ಲಿಂಬೆಹಣ್ಣಿನ ಅಲೌಕಿಕ ಶಕ್ತಿ: ಮಾಟಮಂತ್ರದ ರಹಸ್ಯ ಬಯಲು!

Posted By: Staff
Subscribe to Boldsky

ಪ್ರೇಮ ಮತ್ತು ಯುದ್ಧದಲ್ಲಿ ಏನು ಮಾಡಿದರೂ ಸರಿ ಎಂಬ ಸುಭಾಷಿತವೊಂದಿದೆ. ಆದರೆ ಇದು ಒಳ್ಳೆಯದಕ್ಕಿಂತ ಸ್ವಾರ್ಥಸಾಧನೆಗೇ ಹೆಚ್ಚಾಗಿ ಬಳಕೆಯಾಗಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ತಮ್ಮ ಸ್ವಾರ್ಥಕ್ಕಾಗಿ ಇಲ್ಲಸಲ್ಲದುದನ್ನು ಮಾಡಿ ಪ್ರೇಮಕ್ಕಾಗಿ ಇದನ್ನು ಮಾಡಬೇಕಾಯಿತು ಎಂದು ಸಮರ್ಥಿಸಿಕೊಳ್ಳುವ ಗುಣ ಜನರಲ್ಲಿ ಹಾಸುಹೊಕ್ಕಾಗಿದೆ. ಇದಕ್ಕಾಗಿ ಕೆಲವರು ಅನುಸರಿಸುವ ವಿಧಾನವೆಂದರೆ ತಂತ್ರವಿದ್ಯೆ, ಅಥವಾ ಮಾಟ ಮಂತ್ರ.

ಇಂದಿಗೂ ಒಂದು ರಹಸ್ಯವಾಗಿಯೇ ಉಳಿದಿರುವ, ಕಾನೂನಿಗೆ ವಿರುದ್ಧವಾದ ಆದರೂ ಎಷ್ಟೋ ಜನರು ನಂಬುವ ಈ ವಿದ್ಯೆಯನ್ನು ಒಳ್ಳೆಯದು ಮಾಡಲಿಕ್ಕೂ ಕೆಟ್ಟದ್ದನ್ನು ಮಾಡಲಿಕ್ಕೂ ಬಳಸಲಾಗುತ್ತಿದೆ. ತಂತ್ರ ವಿದ್ಯೆ: ಅದೇನು ಮಾಯೆ, ಅದೇನು ಜಾದೂ!

ಅದು ಏನೇ ಇರಲಿ ಆದರೆ ತಂತ್ರವಿದ್ಯೆ ಅಥವಾ ಮಾಟಮಂತ್ರ ಇಲ್ಲ ಎಂದು ವಾದಿಸುವವರು ನಮ್ಮ ನಡುವೆ ಇದ್ದಾರೆ. ಆದರೆ ಇದು ಇದೆ ಎಂದು ಹೇಳಲು ಪ್ರತಿ ಊರಿನಲ್ಲಿಯೂ ಕನಿಷ್ಠ ನೂರಾದರೂ ಅಲ್ಲಗಳೆಯಲಾಗದ ಪುರಾವೆಗಳು ಸಿಗುತ್ತವೆ. ಆದ್ದರಿಂದ ಇದನ್ನು ನಂಬದವರೂ ತಮಗಾಗದರಿಂದ ಏನೂ ತೊಂದರೆಯಾಗದಂತೆ ರಕ್ಷಣೆ ಪಡೆಯಬೇಕಾದ ಅನಿವಾರ್ಯತೆಯೂ ಇದೆ.

