ್ಲಿ ಸ್ತ್ರೀಯರಿಗೆ ಪ್ರವೇಶ ನೀಡದೆ ಇರುವುದನ್ನು ಸಹ ನಾವು ಕಾಣಬಹುದು. ಹಾಗೆಯೇ ಪುರುಷರು ಸಹ ದೇವಾಲಯದ ಒಳಗೆ ಪ್ರವೇಶ ಪಡೆದುಕೊಳ್ಳಬೇಕು ಅಥವಾ ದೇವರಿಗೆ ನಮಸ್ಕರಿಸಬೇಕು ಎಂದರೆ ಅವರು ಶರ್ಟ್/ಅಂಗಿಯನ್ನು ಬಿಚ್ಚಬೇಕು.

ಪುರುಷರು ತಮ್ಮ ಶರ್ಟ್‍ಗಳನ್ನು ಬಿಚ್ಚಿ ದೇವರ ದರ್ಶನ ಪಡೆಯಬೇಕು

ಪುರುಷರು ತಮ್ಮ ಶರ್ಟ್‍ಗಳನ್ನು ಬಿಚ್ಚಿ ದೇವರ ದರ್ಶನ ಪಡೆಯಬೇಕು

ಹಿಂದೂ ದೇವಾಲಯದಲ್ಲಿ ಸಾಮಾನ್ಯವಾಗಿ ಪುರುಷರು ತಮ್ಮ ಶರ್ಟ್‍ಗಳನ್ನು ಬಿಚ್ಚಿ ದೇವರ ದರ್ಶನ ಪಡೆಯಬೇಕು. ಅದು ಚಿಕ್ಕ ಮಕ್ಕಳೇ ಆಗಿರಲಿ ಅಥವಾ ದೊಡ್ಡವರೇ ಆಗಿರಲಿ ಪುರುಷರು ಎಂದಮೇಲೆ ಅದು ಕಡ್ಡಾಯವಾಗಿರುತ್ತದೆ. ಕೇರಳ, ಕರ್ನಾಟಕ, ತಮಿಳುನಾಡು ಆಂಧ್ರ ಸೇರಿದಂತೆ ವಿವಿಧೆಡೆಯ ದೇವಸ್ಥಾನದಲ್ಲಿ ಈ ನಿಯಮವು ಕಡ್ಡಾಯವಾಗಿರುತ್ತದೆ. ಅದನ್ನು ಪ್ರತಿಯೊಬ್ಬ ಪುರುಷನು ಪಾಲಿಸಬೇಕು. ಹಾಗೊಮ್ಮೆ ಅಂಗಿಯನ್ನು ಬಿಚ್ಚಲು ಮನಸ್ಸಿಲ್ಲದವರು ಅಥವಾ ಅಂಗೀಕರಿಸುವವರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗದು. ಹಾಗಾದರೆ ಈ ನಿಯಮವನ್ನು ಏಕೆ ಹಿಂದೂ ದೇವಾಲಯಗಳಲ್ಲಿ ಪಾಲಿಸಲಾಗುವುದು? ಎನ್ನುವಂತಹ ಪ್ರಶ್ನೆ ಒಂದಲ್ಲಾ ಒಂದು ಬಾರಿ ಮನಸ್ಸಿಗೆ ಕಾಡಿರುತ್ತದೆ ಎನ್ನುವುದು ಸತ್ಯ. ಈ ಪ್ರಶ್ನೆಗೆ ಉತ್ತರವನ್ನು ನೀವು ಹುಡುಕುತ್ತಿದ್ದೀರಿ ಎಂದಾದರೆ ಈ ಮುಂದೆ ವಿವರಿಸಿದ ವಿರವಣೆಯನ್ನು ಪರಿಶೀಲಿಸಿ.

