For Quick Alerts
ALLOW NOTIFICATIONS  
For Daily Alerts

2021 ಗೌರಿ ಹಬ್ಬ: ಗೌರಿ ಪ್ರತಿಷ್ಠಾಪನೆ, ಆಚರಣೆಯ ವಿಧಿ-ವಿಧಾನ

By Hemanth p
|
Ganesh Chaturthi 2019 : ಗೌರಿ ಗಣೇಶ ಹಬ್ಬದ ಆಚರಣೆ ಹಿಂದಿನ ಮಹತ್ವ ಏನು? | BoldSky Kannada

ಗೌರಿ ಗಣೇಶ ಹಬ್ಬವು ವಿಶೇಷವಾಗಿ ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಆಚರಿಸಲ್ಪಡುವಂತಹ ಅತೀ ಪ್ರಾಮುಖ್ಯ ಹಬ್ಬವಾಗಿದೆ. ಉತ್ತರ ಭಾರತದಲ್ಲಿ ಇದನ್ನು ಹರತಲಿಕಾ ಎಂದು ಕರೆಯಲಾಗುತ್ತದೆ. ಗೌರಿ ಹಬ್ಬವನ್ನು ಗಣೇಶ ಚತುರ್ಥಿಯ ಮುನ್ನಾ ದಿನ ಆಚಾರಿಸಲಾಗುತ್ತದೆ. ಇಲ್ಲಿ ಗೌರಿಯೆಂದರೆ ಗಣೇಶ ಮತ್ತು ಸುಬ್ರಹ್ಮಣ್ಯ(ಕಾರ್ತಿಕೇಯ) ದೇವರ ತಾಯಿ ಪಾರ್ವತಿ.

ಗೌರಿ ಹಬ್ಬದಂದು ಗೌರಿ ದೇವರನ್ನು ತುಂಬಾ ಭಕ್ತದಿಂದ ಆರಾಧಿಸಲಾಗುತ್ತದೆ. ಗೌರಿ ದೇವರನ್ನು ಶಕ್ತಿಯ ದೇವತೆಯಾಗಿರುವ ಆದಿ ಶಕ್ತಿಯ ಅವತಾರವೆಂದು ನಂಬಲಾಗಿದೆ. ಗೌರಿ ದೇವರನ್ನು ನಂಬಿಕೆ ಮತ್ತು ಭಕ್ತಿಯಿಂದ ಆರಾಧಿಸುವ ಭಕ್ತರಿಗೆ ಆಕೆ ಧೈರ್ಯ ಮತ್ತು ಅಗಾಧ ಶಕ್ತಿಯನ್ನು ಕರುಣಿಸುತ್ತಾಳೆ ಎಂದು ನಂಬಲಾಗಿದೆ.

ಗೌರಿ ಪೂಜೆಗೆ ಶುಭ ಮುಹೂರ್ತ

ಈ ವರ್ಷ (2021) ಸ್ವರ್ಣ ಗೌರಿ ಪೂಜೆಯನ್ನು ಸೆಪ್ಟೆಂಬರ್ 9ರಂದು ಗುರುವಾರ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿ ಸೆಪ್ಟೆಂಬರ್ 10ರಂದು ಅಚರಿಸಲಾಗುತ್ತಿದೆ.

ಗೌರಿ ಹಬ್ಬದಂದು ಗೌರಿ ದೇವರ ಆರ್ಶೀವಾದ ಪಡೆಯಲು ಸ್ವರ್ಣ ಗೌರಿ ವ್ರತವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಸಂಬಂಧಪಟ್ಟ ಕೆಲವೊಂದು ಆಚರಣೆಗಳನ್ನು ನಾವಿಲ್ಲಿ ಗಮನಿಸುವ.

Rituals Associated With Gowri Habba

ಚತುರ್ಥಿ ವಿಶೇಷ: ಗೌರಿ ವಿಗ್ರಹ ಸ್ಥಾಪನೆ, ಪೂಜಾ ವಿಧಾನ ಹೇಗೆ?

1. ಗಣೇಶ ಹಬ್ಬದ ಒಂದು ದಿನಕ್ಕೆ ಮೊದಲು ಗೌರಿ ದೇವತೆಯ ಮೂರ್ತಿಯನ್ನು ಮನೆಗೆ ತರಲಾಗುತ್ತದೆ. ಈ ಸಮಯದಲ್ಲಿ ಗೌರಿ ದೇವತೆ ತನ್ನ ತಂದೆಯ ಮನೆಗೆ ಬರುತ್ತಾರೆ ಎಂದು ನಂಬಲಾಗಿದೆ. ಇದರಿಂದ ಪ್ರತಿಯೊಂದು ಮನೆಯಲ್ಲಿ ಗೌರಿಯನ್ನು ತುಂಬಾ ಸಡಗರ ಹಾಗೂ ಉತ್ಸಾಹದಿಂದ ಸ್ವಾಗತಿಸಲಾಗುತ್ತದೆ.
2. ಗೌರಿ ಹಬ್ಬದ ದಿನ ಮಹಿಳೆಯರು ಸಾಂಪ್ರದಾಯಿಕ ಉಡುಪಿನಲ್ಲಿರುತ್ತಾರೆ. ಅವರು ಜಲಗೌರಿ ಪ್ರತಿಕೃತಿ ಅಥವಾ ಅರಶಿನದಿಂದ ಅರಶಿನದಗೌರಿಯನ್ನು ಮಾಡುತ್ತಾರೆ. ಇದರ ಬಳಿಕ ಮಂತ್ರದ ಮೂಲಕ ದೇವತೆಯನ್ನು ಆವಾಹಿಸಲಾಗುತ್ತದೆ.
3. ಇದರ ಬಳಿಕ ದೇವತೆಯನ್ನು ಒಂದು ಬಟ್ಟಲಿನಲ್ಲಿ ಹಾಕಿರುವ ಅಕ್ಕಿ ಅಥವಾ ಧಾನ್ಯಗಳ ಮಧ್ಯೆ ಇಡಲಾಗುತ್ತದೆ.

