ಬಕ್ರೀದ್ ಹಬ್ಬದಂದು ಕೋಳಿಯನ್ನು ಏಕೆ ಬಲಿಕೊಡುವುದಿಲ್ಲ? ಹಿಂದಿರುವ ರಹಸ್ಯವೇನು?

By Jaya Subramanya
Subscribe to Boldsky

ಬಕ್ರೀದ್ ಹಬ್ಬವು ಅಡಿ ಇಟ್ಟಿದ್ದು ಮುಸ್ಲೀಂ ಬಾಂಧವರು ಈ ಹಬ್ಬದ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಖಂಡಿತ. ರಂಜಾನ್ ಹಬ್ಬದಂತೆ ಉಪವಾಸಗಳನ್ನು ಹಿಡಿಯುವ ಕ್ರಮ ಈ ಹಬ್ಬದಲ್ಲಿ ಇರದೇ ಇದ್ದರೂ ಈ ಹಬ್ಬ ಕೂಡ ತನ್ನದೇ ಆದ ವಿಶಿಷ್ಟ ಕ್ರಮವನ್ನು ಒಳಗೊಂಡಿದೆ. ಪ್ರವಾದಿ ಅಬ್ರಹಾಂ ಸ್ಮರಣೆಯಲ್ಲಿ ಈ ಹಬ್ಬವನ್ನು ಮುಸ್ಲೀಂ ಬಾಂಧವರು ಆಚರಿಸುತ್ತಿದ್ದು ಈ ಪ್ರವಾದಿಯು ಅಲ್ಲಾಹುವಿಗಾಗಿ ತನ್ನ ಕರುಳ ಕುಡಿಯನ್ನು ಬಲಿ ನೀಡಲು ಮುಂದಾಗಿದ್ದ ಮಹಾನ್ ವ್ಯಕ್ತಿಯಾಗಿದ್ದರು.

ಇನ್ನೇನು ಪ್ರವಾದಿ ತಮ್ಮ ಮಗನನ್ನು ಕೊಲ್ಲಬೇಕು ಎಂದು ಹೊರಟಾಗ ಈ ಸ್ಥಳದಲ್ಲಿ ಆಡನ್ನು ನಿಲ್ಲಿಸಿ ಬಲಿನೀಡಲಾಯಿತು. ಹಾಗಾಗಿ ಈ ಹಬ್ಬದಂದು ಆಡನ್ನು ಬಲಿಕೊಡುವ ಆಚಾರವಿದೆ. ಈ ದಿನ ಹೆಂಗಸರು ಮತ್ತು ಪುರುಷರು ಹೊಸ ದಿರಿಸುಗಳನ್ನು ತೊಟ್ಟು ವಿಶೇಷ ನಮಾಜ್ ಕಾರ್ಯಕ್ರಮವನ್ನು ಅನುಸರಿಸುತ್ತಾರೆ ಕುಟುಂಬ ಸದಸ್ಯರ ಒಳಿತಿಗಾಗಿ ಇಂದು ಎಲ್ಲರೂ ಒಗ್ಗೂಡಿ ಪ್ರಾರ್ಥನೆಯನ್ನು ಮಾಡುತ್ತಾರೆ.

chicken recipe

ಬಕ್ರೀದ್ ಹಬ್ಬದಲ್ಲಿ ಆಚರಿಸುವ ನಿಯಮಗಳು

ಈ ದಿನ ಮುಸ್ಲೀಂ ಬಾಂಧವರು ಕೆಲವೊಂದು ನಿಯಮಗಳನ್ನು ಅನುಸರಿಸಿಕೊಂಡು ಹಬ್ಬವನ್ನು ಆಚರಿಸುತ್ತಾರೆ. ಆಡನ್ನು ಬಲಿ ನೀಡಿದ ನಂತರ ಈ ಮಾಂಸವನ್ನು ಮೂರು ಸಮಾನ ತುಂಡುಗಳನ್ನಾಗಿ ಹಂಚಲಾಗುತ್ತದೆ. ಒಂದು ಭಾಗ ಕುಟುಂಬಕ್ಕೆ, ಇನ್ನೆರಡು ತುಂಡುಗಳನ್ನು ಸ್ನೇಹಿತರು ಮತ್ತು ಕುಟುಂಬಕ್ಕೆ ಹೀಗೆ ಹಂಚಿಕೊಳ್ಳಲಾಗುತ್ತದೆ. ಕೊನೆಯ ತುಂಡನ್ನು ಬಡವರಿಗೆ ನೀಡುತ್ತಾರೆ. ಇದು ಅಲ್ಲಾಹುವಿನ ಆಜ್ಞೆಯಾಗಿದೆ.

