For Quick Alerts
ALLOW NOTIFICATIONS  
For Daily Alerts

2020 ಗೌರಿ ಹಬ್ಬ: ಗೌರಿ ಹಬ್ಬದ ಆಚರಣೆ ಹಾಗೂ ಪೂಜಾ ವಿಧಿ ವಿಧಾನ...

By Hemanth
|

ಬಾಲ ಗಂಗಾಧರ ತಿಲಕ್ ಅವರು ಸ್ವಾತಂತ್ರ್ಯ ಸಂಗ್ರಾಮದ ವೇಳೆ ಜನರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಗಣೇಶೋತ್ಸವನ್ನು ಮಾಡಲು ಆರಂಭಿಸಿದರು. ಇದರಿಂದಾಗಿ ಸಾರ್ವಜನಿಕ ಮಟ್ಟದಲ್ಲಿ ಗಣೇಶನ ಆರಾಧನೆ ಆರಂಭವಾಯಿತು. ಭಾರತದೆಲ್ಲೆಡೆ ಗಣೇಶ ಚತುರ್ಥಿಯನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ.

ಈ ವರ್ಷ (2020) ಆಗಸ್ಟ್‌ 21ರಂದು ಗೌರಿ ವ್ರತ ಹಾಗೂ 22ರಂದು ಗಣೇಶನ ಹಬ್ಬವನ್ನು ಆಚರಿಸಲಾಗುತ್ತಿದೆ.

ಪದ್ಧತಿಯಂತೆ ಗಣೇಶ ಚತುರ್ಥಿಯ ಒಂದು ದಿನ ಮೊದಲು ಗೌರಿಯನ್ನು ಪೂಜಿಸಲಾಗುತ್ತದೆ. ನಾವು ತಿಳಿದಿರುವಂತೆ ಮೊದಲ ಪೂಜೆ ಸಲ್ಲುವುದು ಗಣೇಶನಿಗೆ. ಆದರೆ ಗಣೇಶನಿಗಿಂತ ಮೊದಲು ಗೌರಿಯನ್ನು ಪೂಜಿಸಲು ಕಾರಣಗಳು ಏನು?

Why Gowri Is Worshipped First

ಗೌರಿಯು ಗಣೇಶನ ತಾಯಿ ಪಾರ್ವತಿಯಾಗಿರುವ ಕಾರಣದಿಂದಾಗಿ ನಾವು ಮೊದಲು ಆಕೆಯನ್ನು ಪೂಜಿಸುತ್ತೇವೆ. ಗೌರಿಯನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಪೂಜಿಸಬೇಕೆಂಬ ಪ್ರಶ್ನೆ ಬಂದಾಗ ಇದು ಆಯಾಯ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತದೆ. ಆದರೆ ದೇಶದೆಲ್ಲೆಡೆ ಗಣೇಶನನ್ನು ಮನೆಗೆ ತರುವ ಮೊದಲು ಗೌರಿಯನ್ನು ತುಂಬಾ ಭಕ್ತಿಯಿಂದ ಪೂಜಿಸಲಾಗುತ್ತದೆ.

ಗಣೇಶ ಚತುರ್ಥಿಗೆ ಒಂದು ದಿನ ಮೊದಲೇ ಗೌರಿಯ ಮೂರ್ತಿಯನ್ನು ಮನೆಗೆ ತರಲಾಗುತ್ತದೆ. ಸಮೃದ್ಧಿ ಹಾಗೂ ಸಂಪತ್ತನ್ನು ಮನೆಗೆ ತರುವುದೇ ಇದರ ಉದ್ದೇಶವಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಗೌರಿಯನ್ನು ಮಂಗಳಗೌರಿ' ಎಂದು ಕರೆಯುತ್ತಾರೆ. ಆಕೆಯನ್ನು ಸಮೃದ್ಧಿ, ಸುಖ ಹಾಗೂ ಶಕ್ತಿಯ ದೇವತೆಯೆಂದು ಪರಿಗಣಿಸಲಾಗಿದೆ. ಗೌರಿ ಗಣೇಶ ಹಬ್ಬ ಆಚರಣೆಯ ಮಹತ್ವವೇನು?