ದೇವಾಲಯದ ಒಳ ರಚನೆ

ದೇವಾಲಯದ ಒಳ ರಚನೆ

ಹಿಂದೂ ದೇವಾಲಯದ ವಾಸ್ತುಶಿಲ್ಪ ಹಾಗೂ ವಾಸ್ತು ರಚನೆ ಎಲ್ಲವೂ ಕ್ರಮಬದ್ಧವಾಗಿ ಹಾಗೂ ವಿಶೇಷ ವೈಜ್ಞಾನಿಕ ಶಕ್ತಿಯನ್ನು ಒಳಗೊಂಡಿರುತ್ತವೆ. ಅದ್ಭುತ ಸಂಗತಿ ಹಾಗೂ ಪರಿಕಲ್ಪನೆಯಿಂದ ದೇವಾಲಯವನ್ನು ಸ್ಥಾಪಿಸ ಲಾಗಿರುತ್ತದೆ. ಸಾಮಾನ್ಯವಾಗಿ ಹಿಂದೂ ದೇವಾಲಯಗಳಲ್ಲಿ ಗರ್ಭ ಗುಡಿಯನ್ನು ವಿಶೇಷ ವಾಸ್ತುವಿನ ಆಧಾರದ ಮೇಲೆ ಇರಿಸಲಾಗುವುದು. ಅಲ್ಲದೆ ದೇವಾಲಯಕ್ಕೆ ಪ್ರಧಾನ ಬಾಗಿಲು ಮತ್ತು ದೇವರ ಗುಡಿಯ ಬಾಗಿಲು ಎರಡಿ ರುವುದನ್ನು ಕಾಣಬಹುದು. ಕೆಲವು ದೇವಾಲಯಗಳಲ್ಲಿ ಗರ್ಭಗುಡಿಗೂ ಸಹ ಬಾಗಿಲನ್ನು ಇಡಲಾಗುವುದಿಲ್ಲ. ಜೊತೆಗೆ ಗರ್ಭ ಗುಡಿಯಲ್ಲಿ ಕಿಡಕಿಗಳಿರುವುದಿಲ್ಲ. ಕತ್ತಲು ಹಾಗೂ ನಿಶ್ಯಬ್ದದಿಂದ ಕೂಡಿರುತ್ತದೆ. ಆದರೆ ಅಲ್ಲಿ ನಿಂತರೆ ಅಥವಾ ಅದರ ಬಳಿಯಲ್ಲಿ ನಿಂತರೂ ಸಹ ತಂಪಾದ ಅನುಭವ ಉಂಟಾಗುವುದು.

ದೇವಾಲಯದ ಒಳ ರಚನೆ

ದೇವಾಲಯದ ಒಳ ರಚನೆ

ಅದೇ ಕ್ರಿಶ್ಚಿಯನ್ ಹಾಗೂ ಇನ್ನಿತರ ಧರ್ಮದವರ ದೇವಾಲಯವು ವಿಶಾಲವಾದ ಕಿಟಕಿ ಹಾಗೂ ಬಾಗಿಲುಗಳಿಂದ ಕೂಡಿರುತ್ತವೆ. ಅಲ್ಲಿ ಸಾಕಷ್ಟು ಗಾಳಿ ಬೆಳಕಿನ ಹರಿವು ಇರುತ್ತವೆ. ಇಂತಹ ಒಂದು ವ್ಯತ್ಯಾಸವನ್ನು ನಾವು ಹಿಂದೂ ಧರ್ಮದ ಗುಡಿಯಲ್ಲಿ ಕಾಣ ಬಹುದು. ಹಿಂದೂ ದೇವಾಲಯಗಳ ವಾಸ್ತು ಪ್ರಕಾರ ವಿಶೇಷ ಆಕೃತಿ ಅಥವಾ ರಚನೆಯಿಂದ ಕೂಡಿರುತ್ತದೆ. ಅಲ್ಲಿ ಋಣಾತ್ಮಕ ಶಕ್ತಿಗಳ ಆಗಮನಕ್ಕೆ ಅವಕಾಶ ಇರುವುದಿಲ್ಲ. ಕೇವಲ ಧನಾತ್ಮಕ ಶಕ್ತಿಗಳು ಮಾತ್ರ ಅಡಕವಾಗಿರುತ್ತವೆ ಎಂದು ಹೇಳಲಾಗುವುದು. ಗರ್ಭ ಗುಡಿಯಲ್ಲಿ ಕಿಡಕಿಗಳು ಹಾಗೂ ಬೆಳಕಿನ ಅಭಾವ ಇದ್ದರೂ ಸಹ ಅಲ್ಲಿ ಶುದ್ಧತೆ ಹಾಗೂ ವಿಶಿಷ್ಟ ಶಕ್ತಿ ನೆಲೆಸಿರುತ್ತದೆ ಎಂದು ಹೇಳಬಹುದು.

Most Read: ಜೀವಮಾನದಲ್ಲಿ ಒಮ್ಮೆಯೂ ಹೆಣ್ಣನ್ನೇ ನೋಡದೇ, ಮರಣಹೊಂದಿದ ಪುರುಷ!