ಸಾಮಾನ್ಯವಾಗಿ ಕೆಟ್ಟ ಕೆಲಸದಲ್ಲಿ ಹೆಚ್ಚಿನ ಹಣ ಇರುವ ಕಾರಣ ತಾಂತ್ರಿಕರೂ ಇಷ್ಟವಿಲ್ಲದಿದ್ದರೂ ಇನ್ನೊಬ್ಬರಿಗೆ ಕೆಡುಕನ್ನು ಉಂಟುಮಾಡುವ ಕಾರ್ಯಕ್ಕೆ ಒಪ್ಪಿಕೊಳ್ಳುತ್ತಾರೆ. ಅಂತೆಯೇ ಕೆಡುಕನ್ನು ತಡೆಯಲೂ ತಾಂತ್ರಿಕರ ಬಳಿ ಉಪಾಯಗಳಿವೆ. ಈ ಉಪಾಯಗಳಲ್ಲಿ ಬಳಸಲಾಗುವ ಪ್ರಮುಖ ಪರಿಕರ ಎಂದರೆ ಲಿಂಬೆಹಣ್ಣು.

ಈ ಶಕ್ತಿಯನ್ನು ಬೆಂಬಲಿಸುವ ಅಥವಾ ವಿರೋಧಿಸುವ ಎರಡೂ ಗುಣಗಳು ಲಿಂಬೆಹಣ್ಣಿನಲ್ಲಿ ಇವೆ. ಈ ಬಗ್ಗೆ ಜನಸಾಮಾನ್ಯರು ತಿಳಿದುಕೊಂಡಿರುವುದು ಬಹಳ ಕಡಿಮೆ. ಬನ್ನಿ, ಈ ಬಗ್ಗೆಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡೋಣ...

ಲಿಂಬೆ ತಾಂತ್ರಿಕ ಶಕ್ತಿಯ ಅತ್ಯುತ್ತಮ ಪರಿವಾಹಕವಾಗಿದೆ

ಲಿಂಬೆ ತಾಂತ್ರಿಕ ಶಕ್ತಿಯ ಅತ್ಯುತ್ತಮ ಪರಿವಾಹಕವಾಗಿದೆ

ಯಾವುದೇ ಶಕ್ತಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರವಹಿಸಲು ಮಾಧ್ಯಮವೊಂದರ ಅಗತ್ಯವಿದೆ. ವಿದ್ಯುತ್ ಪ್ರವಹಿಸಲು ತಾಮ್ರದ ತಂತಿಯ ಬಳಕೆ ಹೇಗೆಯೋ ಹಾಗೇ ತಂತ್ರವಿದ್ಯೆಯ ಶಕ್ತಿಯನ್ನು ಕೊಂಡೊಯ್ಯಲು ಲಿಂಬೆಹಣ್ಣು ಪ್ರಶಸ್ತವಾಗಿದೆ. ಇದೇ ಕಾರಣಕ್ಕೆ ಲಿಂಬೆಹಣ್ಣನ್ನು ತಾಂತ್ರಿಕರು ಬಹಳವಾಗಿ ಬಳಸುತ್ತಾರೆ. ಇದರಿಂದ ಶಕ್ತಿಯನ್ನು ಸಮರ್ಪಕವಾಗಿ ಮತ್ತು ಹೆಚ್ಚು ಶ್ರಮವಿಲ್ಲದೇ ದಾಟಿಸಲು ಸಾಧ್ಯವಾಗುತ್ತದೆ.

ಶಾಪ ದಾಟಿಸಲು ಲಿಂಬೆಯ ಬಳಕೆ

ಶಾಪ ದಾಟಿಸಲು ಲಿಂಬೆಯ ಬಳಕೆ

ಸಾಮಾನ್ಯವಾಗಿ ಕೆಡಕು ಉಂಟುಮಾಡಲು ತಾಂತ್ರಿಕರು ಬಳಸುವ ವಿಧಾನದಲ್ಲಿ ಮೊದಲು ಅ ವ್ಯಕ್ತಿಗೆ ಮಾಡುವ ಕೆಡುಕನ್ನು ಶಕ್ತಿಯ ರೂಪದಲ್ಲಿಳಿಸಿ ಲಿಂಬೆಯಲ್ಲಿ ಸಂಗ್ರಹವಾಗುವಂತೆ ಮಾಡುತ್ತಾರೆ. ಬಳಿಕ ಈ ಲಿಂಬೆಹಣ್ಣಿನಿಂದ ವ್ಯಕ್ತಿಗೆ ಈ ಶಕ್ತಿ ದಾಟುವಂತೆ ಮಾಡುತ್ತಾರೆ. ಇದನ್ನೇ ಶಾಪ ದಾಟಿಸುವುದು ಎನ್ನುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಶಾಪ ದಾಟಿಸಲು ಲಿಂಬೆಯ ಬಳಕೆ