ಗೌರಿಯ ಮೂರ್ತಿಯನ್ನು ಮನೆಗೆ ತರುವುದು
ಗಣೇಶ ಚತುರ್ಥಿಯ ಮುನ್ನಾ ದಿನ ಗೌರಿಯ ಮೂರ್ತಿಯನ್ನು ಮನೆಗೆ ತರಲಾಗುತ್ತದೆ. ಮನೆಯ ಅಂಗಳಕ್ಕೆ ರಂಗೋಲಿಯನ್ನು ಹಾಕಿ ಸುಮಂಗಲಿಯರು ಗೌರಿಯನ್ನು ಸ್ವಾಗತಿಸಲು ಮನೆಯನ್ನು ಅಲಂಕರಿಸುತ್ತಾರೆ. ಗೌರಿಯ ಮೂರ್ತಿಯನ್ನು ಮನೆಗೆ ತಂದಾಗ ಸಮೃದ್ಧಿ ಹಾಗೂ ಸಂಪತ್ತು ಬರುತ್ತದೆ ಎನ್ನುವ ನಂಬಿಕೆ.

ಅಲಂಕಾರ
ಕೆಲವೊಂದು ಕಡೆಗಳಲ್ಲಿ ಗೌರಿಯ ಮೂರ್ತಿಗೆ ಹೊಸ ಸೀರೆಯನ್ನು ಉಡಿಸಲಾಗುತ್ತದೆ. ಗೌರಿಗೆ ಬಂಗಾರದ ಸರ ಹಾಗೂ ಕೈಬಳೆಗಳನ್ನು ಹಾಕುತ್ತಾರೆ ಮತ್ತು ಹೂವಿನಿಂದಲೂ ಶೃಂಗಾರ ಮಾಡುತ್ತಾರೆ.

ಪೂಜೆ
ಕೆಲವು ಮನೆಗಳಲ್ಲಿ ಅರ್ಚಕರನ್ನು ಕರೆದು ಗೌರಿಯ ಪೂಜೆ ಮಾಡಿಸಿದರೆ, ಇನ್ನು ಕೆಲವರು ತಮ್ಮದೇ ಆದ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಪೂಜೆಯ ಬಳಿಕ ಆರತಿ ಎತ್ತಲಾಗುತ್ತದೆ. ಸೀರೆ, ಬಾಳೆಹಣ್ಣು, ಅಕ್ಕಿ, ತೆಂಗಿನಕಾಯಿ ಮತ್ತು ಒಡವೆಗಳನ್ನು ಗೌರಿಗೆ ಅರ್ಪಿಸಲಾಗುತ್ತದೆ.

ವಿಸರ್ಜನೆ
ಗಣೇಶನ ಮೂರ್ತಿಯೊಂದಿಗೆ ಗೌರಿಯ ಮೂರ್ತಿಯನ್ನು ಜಲಸ್ತಂಭ ಮಾಡಲಾಗುತ್ತದೆ. ಅನ್ನ ಹಾಗೂ ಹಾಲನ್ನು ದೇವರಿಗೆ ಅರ್ಪಿಸಿ, ಪೂಜೆ ಮಾಡಿ ಆರತಿ ಎತ್ತಿದ ಬಳಿಕ ನೆರೆದಿರುವ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ. ಇದರ ಬಳಿಕ ವಿಸರ್ಜನೆಯ ಕಾರ್ಯಕ್ರಮಗಳು ನಡೆಯುತ್ತದೆ.

ಎಲ್ಲಾ ಕಡೆಗಳಲ್ಲಿ
ಗೌರಿಯನ್ನು ಪೂಜಿಸುವ ವಿಧಾನಗಳು ಭಿನ್ನವಾಗಿದ್ದರೂ ಪ್ರತಿಯೊಂದು ಕಡೆಗಳಲ್ಲೂ ಗೌರಿಯನ್ನು ಪೂಜಿಸುವಂತಹ ಸಂಪ್ರದಾಯ ಇದ್ದೇ ಇದೆ. ಸಂಪತ್ತು ಹಾಗೂ ಸಮೃದ್ಧಿಯ ದೇವತೆಯನ್ನು ಪ್ರತಿಯೊಬ್ಬರು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ಮದುವೆಯಾಗಿರುವ ಮಹಿಳೆಯರು ಸಂತಾನ ಭಾಗ್ಯ, ಸುಖ ಹಾಗೂ ಪತಿಯ ಆಯಸ್ಸು ಹೆಚ್ಚಾಗಲು ಗೌರಿಯನ್ನು ಪೂಜಿಸುತ್ತಾರೆ.

English summary

Gowri Habba 2020: Why Gowri Is Worshipped Before Ganesh Chaturthi

As we all know Ganesha Chaturthi is a very big festival in India. But before worshiping Lord Ganesha, Gowri Pujan is perfromed a day before. Why does Gowri come first before Lord Ganesha? Well, Gowri (Goddess Parvati) is the mother of Lord Ganesha and hence we first worship the divine mother.
X
Desktop Bottom Promotion