For Quick Alerts
ALLOW NOTIFICATIONS  
For Daily Alerts

ಕೃಷ್ಣನ ಬಾಲ ಲೀಲೆಗಳು, ತುಂಟಾಟಗಳು, ಯಾರಿಗೆ ತಾನೆ ಇಷ್ಟ ಆಗಲ್ಲ?

By Jaya Subramnya
|

ವಿಷ್ಣು ಭಗವಾನರ ಇನ್ನೊಂದು ರೂಪವಾಗಿರುವ ಶ್ರೀಕೃಷ್ಣನನ್ನು ಮೆಚ್ಚದವರು ಯಾರೂ ಇಲ್ಲ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಶ್ರೀಕೃಷ್ಣನೆಂದರೆ ಅಚ್ಚುಮೆಚ್ಚು. ಅತಿಯಾಗಿ ತುಂಟತನ ಮಾಡುವ ಮಕ್ಕಳನ್ನು ಕೃಷ್ಣನಿಗೆ ಹೋಲಿಸುವುದುಂಟು, ಕೃಷ್ಣನ ಹೆಸರಿನಿಂದ ಕರೆಯುವುದೂ ಇದೆ. ತಮ್ಮ ಪ್ರತಿಯೊಂದು ಅವತಾರದಲ್ಲಿ ಕೂಡ ಲೋಕಕಲ್ಯಾಣದ ಉದ್ದೇಶವನ್ನಿಟ್ಟುಕೊಂಡಿರುವ ಭಗವಾನ್ ಕೃಷ್ಣನ ದ್ವಾಪರ ಯುಗದ ಅವತಾರವು ಲೋಕಕಲ್ಯಾಣವನ್ನು ಪ್ರತಿಪಾದಿಸುತ್ತದೆ.

ಪಾಂಡವರಿಗೆ ಸಹಾಯ ಮಾಡುವ ಕೃಷ್ಣ ಪರಮಾತ್ಮನು ಧರ್ಮದ ಕಡೆಗೆ ಇರುತ್ತಾರೆ. ಮಾನವ ರೂಪಲ್ಲಿ ಭಗವಂತನು ಧರೆಗಿಳಿದು ಬಂದು ಮಾನವರಂತೆಯೇ ಬದುಕಿ ಜನರನ್ನು ಸನ್ಮಾರ್ಗಕ್ಕೆ ತರುವ ಕಾರ್ಯವನ್ನು ಭಗವಾನ್ ಕೃಷ್ಣನು ಎಲ್ಲಾ ಯುಗದಲ್ಲಿಯೂ ಮಾಡುತ್ತಲೇ ಬಂದಿದ್ದಾರೆ.

krishna

ಬಾಲ್ಯದ ದಿನಗಳನ್ನು ಕೃಷ್ಣನು ತುಂಟಾಟಗಳಿಂದಲೇ ಕಳಿಯುತ್ತಾರೆ. ಸೆರೆಮನೆಯಲ್ಲಿ ಹುಟ್ಟಿ ದ್ವಾರಕೆಯಲ್ಲಿ ಬೆಳೆಯುವ ಕೃಷ್ಣನಿಗೆ ಎಲ್ಲರೂ ಸಮಾನರೇ. ಬೇಧವನ್ನು ಮಾಡದೆಯೇ ಎಲ್ಲರೊಂದಿಗೂ ಬೆರೆತುಕೊಳ್ಳುವ ಮನಸ್ಸು ಪುಟ್ಟ ಕಂದಮ್ಮ ಕೃಷ್ಣನದ್ದಾಗಿದೆ. ಇಂದಿನ ಲೇಖನದಲ್ಲಿ ಕೃಷ್ಣನ ಇನ್ನಷ್ಟು ಬಾಲ ವಿನೋದಗಳನ್ನು, ತುಂಟಾಟಗಳನ್ನು ಕಂಡುಕೊಳ್ಳೋಣ.

ಹಾಲು ಮತ್ತು ಬೆಣ್ಣೆಯ ಮೇಲೆ ಕೃಷ್ಣನ ಪ್ರೀತಿ
ಕೃಷ್ಣನು ಬೆಳೆದು ದೊಡ್ಡವನಾಗುತ್ತಿದ್ದಂತೆಯೇ ಅವರ ಬಾಲ್ಯದ ತುಂಟಾಟಗಳು ಹೆಚ್ಚುತ್ತಲೇ ಇದ್ದವು. ಇದನ್ನು ಪುಷ್ಠೀಕರಿಸುವ ಹೆಚ್ಚಿನ ಕಥಾನಕಗಳು ಪುರಾಣದಲ್ಲಿ ಲಭ್ಯವಿದೆ. ಗೋಪಿಕೆಯರು ಮಣ್ಣಿನ ಕುಡಿಕೆಗಳಲ್ಲಿ ಎತ್ತಿಡುತ್ತಿದ್ದ ಹಾಲು ಮತ್ತು ಬೆಣ್ಣೆ ಮೊಸರನ್ನು ಮಡಿಕೆ ಒಡೆ ಇವರು ಕುಡಿಯುತ್ತಿದ್ದರು ಮತ್ತು ಮರದ ಮರೆಯಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದರು. ಇತರ ಗೆಳೆಯರೂ ಕೃಷ್ಣನ ಈ ಸಾಹಸಕ್ಕೆ ಕೈ ಜೋಡಿಸುತ್ತಿದ್ದರು.