ಶಾಪ ದಾಟಿಸಲು ಲಿಂಬೆಯ ಬಳಕೆ

ಜನಸಾಮಾನ್ಯರ ಭಾಷೆಯಲ್ಲಿ ಮಾಟ ಮಾಡುವುದು ಎನ್ನುತ್ತಾರೆ. ಈ ಶಕ್ತಿಯನ್ನು ಹೊಂದಿರುವ ಲಿಂಬೆಹಣ್ಣನ್ನು ದಾಟಿದ ವ್ಯಕ್ತಿಗೆ ಮಾಟ ತಗಲುತ್ತದೆ ಎಂದು ಮಾಂತ್ರಿಕರು ತಿಳಿಸುತ್ತಾರೆ.

ಲಿಂಬೆಯಲ್ಲಿದೆ ಅಲೌಕಿಕ ಶಕ್ತಿ

ಲಿಂಬೆಯಲ್ಲಿದೆ ಅಲೌಕಿಕ ಶಕ್ತಿ

ಲಿಂಬೆಯಲ್ಲಿ ಅಲೌಕಿಕ ಶಕ್ತಿಯಿರುವ ಕಾರಣ ಇದನ್ನು ಮಾಟಮಂತ್ರದ ಕಾರ್ಯಗಳಿಗೆ ಬಳಸಲಾಗುತ್ತದೆ. ಈ ಅಲೌಕಿಕ ಶಕ್ತಿಯ ಬಗ್ಗೆ ಜನಸಾಮಾನ್ಯರು ಹೆಚ್ಚು ಅರಿತಿಲ್ಲ. ಈ ಅಲೌಕಿಕ ಶಕ್ತಿ ಅಗೋಚರ ಶಕ್ತಿಯನ್ನು ತಡೆಯಲೂ ಸಕ್ಷಮವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆಯಲ್ಲಿದೆ ಅಲೌಕಿಕ ಶಕ್ತಿ

ಲಿಂಬೆಯಲ್ಲಿದೆ ಅಲೌಕಿಕ ಶಕ್ತಿ

ಅಂದರೆ ಜನರ ಕೆಟ್ಟದೃಷ್ಟಿ ಬಿದ್ದರೆ ಇದನ್ನು ತಡೆಯಲೂ ಲಿಂಬೆಹಣ್ಣಿನ ಅಲೌಕಿಕ ಶಕ್ತಿ ಬಳಕೆಯಾಗುತ್ತದೆ. ಇದೇ ಕಾರಣಕ್ಕೆ ಹೊಸ ಮನೆ, ವಾಹನ ಮೊದಲಾದವುಗಳಿಗೆ ಲಿಂಬೆಹಣ್ಣಿನ ಸರವನ್ನು ನೇತು ಹಾಕಲಾಗುತ್ತದೆ.