ಬಕ್ರೀದ್: ಶಾಂತಿ ಸಮಾನತೆ-ಸೌಹಾರ್ದತೆಯ ಸಂದೇಶ ಸಾರುವ ಹಬ್ಬ

ಬಲಿ ನೀಡಿದ ನಂತರ ಮಾಂಸದಿಂದ ಅಡುಗೆಯನ್ನು ಮಾಡುತ್ತಾರೆ. ಇದರ ಸೇವನೆಯನ್ನು ಎಲ್ಲರೂ ಒಗ್ಗೂಡಿ ಮಾಡುತ್ತಾರೆ. ಈ ದಿನ ಪ್ರಾಣಿ ತ್ಯಾಗವನ್ನು ಮಾಡುವುದರ ಹಿಂದಿರುವ ಮುಖ್ಯ ಕಾರಣವನ್ನು ಅರಿತುಕೊಳ್ಳಲೇಬೇಕು. ಪ್ರಾಣಿಯ ಬಲಿಯನ್ನು ನೀಡಬೇಕು ಎಂಬುದು ಅಲ್ಲಾಹುವಿನ ಆಜ್ಞೆಯಾಗಿದೆ. ಅಲ್ಲಾಹುವಿನ ಹೆಸರಿನಲ್ಲಿ ಆಡನ್ನು ಬಲಿಕೊಡಲಾಗುತ್ತದೆ. ನಂತರ ಕುಟುಂಬ ಮತ್ತು ಸ್ನೇಹಿತರು ಹಾಗೂ ಬಡವರಿಗೆ ಈ ಮಾಂಸವನ್ನು ಸಮನಾಗಿ ಹಂಚಲಾಗುತ್ತದೆ.

Bakrid

ಕುರುಬಾನಿ ತ್ಯಾಗ ಎಂಬ ಪದವು ಅಲ್ಲಾಹುವನ್ನು ಪ್ರೀತ್ಯರ್ಥಪಡಿಸುವಲ್ಲಿ ಅತಿಮುಖ್ಯದ್ದಾಗಿದೆ. ಅಲ್ಲಾಹುವಿನ ಆದೇಶಕ್ಕೆ ಅನುಗುಣವಾಗಿ ತಮ್ಮ ಪ್ರೀತಿಪಾತ್ರ ವಸ್ತುವನ್ನು ಅವರು ತ್ಯಾಗ ಮಾಡಲು ಸಿದ್ಧರಾಗಿದ್ದಾರೆ ಎಂಬುದು ಇದರ ಹಿಂದಿರುವ ಅರ್ಥವಾಗಿದೆ. ಇದುವೇ ಪ್ರವಾದಿ ಅಬ್ರಹಾಂ ಮಾಡಿರುವ ಕೆಲಸವಾಗಿದೆ.

ಆಡಿನ ಬದಲಿಗೆ ಕೋಳಿಯನ್ನು ಏಕೆ ಬಲಿನೀಡುವುದಿಲ್ಲ?

ಪ್ರಾಣಿಗಳಾದ ಮೇಕೆ, ಒಂಟೆ ಮತ್ತು ಇತರ ಪ್ರಾಣಿಗಳನ್ನು ಬಲಿನೀಡಬಹುದಾಗಿದೆ ಆದರೆ ಪಕ್ಷಿಯ ಬಲಿಯನ್ನು ನಿಷೇಧಿಸಲಾಗಿದೆ. ಹೀಗಾಗಿ ಕೋಳಿಯನ್ನು ಬಲಿನೀಡಲಾಗುವುದಿಲ್ಲ. ಈ ಪ್ರಾಣಿ ಬಲಿಯನ್ನು ನಿರ್ವಹಿಸುವಾಗ ಮನೆಯ ಎಲ್ಲಾ ಸದಸ್ಯರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ಸಾಕಷ್ಟು ಮಟನ್ ಸಂಗ್ರಹ ಮನೆಯಲ್ಲಿರುತ್ತದೆ. ಬಕ್ರೀದ್ ಸಮಯದಲ್ಲಿ ಕೋಳಿ ಮಾಂಸ ಅಷ್ಟೊಂದು ಪ್ರಾಧಾನ್ಯತೆಯನ್ನು ಪಡೆದುಕೊಂಡಿರುವುದಿಲ್ಲ.  

Bakrid time prayer

ಈ ದಿನದಂದು ಇದರ ಮಾಂಸವನ್ನು ಸೇವಿಸುವುದು ಪಾಪವಾಗಿದೆ ಎಂಬುದು ಅವರ ವಿಚಾರವಾಗಿದೆ. ಅಲ್ಲಾಹುವಿನ ಹೆಸರಿನಲ್ಲಿ ಬಲಿನೀಡಿದ ಪ್ರಾಣಿಯ ಮಾಂಸವನ್ನು ಎಸೆಯಬಾರದು ಎಂಬ ನಿಯಮವಿದೆ. ಆದ್ದರಿಂದಲೇ ಕೋಳಿಯನ್ನು ಬಲಿನೀಡುವುದಿಲ್ಲ. ಬಕ್ರೀದ್‌ ಹಬ್ಬದಂದು ಕೋಳಿಯ ಬೇಡಿಕೆ ತಗ್ಗಿರುತ್ತದೆ. ಹಾಗಾಗಿ ಬಕ್ರೀದ್‌ನಂದು ಸಾಕಷ್ಟು ಸ್ವಾದಭರಿತ ಮಟನ್ ಖಾದ್ಯವನ್ನು ಸವಿಯಲು ಮರೆಯಬೇಡಿ.

For Quick Alerts
ALLOW NOTIFICATIONS
For Daily Alerts

    English summary

    Why Chicken Is Not Eaten During Bakrid?

    Bakrid is around the corner; and you may be coaxing your Muslim friends for a treat of some yummy mutton Biryani, isn't it?Bakrid is celebrated by Muslims all over the world. It is a celebrated in the memory of Prophet Abraham who was willing to sacrifice his own son on the command of Allah. As the prophet was readying his son for the sacrifice, his son was replaced by a goat at the last moment.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more