ಕೃಷ್ಣನ ತಾಯಿ ಯಶೋಧಗೆ ಕೃಷ್ಣನ ಈ ತುಂಟಾಟಗಳ ಬಗ್ಗೆ ಗೊತ್ತಿರುತ್ತದೆ. ಆದ್ದರಿಂದಲೇ ಆಕೆ ಎತ್ತರದ ಮಡಿಕೆಗಳಲ್ಲಿ ಹಾಲಿನ ಉತ್ಪನ್ನಗಳನ್ನು ಇಡುತ್ತಿದ್ದರು. ಒಮ್ಮೆ ಯಶೋಧೆಯು ನೀರು ತರಲೆಂದು ಕೊಳಕ್ಕೆ ಹೋದ ಸಂದರ್ಭದಲ್ಲಿ ಕೃಷ್ಣನು ತನ್ನ ಗೆಳೆಯರ ಜತೆಗೂಡಿ ಮಡಿಕೆಯನ್ನು ಒಡೆದು ಹಾಲು, ಮಡಿಕೆ ಮತ್ತು ಬೆಣ್ಣೆಯನ್ನು ಸೇವಿಸುತ್ತಿದ್ದರು. ಈ ಸಂದರ್ಭದಲ್ಲಿ ಬಂದ ಯಶೋಧೆಯು ಮಗನ ತುಂಟಾಟದಿಂದ ಕೋಪಗೊಳ್ಳುತ್ತಾರೆ ಮತ್ತು ಅವರನ್ನು ಹೊಡೆಯಲೆಂದು ಬಡಿಗೆಯೊಂದಿಗೆ ಅಟ್ಟಿಸಿಕೊಂಡು ಹೋಗುತ್ತಾರೆ.
ಹೀಗೆ ತಮ್ಮ ತುಂಟಾಟಗಳನ್ನು ಮಾಡಿಕೊಂಡೇ ಕೃಷ್ಣನು ತಮ್ಮ ಹಾಲು ಬೆಣ್ಣೆಯ ಕಳ್ಳತನವನ್ನು ಮಾಡುತ್ತಿದ್ದರು. ಇದರಿಂದಲೇ ಕೃಷ್ಣನಿಗೆ ಬೆಣ್ಣೆ ಮತ್ತು ಹಾಲೆಂದರೆ ಎಷ್ಟು ಪ್ರೀತಿ ಎಂಬುದನ್ನು ಅರಿತುಕೊಳ್ಳಬಹುದಾಗಿದೆ.

ಕೃಷ್ಣನು ಬೆಣ್ಣೆಯನ್ನು ಏಕೆ ಕದಿಯುತ್ತಿದ್ದರು ಇದರ ಹಿಂದಿನ ಕಾರಣವೇನು?
ಕೃಷ್ಣನು ಬೆಣ್ಣೆಯನ್ನು ಕಳ್ಳತನ ಮಾಡಿ ಅದಕ್ಕೆ ಸೊಗಸಾದ ಕಾರಣಗಳನ್ನು ಅಮ್ಮನಿಗೆ ಹೇಳುತ್ತಿದ್ದರು. ಈ ಕಾರಣಗಳೇ ಮುದ್ದು ಕೃಷ್ಣನ ಲೀಲಾವಿನೋದಗಳನ್ನು ಬಣ್ಣಿಸುತ್ತವೆ. ಹಾಗಿದ್ದರೆ ಪುಟ್ಟ ಬಾಲ ಕೃಷ್ಣನು ತಾಯಿ ಯಶೋಧಗೆ ನೀಡುವ ಕಾರಣಗಳೇನು ಎಂಬುದನ್ನು ಅರಿತುಕೊಳ್ಳೋಣ. ಅದರ ಜೊತೆಗೆ ಕೃಷ್ಣನು ಬೆಣ್ಣೆಯನ್ನು ಕಳ್ಳತನ ಮಾಡುವುದರ ಜೊತೆಗೆ ಅವರಿಗೆ ಬೆಣ್ಣೆಯೆಂದರೆ ಏಕೆ ಪ್ರೀತಿ ಎಂಬುದನ್ನು ತಿಳಿದುಕೊಳ್ಳೋಣ.