ಲಿಂಬೆಹಣ್ಣಿನೊಳಗೆ ಸೂಜಿ ಚುಚ್ಚುವುದು ಸುಲಭ

ಲಿಂಬೆಹಣ್ಣಿನೊಳಗೆ ಸೂಜಿ ಚುಚ್ಚುವುದು ಸುಲಭ

ಕೆಡಕು ಬಯಸುವ ವ್ಯಕ್ತಿಗೆ ಮಾಡಬೇಕಾದುದನ್ನು ತಂತ್ರವಿದ್ಯೆಯ ಮೂಲಕ ಲಿಂಬೆಹಣ್ಣಿಗೆ ಮಾಡಿದರೆ ಇದರ ಪರಿಣಾಮ ಆ ವ್ಯಕ್ತಿಯ ಮೇಲೆ ಆಗುತ್ತದೆ ಎಂದು ತಂತ್ರವಿದ್ಯೆಯಲ್ಲಿ ಹೇಳಲಾಗುತ್ತದೆ. ಅಂದರೆ ಓರ್ವ ವ್ಯಕ್ತಿ ಅಥವಾ ಕುಟುಂಬಕ್ಕೆ ಕೇಡು ಬಯಸಲು ಅವರ ಮೇಲೆ ಮಂತ್ರಿಸಿದ ಲಿಂಬೆಹಣ್ಣಿಗೆ ಸೂಜಿ ಚುಚ್ಚಿ ಆ ನೋವನ್ನು ವ್ಯಕ್ತಿ ಅನುಭವಿಸುವಂತೆ ಮಾಡುವುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಲಿಂಬೆಹಣ್ಣಿನೊಳಗೆ ಸೂಜಿ ಚುಚ್ಚುವುದು ಸುಲಭ

ಲಿಂಬೆಹಣ್ಣಿನೊಳಗೆ ಸೂಜಿ ಚುಚ್ಚುವುದು ಸುಲಭ

ಸೂಜಿಯನ್ನು ಅರ್ಧ ಮಾತ್ರ ಚುಚ್ಚಿ ವ್ಯಕ್ತಿ ಅಪಾರವಾದ ನೋವನ್ನು ಅನುಭವಿಸುವಂತೆ ಮಾಡುತ್ತಾರೆ. ಒಂದು ವೇಳೆ ಸೂಜಿಯನ್ನು ಕೇಂದ್ರಭಾಗದವರೆಗೆ ಚುಚ್ಚಿದರೆ ಆ ವ್ಯಕ್ತಿಯ ಸಾವಿಗೂ ಕಾರಣವಾಗಬಹುದು. ಸೂಜಿಯನ್ನು ಸುಲಭವಾಗಿ ಚುಚ್ಚಲಾಗಲು ಸಾಧ್ಯ ಎಂಬ ಕಾರಣಕ್ಕೂ ಲಿಂಬೆಯ ಬಳಕೆ ತಂತ್ರವಿದ್ಯೆಯಲ್ಲಿ ವ್ಯಾಪಕವಾಗಿದೆ.

ಸರ್ವಕಾಲಕ್ಕೂ ಸುಲಭವಾಗಿ ಸಿಗುತ್ತವೆ

ಸರ್ವಕಾಲಕ್ಕೂ ಸುಲಭವಾಗಿ ಸಿಗುತ್ತವೆ

ತಂತ್ರವಿದ್ಯೆಯಲ್ಲಿ ಲಿಂಬೆಯನ್ನು ಆಯ್ಕೆಮಾಡಿಕೊಳ್ಳಲು ಇನ್ನೊಂದು ಕಾರಣವೆಂದರೆ ಇದರ ಲಭ್ಯತೆ. ಸರಿಸುಮಾರು ವರ್ಷವಿಡೀ ಸುಲಭವಾಗಿ ಎಲ್ಲೆಡೆ ಸಿಗುವ ಕಾರಣ ಲಿಂಬೆ ಇಲ್ಲ ಎಂದು ತಂತ್ರವಿದ್ಯೆ ಮಾಡದಿರಲು ನೆಪಹೂಡಲಾಗದು. ಅಲ್ಲದೇ ಇದು ಅಗ್ಗವೂ ಆಗಿರುವ ಕಾರಣ ತಾಂತ್ರಿಕರು ಸದಾ ತಮ್ಮೊಂದಿಗೆ ಕೆಲವಾದರೂ ಲಿಂಬೆಹಣ್ಣುಗಳಿರುವಂತೆ ನೋಡಿಕೊಳ್ಳುತ್ತಾರೆ.