4. ಸಂಪೂರ್ಣ ಸ್ವಚ್ಛತೆ ಹಾಗೂ ಭಕ್ತಿಯಿಂದ ಪೂಜೆ ನೆರವೇರಿಸಲಾಗುತ್ತದೆ.
5. ಮೂರ್ತಿಯ ಸುತ್ತಲು ಬಾಳೆಗಿಡ ಮತ್ತು ಮಾವಿನ ಎಲೆಗಳನ್ನು ಕಟ್ಟಿ ಮಂಟಪವನ್ನು ರಚಿಸಲಾಗುತ್ತದೆ. ಈ ಮಂಟಪವನ್ನು ಹೂವು ಹಾಗೂ ಇನ್ನಿತರ ಸಾಮಗ್ರಿಗಳೊಂದಿಗೆ ಶೃಂಗರಿಸಲಾಗುತ್ತದೆ.
6. ದೇವತೆಯ ಆರ್ಶೀವಾದದ ಪ್ರತೀಕವಾಗಿ ಮಹಿಳೆಯರು 16 ಸುತ್ತಿನ ದಾರವನ್ನು ಕೈಗೆ ಕಟ್ಟಿಕೊಳ್ಳುತ್ತಾರೆ. ಇದನ್ನು ಗೌರಿದಾರವೆನ್ನಲಾಗುತ್ತದೆ.
7. ವ್ರತದ ಅಂಗವಾಗಿ ಬಾಗಿನವನ್ನು ತಯಾರು ಮಾಡಲಾಗುತ್ತದೆ. ಬಾಗಿನದಲ್ಲಿ ವಿವಿಧ ರೀತಿಯ ವಸ್ತುಗಳಾದ ಅರಶೀನ, ಕುಂಕುಮ, ಕಪ್ಪು ಬಳೆ, ಕಪ್ಪು ಮಣಿಗಳು, ಬಾಚಣಿಗೆ, ಸಣ್ಣ ಕನ್ನಡಿ, ತೆಂಗಿನಕಾಯಿ, ಧಾನ್ಯಗಳು, ಅಕ್ಕಿ, ಗೋಧಿ ಮತ್ತು ಬೆಲ್ಲವಿರುತ್ತದೆ. ವ್ರತಕ್ಕಾಗಿ ಸುಮಾರು ಐದು ಬಾಗಿನಗಳನ್ನು ತಯಾರಿಸಲಾಗುತ್ತದೆ.
8. ಒಂದು ಬಾಗಿನವನ್ನು ದೇವತೆಗೆ ಅರ್ಪಿಸಲಾಗುತ್ತದೆ ಮತ್ತು ಉಳಿದ ಬಾಗಿನಗಳನ್ನು ಮುತ್ತೈದೆ ಮಹಿಳೆಯರಿಗೆ ನೀಡಲಾಗುತ್ತದೆ.

9. ಇದರ ಬಳಿಕ ಗೌರಿ ದೇವತೆಗೆ ಹೋಳಿಗೆ ಅಥವಾ ಒಬ್ಬಟ್ಟು, ಪಾಯಸವನ್ನು ಅರ್ಪಿಸಲಾಗುತ್ತದೆ. ಗೌರಿ ಹಬ್ಬವನ್ನು ಈ ಎಲ್ಲಾ ರೀತಿಯಿಂದ ಆಚರಿಸಿದ ಮರುದಿನ ಗಣೇಶ ದೇವರ ಮೂರ್ತಿಯನ್ನು ಮನೆಗೆ ತರಲಾಗುತ್ತದೆ ಮತ್ತು 11 ದಿನಗಳ ಕಾಲ ಪೂಜಿಸಲಾಗುತ್ತದೆ. ಅಂತಿಮ ದಿನದಂದು ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

English summary

Gowri Habba 2021: Rituals Associated With Gowri Habba in Kannada

Gowri Habba is an important festival celebrated especially in the South Karnataka area, Andhra Pradesh and Tamil Nadu. In the Northern parts of India, this festival is known as Hartalika. Gowri here refers to the Goddess Parvati who is the mother of Lord Ganesha and Lord Subramanya (Karthikey). Habba in Kannada means festival.
X
Desktop Bottom Promotion