ಬೆಣ್ಣೆಯು ಹಗುರವಾಗಿದ್ದು ನಮ್ಮ ಆಧ್ಯಾತ್ಮಿಕ ಮನೋಭಾವನೆಯನ್ನು ತಿಳಿಸಿದ್ದಾರೆ. ಮಾನವನ ಒಳಗಿನ ಅಂಶವು ಒಳ್ಳೆಯ ವಿಚಾರಗಳಿಂದ ಒಳಗೊಂಡಿದ್ದರೆ ಹೊರಗಿನ ಭಾವವು ಒಳ್ಳೆಯದೇ ಆಗಿರುತ್ತದೆ. ಮೊಸರನ್ನು ಕಡೆದು ಹೇಗೆ ಬೆಣ್ಣೆಯನ್ನು ನಾವು ಹೊರತರುತ್ತೇವೇಯೋ ಅಂತೆಯೇ ನಮ್ಮ ಒಳ್ಳೆಯ ಅಂಶಗಳನ್ನು ಅರೆದು ಅದನ್ನು ಸಂಪೂರ್ಣವಾಗಿ ನಾವು ಮೈಗೂಡಿಸಿಕೊಳ್ಳಬೇಕು.

ಬೆಣ್ಣೆಯು ಮೃದು ಮತ್ತು ಕಲ್ಮಶರಹಿತವಾಗಿದೆ. ನಮ್ಮ ಹೃದಯ ಕೂಡ ಬೆಣ್ಣೆಯಂತೆಯೇ ಶುದ್ಧ ಮತ್ತು ಕಲ್ಮಶರಹಿತವಾಗಿರಬೇಕು ಎಂಬುದಾಗಿ ಬೆಣ್ಣೆಯು ಪ್ರತಿನಿಧಿಸುತ್ತಿದೆ. ಇದಕ್ಕಾಗಿಯೇ ಮಾನವನ ಹೃದಯದಲ್ಲಿರುವ ಕೆಟ್ಟ ಅಂಶಗಳನ್ನು ಕೃಷ್ಣನು ಬೆಣ್ಣೆಯ ರೂಪದಲ್ಲಿ ಕಂಡುಕೊಳ್ಳುತ್ತಿದ್ದು ಅದನ್ನು ಹೊರತೆಗೆದು ಅಲ್ಲಿ ಪ್ರೀತಿಯ ಸ್ವಾದವನ್ನು ಭರ್ತಿಗೊಳಿಸಿ ಎಂಬುದಾಗಿ ಹೇಳುತ್ತಿದ್ದಾರೆ.

ಬಾಲಕೃಷ್ಣನಿಗೆ ಹಾಲಿನ ಉತ್ಪನ್ನಗಳು, ಗೋಪಿಕೆಯರು ಮತ್ತು ವೃಂದಾವನದ ಪ್ರತಿಯೊಂದು ವಸ್ತುಗಳೂ ಇಷ್ಟ. ನಿತ್ಯವೂ ಕೃಷ್ಣನು ಇವರನ್ನು ಗೋಳಾಡಿಸುತ್ತಿದ್ದರು. ಆದರೆ ಇವರೂ ಕೃಷ್ಣನನ್ನು ಪ್ರೀತಿಸುತ್ತಿದ್ದರು. ಆದ್ದರಿಂದಾಗಿಯೇ ಅವರು ಹಾಲಿನ ಉತ್ಪನ್ನಗಳನ್ನು ಕೃಷ್ಣನಿಗಾಗಿಯೇ ತೆಗೆದಿರುತ್ತಿದ್ದರು. ತುಂಟಾಟಗಳನ್ನು ಬಾಲ ಕೃಷ್ಣ ಮಾಡುತ್ತಿದ್ದರೂ ಅವರು ಆತನನ್ನು ಬೈಯ್ಯುವುದು, ಹೊಡೆಯುವುದು ಮಾಡುವುದಿಲ್ಲ ಬದಲಿಗೆ ಸಂತೋಷಪಡಿಸುತ್ತಿದ್ದರು. ಹೀಗೆ ತಮ್ಮ ತುಂಟಾಟಗಳಿಂದಲೇ ಕೃಷ್ಣನು ಬೆಣ್ಣೆಯನ್ನು ಕದಿಯುವುದರ ಜೊತೆಗೆ ಪ್ರತಿಯೊಬ್ಬರ ಮನಸ್ಸನ್ನು ಕದಿಯುತ್ತಿದ್ದರು.

English summary

Why lord krishna loves butter

Lord Krishna is another form of Lord Vishnu and thus Shree Krishna is also famous as “Manifestation of Lord Vishnu” on the earth. Krishna came on this earth to bring back the Dharma by helping Pandavas gain victory over the Kauravas in the war of Kurukshetra. Besides this, Krishna is also very popular for his childhood mischiefs. He was also the naughtiest among his fellow cowherds during his teenage.
Story first published: Friday, August 11, 2017, 9:57 [IST]
X
Desktop Bottom Promotion