ತಂತ್ರವಿದ್ಯೆಯ ಬಗ್ಗೆ ಕೆಲವು ಕುತೂಹಲಕರ ಮಾಹಿತಿಗಳು

ತಂತ್ರವಿದ್ಯೆಯ ಬಗ್ಗೆ ಕೆಲವು ಕುತೂಹಲಕರ ಮಾಹಿತಿಗಳು

* ತಂತ್ರವಿದ್ಯೆ ಕೇವಲ ಭಾರತದಲ್ಲಿಲ್ಲ, ಭಾರತಕ್ಕಿಂತಲೂ ಹೆಚ್ಚು ತಾಂತ್ರಿಕರು ಬಾಂಗ್ಲಾದೇಶದಲ್ಲಿದ್ದಾರೆ. ಆಫ್ರಿಕಾ, ದ. ಅಮೇರಿಕಾ, ಮೆಕ್ಸಿಕೋ, ಆಸ್ಟ್ರೇಲಿಯಾ, ಶ್ರೀಲಂಕಾ, ಫಿಲಿಪ್ಪೀನ್ಸ್ ಮೊದಲಾದ ದೇಶಗಳಲ್ಲಿಯೂ ತಂತ್ರವಿದ್ಯೆ ವ್ಯಾಪಕವಾಗಿ ಬಳಕೆಯಲ್ಲಿದೆ.

* ಲಿಂಬೆಯ ಜೊತೆ ಹಸಿಮೆಣಸನ್ನೂ ಕೆಲವು ತಾಂತ್ರಿಕರು ಬಳಸುತ್ತಾರೆ

* ಕೇಡನ್ನು ಬಯಸುವ ವ್ಯಕ್ತಿಯ ಇರಾದೆ ನಿಜವಾಗಿಲ್ಲದಿದ್ದರೆ ಇದರ ಫಲ ಉಲ್ಟಾ ಹೊಡೆಯುವ ಸಾಧ್ಯತೆಯೂ ಇದೆ. ಎಂದರೆ ಯಾವ ನೋವನ್ನು ಇತರರಿಗೆ ನೀಡಲು ಬಯಸಿದ್ದ ವ್ಯಕ್ತಿಯೇ ಆ ನೋವನ್ನು ಅನುಭವಿಸುವಂತಾಗಬಹುದು.

* ಇಸ್ರೋ ವಿಜ್ಞಾನಿಗಳೂ ರಾಕೆಟ್ ಉಡಾವಣೆಗೆ ಮುನ್ನ ಕೆಲವು ಸಂಪ್ರದಾಯಗಳನ್ನು ಅನುಸರಿಸುವ ಮೂಲಕ ವಿಶ್ವಮಟ್ಟದಲ್ಲಿ ಪ್ರಶ್ನೆಯನ್ನು ಎದುರಿಸಬೇಕಾಯ್ತು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಂತ್ರವಿದ್ಯೆಯ ಬಗ್ಗೆ ಕೆಲವು ಕುತೂಹಲಕರ ಮಾಹಿತಿಗಳು

ತಂತ್ರವಿದ್ಯೆಯ ಬಗ್ಗೆ ಕೆಲವು ಕುತೂಹಲಕರ ಮಾಹಿತಿಗಳು

* ಮಾಟಕ್ಕೆ ವಿರುದ್ಧವಾದ ಕ್ರಿಯೆ ಎಂದರೆ ಕಟ್ಟು. ಅಂದರೆ ಒಂದು ವೇಳೆ ತಮಗೆ ವ್ಯಕ್ತಿಯೊಬ್ಬರಿಂದ ಕೇಡು ಉಂಟಾಗಬಹುದು ಎಂದು ಅನುಮಾನ ಉಂಟಾದರೆ ಇವರ ಪ್ರಯತ್ನಗಳಿಗೆ ತಡೆ ನೀಡುವಂತೆ ಕಟ್ಟು ಎಂಬ ತಡೆಯನ್ನು ನೀಡುತ್ತಾರೆ. ಇದರಿಂದ ಒಂದು ವೇಳೆ ನಿಜವಾಗಿಯೂ ಇನ್ನೊಬ್ಬರಿಂದ ತೊಂದರೆ ಎದುರಾದರೆ ಈ ಕಟ್ಟು ಅವರ ಪ್ರಯತ್ನಗಳಿಗೆ ತಡೆ ನೀಡಿ ರಕ್ಷಿಸುತ್ತದೆ.