 ಗರ್ಭಗೃಹದಲ್ಲಿ ಕತ್ತಲು ಹಾಗೂ ಪುರುಷರು ಶರ್ಟ್ ತೆಗೆಯಬೇಕಾದ ನಿಯಮ

ಗರ್ಭಗೃಹದಲ್ಲಿ ಕತ್ತಲು ಹಾಗೂ ಪುರುಷರು ಶರ್ಟ್ ತೆಗೆಯಬೇಕಾದ ನಿಯಮ

ದೇವಾಲಯದ ಕೇಂದ್ರ ಸ್ಥಾನ ಗರ್ಭಗುಡಿ. ಈ ಗರ್ಭ ಗುಡಿಯಲ್ಲಿ ನಡೆಯುವ ವಿಶೇಷ ಆಚರಣೆ ಹಾಗೂ ಪೂಜಾ ವಿಧಾನಗಳಿಂದ ಅದ್ಭುತವಾದ ಧನಾತ್ಮಕ ಶಕ್ತಿಯ ಸಂಚಾರ ಇರುತ್ತದೆ. ಅದ್ಭುತ ಶಕ್ತಿ ಅಥವಾ ದೈವ ಶಕ್ತಿ ಎನ್ನುವುದು ಒಂದೇ ಸಮನೆ ಗರ್ಭ ಗುಡಿಯನ್ನು ಪ್ರವೇಶಿಸುವುದಿಲ್ಲ. ಉತ್ತಮ ಶಕ್ತಿಯು ಒಂದೇ ಸಮನೆ ಕತ್ತಲಿನ ಪ್ರದೇಶಕ್ಕೆ ಪ್ರವೇಶಿಸದು. ಮೊದಲು ಅದರ ಸುತ್ತಲು ಹರಿದಾಡುತ್ತದೆ. ಕುಟುಂಬದ ಆಧಾರವಾದ ಪುರುಷರು ಅಂಗಿಯನ್ನು ಬಿಚ್ಚಿ ದೇವರ ದರ್ಶನವನ್ನು ಪಡೆಯುತ್ತಿದ್ದು, ಸಕಾರಾತ್ಮಕ ಭಾವನೆ ಹಾಗೂ ನಿರ್ಮಲ ಚಿತ್ತವನ್ನು ಹೊಂದಿದವರಾಗಿದ್ದರೆ ಅಂತಹವರ ಹೃದಯವನ್ನು ದೈವ ಶಕ್ತಿ ಪ್ರವೇಶಿಸುವುದು. ಅವರ ಮನಃಸ್ಸಿನ ಇಚ್ಛೆಯನ್ನು ಪೂರ್ಣಗೊಳಿಸುವುದು ಎಂದು ಹೇಳಲಾಗುವುದು.

ವ್ಯಕ್ತಿ ಧರಿಸುವ ಬಟ್ಟೆ

ವ್ಯಕ್ತಿ ಧರಿಸುವ ಬಟ್ಟೆ

ವ್ಯಕ್ತಿ ಧರಿಸುವ ಬಟ್ಟೆಯಲ್ಲಿ ನಕಾರಾತ್ಮಕ ಶಕ್ತಿ ಹಾಗೂ ಕೊಳೆಗಳಿಂದ ಕೂಡಿರಬಹುದು. ಅವುಗಳನ್ನು ಬಿಚ್ಚಿ, ದೇವರಿಗೆ ತನು ಮನದಿಂದ ಪ್ರಾಥನೆಯನ್ನು ಗೈದರೆ ದೇವರು ಮೆಚ್ಚುತ್ತಾನೆ. ಜೀವನದಲ್ಲಿ ಸಾಕಷ್ಟು ಯಶಸ್ಸು ಹಾಗೂ ಸುಖ ಜೀವನವನ್ನು ಕರುಣಿಸುವನು ಎನ್ನುವ ನಂಬಿಕೆಯಿದೆ. ಈ ವಿಶೇಷ ತತ್ವಗಳ ಆಧಾರದ ಮೇಲೆಯೇ ದೇವಾಲಯದ ರಚನೆ ಹಾಗೂ ಪುರುಷರು ಅಂಗಿಯನ್ನು ಬಿಚ್ಚಿ ದರ್ಶನವನ್ನು ಪಡೆಯಬೇಕು ಎನ್ನುವುದರ ನಡುವೆ ವಿಶೇಷವಾದ ಅರ್ಥ ಹಾಗೂ ಆಚರಣೆಯನ್ನು ಬೆಸೆದುಕೊಂಡಿದೆ.