* ವೈದ್ಯವಿಜ್ಞಾನಕ್ಕೆ ಸವಾಲಾಗಿರುವ ಎಷ್ಟೋ ಕಾಯಿಲೆಗಳನ್ನು ವಾಸಿ ಮಾಡಲಾಗಿದೆ ಮತ್ತು ತಂತ್ರದ ಪರಿಣಾಮವಾಗಿ ಎದುರಾದ ಎಷ್ಟೋ ಕಾಯಿಲೆಗಳಿಗೆ ಇದುವರೆಗೆ ವಿಜ್ಞಾನಕ್ಕೆ ಉತ್ತರ ನೀಡಲಾಗಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಂತ್ರವಿದ್ಯೆಯ ಬಗ್ಗೆ ಕೆಲವು ಕುತೂಹಲಕರ ಮಾಹಿತಿಗಳು

ತಂತ್ರವಿದ್ಯೆಯ ಬಗ್ಗೆ ಕೆಲವು ಕುತೂಹಲಕರ ಮಾಹಿತಿಗಳು

* ಭಾರತದಲ್ಲಿ ಮಾಟ ಇದ್ದಂತೆ ಆಫ್ರಿಕಾದಲ್ಲಿ ವೂಡೂ ಪ್ರಸಿದ್ಧವಾಗಿದೆ.

* ಔಷಧಿ ತಿನ್ನಿಸಿ ವಶೀಕರಿಸುವುದು ಈ ವಿದ್ಯೆಯ ಒಂದು ಭಾಗ. ಇದನ್ನು ನಿವಾರಿಸಲು (ಒಳ್ಳೆಯ) ತಾಂತ್ರಿಕರು ಯಾವುದೋ ಮದ್ದನ್ನು ತಿನ್ನಿಸಿ ಹೊಟ್ಟೆಯಲ್ಲಿದ್ದುದನ್ನೆಲ್ಲಾ ವಾಂತಿಯಾಗುವಂತೆ ಮಾಡುತ್ತಾರೆ. ಈ ದ್ರವದಿಂದ ಘನವಸ್ತುವೊಂದನ್ನು ಹೊರತೆಗೆಯುತ್ತಾರೆ. ಇದರ ಮೇಲೆ ಕೂದಲು ಬೆಳೆದಿದ್ದು ಈ ಕೂದಲು ಎಷ್ಟು ಉದ್ದ ಇದೆಯೋ ಅಷ್ಟು ವರ್ಷಗಳಿಂದ ಈ ಔಷಧಿ ಅವರ ಹೊಟ್ಟೆಯೊಳಗಿತ್ತು ಎಂದು ತಿಳಿಸುತ್ತಾರೆ. ನಂಬಲು ಸಾಧ್ಯವಿಲ್ಲದ ಈ ಕ್ರಿಯೆಯ ಬಳಿಕ ನೋವು ಅನುಭವಿಸುತ್ತಿರುವವರ ನೋವು ನಿಜವಾಗಿಯೂ ಮಾಯವಾಗಿರುವುದು ಮಾತ್ರ ಚಕಿತಗೊಳಿಸುವ ಮಾಹಿತಿಯಾಗಿದೆ.

 
English summary

Why Are Lemons Used In Black Magic?

There can be many questions regarding why lemons are used specifically in black magic? Though there can be multiple reasons why lemons are used in black magic, the knowledge of the common man is not that strong. Following can be some of the reasons why lemons are used in black magic, have a look:
Please Wait while comments are loading...
Subscribe Newsletter