ಗರ್ಭ ಗುಡಿಗೆ ಒಂದೇ ಬಾಗಿಲು

ಗರ್ಭ ಗುಡಿಗೆ ಒಂದೇ ಬಾಗಿಲು

ಗರ್ಭ ಗುಡಿ ಎನ್ನುವ ಕಲ್ಪನೆಯು ಮನುಷ್ಯನ ದೇಹದ ರೀತಿಯಲ್ಲಿಯೇ ಇರುತ್ತದೆ. ಗರ್ಭಗುಡಿಯು ದೇವಸ್ಥಾನದ ಕೇಂದ್ರ ಸ್ಥಾನವಾಗಿರುತ್ತದೆ. ಅದಕ್ಕೆ ಬರುವುದು ಹಾಗೂ ಹೋಗುವುದು ಒಂದೇ ಮಹಾಧ್ವಾರದ ಸಹಾಯದಿಂದ. ಮನುಷ್ಯನ ದೇಹದಲ್ಲಿಯೂ ಗರ್ಭ ಎನ್ನುವುದು ಶರೀರದ ಮಧ್ಯ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಮಗುವು ಹೊಟ್ಟೆಯಲ್ಲಿ ಇರುವಾಗ ಹೇಗೆ ಕತ್ತಲನ್ನು ಪಡೆದುಕೊಂಡು ಉತ್ತಮ ಆರೋಗ್ಯದಿಂದ, ಭದ್ರವಾಗಿ ಇರುತ್ತದೆಯೋ ಹಾಗೆ. ಅದು ಹೊರಬರಲು ಕೇವಲ ಒಂದೇ ದಾರಿ ಇರುತ್ತದೆ. ಹಾಗೆಯೇ ವಿಶೇಷ ಶಕ್ತಿ ಅಥವಾ ಪ್ರಭೆಯು ಗರ್ಭ ಗುಡಿಯಲ್ಲಿ ನೆಲೆಸಿರುತ್ತದೆ. ಅದನ್ನು ನೋಡಲು ಬಂದ ವ್ಯಕ್ತಿಗಳ ಮೇಲೆ ಪ್ರತಿಫಲಿಸುವುದರ ಮೂಲಕ ಶಕ್ತಿಯನ್ನು ನೀಡುವುದು ಎನ್ನಲಾಗುವುದು.

Most Read: ಮೈಮೇಲೆ ಬಂದು ಆವರಿಸುವ ಭೂತ-ಪ್ರೇತಾತ್ಮ ಓಡಿಸುವ ದೇವಾಲಯಗಳು!

ಗರ್ಭ ಗುಡಿಗೆ ಒಂದೇ ಬಾಗಿಲು

ಗರ್ಭ ಗುಡಿಗೆ ಒಂದೇ ಬಾಗಿಲು

ಹಿಂದೂ ಧರ್ಮದ ವಿಶೇಷ ಆಚರಣೆ ಹಾಗೂ ನಂಬಿಕೆಗಳು ವ್ಯಕ್ತಿಯ ಉದ್ದಾರ ಹಾಗೂ ಭವಿಷ್ಯದ ಬಗ್ಗೆಯೇ ಹೊಂದಿಕೊಂಡಿದೆ. ಧರ್ಮಕ್ಕೆ ಅನುಸಾರವಾಗಿ ನಮ್ಮ ನಡೆ-ನುಡಿಗಳು ಇದ್ದರೆ ಜೀವನವು ಸುಂದರವಾಗಿ ಸಾಗುತ್ತದೆ. ನೀವು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೀರಿ ಅಥವಾ ದೇವರ ದರ್ಶನಕ್ಕಾಗಿ ನೀವು ಹಾತೊರೆಯುತ್ತಿದ್ದೀರಿ ಎಂದಾದರೆ ತಪ್ಪದೆ ದೇವಾಲಯಗಳಲ್ಲಿ ನಡೆದು ಕೊಳ್ಳಬೇಕಾದ ನಿಯಮಗಳನ್ನು ಅನುಸರಿಸಿ. ಇಲ್ಲವಾದರೆ ಪವಿತ್ರ ಶಕ್ತಿಗಳು ನಿಮ್ಮೆಡೆಗೆ ಸುಳಿಯದು. ನೀವು ಅಂದುಕೊಂಡ ಕಾರ್ಯಗಳು ಅಥವಾ ಇಚ್ಛೆಗಳು ನಡೆಯದೆ ಹೋಗಬಹುದು. ನೀವು ಭೇಟಿ ನೀಡುವ ದೇವಾಲಯಗಳ ವಾಸ್ತುಶಿಲ್ಪ, ಗರ್ಭಗುಡಿ ಹಾಗೂ ಅಲ್ಲಿಯ ವಿಶೇಷತೆಗಳನ್ನು ತಿಳಿದುಕೊಳ್ಳುವುದರ ಮೂಲಕ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಿ.

English summary

Why men are asked to remove shirts in hindu temples?

Why men are asked to remove shirts in hindu temples? We can see in many of the hindu temples especially in kerala and kanyakumari men should not wear shirts inside the temple. This is because of a scientific reason to make aperson healthy.
X
Desktop Bottom Promotion